Psalms · chapter 144 · verse 2
Psalm 144:2 in Kannada
ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
Aatanu nanna olletanavoo nanna koteyoo nanna ettaravaada durgavoo nannannu tappisuvavanoo nanna bharavasavoo nanna guraaniyoo nanna janarannu nanage vashamaaduvaatanoo aagiddaane.
Psalm 144:2 in English
- King James Version (KJV)
- My goodness, and my fortress; my high tower, and my deliverer; my shield, and [he] in whom I trust; who subdueth my people under me.
- World English Bible (WEB)
- my loving kindness, my fortress, my high tower, my deliverer, my shield, and he in whom I take refuge, who subdues my people under me.
- American Standard Version (ASV)
- My lovingkindness, and my fortress, My high tower, and my deliverer; My shield, and he in whom I take refuge; Who subdueth my people under me.
- Bible in Basic English (BBE)
- He is my strength, and my Rock; my high tower, and my saviour; my keeper and my hope: he gives me authority over my people.
- Darby Translation (DBY)
- My mercy and my fortress, my high tower and my deliverer, my shield and he in whom I trust, who subdueth my people under me!
- Webster's Bible (WBS)
- My goodness, and my fortress; my high tower, and my deliverer; my shield, and [he] in whom I trust; who subdueth my people under me.
- Young's Literal Translation (YLT)
- My kind one, and my bulwark, My tower, and my deliverer, My shield, and in whom I have trusted, Who is subduing my people under me!
Read in context
- 1ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವನ್ನು, ಕಲಿಸಿದ ನನ್ನ ಬಲವಾಗಿರುವ ಕರ್ತನಿಗೆ ಸ್ತೋತ್ರವಾಗಲಿ.
- 2ಆತನು ನನ್ನ ಒಳ್ಳೇತನವೂ ನನ್ನ ಕೋಟೆಯೂ ನನ್ನ ಎತ್ತರವಾದ ದುರ್ಗವೂ ನನ್ನನ್ನು ತಪ್ಪಿಸುವವನೂ ನನ್ನ ಭರವಸವೂ ನನ್ನ ಗುರಾಣಿಯೂ ನನ್ನ ಜನರನ್ನು ನನಗೆ ವಶಮಾಡುವಾತನೂ ಆಗಿದ್ದಾನೆ.
- 3ಕರ್ತನೇ, ನೀನು ಮನುಷ್ಯನನ್ನು ತಿಳುಕೊಳ್ಳುವ ಹಾಗೆ ಅವನು ಎಷ್ಟರವನು? ನೀನು ಅವನನ್ನು ಲಕ್ಷಿಸುವ ಹಾಗೆ ನರಪುತ್ರನು ಎಷ್ಟರವನು?
- 4ಮನುಷ್ಯನು ವ್ಯರ್ಥತೆಗೆ ಸಮಾನನಾಗಿದ್ದಾನೆ; ಅವನ ದಿವಸಗಳು ಕಳೆದುಹೋಗುವ ನೆರಳಿನ ಹಾಗಿವೆ.
Cross references
- 2 Samuel 22:2–3 2 ಸಮುವೇಲನು 22:2–3ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ. ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.
- Psalm 91:2 ಕೀರ್ತನೆಗಳು 91:2ನನ್ನ ಆಶ್ರಯವೂ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದು ನಾನು ಕರ್ತನಿಗೆ ಹೇಳುತ್ತೇನೆ.
- Psalm 18:2 ಕೀರ್ತನೆಗಳು 18:2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.
- Psalm 59:9 ಕೀರ್ತನೆಗಳು 59:9ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ.
- Psalm 18:47 ಕೀರ್ತನೆಗಳು 18:47ನನಗೋಸ್ಕರ ಮುಯ್ಯಿಗೆ ಮುಯ್ಯಿತೀರಿಸುವಾತನೂ ಜನರನ್ನು ನನ್ನ ಕೆಳಗೆ ಅಧೀನಮಾಡುವಾತನೂ ದೇವರು ತಾನೇ.
- Psalm 84:9 ಕೀರ್ತನೆಗಳು 84:9ನಮ್ಮ ಗುರಾಣಿಯಾಗಿರುವ ಓ ದೇವರೇ, ನೋಡು; ನಿನ್ನ ಅಭಿಷಿಕ್ತನ ಮುಖವನ್ನು ದೃಷ್ಟಿಸು.
- Jeremiah 16:19 ಯೆರೆಮೀಯ 16:19ಓ ಕರ್ತನೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಅನ್ಯರು ನಿನ್ನ ಬಳಿಗೆ ಬಂದು--ನಿಶ್ಚಯ ವಾಗಿ ನಮ್ಮ ತಂದೆಗಳು ಸುಳ್ಳನ್ನು ವ್ಯರ್ಥವನ್ನು ಲಾಭ ವಿಲ್ಲದವುಗಳನ್ನು ಬಾಧ್ಯವಾಗಿ ಹೊಂದಿದ್ದಾರೆ.
- Psalm 110:3 ಕೀರ್ತನೆಗಳು 110:3ಪರಿಶುದ್ಧ ತೆಯ ಸೌಂದರ್ಯಗಳಲ್ಲಿ ಉದಯದ ಗರ್ಭದಲ್ಲಿಂದ ನಿನ್ನ ಜನರು ಬಲದ ದಿವಸದಲ್ಲಿ ಸ್ವಇಷ್ಟವುಳ್ಳವ ರಾಗಿರುವರು; ಇಬ್ಬನಿಯಂತೆ ನಿನ್ನ ಯೌವನವು ನಿನಗೆ ಇರುವದು.
- 2 Samuel 22:40–48 2 ಸಮುವೇಲನು 22:40–48ನೀನು ಯುದ್ದಕ್ಕೆ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿದಿ; ನನ್ನ ಎದು ರಾಳಿಗಳನ್ನು ನನ್ನ ಕೆಳಗೆ ಅಧೀನಮಾಡಿದಿ. ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ. ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ. ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು. ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು. ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು. ದೇಶಾಂತದವರು ಬಾಡಿಹೋಗುವರು; ತಮ್ಮನ್ನು ಮುಚ್ಚಿಕೊಂಡ ಸ್ಥಳ ಗಳಿಂದ ನಡುಗುತ್ತಾ ಬರುವರು. ಕರ್ತನು ಜೀವಿತ ನಾಗಿದ್ದಾನೆ; ನನ್ನ ಬಂಡೆಗೆ ಸ್ತುತಿಯಾಗಲಿ; ನನ್ನ ರಕ್ಷಣೆಯ ಬಂಡೆಯಾದ ದೇವರು ಉನ್ನತನಾಗಲಿ. ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ಜನರನ್ನು ನನಗೆ ಅಧೀನಪಡಿಸುತ್ತಾನೆ.