Psalms · chapter 119 · verse 75
Psalm 119:75 in Kannada
ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.
Kartane, ninna nyaaya vidhigalu neetiyullavugalendoo nambikeyindale neenu nannannu shramepadisiddee endu ballenu.
Psalm 119:75 in English
- King James Version (KJV)
- I know, O LORD, that thy judgments [are] right, and [that] thou in faithfulness hast afflicted me.
- World English Bible (WEB)
- LORD, I know that your judgments are righteous, that in faithfulness you have afflicted me.
- American Standard Version (ASV)
- I know, O Jehovah, that thy judgments are righteous, And that in faithfulness thou hast afflicted me.
- Bible in Basic English (BBE)
- I have seen, O Lord, that your decisions are right, and that in unchanging faith you have sent trouble on me.
- Darby Translation (DBY)
- I know, Jehovah, that thy Judgments are righteousness, and that in faithfulness thou hast afflicted me.
- Webster's Bible (WBS)
- I know, O LORD, that thy judgments [are] right, and [that] thou in faithfulness hast afflicted me.
- Young's Literal Translation (YLT)
- I have known, O Jehovah, That righteous [are] Thy judgments, And [in] faithfulness Thou hast afflicted me.
Read in context
- 73ನಿನ್ನ ಕೈಗಳು ನನ್ನನ್ನು ರೂಪಿಸಿ ನಿರ್ಮಿಸಿದವು; ನಿನ್ನ ಆಜ್ಞೆಗಳನ್ನು ಕಲಿತುಕೊಳ್ಳುವ ಹಾಗೆ ಗ್ರಹಿಕೆಯನ್ನು ನನಗೆ ಕೊಡು.
- 74ನಿನಗೆ ಭಯಪಡುವವರು ನನ್ನನ್ನು ನೋಡಿ ಸಂತೋಷಪಡುವರು; ನಿನ್ನ ವಾಕ್ಯವನ್ನು ಎದುರುನೋಡುತ್ತೇನೆ.
- 75ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.
- 76ನಿನ್ನ ಸೇವಕನಿಗೆ ನೀನು ಹೇಳಿದ ಮಾತಿನ ಪ್ರಕಾರ ನನ್ನನ್ನು ಆದರಿಸುವದಕ್ಕೆ ನಿನ್ನ ದಯಾಪೂರ್ಣ ಕರುಣೆ ಇರಲಿ.
- 77ನಿನ್ನ ಅಂತಃಕರಣವು ನನಗೆ ಬರಲಿ; ಆಗ ನಾನು ಬದುಕುವೆನು; ನಿನ್ನ ನ್ಯಾಯಪ್ರಮಾಣವು ನನ್ನ ಆನಂದವಾಗಿದೆ.
Cross references
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Hebrews 12:10–11 ಇಬ್ರಿಯರಿಗೆ 12:10–11ಅವರು ನಿಜವಾಗಿಯೂ ಕೆಲವು ದಿವಸಗಳ ಪ್ರಯೋ ಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗ ಬೇಕೆಂದು ನಮ್ಮ ಪ್ರಯೋಜನಕ್ಕಾಗಿಯೇ ಶಿಕ್ಷಿಸುತ್ತಾನೆ. ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರ ವಾಗಿ ತೋಚದೆ ಕ್ರೂರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ಸಮಾಧಾನ ವುಳ್ಳ ನೀತಿಯ ಫಲವನ್ನು ಕೊಡುತ್ತದೆ.
- Romans 3:4–5 ರೋಮಾಪುರದವರಿಗೆ 3:4–5ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ. ಆದರೆ ನಮ್ಮ ಅನೀತಿಯು ದೇವರ ನೀತಿಯನ್ನು ಪ್ರಸಿದ್ಧಿಪಡಿಸುವದಾದರೆ ನಾವು ಏನು ಹೇಳೋಣ? ಪ್ರತೀಕಾರ ಮಾಡುವ ದೇವರು ಅನೀತಿವಂತನೇನು? (ನಾನು ಮನುಷ್ಯನಂತೆ ಮಾತನಾಡುತ್ತೇನೆ).
- Psalm 89:30–33 ಕೀರ್ತನೆಗಳು 89:30–33ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ, ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು. ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು.
- Psalm 119:62 ಕೀರ್ತನೆಗಳು 119:62ನಿನ್ನ ನೀತಿಯ ನ್ಯಾಯವಿಧಿಗಳಿಗೋಸ್ಕರ ನಿನ್ನನ್ನು ಕೊಂಡಾಡುವದಕ್ಕೆ ಮಧ್ಯರಾತ್ರಿಯಲ್ಲಿ ಏಳುತ್ತೇನೆ.
- Genesis 18:25 ಆದಿಕಾಂಡ 18:25ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- Psalm 119:7 ಕೀರ್ತನೆಗಳು 119:7ನಿನ್ನ ನೀತಿಯ ನ್ಯಾಯಗಳನ್ನು ನಾನು ಕಲಿ ಯುವಾಗ ಯಥಾರ್ಥ ಹೃದಯದಿಂದ ನಿನ್ನನ್ನು ಕೊಂಡಾ ಡುವೆನು.
- Psalm 119:128 ಕೀರ್ತನೆಗಳು 119:128ನಿನ್ನ ಕಟ್ಟಳೆಗಳೆಲ್ಲಾ ಸರಿಯಾದ ವುಗಳೆಂದು ನಾನು ಎಣಿಸುತ್ತೇನೆ. ಮೋಸದ ಪ್ರತಿ ಯೊಂದು ಮಾರ್ಗವನ್ನು ಹಗೆಮಾಡುತ್ತೇನೆ.
- Job 34:23 ಯೋಬನು 34:23ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.
- Psalm 119:160 ಕೀರ್ತನೆಗಳು 119:160ಆದಿ ಯಿಂದಲೂ ನಿನ್ನ ವಾಕ್ಯವು ಸತ್ಯವೇ; ನಿನ್ನ ನೀತಿಯ ನ್ಯಾಯವಿಧಿಗಳೆಲ್ಲಾ ನಿತ್ಯವಾಗಿವೆ.
- Psalm 25:10 ಕೀರ್ತನೆಗಳು 25:10ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.