Psalms · chapter 12 · verse 8
Psalm 12:8 in Kannada
ಅತಿ ನೀಚರು ಹೆಚ್ಚಿಸಲ್ಪಟ್ಟಾಗ ದುಷ್ಟರು ಪ್ರತಿಯೊಂದು ಕಡೆಗೂ ತಿರುಗಾಡುತ್ತಾರೆ.
Ati neecharu hechchisalpattaaga dushtaru pratiyondu kadegoo tirugaaduttaare.
Psalm 12:8 in English
- King James Version (KJV)
- The wicked walk on every side, when the vilest men are exalted.
- World English Bible (WEB)
- The wicked walk on every side, when what is vile is exalted among the sons of men.
- American Standard Version (ASV)
- The wicked walk on every side, When vileness is exalted among the sons of men.
- Bible in Basic English (BBE)
- The sinners are walking on every side, and evil is honoured among the children of men.
- Darby Translation (DBY)
- The wicked walk about on every side, when vileness is exalted among the children of men.
- Webster's Bible (WBS)
- The wicked walk on every side, when the vilest men are exalted.
- Young's Literal Translation (YLT)
- Around the wicked walk continually, According as vileness is exalted by sons of men!
Read in context
- 6ಕರ್ತನ ವಾಕ್ಯಗಳು ಶುದ್ಧವಾಕ್ಯಗಳಾಗಿವೆ: ಮಣ್ಣಿನ ಕುಲುಮೆಯಲ್ಲಿ ಏಳು ಸಾರಿ ಕರಗಿ ಪುಟಕ್ಕೆ ಹಾಕಿದ ಬೆಳ್ಳಿಯಂತೆ ಇವೆ.
- 7ಓ ಕರ್ತನೇ, ನೀನು ಅವರನ್ನು ಕಾಪಾಡಿ ಯುಗ ಯುಗಕ್ಕೂ ಈ ಸಂತತಿಯಿಂದ ಅವರನ್ನು ಬಿಡಿಸಿ ಕಾಯುವಿ.ಅತಿ ನೀಚರು ಹೆಚ್ಚಿಸಲ್ಪಟ್ಟಾಗ ದುಷ್ಟರು ಪ್ರತಿಯೊಂದು ಕಡೆಗೂ ತಿರುಗಾಡುತ್ತಾರೆ.
- 8ಅತಿ ನೀಚರು ಹೆಚ್ಚಿಸಲ್ಪಟ್ಟಾಗ ದುಷ್ಟರು ಪ್ರತಿಯೊಂದು ಕಡೆಗೂ ತಿರುಗಾಡುತ್ತಾರೆ.
Cross references
- Proverbs 29:12 ಜ್ಞಾನೋಕ್ತಿಗಳು 29:12ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.
- Psalm 55:10–11 ಕೀರ್ತನೆಗಳು 55:10–11ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ; ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ.
- Mark 14:63–65 ಮಾರ್ಕನು 14:63–65ಅದಕ್ಕೆ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು--ನಮಗೆ ಇನ್ನು ಹೆಚ್ಚು ಸಾಕ್ಷಿಗಳ ಅವಶ್ಯಕತೆ ಏನಿದೆ? ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- Isaiah 32:4–6 ಯೆಶಾಯ 32:4–6ಆತುರಗಾರರ ಹೃದಯವು ತಿಳುವಳಿಕೆಯನ್ನು ಗ್ರಹಿಸುವದು, ತೊದಲು ಮಾತನಾ ಡುವವರ ನಾಲಿಗೆ ಸ್ವಚ್ಛವಾಗಿ ಮಾತಾಡುವದಕ್ಕೆ ಸಿದ್ಧ ವಾಗಿರುವದು. ಇನ್ನು ಮೇಲೆ ನೀಚ ಮನುಷ್ಯನು ಘನವಂತನೆನಿಸಿಕೊಳ್ಳನು. ಇಲ್ಲವೆ ಜಿಪುಣನು ಉದಾರ ನೆಂದು ಹೇಳಲಾಗದು. ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
- Hosea 5:11 ಹೋಶೇಯ 5:11ಎಫ್ರಾಯಾಮು ಆಜ್ಞೆಯಂತೆ ಇಷ್ಟ ಪೂರ್ವಕವಾಗಿ ನಡೆದ ಕಾರಣ ಅವನು ನ್ಯಾಯತೀರ್ಪಿನೊಳಗೆ ಕುಂದಿ ಹೋಗಿ ಜಜ್ಜಲ್ಪಟ್ಟನು.
- Esther 3:6–15 ಎಸ್ತೇರಳು 3:6–15ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು. ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು. ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ. ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು. ಆಗ ಅರಸನು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನಿಗೆ ಕೊಟ್ಟನು. ಅರಸನು ಹಾಮಾನನಿಗೆ, ಬೆಳ್ಳಿಯನ್ನೂ ಆ ಜನವನ್ನೂ ನಿನಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡುವದಕ್ಕೆ ನಿನ್ನ ಕೈಯಲ್ಲಿ ಅವು ಒಪ್ಪಿಸ ಲ್ಪಟ್ಟಿವೆ ಅಂದನು. ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು. ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು. ಒಂದೇ ದಿನದಲ್ಲಿ ಅಂದರೆ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು. ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು. ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Judges 9:18–57 ನ್ಯಾಯಸ್ಥಾಪಕರು 9:18–57ಅವನ ಎಪ್ಪತ್ತು ಮಕ್ಕಳನ್ನು ಒಂದೇ ಕಲ್ಲಿನ ಮೇಲೆ ಕೊಂದು ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ಅವನು ನಿಮ್ಮ ಸಹೋದರನಾಗಿರುವದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು, ಯೆರುಬ್ಬಾಳನ ಯೋಗ್ಯ ತೆಗೆ ತಕ್ಕದ್ದಾಗಿದ್ದರೆ ಮತ್ತು ಈಹೊತ್ತು ಅವನಿಗೂ ಅವನ ಮಗನಿಗೂ ನೀವು ಸತ್ಯದಲ್ಲಿಯೂ ಯಥಾರ್ಥ ತೆಯಲ್ಲಿಯೂ ಕಾರ್ಯಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ, ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ. ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು. ಆಗ ಯೋತಾಮನು ತಪ್ಪಿಸಿಕೊಂಡು ಓಡಿ ಬೇರಕ್ಕೆ ಹೋಗಿ ಅಲ್ಲಿ ತನ್ನ ಸಹೋದರನಾದ ಅಬೀಮೆಲೆಕನ ಭಯದ ನಿಮಿತ್ತವಾಗಿ ವಾಸವಾಗಿದ್ದನು. ಆದರೆ ಅಬೀಮೆಲೆಕನು ಇಸ್ರಾಯೇಲನ್ನು ಮೂರು ವರುಷ ಆಳಿದ ತರುವಾಯ ದೇವರು ಅಬೀಮೆಲೆಕನಿಗೂ ಶೆಕೆಮಿನ ಜನರಿಗೂ ನಡುವೆ ದುರಾತ್ಮನನ್ನು ಕಳುಹಿಸಿದನು. ಆಗ ಎಪ್ಪತ್ತು ಮಂದಿ ಮಕ್ಕಳಿಗೆ ಮಾಡಿದ್ದ ಕ್ರೂರತ್ವವು ಬಂದು ಪ್ರಾಪ್ತಿಸುವ ಹಾಗೆಯೂ ಅವರ ರಕ್ತವು ಅವರನ್ನು ಕೊಂದ ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ ಅವನ ಸಹೋದರರನ್ನು ಕೊಲ್ಲುವದಕ್ಕೆ ಅವನ ಕೈಗಳನ್ನು ಬಲ ಪಡಿಸಿದ ಶೆಕೆಮಿನ ಮನುಷ್ಯರ ಮೇಲೆಯೂ ಬರುವ ಹಾಗೆ ಶೆಕೆಮಿನ ಜನರು ಅಬೀಮೆಲೆಕನಿಗೆ ದ್ರೋಹ ಮಾಡಿದರು. ಶೆಕೆಮಿನ ಮನುಷ್ಯರು ಪರ್ವತ ಶಿಖರಗಳ ಮೇಲೆ ಅವನಿಗೋಸ್ಕರ ಹೊಂಚಿಕೊಳ್ಳು ವವರನ್ನು ಇಟ್ಟು ತಮ್ಮ ಸವಿಾಪವಾಗಿ ಮಾರ್ಗದಲ್ಲಿ ಹಾದುಹೋಗುವ ಎಲ್ಲರನ್ನು ಸುಲುಕೊಂಡರು. ಅದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಿತು. ಆಗ ಎಬೆದನ ಮಗನಾದ ಗಾಳನೂ ಅವನ ಸಹೋದರರೂ ಶೆಕೆಮಿಗೆ ದಾಟಿ ಬಂದರು; ಆದರೆ ಶೆಕೆಮಿನ ಜನರು ಅವನಲ್ಲಿ ಭರವಸವಿಟ್ಟು ಹೊರಗೆ ಹೋಗಿ ತಮ್ಮ ದ್ರಾಕ್ಷೇ ಫಲಗಳನ್ನು ಕೊಯಿದು ಅವು ಗಳನ್ನು ತುಳಿದು ಸಂತೋಷಪಟ್ಟು ತಮ್ಮ ದೇವರ ಮನೆಯೊಳಗೆ ಹೋಗಿ ತಿಂದು ಕುಡಿದು ಅಬೀಮೆಲೆಕ ನನ್ನು ಶಪಿಸಿದರು. ಆಗ ಎಬೆದನ ಮಗನಾದ ಗಾಳನು--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬುಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ; ಇವನನ್ನು ನಾವು ಯಾಕೆ ಸೇವಿಸಬೇಕು? ಈ ಜನರನ್ನು ದೇವರು ನನ್ನ ಕೈಗೆ ಒಪ್ಪಿಸಿದರೆ ಚೆನ್ನಾಗಿತ್ತು, ಆಗ ನಾನು ಅಬೀಮೆಲೆಕನನ್ನು ತೆಗೆದುಹಾಕುವೆನು. ಅವನು ಅಬೀಮೆಲೆಕನಿಗೆ--ನೀನು ನಿನ್ನ ಸೈನ್ಯವನ್ನು ಹೆಚ್ಚಿಸಿಕೊಂಡು ಹೊರಟು ಬಾ ಅಂದನು. ಆ ಪಟ್ಟಣದ ಅಧಿಪತಿಯಾದ ಜೆಬುಲನು ಎಬೆದನ ಮಗನಾದ ಗಾಳನು ಹೇಳಿದ ಮಾತುಗಳನ್ನು ಕೇಳಿದಾಗ ಕೋಪಗೊಂಡು ಅಬೀಮೆಲೆಕನ ಬಳಿಗೆ ರಹಸ್ಯವಾಗಿ ದೂತರನ್ನು