Psalms · chapter 129 · verse 1
Psalm 129:1 in Kannada
ನನ್ನ ಯೌವನದಿಂದ ನನಗೆ ಅವರು ಬಹಳ ಬಾಧಿಸಿದ್ದಾರೆಂದು ಇಸ್ರಾ ಯೇಲು ಈಗ ಹೇಳಬಹುದು.
Nanna yauvanadinda nanage avaru bahala baadhisiddaarendu israa yelu eega helabahudu.
Psalm 129:1 in English
- King James Version (KJV)
- A Song of degrees. Many a time have they afflicted me from my youth, may Israel now say:
- World English Bible (WEB)
- A Song of Ascents. Many times they have afflicted me from my youth up. Let Israel now say:
- American Standard Version (ASV)
- A Song of Ascents. Many a time have they afflicted me from my youth up, Let Israel now say,
- Bible in Basic English (BBE)
- A Song of the going up. Great have been my troubles from the time when I was young (let Israel now say);
- Darby Translation (DBY)
- A Song of degrees. Many a time have they afflicted me from my youth — oh let Israel say —
- Webster's Bible (WBS)
- A Song of degrees. Many a time have they afflicted me from my youth, may Israel now say:
- Young's Literal Translation (YLT)
- A Song of the Ascents. Often they distressed me from my youth, Pray, let Israel say:
Read in context
- 1ನನ್ನ ಯೌವನದಿಂದ ನನಗೆ ಅವರು ಬಹಳ ಬಾಧಿಸಿದ್ದಾರೆಂದು ಇಸ್ರಾ ಯೇಲು ಈಗ ಹೇಳಬಹುದು.
- 2ನನ್ನ ಯೌವನ ದಿಂದ ಅವರು ನನ್ನನ್ನು ಬಹಳ ಬಾಧಿಸಿದರು; ಆದರೆ ಅವರು ನನ್ನನ್ನು ಗೆಲ್ಲಲಿಲ್ಲ.
- 3ಉಳುವವರು ನನ್ನ ಬೆನ್ನಿನ ಮೇಲೆ ಉತ್ತು ತಮ್ಮ ಸಾಲುಗಳನ್ನು ಉದ್ದ ಮಾಡಿದ್ದಾರೆ.
Cross references
- Psalm 124:1 ಕೀರ್ತನೆಗಳು 124:1ಇಸ್ರಾಯೇಲ್ ಈಗ ಹೇಳುವದೇನಂದರೆ: ಕರ್ತನು ನಮ್ಮ ಪಕ್ಷ ಇಲ್ಲದಿದ್ದರೆ,
- Jeremiah 2:2 ಯೆರೆಮೀಯ 2:2ನೀನು ಹೋಗಿ ಯೆರೂಸಲೇಮಿನ ಕಿವಿಗಳಲ್ಲಿ ಕೂಗಿ ಹೇಳ ಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ನಾನು ನಿನ್ನನ್ನು ನಿನ್ನ ಯೌವನದ ವಾತ್ಸಲ್ಯವನ್ನೂ ನಿನ್ನ ನಿಶ್ಚಿತಾರ್ಥದ ಪ್ರೀತಿಯನ್ನೂ ನೀನು ಅರಣ್ಯದಲ್ಲಿ ಬಿತ್ತಲ್ಪಡದ ದೇಶದಲ್ಲಿ ನನ್ನನ್ನು ಹಿಂಬಾಲಿಸಿದ್ದನ್ನೂ ಜ್ಞಾಪಕಮಾಡಿಕೊಳ್ಳುತ್ತೇನೆ.
- Hosea 11:1 ಹೋಶೇಯ 11:1ಇಸ್ರಾಯೇಲನು ಮಗುವಾಗಿದ್ದಾಗ ನಾನು ಅವನನ್ನು ಪ್ರೀತಿಮಾಡಿದೆನು, ಮತ್ತು ನನ್ನ ಮಗನನ್ನು ಐಗುಪ್ತದೊಳಗಿಂದ ಕರೆದೆನು.
- Psalm 120:1 ಕೀರ್ತನೆಗಳು 120:1ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು.
