Psalms · chapter 119 · verse 121
Psalm 119:121 in Kannada
ನ್ಯಾಯವನ್ನೂ ನೀತಿಯನ್ನೂ ಮಾಡಿದ್ದೇನೆ;ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಿಬಿಡಬೇಡ.
Nyaayavannoo neetiyannoo maadiddene;nanna hinsakarige nannannu oppisibidabeda.
Psalm 119:121 in English
- King James Version (KJV)
- I have done judgment and justice: leave me not to mine oppressors.
- World English Bible (WEB)
- I have done what is just and righteous. Don’t leave me to my oppressors.
- American Standard Version (ASV)
- I have done justice and righteousness: Leave me not to mine oppressors.
- Bible in Basic English (BBE)
- AIN I have done what is good and right: you will not give me into the hands of those who are working against me.
- Darby Translation (DBY)
- AIN. I have done judgment and justice: leave me not to mine oppressors.
- Webster's Bible (WBS)
- AIN. I have done judgment and justice; leave me not to my oppressors.
- Young's Literal Translation (YLT)
- [Ain.] I have done judgment and righteousness, Leave me not to mine oppressors.
Read in context
- 119ಕಿಟ್ಟದ ಹಾಗೆ ಭೂಮಿ ಯಲ್ಲಿರುವ ದುಷ್ಟರೆಲ್ಲರನ್ನು ತೆಗೆದುಹಾಕುತ್ತೀ, ಆದದ ರಿಂದ ನಿನ್ನ ವಿಧಿಗಳನ್ನು ಪ್ರೀತಿ ಮಾಡುತ್ತೇನೆ.
- 120ನಿನ್ನ ಹೆದರಿಕೆಯಿಂದ ನನ್ನ ಶರೀರವು ನಡುಗುತ್ತದೆ. ನಾನು ನಿನ್ನ ತೀರ್ಪುಗಳಿಗೆ ಭಯಪಡುತ್ತೇನೆ.
- 121ನ್ಯಾಯವನ್ನೂ ನೀತಿಯನ್ನೂ ಮಾಡಿದ್ದೇನೆ;ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಿಬಿಡಬೇಡ.
- 122ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.
- 123ನನ್ನ ಕಣ್ಣುಗಳು ನಿನ್ನ ರಕ್ಷಣೆಗೋಸ್ಕರವೂ ನಿನ್ನ ನೀತಿಯ ನುಡಿಗೋಸ್ಕರವೂ ನೆರವೇರುವದನ್ನು ನಿರೀಕ್ಷಿಸುತ್ತಾ ಮೊಬ್ಬಾಗುವವು.
Cross references
- 2 Samuel 8:15 2 ಸಮುವೇಲನು 8:15ಹೀಗೆಯೇ ದಾವೀದನು ಎಲ್ಲಾ ಇಸ್ರಾಯೇಲಿನ ಮೇಲೆ ಆಳಿ ತನ್ನ ಎಲ್ಲಾ ಜನರಿಗೂ ನೀತಿ ನ್ಯಾಯಗಳನ್ನು ನಡಿಸುತ್ತಾ ಬಂದನು.
- Psalm 18:20–24 ಕೀರ್ತನೆಗಳು 18:20–24ಕರ್ತನು ನನ್ನ ನೀತಿಯ ಪ್ರಕಾರ ನನಗೆ ಪ್ರತಿಫಲ ಕೊಟ್ಟನು. ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಬದಲು ಕೊಟ್ಟನು. ನಾನು ಕರ್ತನ ಮಾರ್ಗಗಳನ್ನು ಕೈಕೊಂಡು ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ. ಆತನ ತೀರ್ಪುಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನೇಮಗಳನ್ನು ನನ್ನಿಂದ ತೊಲಗಿಸ ಲಿಲ್ಲ. ಆತನ ಮುಂದೆ ಸಂಪೂರ್ಣನಾಗಿದ್ದು ನನ್ನ ಅಕ್ರಮದಿಂದ ನನ್ನನ್ನು ಕಾಪಾಡಿಕೊಂಡೆನು. ಆದದ ರಿಂದ ಕರ್ತನು ನನ್ನ ನೀತಿಯ ಪ್ರಕಾರವೂ ಆತನ ಕಣ್ಣೆದುರಿನಲ್ಲಿ ನನ್ನ ಕೈಗಳ ಶುದ್ಧತ್ವದ ಪ್ರಕಾರವೂ ನನಗೆ ಬದಲು ಕೊಟ್ಟನು.
- Psalm 37:33 ಕೀರ್ತನೆಗಳು 37:33ಕರ್ತನು ಅವನನ್ನು ದುಷ್ಟನ ಕೈಯಲ್ಲಿ ಬಿಡುವದಿಲ್ಲ; ಇಲ್ಲವೆ ನ್ಯಾಯವಿಚಾರಣೆಯಲ್ಲಿ ಅವನು ದುಷ್ಟನೆಂದು ತೀರ್ಪು ಹೊಂದುವದಿಲ್ಲ.
- 2 Corinthians 1:12 2 ಕೊರಿಂಥದವರಿಗೆ 1:12ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.
