Psalms · chapter 119 · verse 23
Psalm 119:23 in Kannada
ಪ್ರಧಾನರು ಕೂತುಕೊಂಡು ನನಗೆ ವಿರೋಧವಾಗಿ ಮಾತಾಡಿಕೊಂಡರೂ ನಿನ್ನ ಸೇವಕನು ನಿನ್ನ ನಿಯಮಗಳನ್ನು ಧ್ಯಾನಮಾಡುವನು.
Pradhaanaru kootukondu nanage virodhavaagi maataadikondaroo ninna sevakanu ninna niyamagalannu dhyaanamaaduvanu.
Psalm 119:23 in English
- King James Version (KJV)
- Princes also did sit [and] speak against me: [but] thy servant did meditate in thy statutes.
- World English Bible (WEB)
- Though princes sit and slander me, your servant will meditate on your statutes.
- American Standard Version (ASV)
- Princes also sat and talked against me; [But] thy servant did meditate on thy statutes.
- Bible in Basic English (BBE)
- Rulers make evil designs against me; but your servant gives thought to your rules.
- Darby Translation (DBY)
- Princes also did sit [and] talk together against me: thy servant doth meditate in thy statutes.
- Webster's Bible (WBS)
- Princes also did sit [and] speak against me: [but] thy servant did meditate in thy statutes.
- Young's Literal Translation (YLT)
- Princes also sat — against me they spoke, Thy servant doth meditate in Thy statutes,
Read in context
- 21ನಿನ್ನ ಆಜ್ಞೆಗಳಿಂದ ತಪ್ಪಿಹೋಗುವ ಶಾಪಗ್ರಸ್ಥರಾದ ಅಹಂಕಾರಿಗಳನ್ನು ನೀನು ಗದರಿಸಿದ್ದೀ.
- 22ನಾನು ನಿನ್ನ ಸಾಕ್ಷಿಗಳನ್ನು ಕೈಕೊಂಡ ಕಾರಣ ನಿಂದೆಯನ್ನೂ ತಿರಸ್ಕಾರವನ್ನೂ ನನಗೆ ದೂರಮಾಡಿಬಿಡು.
- 23ಪ್ರಧಾನರು ಕೂತುಕೊಂಡು ನನಗೆ ವಿರೋಧವಾಗಿ ಮಾತಾಡಿಕೊಂಡರೂ ನಿನ್ನ ಸೇವಕನು ನಿನ್ನ ನಿಯಮಗಳನ್ನು ಧ್ಯಾನಮಾಡುವನು.
- 24ನಿನ್ನ ಸಾಕ್ಷಿಗಳೇ ನನ್ನ ಆನಂದವೂ ಆಲೋಚನಾ ಕರ್ತರೂ ಆಗಿವೆ.
- 25ನನ್ನ ಪ್ರಾಣವು ಧೂಳಿಗೆ ಹತ್ತಿ ಕೊಳ್ಳುತ್ತದೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀ ವಿಸು.
Cross references
- Psalm 2:1–2 ಕೀರ್ತನೆಗಳು 2:1–2ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ.
- 1 Samuel 22:7–13 1 ಸಮುವೇಲನು 22:7–13ಆಗ ಸೌಲನು ಸುತ್ತಲೂ ನಿಂತಿದ್ದ ಸೇವಕರಿಗೆ--ಬೆನ್ಯಾವಿಾನನ ಮಕ್ಕಳೇ, ಕೇಳಿರಿ; ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ನಡಿಸು ವಂತೆ ಇಷಯನ ಮಗನು ನಿಮ್ಮೆಲ್ಲರಿಗೂ ಹೊಲ ಗಳನ್ನೂ ದ್ರಾಕ್ಷೇತೋಟಗಳನ್ನೂ ಕೊಡುವನೋ? ನಿಮ್ಮೆಲ್ಲರನ್ನೂ ಸಾವಿರಕ್ಕೆ ಯಜಮಾನರಾಗಿಯೂ ನೂರಕ್ಕೆ ಯಜಮಾನರಾಗಿಯೂ ಇಡುವನೋ? ಇದಲ್ಲದೆ ನನ್ನ ಮಗನು ಇಷಯನ ಮಗನ ಸಂಗಡ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಯಾವನೂ ನನಗೆ ತಿಳಿಸಲಿಲ್ಲ. ನಿಮ್ಮಲ್ಲಿ ಯಾವನಾದರೂ ನನ ಗೋಸ್ಕರ ಚಿಂತಿಸಿ ನನ್ನ ಮಗನು ಈ ಹೊತ್ತು ನನಗೋಸ್ಕರ ಅಡಗಿಕೊಂಡಿರುವ ಹಾಗೆ ನನ್ನ ಸೇವಕ ನನ್ನು ನನಗೆ ವಿರೋಧವಾಗಿ ಎಬ್ಬಿಸಿದ್ದನ್ನು ಯಾವನೂ ನನಗೆ ತಿಳಿಸಲಿಲ್ಲ ಅಂದನು. ಆಗ ಸೌಲನ ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಪ್ರತ್ಯುತ್ತರವಾಗಿ--ಇಷಯನ ಮಗನು ನೋಬದ ಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ನೋಡಿದೆನು. ಇವನು ಅವನಿಗೋಸ್ಕರ ಕರ್ತನನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನು ಅವನಿಗೆ ಕೊಟ್ಟನು ಅಂದನು. ಅರಸನು ಅಹೀಟೂ ಬನ ಮಗನಾದ ಯಾಜಕನಾಗಿರುವ ಅಹೀಮೆಲಕ ನನ್ನೂ ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರೆಲ್ಲರನ್ನೂ ಕರೇ ಕಳುಹಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು. ಆಗ ಸೌಲನು--ಅಹೀಟೂಬನ ಮಗನೇ, ಕೇಳು ಅಂದನು. ಅದಕ್ಕವನು--ಇಗೋ, ನನ್ನ ಒಡೆಯನೇ, ನಾನು ಇಲ್ಲಿದ್ದೇನೆ ಅಂದನು. ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು.
- Luke 23:10–11 ಲೂಕನು 23:10–11ಆಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ನಿಂತುಕೊಂಡು ಉಗ್ರತೆಯಿಂದ ಆತನ ಮೇಲೆ ದೂರು ಹೇಳಿದರು. ಹೆರೋದನು ತನ್ನ ಯುದ್ಧಭಟರೊಂದಿಗೆ ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಆತನ ಮೇಲೆ ಶೋಭಾಯಮಾನವಾದ ವಸ್ತ್ರವನ್ನು ಹೊದಿಸಿ ಆತನನ್ನು ತಿರಿಗಿ ಪಿಲಾತನ ಬಳಿಗೆ ಕಳುಹಿಸಿ ದನು.
- 1 Samuel 20:31 1 ಸಮುವೇಲನು 20:31ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
- Luke 22:66 ಲೂಕನು 22:66ಬೆಳಗಾದ ಕೂಡಲೆ ಜನರ ಹಿರಿಯರೂ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಒಟ್ಟಾಗಿ ಬಂದು ಆತನನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ--