Psalms · chapter 119 · verse 157
Psalm 119:157 in Kannada
ನನ್ನನ್ನು ಹಿಂಸಿಸುವವರೂ ನನ್ನ ವೈರಿಗಳೂ ಅನೇಕ ರಾಗಿದ್ದಾರೆ; ನಿನ್ನ ಸಾಕ್ಷಿಗಳಿಂದ ನಾನು ತೊಲಗೆನು.
Nannannu hinsisuvavaroo nanna vairigaloo aneka raagiddaare; ninna saakshigalinda naanu tolagenu.
Psalm 119:157 in English
- King James Version (KJV)
- Many [are] my persecutors and mine enemies; [yet] do I not decline from thy testimonies.
- World English Bible (WEB)
- Many are my persecutors and my adversaries. I haven’t swerved from your testimonies.
- American Standard Version (ASV)
- Many are my persecutors and mine adversaries; [Yet] have I not swerved from thy testimonies.
- Bible in Basic English (BBE)
- Great is the number of those who are against me; but I have not been turned away from your unchanging word.
- Darby Translation (DBY)
- Many are my persecutors and mine oppressors; I have not declined from thy testimonies.
- Webster's Bible (WBS)
- Many [are] my persecutors and my enemies; [yet] I do not decline from thy testimonies.
- Young's Literal Translation (YLT)
- Many [are] my pursuers, and adversaries, From Thy testimonies I have not turned aside.
Read in context
- 155ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ನಿನ್ನ ನಿಯ ಮಗಳನ್ನು ಅವರು ಹುಡುಕರು.
- 156ಓ ಕರ್ತನೇ, ನಿನ್ನ ಅಂತಃಕರಣಗಳು ಮಹತ್ತಾದವುಗಳು. ನಿನ್ನ ನ್ಯಾಯವಿಧಿಗಳ ಪ್ರಕಾರ ನನ್ನನ್ನು ಬದುಕಿಸು.
- 157ನನ್ನನ್ನು ಹಿಂಸಿಸುವವರೂ ನನ್ನ ವೈರಿಗಳೂ ಅನೇಕ ರಾಗಿದ್ದಾರೆ; ನಿನ್ನ ಸಾಕ್ಷಿಗಳಿಂದ ನಾನು ತೊಲಗೆನು.
- 158ನಿನ್ನ ವಾಕ್ಯವನ್ನು ಕೈಕೊಳ್ಳದ ಅಪರಾಧಿಗಳನ್ನು ನೋಡಿ ದುಃಖಪಟ್ಟಿದ್ದೇನೆ.
- 159ನಿನ್ನ ಕಟ್ಟಳೆಗಳನ್ನು ಪ್ರೀತಿಮಾಡುತ್ತೇನೆಂದು ನೋಡು; ಓ ಕರ್ತನೇ, ನಿನ್ನ ಪ್ರೀತಿ ಕರುಣೆಯ ಪ್ರಕಾರ ನನ್ನನ್ನು ಬದುಕಿಸು.
Cross references
- 1 Corinthians 15:58 1 ಕೊರಿಂಥದವರಿಗೆ 15:58ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
- Psalm 119:51 ಕೀರ್ತನೆಗಳು 119:51ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
- Acts 20:23–24 ಅಪೊಸ್ತಲರ ಕೃತ್ಯಗಳು 20:23–24ಆದರೂ ಎಲ್ಲಾ ಪಟ್ಟಣಗಳಲ್ಲಿ ನನಗೆ ಬೇಡಿಗಳೂ ಸಂಕಟಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಸಾಕ್ಷಿ ಕೊಡುವದನ್ನು ಮಾತ್ರ ಬಲ್ಲೆನು. ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
- Isaiah 42:4 ಯೆಶಾಯ 42:4ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಅವನು ಸೋಲುವದಿಲ್ಲ ಇಲ್ಲವೇ ಮನ ಗುಂದುವದಿಲ್ಲ; ದ್ವೀಪಗಳು ಅವನ ನ್ಯಾಯಪ್ರಮಾ ಣಕ್ಕೆ ಕಾದಿರುವವು.
- Job 17:9 ಯೋಬನು 17:9ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.
- Job 23:11 ಯೋಬನು 23:11ಆತನ ಹೆಜ್ಜೆಯನ್ನು ನನ್ನ ಕಾಲು ಹಿಡಿಯಿತು; ಆತನ ಮಾರ್ಗವನ್ನು ನಾನು ತೊಲಗದೆ ನೋಡಿಕೊಂಡೆನು.
- Psalm 25:19 ಕೀರ್ತನೆಗಳು 25:19ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.
- Matthew 24:9 ಮತ್ತಾಯನು 24:9ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
- Psalm 119:110 ಕೀರ್ತನೆಗಳು 119:110ದುಷ್ಟರು ನನಗೆ ಉರ್ಲು ಒಡ್ಡಿದ್ದಾರೆ. ಆದರೂ ನಾನು ನಿನ್ನ ಕಟ್ಟಳೆಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
- Psalm 118:10–12 ಕೀರ್ತನೆಗಳು 118:10–12ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು. ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು. ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
- Psalm 22:12 ಕೀರ್ತನೆಗಳು 22:12ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ.
- Psalm 3:1–2 ಕೀರ್ತನೆಗಳು 3:1–2ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು. ದೇವರಲ್ಲಿ ಇವನಿಗೆ ಯಾವ ಸಹಾಯವೂ ಇಲ್ಲವೆಂದು ನನ್ನ ವಿಷಯದಲ್ಲಿ ಅನೇಕರು ಹೇಳುತ್ತಾರೆ. ಸೆಲಾ.