- Acts 25:10–11 ಅಪೊಸ್ತಲರ ಕೃತ್ಯಗಳು 25:10–11ಆಗ ಪೌಲನು--ನ್ಯಾಯವಿಚಾರಣೆ ಮಾಡತಕ್ಕ ಕೈಸರನ ನ್ಯಾಯಾಸನದ ಮುಂದೆ ನಾನು ನಿಂತಿದ್ದೇನೆ; ನಾನು ಯೆಹೂದ್ಯರಿಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ ಎಂಬದು ನಿನಗೆ ಚೆನ್ನಾಗಿ ತಿಳಿದದೆ. ನಾನು ಅನ್ಯಾಯಮಾಡಿದವ ನಾಗಿದ್ದರೆ ಇಲ್ಲವೆ ಮರಣದಂಡನೆಗೆ ಕಾರಣವಾದ ಯಾವದನ್ನಾದರೂ ನಡಿಸಿದ್ದರೆ ಸಾಯುವದಕ್ಕೆ ನಾನು ಬೇಡವೆನ್ನುವದಿಲ್ಲ; ನನ್ನ ಮೇಲೆ ಅವರು ತಪ್ಪು ಹೊರಿಸುವವುಗಳಲ್ಲಿ ಯಾವದೂ ಇಲ್ಲದೆ ಹೋದರೆ ನನ್ನನ್ನು ಅವರಿಗೆ ಯಾವ ಮನುಷ್ಯನೂ ಒಪ್ಪಿಸಲಾರನು; ನಾನು ಕೈಸರ
- Acts 21:16 ಅಪೊಸ್ತಲರ ಕೃತ್ಯಗಳು 21:16ಆಗ ಕೈಸರೈಯದ ಶಿಷ್ಯರಲ್ಲಿ ಸಹ ಕೆಲವರು ನಮ್ಮೊಂದಿಗೆ ಬಂದು ನಾವು ಕುಪ್ರದ ಮ್ನಾಸೋನನೆಂಬ ಪ್ರಾಯ ಹೋದ ಒಬ್ಬ ಶಿಷ್ಯನ ಕೂಡ ಇಳುಕೊಳ್ಳುವಂತೆ ತಮ್ಮೊಂದಿಗೆ ಅವನನ್ನು ಕರಕೊಂಡು ಬಂದರು.
- 1 Samuel 24:11–15 1 ಸಮುವೇಲನು 24:11–15ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ. ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. ಪೂರ್ವಿಕರು ಹೇಳಿದ ಸಾಮತಿಯ ಪ್ರಕಾರ ದುಷ್ಟರಿಂದ ದುಷ್ಟತ್ವವು ಹುಟ್ಟುವದು. ಆದರೂ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ. ಇಸ್ರಾಯೇಲಿನ ಅರಸನು ಯಾರನ್ನು ಬೆನ್ನಟ್ಟಿ ಹೊರಟನು? ಯಾರನ್ನು ನೀನು ಹಿಂದಟ್ಟುತ್ತೀ? ಸತ್ತನಾಯಿಯನ್ನೇ? ಒಂದು ಕೀಟವನ್ನೇ? ಕರ್ತನು ನ್ಯಾಯಾಧಿಪತಿಯಾಗಿದ್ದು ನನಗೂ ನಿನಗೂ ನ್ಯಾಯತೀರಿಸಿ ನನ್ನ ವ್ಯಾಜ್ಯವನ್ನು ನೋಡಿ ವ್ಯಾಜ್ಯವಾಡಿ ನನ್ನನ್ನು ನಿನ್ನ ಕೈಗೆ ತಪ್ಪಿಸಿಬಿಡಲಿ ಅಂದನು.
- 2 Peter 2:9 2 ಪೇತ್ರನು 2:9ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Psalm 75:2 ಕೀರ್ತನೆಗಳು 75:2ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು;
- Psalm 7:3–5 ಕೀರ್ತನೆಗಳು 7:3–5ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ, ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ, ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ.
- Psalm 57:3–4 ಕೀರ್ತನೆಗಳು 57:3–4ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು. ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
- 1 Samuel 25:28 1 ಸಮುವೇಲನು 25:28ನೀನು ದಯಮಾಡಿ ನಿನ್ನ ದಾಸಿಯದ್ರೋಹವನ್ನು ಮನ್ನಿಸಬೇಕು; ನನ್ನ ಒಡೆಯನು ಕರ್ತನ ಯುದ್ಧಗಳನ್ನು ನಡೆಸುತ್ತಾನೆ; ನಿನ್ನ ದಿನಗಳಲ್ಲಿ ನಿನ್ನ ಬಳಿಯಲ್ಲಿ ಕೆಟ್ಟತನವು ಕಂಡುಹಿಡಿ ಯಲ್ಪಟ್ಟದ್ದಿಲ್ಲ; ಆದದರಿಂದ ಕರ್ತನು ನನ್ನ ಒಡೆಯನಿಗೆ ಸ್ಥಿರವಾದ ಮನೆಯನ್ನು ಖಂಡಿತವಾಗಿ ಮಾಡುವನು.