ಕಳುಹಿಸಿ--ಇಗೋ, ಎಬೆದನ ಮಗನಾದ ಗಾಳನೂ ಅವನ ಸಹೋದರರೂ ಶೆಕೆಮಿಗೆ ಬಂದಿದ್ದಾರೆ ಮತ್ತು ಇಗೋ, ಅವರು ಪಟ್ಟಣವನ್ನು ನಿನಗೆ ವಿರೋಧವಾಗಿ ಬಲಪಡಿಸುತ್ತಾರೆ. ಆದದ ರಿಂದ ಈಗ ನೀನೂ ನಿನ್ನ ಸಂಗಡ ಇರುವ ಜನರೂ ಕೂಡಿ ರಾತ್ರಿಯಲ್ಲಿ ಎದ್ದು ಹೊಲದಲ್ಲಿ ಹೊಂಚಿಕೊಳ್ಳ ಬೇಕು. ಹೊತ್ತಾರೆ ಸೂರ್ಯನು ಉದಯಿಸುವಾಗ ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು; ಇಗೋ, ಅವನೂ ಅವನ ಸಂಗಡ ಇರುವ ಜನರೂ ನಿಮಗೆದು ರಾಗಿ ಹೊರಟು ಬರುವಾಗ ನಿನಗೆ ಅನುಕೂಲ ತೋರಿದ ಹಾಗೆ ಅವನಿಗೆ ಮಾಡಬಹುದು ಎಂದು ಹೇಳಿದನು. ಹಾಗೆಯೇ ಅಬೀಮೆಲೆಕನೂ ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿ ಕೊಂಡಿದ್ದರು. ಎಬೆದನ ಮಗನಾದ ಗಾಳನು ಹೊರಟು ಬಂದು ಪಟ್ಟಣದ ಬಾಗಲಿನ ದ್ವಾರದಲ್ಲಿ ನಿಂತನು. ಆಗ ಹೊಂಚಿಕೊಂಡಿದ್ದ ಅಬೀಮೆಲೆಕನೂ ಅವನ ಸಂಗಡ ಇದ್ದ ಜನರೂ ಎದ್ದುಬಂದರು. ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು. ಗಾಳನು ತಿರಿಗಿ ಅವನ ಸಂಗಡ ಮಾತ ನಾಡಿ--ಇಗೋ, ಜನರು ಭೂಮಧ್ಯಸ್ಥಳದಿಂದ ಬರು ತ್ತಾರೆ; ಮಿಯೋನೀಮಿನ ಬೈಲುಮಾರ್ಗವಾಗಿ ಒಂದು ಗುಂಪು ಬರುತ್ತದೆ ಅಂದನು. ಆಗ ಜೆಬುಲನು ಅವನಿಗೆ--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನವಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧಮಾಡು ಅಂದನು. ಗಾಳನು ಶೆಕೆಮಿನ ಮನು ಷ್ಯರ ಮುಂದೆ ಹೊರಟು ಅಬೀಮೆಲೆಕನ ಸಂಗಡ ಯುದ್ಧಮಾಡಿದನು. ಆದರೆ ಅಬೀಮೆಲೆಕನು ಅವ ನನ್ನು ಹಿಂದಟ್ಟಿದಾಗ ಅವನು ಅವನ ಮುಂದೆ ಓಡಿ ಹೋದನು. ಪ್ರವೇಶ ದ್ವಾರದ ವರೆಗೆ ಅನೇಕರು ಸಂಹಾರವಾಗಿ ಅನೇಕರು ಗಾಯಗೊಂಡರು. ಆಗ ಅಬೀಮೆಲೆಕನು ಅರೂಮದಲ್ಲಿ ವಾಸಮಾಡಿದನು; ಆದರೆ ಜೆಬುಲನು ಗಾಳನನ್ನೂ ಅವನ ಸಹೋದರ ರನ್ನೂ ಶೆಕೆಮಿನಲ್ಲಿ ಇರದ ಹಾಗೆ ಹೊರಡಿಸಿಬಿಟ್ಟನು. ಮರು ದಿವಸದಲ್ಲಿ ಆದದ್ದೇನಂದರೆ, ಜನರು ಹೊಲಕ್ಕೆ ಹೊರಟರು: ಅವರು ಅಬೀಮೆಲೆಕನಿಗೆ ತಿಳಿಸಿದರು. ಅವನು