Psalms · chapter 107 · verse 37
Psalm 107:37 in Kannada
ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
Hola galannu bitti, draakshaalategalannu neduvaru; avu huttuvaliya phalavannu koduvavu.
Psalm 107:37 in English
- King James Version (KJV)
- And sow the fields, and plant vineyards, which may yield fruits of increase.
- World English Bible (WEB)
- sow fields, plant vineyards, and reap the fruits of increase.
- American Standard Version (ASV)
- And sow fields, and plant vineyards, And get them fruits of increase.
- Bible in Basic English (BBE)
- And put seed in the fields and make vine-gardens, to give them fruit.
- Darby Translation (DBY)
- And sow fields, and plant vineyards, which yield fruits of increase;
- Webster's Bible (WBS)
- And sow the fields, and plant vineyards, which may yield fruits of increase.
- Young's Literal Translation (YLT)
- And they sow fields, and plant vineyards, And they make fruits of increase.
Read in context
- 35ಆತನು ಅರಣ್ಯವನ್ನು ನೀರಿನ ಕೆರೆಯಾಗಿಯೂ ಒಣ ಭೂಮಿ ಯನ್ನು ನೀರಿನ ಬುಗ್ಗೆಗಳಾಗಿಯೂ ಮಾರ್ಪಡಿಸುತ್ತಾನೆ.
- 36ಅಲ್ಲಿ ಹಸಿದವರನ್ನು ವಾಸಿಸಮಾಡುತ್ತಾನೆ; ಆಗ ಅವರು ವಾಸಿಸುವ ಪಟ್ಟಣವನ್ನು ಸ್ಥಾಪಿಸಿ,
- 37ಹೊಲ ಗಳನ್ನು ಬಿತ್ತಿ, ದ್ರಾಕ್ಷಾಲತೆಗಳನ್ನು ನೆಡುವರು; ಅವು ಹುಟ್ಟುವಳಿಯ ಫಲವನ್ನು ಕೊಡುವವು.
- 38ಆತನು ಅವರನ್ನು ಆಶೀರ್ವದಿಸಿದ್ದರಿಂದ ಅವರು ಬಹಳವಾಗಿ ಹೆಚ್ಚುತ್ತಾರೆ; ಅವರ ದನಗಳನ್ನು ಸಹ ಆತನು ಕಡಿಮೆ ಮಾಡುವದಿಲ್ಲ.
- 39ತಿರಿಗಿ ಅವರು ಕಡಿಮೆಯಾಗಿ ಕೇಡು ಚಿಂತೆಗಳ ಸಂಕಟದಿಂದ ಕುಗ್ಗುತ್ತಾರೆ.
Cross references
- 1 Corinthians 3:7 1 ಕೊರಿಂಥದವರಿಗೆ 3:7ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು.
- 2 Corinthians 9:10 2 ಕೊರಿಂಥದವರಿಗೆ 9:10ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರ ವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ನೀತಿಯಿಂದಾದ ಕಾರ್ಯಗಳ ಫಲಗಳನ್ನು ವೃದ್ಧಿಪಡಿಸುವನು.)
- Isaiah 37:30 ಯೆಶಾಯ 37:30ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು.
- Jeremiah 29:5 ಯೆರೆಮೀಯ 29:5ಮನೆಗಳನ್ನು ಕಟ್ಟಿ ವಾಸಮಾಡಿರಿ; ತೋಟಗಳನ್ನು ನೆಟ್ಟು ಅವುಗಳ ಫಲವನ್ನು ತಿನ್ನಿರಿ; ಹೆಂಡತಿಯರನ್ನು ತಕ್ಕೊಂಡು ಕುಮಾರ ಕುಮಾರ್ತೆಯರನ್ನು ಪಡೆಯಿರಿ;
- Zechariah 8:12 ಜೆಕರ್ಯ 8:12ಬೀಜವುವೃದ್ಧಿಯಾಗುವದು; ದ್ರಾಕ್ಷೇ ಬಳ್ಳಿ ತನ್ನ ಫಲವನ್ನು ಕೊಡುವದು; ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವದು; ಆಕಾಶ ಗಳು ತಮ್ಮ ಮಂಜನ್ನು ಕೊಡುವವು; ಈ ಜನರಲ್ಲಿ ಉಳಿದವರು ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳು ವಂತೆ ಮಾಡುವೆನು.
- Haggai 1:10–11 ಹಗ್ಗಾಯ 1:10–11ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ. ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು.
- Ezekiel 28:26 ಯೆಹೆಜ್ಕೇಲನು 28:26ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.
- Genesis 26:12 ಆದಿಕಾಂಡ 26:12ಇದಲ್ಲದೆ ಇಸಾಕನು ಆ ದೇಶದಲ್ಲಿ ಬಿತ್ತಿದ ವರುಷದಲ್ಲಿಯೇ ನೂರರಷ್ಟು ಫಲವನ್ನು ಹೊಂದಿ ದನು. ಕರ್ತನು ಅವನನ್ನು ಆಶೀರ್ವದಿಸಿದನು.
- Acts 14:17 ಅಪೊಸ್ತಲರ ಕೃತ್ಯಗಳು 14:17ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು.
- Joel 1:10–12 ಯೋವೇಲ 1:10–12ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ. ಓ ಒಕ್ಕಲಿಗರೇ, ನಾಚಿಕೆಪಡಿರಿ; ಗೋಧಿ, ಜವೆ ಗೋಧಿಗಳ ನಿಮಿತ್ತ ದ್ರಾಕ್ಷೇ ತೋಟದವರೇ, ಗೋಳಾ ಡಿರಿ; ಹೊಲದ ಪೈರು ನಾಶವಾಯಿತು. ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.
- Haggai 1:5–6 ಹಗ್ಗಾಯ 1:5–6ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.
- Psalm 65:9–13 ಕೀರ್ತನೆಗಳು 65:9–13ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ. ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ. ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ. ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ. ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.