Psalms · chapter 122 · verse 3
Psalm 122:3 in Kannada
ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.
Yeroosalemu ottaagi jodisalpatta patta nada haage kattalpattide.
Psalm 122:3 in English
- King James Version (KJV)
- Jerusalem is builded as a city that is compact together:
- World English Bible (WEB)
- Jerusalem is built as a city that is compact together,
- American Standard Version (ASV)
- Jerusalem, that art builded As a city that is compact together;
- Bible in Basic English (BBE)
- O Jerusalem, you are like a town which is well joined together;
- Darby Translation (DBY)
- Jerusalem, which art built as a city that is compact together,
- Webster's Bible (WBS)
- Jerusalem is built as a city that is compact together:
- Young's Literal Translation (YLT)
- Jerusalem — the builded one — [Is] as a city that is joined to itself together.
Read in context
- 1ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
- 2ಓ ಯೆರೂಸಲೇಮೇ, ನಮ್ಮ ಪಾದಗಳು ನಿನ್ನ ಬಾಗಲುಗಳಲ್ಲಿ ನಿಲ್ಲುತ್ತವೆ.
- 3ಯೆರೂಸಲೇಮು ಒಟ್ಟಾಗಿ ಜೋಡಿಸಲ್ಪಟ್ಟ ಪಟ್ಟ ಣದ ಹಾಗೆ ಕಟ್ಟಲ್ಪಟ್ಟಿದೆ.
- 4ಅಲ್ಲಿಗೆ ಗೋತ್ರಗಳು, ಕರ್ತನ ಗೋತ್ರಗಳು, ಇಸ್ರಾಯೇಲಿಗೆ ಸಾಕ್ಷಿಯಾಗಿ, ಕರ್ತನ ಹೆಸರನ್ನು ಕೊಂಡಾಡುವದಕ್ಕೆ ಹೋಗುತ್ತದೆ.
- 5ಅಲ್ಲಿ ನ್ಯಾಯತೀರ್ವಿಕೆಗೆ ಸಿಂಹಾಸನಗಳೂ ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.
Cross references
- 2 Samuel 5:9 2 ಸಮುವೇಲನು 5:9ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
- Ephesians 2:20–21 ಎಫೆಸದವರಿಗೆ 2:20–21ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ.ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.
- Ephesians 4:4–7 ಎಫೆಸದವರಿಗೆ 4:4–7ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ, ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ. ಆದರೆ ಕ್ರಿಸ್ತನು ಅನುಗ್ರಹಿಸಿದ ದಾನದ ಅಳತೆ ಗನುಸಾರವಾಗಿ ನಮ್ಮಲ್ಲಿ ಪ್ರತಿಯೊಬ್ಬನಿಗೆ ಕೃಪೆಯು ಕೊಡಲ್ಪಟ್ಟಿತು.
- Psalm 147:2 ಕೀರ್ತನೆಗಳು 147:2ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.
- Nehemiah 4:6 ನೆಹೆಮೀಯ 4:6ಹೀಗೆಯೇ ನಾವು ಗೋಡೆಯನ್ನು ಕಟ್ಟಿದೆವು; ಗೋಡೆಯಲ್ಲಾ ಅರ್ಧ ಎತ್ತರದ ವರೆಗೂ ಒಂದಾಗಿ ಕೂಡಿತು. ಜನರು ಕೆಲಸ ಮಾಡುವದಕ್ಕೆ ಮನಸ್ಸುಳ್ಳ ವರಾಗಿದ್ದರು.
- Revelation 21:10–27 ಪ್ರಕಟನೆ 21:10–27ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಪರಲೋಕ ದೊಳಗಿಂದ ಪರಿಶುದ್ಧವಾದ ಯೆರೂಸಲೇಮೆಂಬ ಆ ದೊಡ್ಡ ಪಟ್ಟಣವು ದೇವರ ಕಡೆಯಿಂದ ಇಳಿದು ಬರುವ ದನ್ನು ನನಗೆ ತೋರಿಸಿದನು. ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು. ಆ ಪಟ್ಟಣಕ್ಕೆ ಬಹಳ ಎತ್ತರವಾದ ಗೋಡೆ ಇತ್ತು; ಅದಕ್ಕೆ ಹನ್ನೆರಡು ಹೆಬ್ಬಾಗಿಲು ಗಳಿದ್ದವು; ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೂತರಿದ್ದರು; ಅವುಗಳ ಮೇಲೆ ಇಸ್ರಾ ಯೇಲ್ಯರ ಹನ್ನೆರಡು ಗೋತ್ರಗಳ ಹೆಸರುಗಳು ಬರೆ ದಿದ್ದವು. ಪೂರ್ವ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲು ಗಳು. ಉತ್ತರ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು, ಪಶ್ಚಿಮ ದಿಕ್ಕಿನಲ್ಲಿ ಮೂರು ಹೆಬ್ಬಾಗಿಲುಗಳು ಇದ್ದವು. ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು; ಅವುಗಳ ಮೇಲೆ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು. ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಗೋಡೆಯನ್ನೂ ಅಳತೆ ಮಾಡು ವದಕ್ಕಾಗಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು. ಪಟ್ಟಣವು ಚಚ್ಚೌಕವಾಗಿದೆ; ಅದರ ಉದ್ದವು ಅದರ ಅಗಲದಷ್ಟಿದೆ. ಅವನು ಆ ಪಟ್ಟಣವನ್ನು ಕೋಲಿನಿಂದ ಅಳತೆ ಮಾಡಿದನು; ಅಳತೆಯು ಹನ್ನೆರಡು ನೂರು ಮೈಲಿ ಆಯಿತು. ಅದರ ಉದ್ದವೂ ಅಗಲವೂ ಎತ್ತರವೂ ಸಮವಾಗಿವೆ. ಅದರ ಗೋಡೆಯನ್ನು ಅವನು ಅಳತೆ ಮಾಡಿದನು; ಅದು ನೂರನಾಲ್ವತ್ತ ನಾಲ್ಕು ಮೊಳ ದಷ್ಟಿತ್ತು. ಈ ಲೆಕ್ಕದಲ್ಲಿ ಮನುಷ್ಯನ ಮೊಳ ಅಂದರೆ ದೂತನ ಮೊಳ. ಆ ಗೋಡೆಯ ಕಟ್ಟಡವು ಸೂರ್ಯ ಕಾಂತದಿಂದ ಆಗಿತ್ತು; ಪಟ್ಟಣವು ಶುದ್ಧ ಗಾಜಿನಂತಿರುವ ಸೋಸಿದ ಭಂಗಾರವೇ. ಪಟ್ಟಣದ ಗೋಡೆಯ ಅಸ್ತಿವಾರಗಳು ಸಕಲವಿಧವಾದ ಅಮೂಲ್ಯವಾದ ಕಲ್ಲುಗಳಿಂದ ಅಲಂಕೃತವಾಗಿದ್ದವು. ಮೊದಲನೆಯ ಅಸ್ತಿ ವಾರವು ಸೂರ್ಯಕಾಂತ, ಎರಡನೆಯದು ನೀಲಮಣಿ, ಮೂರನೆಯದು ಕೆಂಪು, ನಾಲ್ಕನೆಯದು ಪಚ್ಚೆ. ಐದನೆಯದು ಗೋಮೇಧಿಕ. ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಕೆಂಗಿತ್ತಳೆ, ಹನ್ನೆರಡನೆ ಯದು ನೀಲಸ್ಪಟಿಕ. ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು; ಒಂದೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ಪಟ್ಟಣದ ಬೀದಿಯು ಸ್ವಚ್ಛವಾದ ಗಾಜಿನಂತಿರುವ ಸೋಸಿದ ಬಂಗಾರವಾಗಿತ್ತು. ಪಟ್ಟಣದಲ್ಲಿ ನಾನು ಆಲಯವನ್ನು ಕಾಣಲಿಲ್ಲ; ಯಾಕಂದರೆ ಸರ್ವಶಕ್ತನಾದ ದೇವರಾಗಿ ರುವ ಕರ್ತನೂ ಕುರಿಮರಿಯಾದಾತನೂ ಅದರ ಆಲಯವಾಗಿದ್ದಾರೆ. ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ. ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು. ಅದರ ಹೆಬ್ಬಾಗಿಲು ಗಳನ್ನು ಹಗಲಿನಲ್ಲಿ ಮುಚ್ಚುವದೇ ಇಲ್ಲ. ಯಾಕಂದರೆ ರಾತ್ರಿಯು ಅಲ್ಲಿಲ್ಲ. ಅವರು ಜನಾಂಗಗಳ ವೈಭವ ವನ್ನೂ ಘನವನ್ನೂ ಅಲ್ಲಿಗೆ ತರುವರು.ಅದರಲ್ಲಿ ಹೊಲೆ ಮಾಡುವಂಥದ್ದು ಯಾವದೂ ಸೇರುವದಿಲ್ಲ. ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಅಲ್ಲಿ ಸೇರುವದಿಲ್ಲ. ಆದರೆ ಕುರಿಮರಿಯಾದಾತನ ಜೀವಗ್ರಂಥದಲ್ಲಿ ಬರೆಯಲ್ಪಟ್ಟವರು ಮಾತ್ರ ಸೇರುವರು. ಅದರಲ್ಲಿ ಹೊಲೆ ಮಾಡುವಂಥದ್ದು ಯಾವದೂ ಸೇರುವದಿಲ್ಲ. ಅಸಹ್ಯವಾದದ್ದನ್ನೂ ಸುಳ್ಳಾದದ್ದನ್ನೂ ನಡಿಸುವವನು ಅಲ್ಲಿ ಸೇರುವದಿಲ್ಲ. ಆದರೆ ಕುರಿಮರಿಯಾದಾತನ ಜೀವಗ್ರಂಥದಲ್ಲಿ ಬರೆಯಲ್ಪಟ್ಟವರು ಮಾತ್ರ ಸೇರುವರು.