Psalms · chapter 133 · verse 1
Psalm 133:1 in Kannada
ಇಗೋ, ಸಹೋದರರು ಒಂದಾಗಿ ವಾಸಮಾಡುವದು ಎಷ್ಟೋಒಳ್ಳೇದು! ಎಷ್ಟೋ ರಮ್ಯವಾದದ್ದು!
Igo, sahodararu ondaagi vaasamaaduvadu eshtoolledu! Eshto ramyavaadaddu!
Psalm 133:1 in English
- King James Version (KJV)
- A Song of degrees of David. Behold, how good and how pleasant [it is] for brethren to dwell together in unity!
- World English Bible (WEB)
- A Song of Ascents. By David. See how good and how pleasant it is for brothers to live together in unity!
- American Standard Version (ASV)
- A Song of Ascents; of David. Behold, how good and how pleasant it is For brethren to dwell together in unity!
- Bible in Basic English (BBE)
- A Song of the going up. Of David. See how good and how pleasing it is for brothers to be living together in harmony!
- Darby Translation (DBY)
- A Song of degrees. Of David. Behold, how good and how pleasant it is for brethren to dwell together in unity!
- Webster's Bible (WBS)
- A Song of degrees of David. Behold, how good and how pleasant [it is] for brethren to dwell together in unity!
- Young's Literal Translation (YLT)
- A Song of the Ascents, by David. Lo, how good and how pleasant The dwelling of brethren — even together!
Read in context
- 1ಇಗೋ, ಸಹೋದರರು ಒಂದಾಗಿ ವಾಸಮಾಡುವದು ಎಷ್ಟೋಒಳ್ಳೇದು! ಎಷ್ಟೋ ರಮ್ಯವಾದದ್ದು!
- 2ಅದು ತಲೆಯ ಮೇಲಿದ್ದು ಗಡ್ಡದ ಮೇಲೆ ಅಂದರೆ ಆರೋನನ ಗಡ್ಡದ ಮೇಲೆ ಇಳಿದು ಅವನ ವಸ್ತ್ರಗಳ ಅಂಚಿನ ವರೆಗೂ ಇಳಿಯುವ ಶ್ರೇಷ್ಠ ತೈಲದ ಹಾಗೆಯೂಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.
- 3ಚೀಯೋನಿನ ಪರ್ವತಗಳ ಮೇಲೆ ಬೀಳುವ ಹೆರ್ಮೋನಿನ ಮಂಜಿನ ಹಾಗೆಯೂ ಅದೆ; ಅಲ್ಲಿ ಕರ್ತನು ಆಶೀರ್ವಾದವನ್ನೂ ಯುಗಯುಗಕ್ಕಿರುವ ಜೀವವನ್ನೂ ಆಜ್ಞಾಪಿಸಿದ್ದಾನೆ.
Cross references
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- 1 Corinthians 1:10 1 ಕೊರಿಂಥದವರಿಗೆ 1:10ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವ ರಾಗಿದ್ದು ಹೊಂದಿಕೆಯಿಂದಿರಬೇಕು ಎಂಬದಾಗಿ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.
- John 13:35 ಯೋಹಾನನು 13:35ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಇದರಿಂದ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳು ವರು ಎಂದು ಹೇಳಿದನು.
- Hebrews 13:1 ಇಬ್ರಿಯರಿಗೆ 13:1ಸಹೋದರ ಪ್ರೀತಿಯು ನೆಲೆಯಾಗಿರಲಿ.
- Philippians 2:2–5 ಫಿಲಿಪ್ಪಿಯವರಿಗೆ 2:2–5ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ. ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ. ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ.
- Ephesians 4:3–6 ಎಫೆಸದವರಿಗೆ 4:3–6ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿ ಕೊಳ್ಳುವದಕ್ಕೆ ಆಸಕ್ತರಾಗಿರ್ರಿ. ನಿಮ್ಮ ಕರೆಯುವಿಕೆಯ ಒಂದೇ ನಿರೀಕ್ಷೆಯಲ್ಲಿ ನೀವು ಕರೆಯಲ್ಪಟ್ಟಂತೆಯೇ ದೇಹವು ಒಂದೇ, ಆತ್ಮನು ಒಬ್ಬನೇ, ಒಬ್ಬನೇ ಕರ್ತನು, ಒಂದೇ ನಂಬಿಕೆ, ಒಂದೇ ಬಾಪ್ತಿಸ್ಮ. ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲೆಯೂ ಎಲ್ಲರ ಮುಖಾಂತರವೂ ಎಲ್ಲರಲ್ಲಿಯೂ ಇರುವಾತನಾಗಿದ್ದಾನೆ.
- John 17:21 ಯೋಹಾನನು 17:21ಇದಲ್ಲದೆ ಅವರೆಲ್ಲರೂ ನಮ್ಮಲ್ಲಿ ಒಂದಾಗಿರಬೇಕೆಂತಲೂ ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವಂತೆಯೂ ತಂದೆಯಾದ ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆ ಇವರು ಸಹ ನಮ್ಮಲ್ಲಿ ಒಂದಾಗಿರ ಬೇಕೆಂತಲೂ ಕೇಳಿಕೊಳ್ಳುತ್ತೇನೆ.
- Jeremiah 32:39 ಯೆರೆಮೀಯ 32:39ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- 1 John 3:14–19 1 ಯೋಹಾನನು 3:14–19ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ. ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು. ಸತ್ಯಕ್ಕೆ ಸಂಬಂಧಪಟ್ಟವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ; ಆತನ ಸಮಕ್ಷಮದಲ್ಲಿ ನಮ್ಮ ಹೃದಯಗಳನ್ನು ನಿಶ್ಚಯಪಡಿಸಿಕೊಳ್ಳುತ್ತೇವೆ.
- Genesis 13:8 ಆದಿಕಾಂಡ 13:8ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು.
- Psalm 122:6–8 ಕೀರ್ತನೆಗಳು 122:6–8ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ. ಯೆರೂಸಲೇಮನ್ನು ಪ್ರೀತಿಮಾಡುವವರು ಅಭಿವೃದ್ಧಿ ಯಾಗುವರು. ನಿನ್ನ ಪ್ರಾಕಾರದಲ್ಲಿ ಸಮಾಧಾನವೂ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ. ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ ನಿನ್ನಲ್ಲಿ ಸಮಾಧಾನವಿರಲೆಂದು ಈಗ ಹೇಳುತ್ತೇನೆ.ನಮ್ಮ ದೇವರಾದ ಕರ್ತನ ಆಲಯದ ನಿಮಿತ್ತ ನಿನಗೆ ಒಳ್ಳೇದನ್ನು ಹುಡುಕುತ್ತೇನೆ.
- Genesis 45:24 ಆದಿಕಾಂಡ 45:24ಅವನು ಅವರಿಗೆ--ಮಾರ್ಗದಲ್ಲಿ ಜಗಳವಾಡಬೇಡಿರಿ ಎಂದು ಅವರಿಗೆ ಹೇಳಿದ ಮೇಲೆ ಅವರು ಹೋದರು.