Psalms · chapter 55 · verse 10
Psalm 55:10 in Kannada
ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ;
Hagalu irulu adara godegala mele avaru suttuttaare; kedoo duhkhavoo avara madhyadallide;
Psalm 55:10 in English
- King James Version (KJV)
- Day and night they go about it upon the walls thereof: mischief also and sorrow [are] in the midst of it.
- World English Bible (WEB)
- Day and night they prowl around on its walls. Malice and abuse are also within her.
- American Standard Version (ASV)
- Day and night they go about it upon the walls thereof: Iniquity also and mischief are in the midst of it.
- Bible in Basic English (BBE)
- By day and night they go round the town, on the walls; trouble and sorrow are in the heart of it.
- Darby Translation (DBY)
- Day and night they go about it upon the walls thereof; and iniquity and mischief are in the midst of it.
- Webster's Bible (WBS)
- Day and night they go about it upon its walls: mischief also and sorrow [are] in the midst of it.
- Young's Literal Translation (YLT)
- By day and by night they go round it, on its walls. Both iniquity and perverseness [are] in its midst,
Read in context
- 8ಗಾಳಿಯ ತುಫಾನಿಗೂ ಬಿರುಗಾಳಿಗೂ ತಪ್ಪಿಸಿಕೊಳ್ಳಲು ತ್ವರೆಪಡುವೆನು.
- 9ಓ ಕರ್ತನೇ, (ಅವರನ್ನು) ನಾಶಮಾಡು. ಅವರ ನಾಲಿಗೆಗಳನ್ನು ಭೇದಿಸು; ಯಾಕಂದರೆ ಬಲಾತ್ಕಾರ ವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ನೋಡಿ ದ್ದೇನೆ;
- 10ಹಗಲು ಇರುಳು ಅದರ ಗೋಡೆಗಳ ಮೇಲೆ ಅವರು ಸುತ್ತುತ್ತಾರೆ; ಕೇಡೂ ದುಃಖವೂ ಅವರ ಮಧ್ಯದಲ್ಲಿದೆ;
- 11ದುಷ್ಟತನವು ಅದರ ಮಧ್ಯ ದಲ್ಲಿದೆ; ಅದರ ಬೀದಿಗಳೊಳಗಿಂದ ಮೋಸವೂ ವಂಚನೆಯೂ ತೊಲಗುವದಿಲ್ಲ.
- 12ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು.
Cross references
- Psalm 59:14–15 ಕೀರ್ತನೆಗಳು 59:14–15ಸಂಜೆಗೆ ಅವರು ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತು ವರು. ಅವರು ಊಟಕ್ಕಾಗಿ ಅಲೆದಾಡಲಿ; ತೃಪ್ತಿ ಯಾಗದೆ ಗುಣಗುಟ್ಟಲಿ.
- Isaiah 59:6–15 ಯೆಶಾಯ 59:6–15ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ. ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ. ಸಮಾ ಧಾನದ ಮಾರ್ಗವನ್ನರಿಯರು; ಅವರ ದಾರಿಗಳಲ್ಲಿ ನ್ಯಾಯವಿಲ್ಲ; ತಮ್ಮ ಹಾದಿಗಳನ್ನು ಡೊಂಕು ಮಾಡಿ ಕೊಂಡಿದ್ದಾರೆ; ಅವುಗಳಲ್ಲಿ ನಡೆಯುವವರೆಲ್ಲರು ಸಮಾ ಧಾನವನ್ನರಿಯರು. ಆದದರಿಂದ ನ್ಯಾಯವು ನಮಗೆ ದೂರವಾಯಿತು; ನೀತಿಯು ನಮ್ಮನ್ನು ಸೇರದು; ಬೆಳಕಿ ಗೋಸ್ಕರ ಕಾದುಕೊಳ್ಳುತ್ತೇವೆ, ಆದರೆ ಇಗೋ ಕತ್ತಲೆ, ಪ್ರಕಾಶವನ್ನು ಹಾರೈಸಿ ಅಂಧಕಾರದಲ್ಲಿ ನಡೆದುಕೊಳ್ಳು ತ್ತೇವೆ. ಕುರುಡರ ಹಾಗೆ ಗೋಡೆಯನ್ನು ತಡವರಿ ಸುತ್ತೇವೆ; ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ; ಮಧ್ಯಾಹ್ನದಲ್ಲಿ, ರಾತ್ರಿಯ ಹಾಗೆ ಎಡವುತ್ತೇವೆ, ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ. ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ. ಯಾಕಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ; ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ದ್ರೋಹಗಳು ನಮ್ಮ ಸಂಗಡ ಅವೆ; ನಮ್ಮ ಅಕ್ರಮಗಳ ನ್ನಾದರೋ, ನಾವು ಬಲ್ಲೆವು. ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ. ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ. ಹೌದು, ಸತ್ಯವು ಇಲ್ಲದೇ ಹೋಯಿತು; ಕೆಟ್ಟದ್ದನ್ನು ಬಿಟ್ಟುಬಿಡುವವನು ಸುಲಿಗೆ ಯಾಗುತ್ತಾನೆ; ಕರ್ತನು ಅದನ್ನು ನೋಡಿದನು, ಅದ ರಲ್ಲಿ ನ್ಯಾಯವಿಲ್ಲದ್ದರಿಂದ ಆತನಿಗೆ ಮೆಚ್ಚಿಕೆಯಾಗಲಿಲ್ಲ.
