Psalms · chapter 122 · verse 4
Psalm 122:4 in Kannada
ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
Allige gotragalu, kartana gotragalu, israayelige saakshiyaagi, kartana hesarannu kondaaduvadakke hoguttade.
Psalm 122:4 in English
- King James Version (KJV)
- Whither the tribes go up, the tribes of the LORD, unto the testimony of Israel, to give thanks unto the name of the LORD.
- World English Bible (WEB)
- where the tribes go up, even the LORD’s tribes, according to an ordinance for Israel, to give thanks to the LORD’s name.
- American Standard Version (ASV)
- Whither the tribes go up, even the tribes of Jehovah, [For] an ordinance for Israel, To give thanks unto the name of Jehovah.
- Bible in Basic English (BBE)
- To which the tribes went up, even the tribes of the Lord, for a witness to Israel, to give praise to the name of the Lord.
- Darby Translation (DBY)
- Whither the tribes go up, the tribes of Jah, a testimony to Israel, to give thanks unto the name of Jehovah.
- Webster's Bible (WBS)
- Whither the tribes go up, the tribes of the LORD, to the testimony of Israel, to give thanks to the name of the LORD.
- Young's Literal Translation (YLT)
- For thither have tribes gone up, Tribes of Jah, companies of Israel, To give thanks to the name of Jehovah.
Read in context
- 2ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ.
- 3ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.
- 4ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
- 5ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
- 6ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು.
Cross references
- Deuteronomy 16:16 ಧರ್ಮೋಪದೇಶಕಾಂಡ 16:16ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.
- Psalm 66:13–16 ಕೀರ್ತನೆಗಳು 66:13–16ನಾನು ದಹನ ಬಲಿಗಳೊಂದಿಗೆ ನಿನ್ನ ಆಲಯಕ್ಕೆ ಹೋಗುವೆನು. ನನ್ನ ಇಕ್ಕಟ್ಟಿನಲ್ಲಿ ತುಟಿಗಳು ಉಚ್ಚರಿಸಿದಂಥ, ಬಾಯಿ ನುಡಿದಂಥ, ಹರಕೆಗಳನ್ನು ನಾನು ನಿನಗೆ ಸಲ್ಲಿಸುವೆನು. ಕೊಬ್ಬಿದ ದಹನಬಲಿಗಳನ್ನು ಟಗರುಗಳ ಧೂಪದ ಸಂಗಡ ನಿನಗೆ ಅರ್ಪಿಸುವೆನು; ಹೋತಗಳ ಸಂಗಡ ಎತ್ತುಗಳನ್ನು ಅರ್ಪಿಸುವೆನು. ಸೆಲಾ. ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
- Psalm 107:1–3 ಕೀರ್ತನೆಗಳು 107:1–3ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು. ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ.
- Exodus 34:23–24 ವಿಮೋಚನಕಾಂಡ 34:23–24ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು. ನಾನು ಜನಾಂಗಗಳನ್ನು ನಿಮ್ಮ ಎದುರಿನಿಂದ ಹೊರ ಡಿಸಿಬಿಟ್ಟು ನಿಮ್ಮ ಮೇರೆಗಳನ್ನು ವಿಸ್ತಾರಮಾಡುವೆನು. ವರುಷಕ್ಕೆ ಮೂರು ಸಾರಿ ನೀವು ನಿಮ್ಮ ದೇವರಾದ ಕರ್ತನ ಸನ್ನಿಧಿಗೆ ಹೋಗುವ ಸಮಯದಲ್ಲಿ ಯಾರೂ ನಿಮ್ಮ ದೇಶವನ್ನು ಆಶಿಸರು.
- Psalm 118:19 ಕೀರ್ತನೆಗಳು 118:19ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
- Exodus 23:17 ವಿಮೋಚನಕಾಂಡ 23:17ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
- Psalm 132:13 ಕೀರ್ತನೆಗಳು 132:13ಕರ್ತನು ಚೀಯೋನನ್ನು ಆದುಕೊಂಡು ಅದನ್ನು ತನ್ನ ವಾಸಕ್ಕಾಗಿ ಅಪೇಕ್ಷಿಸಿದ್ದಾನೆ.
- Psalm 78:68 ಕೀರ್ತನೆಗಳು 78:68ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು,
- Deuteronomy 12:11 ಧರ್ಮೋಪದೇಶಕಾಂಡ 12:11ನೀವು ಸುರಕ್ಷಿತವಾಗಿ ವಾಸಿಸುವಾಗ ನಿಮ್ಮ ದೇವರಾದ ಕರ್ತನು ತನ್ನ ಹೆಸರಿನ ನಿವಾಸಕ್ಕೆ ಆದುಕೊಳ್ಳುವ ಸ್ಥಳವಿರುವದು; ಅಲ್ಲಿಗೆ ನಾನು ನಿಮಗೆ ಆಜ್ಞಾಪಿಸುವದನ್ನೆಲ್ಲಾ ಅಂದರೆ ನಿಮ್ಮ ದಹನ ಬಲಿಗಳನ್ನೂ ಬಲಿಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಕೈ ಎತ್ತುವ ಅರ್ಪಣೆಗಳನ್ನೂ ನೀವು ಕರ್ತನಿಗೆ ಮಾಡುವ ಎಲ್ಲಾ ಶ್ರೇಷ್ಠ ಪ್ರಮಾಣಗಳನ್ನೂ ತರಬೇಕು.
- Exodus 32:15 ವಿಮೋಚನಕಾಂಡ 32:15ಆಗ ಮೋಶೆಯು ತಿರುಗಿಕೊಂಡು ಎರಡೂ ಬದಿಯಲ್ಲಿ ಬರೆದಿರುವ ಹಲಗೆಗಳಾದ ಸಾಕ್ಷಿಯ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದಿ ಳಿದನು; ಆ ಹಲಗೆಗಳು ಈ ಪಕ್ಕದಲ್ಲಿಯೂ ಆ ಪಕ್ಕದಲ್ಲಿಯೂ ಬರೆಯಲ್ಪಟ್ಟಿದ್ದವು.
- Exodus 16:34 ವಿಮೋಚನಕಾಂಡ 16:34ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು.
- Exodus 26:33–34 ವಿಮೋಚನಕಾಂಡ 26:33–34ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು. ಅತಿಪರಿಶುದ್ಧ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮಂಜೂಷದ ಮೇಲೆ ಕರುಣಾಸನ ವನ್ನು ಇಡಬೇಕು.