Psalms · chapter 119 · verse 69
Psalm 119:69 in Kannada
ಅಹಂಕಾರಿ ಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು; ನಾನು ಪೂರ್ಣಹೃದಯದಿಂದ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
Ahankaari galu nanage virodhavaagi sullu kalpisidaru; naanu poornahrudayadinda ninna kattalegalannu kaikolluvenu.
Psalm 119:69 in English
- King James Version (KJV)
- The proud have forged a lie against me: [but] I will keep thy precepts with [my] whole heart.
- World English Bible (WEB)
- The proud have smeared a lie upon me. With my whole heart, I will keep your precepts.
- American Standard Version (ASV)
- The proud have forged a lie against me: With my whole heart will I keep thy precepts.
- Bible in Basic English (BBE)
- The men of pride have said false things about me; but I will keep your orders in my heart.
- Darby Translation (DBY)
- The proud have forged falsehood against me: I will observe thy precepts with [my] whole heart.
- Webster's Bible (WBS)
- The proud have forged a lie against me: [but] I will keep thy precepts with [my] whole heart.
- Young's Literal Translation (YLT)
- Forged against me falsehood have the proud, I with the whole heart keep Thy precepts.
Read in context
- 67ನಾನು ಶ್ರಮೆಪಡು ವದಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಆದರೆ ಈಗ ನಿನ್ನ ವಾಕ್ಯವನ್ನು ಕೈಕೊಂಡಿದ್ದೇನೆ.
- 68ನೀನು ಒಳ್ಳೆಯ ವನೂ ಒಳ್ಳೇದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಯಮಗಳನ್ನು ನನಗೆ ಬೋಧಿಸು.
- 69ಅಹಂಕಾರಿ ಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು; ನಾನು ಪೂರ್ಣಹೃದಯದಿಂದ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
- 70ಅವರ ಹೃದಯವು ಕೊಬ್ಬಿನ ಹಾಗೆ ಮಂದವಾಗಿದೆ; ನಾನು ನಿನ್ನ ನ್ಯಾಯಪ್ರಮಾಣದಲ್ಲಿ ಆನಂದಪಡುತ್ತೇನೆ.
- 71ನಿನ್ನ ನಿಯಮಗಳನ್ನು ಕಲಿಯುವ ಹಾಗೆ ನಾನು ಶ್ರಮೆಪಟ್ಟದ್ದು ನನಗೆ ಒಳ್ಳೇದು.
Cross references
- Job 13:4 ಯೋಬನು 13:4ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರೂ ವ್ಯರ್ಥ ವೈದ್ಯರೇ.
- Matthew 5:11–12 ಮತ್ತಾಯನು 5:11–12ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- Psalm 109:2–3 ಕೀರ್ತನೆಗಳು 109:2–3ದುಷ್ಟನ ಬಾಯಿ ಯನ್ನೂ ಮೋಸದ ಬಾಯಿಯನ್ನೂ ನನಗೆ ವಿರೋಧ ವಾಗಿ ತೆರೆದಿವೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ. ಹಗೆಯ ಮಾತು ಗಳಿಂದ ಅವರು ನನ್ನನ್ನು ಸುತ್ತಿಕೊಂಡು ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧಮಾಡಿದ್ದಾರೆ.
- Psalm 119:157 ಕೀರ್ತನೆಗಳು 119:157ನನ್ನನ್ನು ಹಿಂಸಿಸುವವರೂ ನನ್ನ ವೈರಿಗಳೂ ಅನೇಕ ರಾಗಿದ್ದಾರೆ; ನಿನ್ನ ಸಾಕ್ಷಿಗಳಿಂದ ನಾನು ತೊಲಗೆನು.
