Psalms · chapter 119 · verse 120
Psalm 119:120 in Kannada
ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.
Ninna hedarikeyinda nanna shareeravu naduguttade. Naanu ninna teerpugalige bhayapaduttene.
Psalm 119:120 in English
- King James Version (KJV)
- My flesh trembleth for fear of thee; and I am afraid of thy judgments.
- World English Bible (WEB)
- My flesh trembles for fear of you. I am afraid of your judgments. AYIN
- American Standard Version (ASV)
- My flesh trembleth for fear of thee; And I am afraid of thy judgments.
- Bible in Basic English (BBE)
- My flesh is moved for fear of you; I give honour to your decisions.
- Darby Translation (DBY)
- My flesh shuddereth for fear of thee; and I am afraid of thy judgments.
- Webster's Bible (WBS)
- My flesh trembleth for fear of thee; and I am afraid of thy judgments.
- Young's Literal Translation (YLT)
- Trembled from Thy fear hath my flesh, And from Thy judgments I have been afraid!
Read in context
- 118ನಿನ್ನ ನಿಯಮಗಳಿಂದ ತಪ್ಪಿದವರೆಲ್ಲರನ್ನು ನೀನು ತುಳಿದುಬಿಟ್ಟಿದ್ದೀ; ಅವರಲ್ಲಿ ಮೋಸವೂ ಸುಳ್ಳೂ ಇತ್ತು.
- 119ಕಿಟ್ಟದ ಹಾಗೆ ಭೂಮಿ ಯಲ್ಲಿರುವ ದುಷ್ಟರೆಲ್ಲರನ್ನು ತೆಗೆದುಹಾಕುತ್ತೀ, ಆದದ ರಿಂದ ನಿನ್ನ ವಿಧಿಗಳನ್ನು ಪ್ರೀತಿ ಮಾಡುತ್ತೇನೆ.
- 120ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.
- 121ನ್ಯಾಯವನ್ನೂ ನೀತಿಯನ್ನೂ ಮಾಡಿದ್ದೇನೆ;ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಿಬಿಡಬೇಡ.
- 122ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.
Cross references
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
- Habakkuk 3:16 ಹಬಕ್ಕೂಕ 3:16ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು.
- Hebrews 12:21 ಇಬ್ರಿಯರಿಗೆ 12:21ಇದಲ್ಲದೆ ಅಲ್ಲಿ ತೋರಿದ್ದು ಅಷ್ಟು ಭಯಂಕರವಾಗಿದ್ದದರಿಂದ ಮೋಶೆಯು--ನನಗೆ ಬಹು ಭಯವಾಗುತ್ತದೆ, ನಡು ಗುತ್ತೇನೆ ಎಂದು ಹೇಳಿದನು).
- Hebrews 12:28–29 ಇಬ್ರಿಯರಿಗೆ 12:28–29ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ. ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
- Daniel 10:8–11 ದಾನಿಯೇಲನು 10:8–11ನಾನು ಒಬ್ಬನೇ ಉಳಿದು ಈ ದೊಡ್ಡ ದರ್ಶನವನ್ನು ನೋಡಿದೆನು; ನನ್ನಲ್ಲಿ ತ್ರಾಣವು ಇರ ಲಿಲ್ಲ. ನನ್ನ ಸೌಂದರ್ಯವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು. ಆದಾಗ್ಯೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು, ಮತ್ತು ಆತನ ಮಾತುಗಳ ಧ್ವನಿಯನ್ನು ಕೇಳಿದಾಗ ಮುಖ ಕೆಳಗೆ ಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆಗೆ ಇತ್ತು. ಇಗೋ, ಒಂದು ಕೈ ನನ್ನನ್ನು ಮುಟ್ಟಿ ನನ್ನ ಮೊಣಕಾಲುಗಳ ಮೇಲೆಯೂ ನನ್ನ ಅಂಗೈಗಳ ಮೇಲೆಯೂ ನಿಲ್ಲುವಂತೆ ಮಾಡಿತು. ಆಗ ಆತನು ನನಗೆ ಹೇಳಿದ್ದೇನಂದರೆ--ಓ ದಾನಿ ಯೇಲನೇ, ಅತಿಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ನಾನು ಈಗ ನಿನ್ನ ಬಳಿಗೆ ಕಳುಹಿಸ ಲ್ಪಟ್ಟಿದ್ದೇನೆ. ಅವನು ಈ ಮಾತುಗಳನ್ನು ಹೇಳಿದ ಮೇಲೆ ನಾನು ನಡುಗುತ್ತಲೇ ನಿಂತೆನು.
