Psalms · chapter 110 · verse 1
Psalm 110:1 in Kannada
ಕರ್ತನು ನನ್ನ ಕರ್ತನಿಗೆ ಹೇಳಿದ್ದೇನೆಂದರೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲ ಪಾರ್ಶ್ವದಲ್ಲಿ ಕುಳಿತುಕೋ,
Kartanu nanna kartanige heliddenendare naanu ninna shatrugalannu ninna paadapeethavaagi maaduva tanaka nanna bala paarshvadalli kulituko,
Psalm 110:1 in English
- King James Version (KJV)
- A Psalm of David. The LORD said unto my Lord, Sit thou at my right hand, until I make thine enemies thy footstool.
- World English Bible (WEB)
- A Psalm by David. The LORD says to my Lord, “Sit at my right hand, until I make your enemies your footstool for your feet.”
- American Standard Version (ASV)
- A Psalm of David. Jehovah saith unto my Lord, Sit thou at my right hand, Until I make thine enemies thy footstool.
- Bible in Basic English (BBE)
- A Psalm. Of David. The Lord said to my lord, Be seated at my right hand, till I put all those who are against you under your feet.
- Darby Translation (DBY)
- Psalm of David. Jehovah said unto my Lord, Sit at my right hand, until I put thine enemies [as] footstool of thy feet.
- Webster's Bible (WBS)
- A Psalm of David. The LORD said to my Lord, Sit thou at my right hand, until I make thy enemies thy footstool.
- Young's Literal Translation (YLT)
- A Psalm of David. The affirmation of Jehovah to my Lord: 'Sit at My right hand, Till I make thine enemies thy footstool.'
Read in context
- 1ಕರ್ತನು ನನ್ನ ಕರ್ತನಿಗೆ ಹೇಳಿದ್ದೇನೆಂದರೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲ ಪಾರ್ಶ್ವದಲ್ಲಿ ಕುಳಿತುಕೋ,
- 2ನಿನ್ನ ಬಲಕ್ಕಾಗಿ ಚೀಯೋ ನಿನಿಂದ ಕರ್ತನು ದಂಡವನ್ನು ಕಳುಹಿಸುವನು; ನಿನ್ನ ಶತ್ರುಗಳ ಮಧ್ಯದಲ್ಲಿ ದೊರೆತನಮಾಡು.
- 3ಪರಿಶುದ್ಧ ತೆಯ ಸೌಂದರ್ಯಗಳಲ್ಲಿ ಉದಯದ ಗರ್ಭದಲ್ಲಿಂದ ನಿನ್ನ ಜನರು ಬಲದ ದಿವಸದಲ್ಲಿ ಸ್ವಇಷ್ಟವುಳ್ಳವ ರಾಗಿರುವರು; ಇಬ್ಬನಿಯಂತೆ ನಿನ್ನ ಯೌವನವು ನಿನಗೆ ಇರುವದು.
Cross references
- Hebrews 10:12–13 ಇಬ್ರಿಯರಿಗೆ 10:12–13ಆದರೆ ಈ ಮನುಷ್ಯನು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲ ಗಡೆಯಲ್ಲಿ ಕೂತುಕೊಂಡನು. ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದ ಪೀಠವಾಗಿ ಮಾಡಲ್ಪಡುವ ತನಕ ಆತನು ಎದುರುನೋಡುವನು.
- 1 Corinthians 15:25 1 ಕೊರಿಂಥದವರಿಗೆ 15:25ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
- Luke 20:42–43 ಲೂಕನು 20:42–43ದಾವೀದನು ತಾನೇ ಕೀರ್ತನೆ ಗಳ ಪುಸ್ತಕದಲ್ಲಿ--ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವ ವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕೂತುಕೊಂಡಿರು ಎಂದು ಹೇಳಿದನು.
- Hebrews 1:13 ಇಬ್ರಿಯರಿಗೆ 1:13ಆದರೆ ದೂತರಲ್ಲಿ ಯಾವನ ವಿಷಯ ದಲ್ಲಿಯಾದರೂ--ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂಬದಾಗಿ ಎಂದಾದರೂ ಹೇಳಿ ದ್ದಾನೋ?ಇವರೆಲ್ಲರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿ ಸಲ್ಪಟ್ಟ ಊಳಿಗದ ಆತ್ಮಗಳಲ್ಲವೋ?
- Mark 12:35–37 ಮಾರ್ಕನು 12:35–37ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ-- ಕ್ರಿಸ್ತನು ದಾವೀದನಕುಮಾರನು ಎಂದು ಶಾಸ್ತ್ರಿಗಳು ಹೇಳುವದು ಹೇಗೆ? ಯಾಕಂದರೆ ದಾವೀದನು ತಾನೇ ಪರಿಶುದ್ಧಾತ್ಮನಿಂದ -- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಕರ್ತನಿಗೆ ಹೇಳಿದನಲ್ಲಾ ಎಂದು ನುಡಿದಿದ್ದಾನೆ. ಆದದರಿಂದ ದಾವೀದನು ತಾನೇ ಆತನನ್ನು ಕರ್ತ ನೆಂದು ಕರೆಯುವಾಗ ಆತನು ಅವನ ಮಗನಾಗುವದು ಹೇಗೆ ಎಂದು ಹೇಳಿದನು. ಸಾಮಾನ್ಯ ಜನರು ಸಂತೋ ಷದಿಂದ ಆತನ ಮಾತುಗಳನ್ನು ಕೇಳಿದರು.
- Hebrews 1:3 ಇಬ್ರಿಯರಿಗೆ 1:3ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
- Ephesians 1:20–22 ಎಫೆಸದವರಿಗೆ 1:20–22ಬಲಾತಿಶಯವು ಕ್ರಿಸ್ತನಲ್ಲಿ ತೋರಿಬಂದಿದೆ; ಹೇಗಂ ದರೆ ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು. ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿದನು. ಇದಲ್ಲದೆ ಆತನನ್ನು ಎಲ್ಲಾದರ ಮೇಲೆ ಇರಿಸಿ ಸಭೆಗೆ ಶಿರಸ್ಸಾಗಿ ನೇಮಿಸಿದನು.ಸಭೆಯು ಆತನ ದೇಹವಾಗಿದೆ; ಎಲ್ಲವನ್ನು ಎಲ್ಲಾ ಸಂಬಂಧದಲ್ಲಿ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳ ದಾಗಿದೆ.
- Hebrews 12:2 ಇಬ್ರಿಯರಿಗೆ 12:2ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ
- Acts 2:34–35 ಅಪೊಸ್ತಲರ ಕೃತ್ಯಗಳು 2:34–35ಯಾಕಂದರೆ ದಾವೀದನು ಆಕಾಶಗಳಿಗೆ ಏರಿಹೋಗಲಿಲ್ಲ; ಆದರೆ ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ತಾನೇ ಹೇಳುತ್ತಾನೆ.
- Matthew 22:42–46 ಮತ್ತಾಯನು 22:42–46ಕ್ರಿಸ್ತನ ವಿಷಯ ವಾಗಿ ನೀವು ಏನು ನೆನಸುತ್ತೀರಿ? ಆತನು ಯಾರ ಮಗನು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ದಾವೀದನಕುಮಾರನು ಅಂದರು. ಆತನು ಅವ ರಿಗೆ--ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ ಕರ್ತನೆಂದು ಕರೆದು--ಕರ್ತನು ನನ್ನ ಕರ್ತನಿಗೆ-- ನಾನು ನಿನ್ನ ವಿರೋಧಿಗಳನ್ನು ಪಾದಪೀಠವಾಗಿ ಮಾಡುವ ವರೆಗೆ ನನ್ನ ಬಲಗಡೆಯಲ್ಲಿ ಕೂತು ಕೊಂಡಿರು ಎಂದು ಹೇಳಿದನಲ್ಲಾ. ದಾವೀದನು ಆತನನ್ನು ಕರ್ತನೆಂದು ಕರೆಯುವದಾದರೆ ಆತನು ದಾವೀದನ ಮಗನಾಗುವದು ಹೇಗೆ ಎಂದು ಕೇಳಿದನು.ಅದಕ್ಕೆ ಯಾರೂ ಒಂದು ಮಾತನ್ನು ಸಹ ಆತನಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯಾವ ಪ್ರಶ್ನೆಗಳನ್ನಾದರೂ ಆತನನ್ನು ಕೇಳುವದಕ್ಕೆ ಯಾರಿಗೂ ಧೈರ್ಯಬರಲಿಲ್ಲ. ಅದಕ್ಕೆ ಯಾರೂ ಒಂದು ಮಾತನ್ನು ಸಹ ಆತನಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯಾವ ಪ್ರಶ್ನೆಗಳನ್ನಾದರೂ ಆತನನ್ನು ಕೇಳುವದಕ್ಕೆ ಯಾರಿಗೂ ಧೈರ್ಯಬರಲಿಲ್ಲ.
- Matthew 26:64 ಮತ್ತಾಯನು 26:64ಅದಕ್ಕೆ ಯೇಸು ಅವನಿಗೆ--ನೀನೇ ಹೇಳಿದ್ದೀ; ಆದರೂ--ಇನ್ನು ಮೇಲೆ ಮನುಷ್ಯಕುಮಾರನು ಸರ್ವ ಶಕ್ತನ ಬಲಪಾರ್ಶ್ವದಲ್ಲಿ ಕೂತಿರುವದನ್ನೂ ಆಕಾಶದ ಮೇಘಗಳ ಮೇಲೆ ಬರುವದನ್ನೂ ನೀವು ನೋಡುವಿರಿ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- 1 Peter 3:22 1 ಪೇತ್ರನು 3:22ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೂತರೂ ಪ್ರಭುತ್ವ ಗಳೂ ಅಧಿಕಾರಗಳೂ ಆತನಿಗೆ ಅಧೀನ ಮಾಡಲ್ಪಟ್ಟಿದ್ದಾರೆ.