Psalms · chapter 119 · verse 17
Psalm 119:17 in Kannada
ನಿನ್ನ ಸೇವಕನಿಗೆ ಉಪಕಾರಮಾಡು; ಆಗ ನಾನು ಬದುಕಿ, ನಿನ್ನ ವಾಕ್ಯವನ್ನು ಕೈಕೊಳ್ಳುವೆನು.
Ninna sevakanige upakaaramaadu; aaga naanu baduki, ninna vaakyavannu kaikolluvenu.
Psalm 119:17 in English
- King James Version (KJV)
- Deal bountifully with thy servant, [that] I may live, and keep thy word.
- World English Bible (WEB)
- Do good to your servant. I will live and I will obey your word.
- American Standard Version (ASV)
- Deal bountifully with thy servant, that I may live; So will I observe thy word.
- Bible in Basic English (BBE)
- GIMEL Give me, your servant, the reward of life, so that I may keep your word;
- Darby Translation (DBY)
- GIMEL. Deal bountifully with thy servant [and] I shall live; and I will keep thy word.
- Webster's Bible (WBS)
- GIMEL. Deal bountifully with thy servant, [that] I may live, and keep thy word.
- Young's Literal Translation (YLT)
- [Gimel.] Confer benefits on Thy servant, I live, and I keep Thy word.
Read in context
- 15ನಿನ್ನ ಕಟ್ಟಳೆಗಳನ್ನು ಧ್ಯಾನ ಮಾಡಿ, ನಿನ್ನ ದಾರಿಗಳನ್ನು ಗಮ ನಿಸುವೆನು.
- 16ನಿನ್ನ ನಿಯಮಗಳಲ್ಲಿ ಆನಂದಪಟ್ಟು, ನಿನ್ನ ವಾಕ್ಯವನ್ನು ಮರೆತುಬಿಡೆನು.
- 17ನಿನ್ನ ಸೇವಕನಿಗೆ ಉಪಕಾರಮಾಡು; ಆಗ ನಾನು ಬದುಕಿ, ನಿನ್ನ ವಾಕ್ಯವನ್ನು ಕೈಕೊಳ್ಳುವೆನು.
- 18ನನ್ನ ಕಣ್ಣುಗಳನ್ನು ತೆರೆ; ಆಗ ನಿನ್ನ ನ್ಯಾಯಪ್ರಮಾಣದಲ್ಲಿನ ಅದ್ಭುತಗಳನ್ನು ನೋಡುವೆನು.
- 19ನಾನು ಭೂಮಿಯಲ್ಲಿ ಪರದೇಶಸ್ಥನಾಗಿದ್ದೇನೆ; ನಿನ್ನ ಆಜ್ಞೆ ಗಳನ್ನು ನನಗೆ ಮರೆಮಾಡಬೇಡ.
Cross references
- Psalm 13:6 ಕೀರ್ತನೆಗಳು 13:6ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ.
- Titus 2:11–12 ತೀತನಿಗೆ 2:11–12ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು. ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.
- Ephesians 2:4–5 ಎಫೆಸದವರಿಗೆ 2:4–5ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;)
- Psalm 116:7 ಕೀರ್ತನೆಗಳು 116:7ನನ್ನ ಮನವೇ, ನಿನ್ನ ವಿಶ್ರಾಂತಿಗೆ ತಿರುಗಿಕೋ; ಕರ್ತನು ನಿನಗೆ ಉಪಕಾರ ಮಾಡಿದ್ದಾನೆ.
- Psalm 119:65 ಕೀರ್ತನೆಗಳು 119:65ಓ ಕರ್ತನೇ, ನಿನ್ನ ವಾಕ್ಯದ ಪ್ರಕಾರ ನಿನ್ನ ಸೇವಕ ನಿಗೆ ಒಳ್ಳೇದನ್ನು ಮಾಡಿದ್ದೀ.
- Psalm 119:124 ಕೀರ್ತನೆಗಳು 119:124ನಿನ್ನ ಕರುಣೆಯ ಪ್ರಕಾರ ನಿನ್ನ ಸೇವಕನಿಗೆ ಮಾಡಿ ನಿನ್ನ ನಿಯಮಗಳನ್ನು ನನಗೆ ಕಲಿಸು.
- Ephesians 2:10 ಎಫೆಸದವರಿಗೆ 2:10ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
- 1 John 5:3–4 1 ಯೋಹಾನನು 5:3–4ದೇವರ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ, ಆತನ ಆಜ್ಞೆಗಳು ಕಠಿಣ ವಾದವುಗಳಲ್ಲ. ಯಾಕಂದರೆ ದೇವರಿಂದ ಹುಟ್ಟಿರು ವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥ ಆ ಜಯವು ನಮ್ಮ ನಂಬಿಕೆಯೇ.
- Psalm 119:132 ಕೀರ್ತನೆಗಳು 119:132ನೀನು ನನ್ನ ಕಡೆಗೆ ದೃಷ್ಟಿಸಿ ನಿನ್ನ ಹೆಸರನ್ನು ಪ್ರೀತಿಸುವವರಿಗೆ ಮಾಡುವ ಪ್ರಕಾರ ನನ್ನನ್ನು ಕರುಣಿಸು.
- 1 John 2:29 1 ಯೋಹಾನನು 2:29ಆತನು ನೀತಿವಂತನಾಗಿ ದ್ದಾನೆಂಬದು ನಿಮಗೆ ಗೊತ್ತಾಗಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನಾಗಿದ್ದಾನೆಂದು ನೀವು ತಿಳಿದಿದ್ದೀರಿ.
- 2 Corinthians 9:7–11 2 ಕೊರಿಂಥದವರಿಗೆ 9:7–11ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ. (ಬರೆದಿರುವ ಪ್ರಕಾರ--ಆತನು ಬಡವರಿಗೆ ಧಾರಾಳವಾಗಿ ಹಂಚಿಕೊಟ್ಟನು; ಆತನ ನೀತಿಯು ಸದಾಕಾಲವೂ ಇರುವದು ಎಂಬದೇ. ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರ ವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ನೀತಿಯಿಂದಾದ ಕಾರ್ಯಗಳ ಫಲಗಳನ್ನು ವೃದ್ಧಿಪಡಿಸುವನು.) ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಅದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟು ಮಾಡುವದು.
- Philippians 4:19 ಫಿಲಿಪ್ಪಿಯವರಿಗೆ 4:19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.