- Matthew 26:59–68 ಮತ್ತಾಯನು 26:59–68ಆಗ ಪ್ರಧಾನಯಾಜಕರೂ ಹಿರಿಯರೂ ಆಲೋ ಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಆತನನ್ನು ಕೊಲ್ಲಿಸುವಂತೆ ಸುಳ್ಳು ಸಾಕ್ಷಿಗಾಗಿ ಹುಡುಕಿ ದರು. ಆದರೆ ಯಾರೂ ಸಿಕ್ಕಲಿಲ್ಲ; ಹೌದು, ಬಹುಮಂದಿ ಸುಳ್ಳು ಸಾಕ್ಷಿಗಳು ಬಂದರೂ ಅವರಿಗೆ ಏನೂ ದೊರೆಯಲಿಲ್ಲ; ಕಡೆಯಲ್ಲಿ ಇಬ್ಬರು ಸುಳ್ಳು ಸಾಕ್ಷಿಗಳು ಬಂದು-- ನಾನು ದೇವಾಲಯ ವನ್ನು ಕೆಡವಿ ಮೂರು ದಿವಸಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು. ಮಹಾಯಾಜಕರು ಎದ್ದು ಆತನಿಗೆ--ನೀನು ಏನೂ ಉತ್ತರ ಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವದು ಏನು ಅಂದನು. ಆದರೆ ಯೇಸು ಸುಮ್ಮನಿದ್ದನು. ಆಗ ಮಹಾಯಾಜಕನು ಪ್ರತ್ಯುತ್ತರವಾಗಿ ಆತನಿಗೆ--ನೀನು ದೇವಕುಮಾರನಾದ ಕ್ರಿಸ್ತನಾದರೆ ಅದನ್ನು ನಮಗೆ ಹೇಳಬೇಕೆಂದು ಜೀವಸ್ವರೂಪನಾದ ದೇವರ ಆಣೆಯನ್ನು ನಿನಗೆ ಇಡುತ್ತೇನೆ ಅಂದನು. ಅದಕ್ಕೆ ಯೇಸು ಅವನಿಗೆ--ನೀನೇ ಹೇಳಿದ್ದೀ; ಆದರೂ--ಇನ್ನು ಮೇಲೆ ಮನುಷ್ಯಕುಮಾರನು ಸರ್ವ ಶಕ್ತನ ಬಲಪಾರ್ಶ್ವದಲ್ಲಿ ಕೂತಿರುವದನ್ನೂ ಆಕಾಶದ ಮೇಘಗಳ ಮೇಲೆ ಬರುವದನ್ನೂ ನೀವು ನೋಡುವಿರಿ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. ಆಗ ಮಹಾ ಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು--ಇವನು ದೇವದೂಷಣೆ ಮಾಡಿದ್ದಾನೆ; ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಯಾಕೆ ಬೇಕು? ಇಗೋ, ಈಗಲೇ ಇವನ ದೇವದೂಷಣೆಯನ್ನು ನೀವು ಕೇಳಿದ್ದೀರಲ್ಲಾ 66ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವ ನಿಮಗೆ ಹೇಗೆ ತೋರುತ್ತದೆ ಎಂದು ಕೇಳಿದ್ದಕ್ಕೆ ಅವರು ಪ್ರತ್ಯುತ್ತರವಾಗಿ--ಇವನು ಮರಣಕ್ಕೆ ಪಾತ್ರನು ಅಂದರು. ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಬೇರೆ ಕೆಲವರು ಆತನನ್ನು ಹೊಡೆದರು. ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು ಅಂದರು.
- Acts 24:13 ಅಪೊಸ್ತಲರ ಕೃತ್ಯಗಳು 24:13ಇದಲ್ಲದೆ ಅವರು ಈಗ ನನ್ನ ಮೇಲೆ ತಪ್ಪುಹೊರಿಸುವವುಗಳು ನಿಜವೆಂದು ಸಿದ್ಧಾಂತಮಾಡಲಾರರು.
- Psalm 119:51 ಕೀರ್ತನೆಗಳು 119:51ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
- Psalm 119:58 ಕೀರ್ತನೆಗಳು 119:58ಪೂರ್ಣಹೃದಯ ದಿಂದ ನಿನ್ನನ್ನು ಬೇಡಿಕೊಂಡಿದ್ದೇನೆ; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಕರುಣಿಸು.
- Acts 24:5 ಅಪೊಸ್ತಲರ ಕೃತ್ಯಗಳು 24:5ಯಾಕಂದರೆ ಇವನು ಉಪದ್ರವ ಕೊಡುವವನೂ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೂ ನಜರೇತಿನ ಪಂಗಡದವರ ಮುಖಂ ಡನೂ ಎಂದು ನಾವು ಕಂಡೆವು.
- Psalm 119:34 ಕೀರ್ತನೆಗಳು 119:34ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.
- James 1:8 ಯಾಕೋಬನು 1:8ಎರಡು ಮನಸ್ಸುಳ್ಳವನು ತನ್ನ ಮಾರ್ಗಗಳ ಲ್ಲೆಲ್ಲಾ ಚಂಚಲನಾಗಿದ್ದಾನೆ.
- Jeremiah 43:2–3 ಯೆರೆಮೀಯ 43:2–3ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಗರ್ವಿಷ್ಠ ಮನುಷ್ಯ ರೆಲ್ಲರೂ ಮಾತನಾಡಿ ಯೆರೆವಿಾಯನಿಗೆ ಹೇಳಿದ್ದೇ ನಂದರೆ-ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾ ಗಿರುವದಕ್ಕೆ ಐಗುಪ್ತಕ್ಕೆ ಹೋಗಬಾರದೆಂದು ಹೇಳುವದಕ್ಕೆ ನಮ್ಮ ದೇವರಾದ ಕರ್ತನು ನಿನ್ನನ್ನು ಕಳುಹಿಸಲಿಲ್ಲ. ಅವರು ನಮ್ಮನ್ನು ಕೊಂದುಹಾಕುವಂತೆ ನಮ್ಮನ್ನು ಬಾಬೆಲಿಗೆ ಸೆರೆ ಒಯ್ಯುವ ಹಾಗೆ ನಮ್ಮನ್ನು ಕಸ್ದೀಯರ ಕೈಗೆ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂ ಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರಿಸಿದ್ದಾನೆ ಅಂದರು.