Psalms · chapter 109 · verse 18
Psalm 109:18 in Kannada
ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ.
Avanu tanna vastradante shaapavannu hoddukondanu; adu neerinante avana antarangadalliyoo enneyante avana elubugalalliyoo serali.
Psalm 109:18 in English
- King James Version (KJV)
- As he clothed himself with cursing like as with his garment, so let it come into his bowels like water, and like oil into his bones.
- World English Bible (WEB)
- He clothed himself also with cursing as with his garment. It came into his inward parts like water, like oil into his bones.
- American Standard Version (ASV)
- He clothed himself also with cursing as with his garment, And it came into his inward parts like water, And like oil into his bones.
- Bible in Basic English (BBE)
- He put on cursing like a robe, and it has come into his body like water, and into his bones like oil.
- Darby Translation (DBY)
- And he clothed himself with cursing like his vestment; so let it come into his bowels like water, and like oil into his bones;
- Webster's Bible (WBS)
- As he clothed himself with cursing like as with his garment, so let it come into his bowels like water, and like oil into his bones.
- Young's Literal Translation (YLT)
- And he putteth on reviling as his robe, And it cometh in as water into his midst, And as oil into his bones.
Read in context
- 16ಅವನು ಕರುಣೆ ತೋರಿಸುವದನ್ನು ಮರೆತು ಹೃದಯದಲ್ಲಿ ನೊಂದವ ರನ್ನು ಕೊಲ್ಲುವದಕ್ಕೂ ಬಡವನನ್ನೂ ಕೊರತೆಯುಳ್ಳ ವವನ್ನೂ ಹಿಂಸಿಸಿದನು.
- 17ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
- 18ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ.
- 19ಅದು ಅವ ನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ ಯಾವಾ ಗಲೂ ನಡುವಿಗೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
- 20ಇದು ನನ್ನ ಪ್ರಾಣಕ್ಕೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಕರ್ತನಿಂದ ಪ್ರತಿಫಲವಾಗಿರಲಿ.
Cross references
- Psalm 73:6 ಕೀರ್ತನೆಗಳು 73:6ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ.
- Numbers 5:22 ಅರಣ್ಯಕಾಂಡ 5:22ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು.
- Colossians 3:12 ಕೊಲೊಸ್ಸೆಯವರಿಗೆ 3:12ಆದದರಿಂದ ನೀವು ದೇವರಿಂದ ಆರಿಸಿಕೊಂಡ ವರೂ ಪರಿಶುದ್ಧರೂ ಪ್ರಿಯರೂ ಆಗಿರುವವರಿಗೆ ತಕ್ಕಂತೆ ಕನಿಕರ ದಯೆ ದೀನಮನಸ್ಸು ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
- Matthew 27:3–5 ಮತ್ತಾಯನು 27:3–5ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾದದ್ದನ್ನು ನೋಡಿ ಪಶ್ಚಾ ತ್ತಾಪಪಟ್ಟು ಆ ಮೂವತ್ತು ಬೆಳ್ಳಿಯ ನಾಣ್ಯಗಳನು ತಿರಿಗಿ ಪ್ರಧಾನ ಯಾಜಕರ ಮತ್ತು ಹಿರಿಯರ ಬಳಿಗೆ ತಂದು ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು. ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.
- Job 20:20–23 ಯೋಬನು 20:20–23ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ. ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ. ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು. ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು.
- 1 Peter 5:5 1 ಪೇತ್ರನು 5:5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- Acts 1:18 ಅಪೊಸ್ತಲರ ಕೃತ್ಯಗಳು 1:18ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು.
- Numbers 5:27 ಅರಣ್ಯಕಾಂಡ 5:27ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು.
- Colossians 3:8 ಕೊಲೊಸ್ಸೆಯವರಿಗೆ 3:8ಈಗಲಾದರೋ ಕ್ರೋಧ ಕೋಪ ಮತ್ಸರ ದೇವದೂಷಣೆ ನಿಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.
- Job 29:14 ಯೋಬನು 29:14ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು.
- Matthew 26:24 ಮತ್ತಾಯನು 26:24ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
- Job 20:12–16 ಯೋಬನು 20:12–16ಅವನ ಬಾಯಿಗೆ ಕೆಟ್ಟತನವು ಸಿಹಿಯಾಗಿದ್ದಾಗ್ಯೂ ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟರೂ ಅದನ್ನು ಕನಿಕರಿಸಿ ಅದನ್ನು ಬಿಡದೆ ತನ್ನ ಬಾಯಿಯೊಳಗೆ ಇಟ್ಟುಕೊಂಡರೂ ಅವನ ಆಹಾರವು ಅವನ ಕರು ಳುಗಳಲ್ಲಿ ಮಾರ್ಪಟ್ಟು ಅವನ ಉಡಿಲಲ್ಲಿ ಸರ್ಪದ ವಿಷವಾಗುವದು. ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡ ಮಾಡುವನು. ಸರ್ಪಗಳ ವಿಷ ವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲು ವದು.