- Philippians 2:12 ಫಿಲಿಪ್ಪಿಯವರಿಗೆ 2:12ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
- 2 Chronicles 34:27 2 ಪೂರ್ವಕಾಲವೃತ್ತಾಂತ 34:27ನೀನು ಈ ಸ್ಥಳಕ್ಕೆ ವಿರೋಧ ವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ದೇವರು ಹೇಳಿದ ಮಾತುಗಳನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ಆತನ ಮುಂದೆ ನಿನ್ನನ್ನು ತಗ್ಗಿಸಿಕೊಂಡಿ. ನಿನ್ನನ್ನು ನನ್ನ ಮುಂದೆ ತಗ್ಗಿಸಿ ಕೊಂಡು ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದರಿಂದ ನಾನು ಅವನ ಮೊರೆಯನ್ನು ಕೇಳಿದೆನೆಂದು ಕರ್ತನು ಹೇಳುತ್ತಾನೆ.
- 2 Chronicles 34:21 2 ಪೂರ್ವಕಾಲವೃತ್ತಾಂತ 34:21ನೀವು ಹೋಗಿ ನನಗೋಸ್ಕ ರವೂ ಇಸ್ರಾಯೇಲಿನಲ್ಲಿಯೂ ಯೆಹೂದದಲ್ಲಿಯೂ ಉಳಿದವರಿಗೋಸ್ಕರವೂ ಸಿಕ್ಕಿದ ಪುಸ್ತಕದ ಮಾತು ಗಳನ್ನು ಕುರಿತು ಕರ್ತನನ್ನು ವಿಚಾರಿಸಿರಿ. ಯಾಕಂದರೆ ನಮ್ಮ ಪಿತೃಗಳು ಈ ಪುಸ್ತಕದಲ್ಲಿ ಬರೆದ ಎಲ್ಲಾದರ ಪ್ರಕಾರ ಮಾಡಲು ಕರ್ತನ ವಾಕ್ಯವನ್ನು ಕೈಕೊಳ್ಳದೆ ಇದ್ದದರಿಂದ ನಮ್ಮ ಮೇಲೆ ಸುರಿದ ಕರ್ತನ ಕೋಪವು ದೊಡ್ಡದಾಗಿದೆ ಎಂದು ಹೇಳಿದನು.
- Revelation 1:17–18 ಪ್ರಕಟನೆ 1:17–18ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು--ಹೆದರಬೇಡ, ನಾನು ಮೊದಲನೆಯ ವನೂ ಕಡೆಯವನೂ ಆಗಿದ್ದೇನೆ. ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.
- Leviticus 10:1–3 ಯಾಜಕಕಾಂಡ 10:1–3ಇದಲ್ಲದೆ ಆರೋನನ ಕುಮಾರರಾದ ನಾದಾಬ್ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು. ಆಗ ಕರ್ತನ ಬಳಿಯಿಂದ ಬೆಂಕಿಯು ಹೊರಟು ಅವರನ್ನು ದಹಿಸಿ ಬಿಟ್ಟಿತು; ಅವರು ಕರ್ತನ ಮುಂದೆ ಸತ್ತುಹೋದರು. ತರುವಾಯ ಮೋಶೆಯು ಆರೋನನಿಗೆ--ಕರ್ತನು ಹೇಳಿದ್ದು ಇದೇ, ಅದೇನಂದರೆ--ನನ್ನನ್ನು ಸವಿಾಪಿಸು ವವರನ್ನು ನಾನು ಪರಿಶುದ್ಧಪಡಿಸುವೆನು, ಜನರೆಲ್ಲರ ಮುಂದೆ ನಾನು ಘನ ಹೊಂದುವೆನು ಅಂದನು. ಆಗ ಆರೋನನು ಸುಮ್ಮನಿದ್ದನು.
- 2 Samuel 6:8–9 2 ಸಮುವೇಲನು 6:8–9ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು. ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು.
- Psalm 119:53 ಕೀರ್ತನೆಗಳು 119:53ನಿನ್ನ ನ್ಯಾಯಪ್ರಮಾಣ ವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ ಭಯ ಭ್ರಾಂತಿಯು ನನ್ನನ್ನು ಹಿಡಿದುಕೊಂಡಿತು.