Psalms · chapter 144 · verse 13
Psalm 144:13 in Kannada
ನಮ್ಮ ಉಗ್ರಾಣಗಳು ತುಂಬಿ ನಾನಾ ವಿಧವಾದ ಪದಾರ್ಥಗಳನ್ನು ಹಂಚಲಿ; ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಬೀದಿಗಳಲ್ಲಿ ಹೆಚ್ಟಲಿ.
Namma ugraanagalu tumbi naanaa vidhavaada padaarthagalannu hanchali; namma kurimandegalu sahasra sahasravaagi namma beedigalalli hechtali.
Psalm 144:13 in English
- King James Version (KJV)
- [That] our garners [may be] full, affording all manner of store: [that] our sheep may bring forth thousands and ten thousands in our streets:
- World English Bible (WEB)
- Our barns are full, filled with all kinds of provision. Our sheep produce thousands and ten thousands in our fields.
- American Standard Version (ASV)
- [When] our garners are full, affording all manner of store, [And] our sheep bring forth thousands and ten thousands in our fields;
- Bible in Basic English (BBE)
- Our store-houses are full of all good things; and our sheep give birth to thousands and ten thousands in our fields.
- Darby Translation (DBY)
- Our granaries full, affording all manner of store; our sheep bringing forth thousands, ten thousands in our pastures;
- Webster's Bible (WBS)
- [That] our granaries [may be] full, affording all manner of store; [that] our sheep may bring forth thousands and ten thousands in our streets:
- Young's Literal Translation (YLT)
- Our garners [are] full, bringing out from kind to kind, Our flocks are bringing forth thousands, Ten thousands in our out-places,
Read in context
- 11ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
- 12ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ.
- 13ನಮ್ಮ ಉಗ್ರಾಣಗಳು ತುಂಬಿ ನಾನಾ ವಿಧವಾದ ಪದಾರ್ಥಗಳನ್ನು ಹಂಚಲಿ; ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಬೀದಿಗಳಲ್ಲಿ ಹೆಚ್ಟಲಿ.
- 14ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
- 15ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
Cross references
- Deuteronomy 7:13–14 ಧರ್ಮೋಪದೇಶಕಾಂಡ 7:13–14ಆತನು ನಿನ್ನನ್ನು ಪ್ರೀತಿಮಾಡಿ ಆಶೀರ್ವದಿಸಿ ಹೆಚ್ಚಿಸುವನು; ನಿನಗೆ ಕೊಡುತ್ತೇನೆಂದು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನ ಗರ್ಭದ ಫಲ ವನ್ನೂ ಭೂಮಿಯ ಹುಟ್ಟುವಳಿಯನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಪಶುಗಳನ್ನೂ ನಿನ್ನ ಕುರಿಮಂದೆಗಳನ್ನೂ ಆಶೀರ್ವದಿಸುವನು. ಎಲ್ಲಾ ಜನಗಳಿಗಿಂತಲೂ ನೀನು ಆಶೀರ್ವದಿಸಲ್ಪಟ್ಟವನಾ ಗಿರುವಿ; ನಿಮ್ಮೊಳಗೆ ಸ್ತ್ರೀಯರಲ್ಲಾಗಲಿ ಪುರುಷರ ಲ್ಲಾಗಲಿ ಪಶುಗಳಲ್ಲಾಗಲಿ ಬಂಜೆತನವು ಇರುವದಿಲ್ಲ.
- Deuteronomy 28:8 ಧರ್ಮೋಪದೇಶಕಾಂಡ 28:8ನಿನ್ನ ಕಣಜಗಳಲ್ಲಿಯೂ ನೀನು ಕೈಹಾಕುವ ಎಲ್ಲಾದರಲ್ಲಿಯೂ ನಿನಗೆ ಆಶೀರ್ವಾದ ಬರುವ ಹಾಗೆ ಕರ್ತನು ಅಪ್ಪಣೆಕೊಡುವನು; ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ಆಶೀರ್ವಾದ ಕೊಡುವನು.
- Leviticus 26:10 ಯಾಜಕಕಾಂಡ 26:10ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ.
- Deuteronomy 28:4 ಧರ್ಮೋಪದೇಶಕಾಂಡ 28:4ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
- Psalm 107:37–38 ಕೀರ್ತನೆಗಳು 107:37–38ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು. ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
- Leviticus 26:5 ಯಾಜಕಕಾಂಡ 26:5ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.
- Malachi 3:10 ಮಲಾಕಿಯ 3:10ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Deuteronomy 8:3 ಧರ್ಮೋಪದೇಶಕಾಂಡ 8:3ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.
- Luke 12:16–20 ಲೂಕನು 12:16–20ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆ--ಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು. ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು-- ನಾನು ಹೀಗೆ ಮಾಡುತ್ತೇನೆ; ನನ್ನ ಕಣಜಗಳನ್ನು ಕೆಡವಿ ದೊಡ್ಡವನ್ನಾಗಿ ಕಟ್ಟಿಸುತ್ತೇನೆ; ಅಲ್ಲಿ ನನ್ನ ಎಲ್ಲಾ ಬೆಳೆಯನ್ನೂ ನನ್ನ ಸರಕುಗಳನ್ನೂ ಕೂಡಿಸಿಟು ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು. ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Genesis 30:29–31 ಆದಿಕಾಂಡ 30:29–31ಅದಕ್ಕೆ ಯಾಕೋಬನು ಅವನಿಗೆ--ನಾನು ನಿನಗೆ ಮಾಡಿದ ಸೇವೆಯನ್ನೂ ನಿನ್ನ ಮಂದೆಯು ನನ್ನ ಬಳಿಯಲ್ಲಿ ಹೇಗೆ ಇತ್ತೆಂಬದ್ದನ್ನೂ ನೀನು ಬಲ್ಲೆ. ನಾನು ಬರುವದಿಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ; ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಕರ್ತನು ನಿನ್ನನ್ನು ಆಶೀರ್ವದಿಸಿದ್ದಾನೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ ಅಂದನು. ಅದಕ್ಕೆ ಲಾಬಾನನು--ನಿನಗೆ ನಾನು ಏನು ಕೊಡಲಿ ಅಂದಾಗ ಯಾಕೋಬನು--ಏನೂ ಕೊಡ ಬೇಡ, ಇದು ಮಾತ್ರ ನೀನು ನನಗಾಗಿ ಮಾಡಿದರೆ ನಾನು ತಿರಿಗಿ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು;