Psalms · chapter 144 · verse 10
Psalm 144:10 in Kannada
ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,
Arasugalige rakshaneyannu kodu vaatane, ninna sevakanaada daaveedanannu kedina kattiyinda tappisuvaatane,
Psalm 144:10 in English
- King James Version (KJV)
- [It is he] that giveth salvation unto kings: who delivereth David his servant from the hurtful sword.
- World English Bible (WEB)
- You are he who gives salvation to kings, who rescues David, his servant, from the deadly sword.
- American Standard Version (ASV)
- Thou art he that giveth salvation unto kings; Who rescueth David his servant from the hurtful sword.
- Bible in Basic English (BBE)
- It is God who gives salvation to kings; and who kept his servant David from the wounding sword.
- Darby Translation (DBY)
- Who givest salvation unto kings; who rescuest David thy servant from the hurtful sword.
- Webster's Bible (WBS)
- [It is he] that giveth salvation to kings: who delivereth David his servant from the hurtful sword.
- Young's Literal Translation (YLT)
- Who is giving deliverance to kings, Who is freeing David His servant from the sword of evil.
Read in context
- 8ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು, ಅವರ ಬಲಗೈ ಮೋಸದ ಬಲಗೈ ಆಗಿದೆ.
- 9ಓ ದೇವರೇ, ನಾನು ಹೊಸ ಹಾಡನ್ನು ನಿನಗೆ ಹಾಡುವೆನು; ಹತ್ತು ತಂತಿಗಳ ವೀಣೆಯಿಂದ ನಿನ್ನನ್ನು ಕೀರ್ತಿಸುವೆನು.
- 10ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,
- 11ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
- 12ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
Cross references
- Psalm 18:50 ಕೀರ್ತನೆಗಳು 18:50ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.
- Psalm 140:7 ಕೀರ್ತನೆಗಳು 140:7ನನ್ನ ರಕ್ಷಣೆಯ ಬಲವಾಗಿರುವ ಕರ್ತನಾದ ಓ ದೇವರೇ, ನನ್ನ ತಲೆಯನ್ನು ಯುದ್ಧದ ದಿವಸದಲ್ಲಿ ಮುಚ್ಚಿದ್ದೀ.
- Psalm 33:16–18 ಕೀರ್ತನೆಗಳು 33:16–18ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ. ಕುದುರೆಯು ಭದ್ರತೆಗೆ ವ್ಯರ್ಥವಾಗಿದೆ; ಇಲ್ಲವೆ ತನ್ನ ಅಧಿಕಬಲದಿಂದ ಯಾರನ್ನೂ ತಪ್ಪಿಸುವದಿಲ್ಲ. ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ.
- 2 Samuel 21:16–17 2 ಸಮುವೇಲನು 21:16–17ಆಗ ಮುನ್ನೂರು ಶೇಕೆಲ ತೂಕವಾದ ಹಿತ್ತಾಳೆಯ ಈಟಿಯುಳ್ಳವನಾಗಿ ಹೊಸ ಕತ್ತಿಯನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ಮಹಾ ಶರೀರದವನ ಮಕ್ಕಳಲ್ಲಿ ಇಷ್ಬೀಬೆನೋಬ್ನು ದಾವೀದ ನನ್ನು ಕೊಲ್ಲಬೇಕೆಂದಿದ್ದನು. ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.
- 2 Samuel 5:19–25 2 ಸಮುವೇಲನು 5:19–25ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು. ಆದಕಾರಣ ದಾವೀದನು ಬಾಳ್ಪೆರಾಚೀಮಿಗೆ ಬಂದು ಅಲ್ಲಿ ಅವರನ್ನು ಹೊಡೆದು--ನೀರು ಕಟ್ಟೆ ಒಡೆದು ಹರಿಯುವ ಹಾಗೆ ಕರ್ತನು ನನ್ನ ಮುಂದೆ ನನ್ನ ಶತ್ರುಗಳ ಮೇಲೆ ಹರಿದು ಬಿದ್ದಿದ್ದಾನೆ ಎಂದು ಹೇಳಿ ಆ ಸ್ಥಳಕ್ಕೆ ಬಾಳ್ಪೆರಾಚೀಮ್ ಎಂದು ಹೆಸರಿ ಟ್ಟನು. ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು. ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು. ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು. ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು. ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
- 1 Samuel 17:45–46 1 ಸಮುವೇಲನು 17:45–46ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.
- 2 Samuel 8:6–14 2 ಸಮುವೇಲನು 8:6–14ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು. ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು. ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು. ಇವುಗಳನ್ನು ಅರಸನಾದ ದಾವೀದನು ವಶಮಾಡಿಕೊಂಡು ಅರಾಮ್ಯರೂ ಮೋವಾಬ್ಯರೂ ಅಮ್ಮೋನನ ಮಕ್ಕಳೂ ಫಿಲಿಷ್ಟಿಯರೂ ಅಮಾಲೇಕ್ಯರೂ ಎಂಬ ಸಕಲ ಜನಾಂಗಗಳಿಂದ ತೆಗೆದು ಪ್ರತಿಷ್ಠೆ ಮಾಡಿದ ಬೆಳ್ಳಿ ಬಂಗಾರದ ಸಂಗಡಲೂ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಲ್ಲಿ ಕೊಳ್ಳೆ ಇಟ್ಟದರ ಸಂಗಡಲೂ ಕರ್ತನಿಗೆ ಪ್ರತಿಷ್ಠೆಮಾಡಿ ಇಟ್ಟನು. ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
- Isaiah 45:1–6 ಯೆಶಾಯ 45:1–6ಕರ್ತನು ತನ್ನ ಅಭಿಷಿಕ್ತನಾದ ಕೋರೆಷನಿಗೆ, ಯಾವನ ಕೈಯನ್ನು ಹಿಡಿದು, ಯಾವನ ಮುಂದೆ ಜನಾಂಗಗಳನ್ನು ಕೆಡವಿಬಿಟ್ಟು, ಅರಸುಗಳ ನಡುವುಗಳನ್ನು ಬಿಚ್ಚಿ ಯಾವನ ಮುಂದೆ ಎರಡು ಕದಗಳುಳ್ಳ ಬಾಗಿಲುಗಳನ್ನು ತೆರೆಯುತ್ತೇನೋ, ಯಾವನ ಮುಂದೆ ದ್ವಾರಗಳು ಮುಚ್ಚಲ್ಪಡುವವೋ ಅವನಿಗೆ ಹೇಳುವದೇನಂದರೆ-- ನಾನು ನಿನ್ನ ಮುಂದೆ ಹೋಗಿ ಡೊಂಕಾದ ಸ್ಥಳಗಳನ್ನು ಸಮಮಾಡಿ, ಹಿತ್ತಾ ಳೆಯ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು. ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು. ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ. ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು. ಮೂಡಣದಿಂದ ಪಡುವಣದ ವರೆಗೆ ಇರುವವರೆಲ್ಲರೂ ತಿಳಿದುಕೊಳ್ಳುವಂತೆ ನನ್ನ ಹೊರತು ಯಾರೂ ಇಲ್ಲ, ನಾನೇ ಕರ್ತನು ಮತ್ತೊ ಬ್ಬನು ಇಲ್ಲ.
- 2 Kings 5:1 2 ಅರಸುಗಳು 5:1ಅರಾಮ್ಯರ ಅರಸನ ಸೈನ್ಯಾಧಿಪತಿಯಾದ ನಾಮಾನನು ತನ್ನ ಯಜಮಾನನ ಮುಂದೆ ದೊಡ್ಡವನಾಗಿಯೂ ಘನವುಳ್ಳವನಾಗಿಯೂ ಇದ್ದನು. ಕರ್ತನು ಅವನಿಂದ ಅರಾಮ್ಯರಿಗೆ ಬಿಡುಗಡೆಯನ್ನು ಉಂಟುಮಾಡಿದ್ದನು; ಇದಲ್ಲದೆ ಅವನು ಪರಾಕ್ರಮ ಶಾಲಿಯಾಗಿದ್ದನು. ಆದರೆ ಅವನು ಕುಷ್ಠರೋಗಿಯಾ ಗಿದ್ದನು.
- Jeremiah 27:6–8 ಯೆರೆಮೀಯ 27:6–8ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ. ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು. ಬಾಬೆಲಿನ ಅರಸನಾದ ನೆಬೂಕ ದ್ನೇಚ್ಚರನಿಗೆ ಸೇವೆಮಾಡದೆ ಬಾಬೆಲಿನ ಅರಸನ ನೊಗಕ್ಕೆ ತನ್ನ ಕುತ್ತಿಗೆಯನ್ನು ಕೊಡದೆ ಇರುವ ಜನಾಂಗವೂ ರಾಜ್ಯವೂ ಯಾವದೋ ಆ ಜನಾಂಗವನ್ನು ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಇವನ ಕೈಯಿಂದ ಅವುಗಳನ್ನು ನಾಶಮಾಡಿಬಿಡುವ ವರೆಗೆ ದಂಡಿಸುವೆನೆಂದು ಕರ್ತನು ಅನ್ನುತ್ತಾನೆ.