ಜನರನ್ನು ತಕ್ಕೊಂಡು ಅವರನ್ನು ಮೂರು ಗುಂಪುಗಳಾಗಿ ಮಾಡಿ ಹೊಲದಲ್ಲಿ ಹೊಂಚಿ ಕೊಂಡನು. ಇಗೋ, ಜನರು ಪಟ್ಟಣದಿಂದ ಹೊರಗೆ ಬಂದರು. ಅವನು ಅವರ ಮೇಲೆ ಎದ್ದು ಬಂದು ಅವರನ್ನು ಹೊಡೆದನು. ಅಬೀಮೆಲೆಕನೂ ಅವನ ಸಂಗಡ ಇದ್ದ ಜನರ ಗುಂಪೂ ಮುಂದಕ್ಕೆ ಓಡಿ ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತರು. ಮಿಕ್ಕಾದ ಎರಡು ಗುಂಪು ಜನರು ಹೊಲದಲ್ಲಿರುವವರೆ ಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿಬಿಟ್ಟರು. ಅಬೀಮೆಲೆಕನು ಆ ದಿನವೆಲ್ಲಾ ಪಟ್ಟಣದ ಮೇಲೆ ಯುದ್ಧಮಾಡಿ ಪಟ್ಟಣವನ್ನು ಹಿಡಿದು ಅದರಲ್ಲಿದ್ದ ಜನ ವನ್ನು ಕೊಂದು ಪಟ್ಟಣವನ್ನು ಕೆಡವಿಬಿಟ್ಟು ಅದರಲ್ಲಿ ಉಪ್ಪು ಎರಚಿಬಿಟ್ಟನು. ಅದನ್ನು ಶೆಕೆಮಿನ ಗೋಪುರ ದಲ್ಲಿದ್ದ ಜನರೆಲ್ಲರೂ ಕೇಳಿದಾಗ ಅವರು ಬೆರೀತೆಂಬ ದೇವರ ಮನೆಯ ಭದ್ರವಾದ ಸ್ಥಳದಲ್ಲಿ ಪ್ರವೇಶಿಸಿದರು. ಆದರೆ ಶೆಕೆಮಿನ ಗೋಪುರದಲ್ಲಿದ್ದ ಜನರೆಲ್ಲರೂ ಅಲ್ಲಿ ಕೂಡಿದ್ದಾರೆಂದು ಅಬೀಮೆಲೆಕನಿಗೆ ತಿಳಿಸಲ್ಪಟ್ಟಾಗ ಅಬೀಮೆಲೆಕನು ತನ್ನ ಸಂಗಡ ಇದ್ದ ಜನರೆಲ್ಲರ ಸಹಿತವಾಗಿ ಚಲ್ಮೊನ್ ಬೆಟ್ಟವನ್ನೇರಿ ತನ್ನ ಕೈಯಲ್ಲಿ ಕೊಡಲಿಯನ್ನು ಹಿಡಿದು ಒಂದು ಮರದ ಕೊಂಬೆಯನ್ನು ಕಡಿದು ಅದನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ತನ್ನ ಕೂಡ ಇದ್ದ ಜನರಿಗೆ--ನಾನು ಮಾಡಿದ್ದನ್ನು ನೋಡಿ ಹಾಗೆಯೇ ತೀವ್ರವಾಗಿ ಮಾಡಿರಿ ಅಂದನು. ಜನರಲ್ಲಿ ಪ್ರತಿಯೊಬ್ಬನು ಒಂದೊಂದು ಕೊಂಬೆ ಯನ್ನು ಕಡಿದು ಅಬೀಮೆಲೆಕನ ಹಿಂದೆ ಹೋಗಿ ಅವುಗಳನ್ನು ಆ ಭದ್ರವಾದ ಸ್ಥಳಕ್ಕೆ ಹಾಕಿ ಅದಕ್ಕೆ ಬೆಂಕಿಯನ್ನು ಹಚ್ಚಿದರು. ಆಗ ಶೆಕೆಮಿನ ಗೋಪುರ ದಲ್ಲಿರುವವರೆಲ್ಲರೂ ಹೆಚ್ಚು ಕಡಿಮೆ ಸಾವಿರ ಸ್ತ್ರೀ ಪುರುಷರು ಸತ್ತರು. ಆಗ ಅಬೀಮೆಲೆಕನು ತೇಬೇಚಿಗೆ ಹೋಗಿ ಅದಕ್ಕೆ ವಿರೋಧವಾಗಿ ದಂಡಿಳಿಸಿ ಅದನ್ನು ಹಿಡಿದನು. ಆದರೆ ಪಟ್ಟಣದ ಒಳಗೆ ಬಲವಾದ ಗೋಪುರ ಇತ್ತು; ಆ ಪಟ್ಟಣದಲ್ಲಿರುವ ಸಮಸ್ತ ಸ್ತ್ರೀ ಪುರುಷರು ಅಲ್ಲಿಗೆ ಓಡಿಹೋಗಿ ಅದರಲ್ಲಿ ಹೊಕ್ಕು ತಮ್ಮ ಹಿಂದಿನಿಂದ ಬಾಗಲನ್ನು ಮುಚ್ಚಿ ಗೋಪುರದ ಮೇಲೆ ಏರಿದರು. ಆಗ ಅಬೀಮೆಲೆಕನು ಆ ಗೋಪುರಕ್ಕೆ ಬಂದು ಅದರ ವಿರುದ್ಧ ಯುದ್ಧಮಾಡಿ ಗೋಪುರದ ಬಾಗಲನ್ನು ಸುಟ್ಟು ಬಿಡುವದಕ್ಕೆ ಅದರ ಬಳಿಗೆ ಬಂದನು. ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿ; ಅದರಿಂದ ಅವನ ತಲೆಯನ್ನು ಒಡೆದುಹಾಕಿದಳು. ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕ ನನ್ನು ಕರೆದು ಅವನಿಗೆ--ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಕತ್ತಿಯನ್ನು ಇರಿದು ನನ್ನನ್ನು ಕೊಲ್ಲು ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು; ಅವನು ಸತ್ತನು. ಅಬೀಮೆಲೆಕನು ಸತ್ತುಹೋದದ್ದನ್ನು ಇಸ್ರಾಯೇಲ್ ಮನುಷ್ಯರು ನೋಡಿದಾಗ ಅವರವರು ತಮ್ಮ ಸ್ಥಳಗಳಿಗೆ ಹೋದರು. ಈ ಪ್ರಕಾರ ಅಬೀಮೆಲೆಕನು ತನ್ನ ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿದ್ದರಿಂದ ತನ್ನ ತಂದೆಗೆ ಮಾಡಿದ ಕೇಡನ್ನು ದೇವರು ಅವನ ಮೇಲೆ ತಿರಿಗಿ ಬರಮಾಡಿದನು.ಇದಲ್ಲದೆ ಶೆಕೆಮಿನ ಮನುಷ್ಯರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದನು. ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂತು. ಇದಲ್ಲದೆ ಶೆಕೆಮಿನ ಮನುಷ್ಯರು ಮಾಡಿದ ಸಮಸ್ತ ಕೆಟ್ಟತನವನ್ನು ಅವರ ತಲೆಗಳ ಮೇಲೆ ದೇವರು ಬರಮಾಡಿದನು. ಯೆರುಬ್ಬಾಳನ ಮಗನಾದ ಯೋತಾಮನ ಶಾಪವು ಅವರ ಮೇಲೆ ಬಂತು.
- Micah 6:16 ಮೀಕ 6:16ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
- Daniel 11:21 ದಾನಿಯೇಲನು 11:21ಅವನ ಸ್ಥಾನದಲ್ಲಿ ಒಬ್ಬ ನೀಚನು ನಿಲ್ಲುವನು; ಅವನಿಗೆ ರಾಜ್ಯದ ಮರ್ಯಾದೆಯನ್ನು ಕೊಡುವದಿಲ್ಲ, ಆದರೆ ಅವನು ಸಮಾಧಾನವಾಗಿ ನಯನುಡಿಗಳಿಂದ ರಾಜ್ಯವನ್ನು ಪಡಕೊಳ್ಳುವನು.
- Job 30:8 ಯೋಬನು 30:8ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು.