Psalms · chapter 107 · verse 7
Psalm 107:7 in Kannada
ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು.
Vaasisuva pattanakke hoguva haage avarannu sariyaada haadiyalli nadisidanu.
Psalm 107:7 in English
- King James Version (KJV)
- And he led them forth by the right way, that they might go to a city of habitation.
- World English Bible (WEB)
- He led them also by a straight way, that they might go to a city to live in.
- American Standard Version (ASV)
- He led them also by a straight way, That they might go to a city of habitation.
- Bible in Basic English (BBE)
- Guiding them in the right way, so that they might come into the town of their resting-place.
- Darby Translation (DBY)
- And he led them forth by a right way, that they might go to a city of habitation.
- Webster's Bible (WBS)
- And he led them forth by the right way, that they might go to a city of habitation.
- Young's Literal Translation (YLT)
- And causeth them to tread in a right way, To go unto a city of habitation.
Read in context
- 5ಹಸಿದು, ದಾಹಗೊಂಡು ಅವರ ಪ್ರಾಣವು ಅವರಲ್ಲಿ ಕುಗ್ಗಿಹೋಯಿತು.
- 6ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ,
- 7ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು.
- 8ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ.
- 9ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ.
Cross references
- Jeremiah 31:9 ಯೆರೆಮೀಯ 31:9ಅಳುತ್ತಾ ಬರುವರು; ಬಿನ್ನಹಗಳ ಸಂಗಡ ಅವರನ್ನು ನಡಿಸುವೆನು; ಅವರು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು; ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ; ಎಫ್ರಾಯಾಮನು ನನ್ನ ಚೊಚ್ಚಲನೇ.
- Hebrews 12:22 ಇಬ್ರಿಯರಿಗೆ 12:22ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ
- Psalm 77:20 ಕೀರ್ತನೆಗಳು 77:20ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Ezra 8:21–23 ಎಜ್ರನು 8:21–23ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು. ಯಾಕಂದರೆ ಆತನನ್ನು ಹುಡುಕುವವರೆಲ್ಲರ ಮೇಲೆ ಒಳ್ಳೇದಾಗುವದಕ್ಕೆ ನಮ್ಮ ದೇವರ ಹಸ್ತ ಉಂಟು. ಆದರೆ ಆತನನ್ನು ಬಿಟ್ಟುಬಿಡುವವರ ಮೇಲೆ ಆತನ ಬಲವೂ ಆತನ ಕೋಪವೂ ಉಂಟು ಎಂದು ನಾವು ಅರಸನಿಗೆ ಹೇಳಿದ್ದರಿಂದ ಮಾರ್ಗದಲ್ಲಿ ಶತ್ರುವಿಗೆ ವಿರೋಧವಾಗಿ ನಮಗೆ ಸಹಾಯ ಕೊಡಲು ಕಾಲ್ಬಲ ವನ್ನೂ ರಾಹುತರನ್ನೂ ಅರಸನಿಂದ ಕೇಳಲು ನಾಚಿಕೆ ಪಟ್ಟೆವು. ಆದದರಿಂದ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.
- Hebrews 11:9–10 ಇಬ್ರಿಯರಿಗೆ 11:9–10ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು. ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು.
- Psalm 107:36 ಕೀರ್ತನೆಗಳು 107:36ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ,
- Isaiah 49:8–11 ಯೆಶಾಯ 49:8–11ಕರ್ತನು ಹೀಗ ನ್ನುತ್ತಾನೆ--ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರ ವನ್ನು ದಯಪಾಲಿಸಿದ್ದೇನೆ; ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ, ನಾನು ನಿನ್ನನ್ನು ಕಾಪಾಡಿ ಭೂಮಿಯನ್ನು ಸ್ಥಾಪಿಸುವದಕ್ಕೂ ಹಾಳಾಗಿರುವ ಸ್ವಾಸ್ತ್ಯ ಗಳನ್ನು ಬಾಧ್ಯವಾಗಿ ಹೊಂದುವಂತೆಯೂ ಜನರ ಒಡಂಬಡಿಕೆಗಾಗಿ ನಿನಗೆ ಕೊಡುವೆನು. ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು. ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು. ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
- Psalm 78:52 ಕೀರ್ತನೆಗಳು 78:52ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು.
- 2 Peter 2:15 2 ಪೇತ್ರನು 2:15ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಬಳವನ್ನು ಪ್ರೀತಿಸಿದನು.
- Jeremiah 33:10–13 ಯೆರೆಮೀಯ 33:10–13ಕರ್ತನು ಹೇಳುವದೇನಂದರೆ-- ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತೆಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂ ದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿ ಗಳಲ್ಲಿಯೂ ಇನ್ನು ಮೇಲೆ ಆನಂದದ ಸ್ವರವೂ ಸಂತೋಷದ ಸ್ವರವೂ ಮದಲಿಂಗನ ಸ್ವರವೂ ಮದಲ ಗಿತ್ತಿಯ ಸ್ವರವೂ--ಸೈನ್ಯಗಳ ಕರ್ತನನ್ನು ಕೊಂಡಾಡಿರಿ; ಕರ್ತನು ಒಳ್ಳೆಯವನೇ, ಆತನ ಕೃಪೆ ನಿರಂತರವೇ ಎಂದು ಹೇಳಿ, ಸ್ತೋತ್ರದ ಬಲಿಯನ್ನು ಕರ್ತನ ಆಲ ಯಕ್ಕೆ ತರುವವರ ಸ್ವರವೂ ಕೇಳಲ್ಪಡುವದು; ನಾನು ಮುಂಚಿನ ಹಾಗೆ ದೇಶದ ಸೆರೆಯನ್ನು ತಿರುಗಿಸುತ್ತೇ ನೆಂದು ಕರ್ತನು ಹೇಳುತ್ತಾನೆ. ಸೈನ್ಯಗಳ ಕರ್ತನು ಹೇಳುವದೇನಂದರೆ--ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ ಅದರ ಎಲ್ಲಾ ಪಟ್ಟಣಗಳಲ್ಲಿಯೂ ಇನ್ನು ಮೇಲೆ ತಮ್ಮ ಮಂದೆಗಳನ್ನು ಮಲಗಿಸುವ ಕುರುಬರ ನಿವಾಸಗಳು ಇರುವವು. ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳ ಲ್ಲಿಯೂ ದಕ್ಷಿಣದ ಪಟ್ಟಣಗಳಲ್ಲಿಯೂ ಬೆನ್ಯಾವಿಾನನ ದೇಶದಲ್ಲಿಯೂ ಯೆರೂಸಲೇಮಿನ ಪ್ರದೇಶಗಳ ಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಗಳು ಎಣಿಸುವವನ ಕೈಕೆಳಗೆ ಹಾದು ಹೋಗುವವೆಂದು ಕರ್ತನು ಹೇಳುತ್ತಾನೆ.
- Psalm 107:4 ಕೀರ್ತನೆಗಳು 107:4ಅರಣ್ಯದಲ್ಲಿಯೂ ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು ವಾಸಿಸುವದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ,
- Nehemiah 11:3 ನೆಹೆಮೀಯ 11:3ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ನೆತಿನಿಯರೂ ಸೊಲೊ ಮೋನನ ಸೇವಕರ ಮಕ್ಕಳೂ ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು;ಆದರೆ ವಾಸವಾಗಿದ್ದ ಸೀಮೆಯ ಮುಖ್ಯಸ್ಥರು ಯಾರಂದರೆ--