- John 18:28 ಯೋಹಾನನು 18:28ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ನ್ಯಾಯಾಲಯಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಮೈಲಿಗೆಯಾಗಿ ಪಸ್ಕದ ಊಟ ಮಾಡುವದಕ್ಕೆ ಅಡ್ಡಿಯಾದೀತೆಂದು ಅವರು ನ್ಯಾಯಾಲಯದ ಒಳಗೆ ಹೋಗಲಿಲ್ಲ.
- Psalm 59:6 ಕೀರ್ತನೆಗಳು 59:6ಅವರು ಸಂಜೆಗೆ ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತುವರು.
- Acts 9:24 ಅಪೊಸ್ತಲರ ಕೃತ್ಯಗಳು 9:24ಆದರೆ ಅವರು ಹೊಂಚುಹಾಕಿ ಕೊಂಡಿರುವದು ಸೌಲನಿಗೆ ತಿಳಿಯಬಂತು. ಅವನನ್ನು ಕೊಲ್ಲುವದಕ್ಕಾಗಿ ಅವರು ಹಗಲಿರುಳೂ ದ್ವಾರಗಳನ್ನು ಕಾಯುತ್ತಿದ್ದರು;
- Ezekiel 9:4 ಯೆಹೆಜ್ಕೇಲನು 9:4ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು.
- John 18:3 ಯೋಹಾನನು 18:3ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು.
- 2 Samuel 17:1–2 2 ಸಮುವೇಲನು 17:1–2ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು. ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು.
- 2 Samuel 16:21–22 2 ಸಮುವೇಲನು 16:21–22ಅಹೀತೋಫೆಲನು ಅಬ್ಷಾಲೋಮನಿಗೆ--ನಿನ್ನ ತಂದೆಯು ಮನೆಗೆ ಕಾವಲಿಟ್ಟ ಉಪಪತ್ನಿಗಳೊಡನೆ ಸಂಗಮಿಸು; ಆಗ ನಿನ್ನ ತಂದೆ ಯಿಂದ ನೀನು ಹಗೆಮಾಡಲ್ಪಟ್ಟವನೆಂದು ಎಲ್ಲಾ ಇಸ್ರಾ ಯೇಲ್ಯರು ಕೇಳಿ ನಿನ್ನ ಸಂಗಡ ಇರುವ ಎಲ್ಲಾ ಜನರ ಕೈಗಳೂ ಬಲವಾಗಿರುವವು ಅಂದನು. ಹಾಗೆಯೇ ಅವರು ಅಬ್ಷಾಲೋಮನಿಗೋಸ್ಕರ ಮನೆಯ ಮೇಲೆ ಡೇರೆ ಹಾಕಿದರು; ಅಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.
- Zephaniah 3:1–3 ಚೆಫನ್ಯ 3:1–3ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.
- Hosea 7:6 ಹೋಶೇಯ 7:6ಅವರು ಹೊಂಚು ಹಾಕಿಕೊಂಡಿ ರುವಾಗ ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ; ಅವರ ರೊಟ್ಟಿಗಾರನು ರಾತ್ರಿ ಯೆಲ್ಲಾ ನಿದ್ರೆ ಮಾಡುತ್ತಾನೆ, ಬೆಳಿಗ್ಗೆ ಅದು ಪ್ರಜ್ವಲಿ ಸುವ ಬೆಂಕಿಯ ಹಾಗೆ ಉರಿಯುತ್ತದೆ.
- 1 Samuel 19:11 1 ಸಮುವೇಲನು 19:11ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