- Psalm 127:1 ಕೀರ್ತನೆಗಳು 127:1ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
- Psalm 122:1 ಕೀರ್ತನೆಗಳು 122:1ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
- Exodus 1:12–14 ವಿಮೋಚನಕಾಂಡ 1:12–14ಆದರೆ ಇವರು ಅವರನ್ನು ಎಷ್ಟು ಶ್ರಮೆಪಡಿಸಿದರೋ ಅಷ್ಟು ಅಧಿಕ ವಾಗಿ ಅವರು ಹೆಚ್ಚಿ ಹರಡಿಕೊಂಡರು. ಐಗುಪ್ತ್ಯರು ಇಸ್ರಾಯೇಲ್ ಮಕ್ಕಳಿಗಾಗಿ ಸಂತಾಪಪಟ್ಟರು. ಆದ ದರಿಂದ ಐಗುಪ್ತ್ಯರು ಇಸ್ರಾಯೇಲನ ಮಕ್ಕಳಿಂದ ಕ್ರೂರವಾಗಿ ಸೇವೆ ಮಾಡಿಸಿಕೊಂಡರು. ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಯನ್ನು ಮಾಡುವ ಕೆಲಸದ ಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳ ಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವನ ವನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿ ಸಿದ ಎಲ್ಲಾ ಸೇವೆಯೂ ಕಠಿಣವಾಗಿತ್ತು.
- Psalm 126:1 ಕೀರ್ತನೆಗಳು 126:1ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು.
- Judges 10:8–12 ನ್ಯಾಯಸ್ಥಾಪಕರು 10:8–12ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು. ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು. ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು. ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ? ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು.
- Isaiah 47:12 ಯೆಶಾಯ 47:12ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು.
- Exodus 5:7–19 ವಿಮೋಚನಕಾಂಡ 5:7–19ನೀವು ಇನ್ನು ಇಟ್ಟಿಗೆಗಳನ್ನು ಮಾಡುವದಕ್ಕೆ ಮೊದಲಿನ ಹಾಗೆ ಜನರಿಗೆ ಹುಲ್ಲನ್ನು ಕೊಡಬೇಡಿರಿ. ಅವರೇ ಹೋಗಿ ಹುಲ್ಲನ್ನು ಕೂಡಿಸಿಕೊಳ್ಳಲಿ. ಅವರು ಈ ವರೆಗೆ ಮಾಡಿದ ಇಟ್ಟಿಗೆಗಳ ಲೆಕ್ಕದಲ್ಲಿ ಏನೂ ಕಡಿಮೆ ಮಾಡಬಾರದೆಂದು ಅವರಿಗೆ ಹೇಳಬೇಕು. ಅವರು ಮೈಗಳ್ಳರೇ; ಆದದರಿಂದ ಅವರು--ನಾವು ಹೋಗಿ ನಮ್ಮ ದೇವರಿಗೆ ಬಲಿ ಅರ್ಪಿಸೋಣ ಎಂದು ಕೂಗುತ್ತಾರೆ. ಈ ಜನರು ವ್ಯರ್ಥವಾದ ಮಾತುಗಳಿಗೆ ಲಕ್ಷ್ಯಕೊಡದಂತೆ ಅವರ ಮೇಲೆ ಹೆಚ್ಚು ಕೆಲಸಗಳನ್ನು ಹೊರಿಸಿರಿ, ಅವರು ದುಡಿಯಲಿ ಎಂದು ಆಜ್ಞಾಪಿಸಿದನು. ಆಗ ಬಿಟ್ಟೀಕೆಲಸವನ್ನು ಮಾಡಿಸುವವರೂ ಅಧಿ ಕಾರಿಗಳೂ ಹೊರಗೆಹೋಗಿ ಜನರಿಗೆ--ಫರೋಹನು ಹೀಗೆ ಹೇಳುತ್ತಾನೆ--ನಾನು ನಿಮಗೆ ಹುಲ್ಲು ಕೊಡು ವದಿಲ್ಲ. ನಿಮಗೆ ಹುಲ್ಲು ಎಲ್ಲಿ ದೊರಕುವದೋ ಅಲ್ಲಿಗೆ ನೀವೇ ಹೋಗಿ ತಕ್ಕೊಳ್ಳಿರಿ; ಆದಾಗ್ಯೂ ನಿಮ್ಮ ಕೆಲಸವು ಏನೂ ಕಡಿಮೆಯಾಗಬಾರದು ಎಂದು ಹೇಳಿ ದ್ದಾನೆ ಅಂದನು. ಆಗ ಜನರು ಹುಲ್ಲಿಗೆ ಬದಲಾಗಿ ಕೂಳೆ ಕೂಡಿಸಿಕೊಳ್ಳುವದಕ್ಕೆ ಐಗುಪ್ತದೇಶದಲ್ಲೆಲ್ಲಾ ಚದರಿಹೋದರು. ಇದಲ್ಲದೆ ಬಿಟ್ಟೀಕೆಲಸ ಮಾಡಿಸು ವವರು--ಹುಲ್ಲು ಇದ್ದಾಗ ನಿಮ್ಮ ಕೆಲಸಗಳನ್ನು ಮಾಡಿ ದಂತೆಯೇ ಪ್ರತಿಯೊಂದು ದಿನದಲ್ಲಿ ಆ ದಿನದ ಕೆಲಸ ವನ್ನು ತೀರಿಸಿಬಿಡಬೇಕು ಎಂದು ಹೇಳಿ ಅವರನ್ನು ತ್ವರೆಪಡಿಸಿದರು. ಇಸ್ರಾಯೇಲ್ಯರು ಬಿಟ್ಟೀಕೆಲಸ ಮಾಡಿಸುವಂತೆ ಫರೋಹನ ಅಧಿಕಾರಿಗಳು ನೇಮಿಸಿ ದವರಿಗೆ--ನೀವು ಮೊದಲು ಇಟ್ಟಿಗೆಗಳ ಲೆಕ್ಕವನ್ನು ಒಪ್ಪಿಸಿದಂತೆ ನಿನ್ನೆ ಈ ಹೊತ್ತು ಯಾಕೆ ಒಪ್ಪಿಸಲಿಲ್ಲ ಎಂದು ಹೇಳಿ ಅವರನ್ನು ಹೊಡಿಸಿದರು. ಇಸ್ರಾಯೇಲ್ ಮಕ್ಕಳ ಅಧಿಕಾರಿಗಳು ಫರೋ ಹನ ಬಳಿಗೆ ಹೋಗಿ--ಯಾಕೆ ನಿನ್ನ ದಾಸರಿಗೆ ಹೀಗೆ ಮಾಡುತ್ತೀ? ನಿನ್ನ ದಾಸರಿಗೆ ಅವರು ಹುಲ್ಲು ಕೊಡದೆ--ಇಟ್ಟಿಗೆಗಳನ್ನು ಮಾಡಿರಿ ಎಂದು ನಮಗೆ ಹೇಳುತ್ತಾರೆ. ಇಗೋ, ನಿನ್ನ ದಾಸರನ್ನು ಹೊಡೆಯುತ್ತಾರೆ. ಆದರೆ ನಿನ್ನ ಸ್ವಂತ ಜನರಲ್ಲಿಯೇ ತಪ್ಪು ಇದೆ ಅಂದರು. ಅದಕ್ಕೆ ಅವನು--ನೀವು ಮೈಗಳ್ಳರು, ನೀವು ಮೈಗಳ್ಳರಾದ ಕಾರಣ--ನಾವು ಹೋಗಿ ಕರ್ತನಿಗೆ ಬಲಿಯರ್ಪಿಸುತ್ತೇವೆ ಎಂದು ಅನ್ನುತ್ತೀರಿ. ಆದದ ರಿಂದ ಈಗ ಹೋಗಿ ಕೆಲಸಮಾಡಿರಿ, ಹುಲ್ಲನ್ನು ನಿಮಗೆ ಕೊಡುವದಕ್ಕಾಗುವದಿಲ್ಲ. ಆದಾಗ್ಯೂ ನೇಮಿಸಿದ್ದ ಇಟ್ಟಿಗೆಗಳನ್ನು ನೀವು ಕೊಡಬೇಕು ಅಂದನು. ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಅಪ್ಪಣೆಯಾದದ್ದರಿಂದ ಇಸ್ರಾಯೇಲ್ ಅಧಿಕಾರಿಗಳು ತಾವು ದುರವಸ್ಥೆಯಲ್ಲಿ ದ್ದೇವೆಂದು ತಿಳುಕೊಂಡರು.
- Judges 2:15 ನ್ಯಾಯಸ್ಥಾಪಕರು 2:15ಕರ್ತನು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಇಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವದಕ್ಕೆ ಕರ್ತನ ಕೈ ಅವರ ಮೇಲೆ ಇತ್ತು.