Psalms · chapter 147 · verse 6
Psalm 147:6 in Kannada
ಕರ್ತನು ಸಾತ್ವಿಕರನ್ನು ಎತ್ತುತ್ತಾನೆ. ದುಷ್ಟರನ್ನು ನೆಲಕ್ಕೆ ಹಾಕುತ್ತಾನೆ.
Kartanu saatvikarannu ettuttaane. Dushtarannu nelakke haakuttaane.
Psalm 147:6 in English
- King James Version (KJV)
- The LORD lifteth up the meek: he casteth the wicked down to the ground.
- World English Bible (WEB)
- The LORD upholds the humble. He brings the wicked down to the ground.
- American Standard Version (ASV)
- Jehovah upholdeth the meek: He bringeth the wicked down to the ground.
- Bible in Basic English (BBE)
- The Lord gives help to the poor in spirit; but he sends sinners down in shame.
- Darby Translation (DBY)
- Jehovah lifteth up the meek; he abaseth the wicked to the earth.
- Webster's Bible (WBS)
- The LORD lifteth up the meek: he casteth the wicked down to the ground.
- Young's Literal Translation (YLT)
- Jehovah is causing the meek to stand, Making low the wicked unto the earth.
Read in context
- 4ಆತನು ನಕ್ಷತ್ರಗಳ ಸಂಖ್ಯೆಯನ್ನು ಹೇಳು ತ್ತಾನೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆ ಯುತ್ತಾನೆ.
- 5ನಮ್ಮ ಕರ್ತನು ದೊಡ್ಡವನೂ, ಪರಾ ಕ್ರಮಿಯೂ, ವಿವೇಕಕ್ಕೆ ಎಣೆಯಿಲ್ಲ.
- 6ಕರ್ತನು ಸಾತ್ವಿಕರನ್ನು ಎತ್ತುತ್ತಾನೆ. ದುಷ್ಟರನ್ನು ನೆಲಕ್ಕೆ ಹಾಕುತ್ತಾನೆ.
- 7ಕರ್ತನಿಗೆ ಸ್ತೋತ್ರದಿಂದ ಹಾಡಿರಿ; ನಮ್ಮ ದೇವ ರನ್ನು ಕಿನ್ನರಿಯಿಂದ ಕೀರ್ತಿಸಿರಿ.
- 8ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
Cross references
- Psalm 25:9 ಕೀರ್ತನೆಗಳು 25:9ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.
- Psalm 146:8–9 ಕೀರ್ತನೆಗಳು 146:8–9ಕರ್ತನು ಸೆರೆಯವರನ್ನು ಬಿಡಿಸುತ್ತಾನೆ. ಕರ್ತನು ಕುರುಡರ ಕಣ್ಣುಗಳನ್ನು ತೆರೆಯುತ್ತಾನೆ; ಕರ್ತನು ದೀನರನ್ನು ಎತ್ತು ತ್ತಾನೆ; ಕರ್ತನು ನೀತಿವಂತರನ್ನು ಪ್ರೀತಿಮಾಡುತ್ತಾನೆ; ಕರ್ತನು ಪರದೇಶಸ್ಥರನ್ನು ಕಾಪಾಡುತ್ತಾನೆ; ದಿಕ್ಕಿಲ್ಲದ ವರನ್ನೂ ವಿಧವೆಯರನ್ನೂ ಪರಾಮರಿಸುತ್ತಾನೆ; ಆದರೆ ದುಷ್ಟರ ಮಾರ್ಗವನ್ನು ಡೊಂಕುಮಾಡುತ್ತಾನೆ.ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.
- 1 Peter 5:6 1 ಪೇತ್ರನು 5:6ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.
- James 4:10 ಯಾಕೋಬನು 4:10ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
- Zephaniah 2:3 ಚೆಫನ್ಯ 2:3ಆತನ ನ್ಯಾಯತೀರ್ಪುಗಳನ್ನು ಮಾಡುವ ಲೋಕದ ದೀನರೆಲ್ಲರೇ, ಕರ್ತನನ್ನು ಹುಡುಕಿರಿ, ನೀತಿ ಯನ್ನು ಹುಡುಕಿರಿ, ವಿನಯವನ್ನು ಹುಡುಕಿರಿ; ಒಂದು ವೇಳೆ ಕರ್ತನ ಕೋಪದ ದಿನದಲ್ಲಿ ಮರೆಯಾಗುವಿರಿ.
- Psalm 145:14 ಕೀರ್ತನೆಗಳು 145:14ಕರ್ತನು ಬೀಳುವವರೆಲ್ಲರನ್ನು ಉದ್ಧಾರಮಾಡುತ್ತಾನೆ; ತಗ್ಗಿಸಿ ಕೊಳ್ಳುವವರೆಲ್ಲರನ್ನು ಎತ್ತುತ್ತಾನೆ.
- Psalm 149:4 ಕೀರ್ತನೆಗಳು 149:4ಕರ್ತನು ತನ್ನ ಜನರಲ್ಲಿ ಇಷ್ಟಪಡುತ್ತಾನೆ; ದೀನರನ್ನು ರಕ್ಷಣೆಯಿಂದ ಅಲಂಕರಿಸುತ್ತಾನೆ.
- 1 Samuel 2:8 1 ಸಮುವೇಲನು 2:8ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುವಾ ತನೂ ಭಿಕ್ಷುಕನನ್ನು ತಿಪ್ಪೆಗುಂಡಿಯಿಂದ ತೆಗೆದು ಉನ್ನತ ಮಾಡುವಾತನೂ ಆಗಿದ್ದಾನೆ. ಅವರನ್ನು ಪ್ರಧಾ ನರ ಮಧ್ಯದಲ್ಲಿ ಕೂಡ್ರಿಸುತ್ತಾನೆ; ಘನತೆಯ ಸಿಂಹಾ ಸನವನ್ನು ಬಾಧ್ಯವಾಗಿ ಕೊಡುತ್ತಾನೆ. ಯಾಕಂದರೆ ಭೂಮಿಯ ಆಧಾರಸ್ತಂಭಗಳು ಕರ್ತನದಾಗಿವೆ, ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾನೆ.
- Psalm 73:18–19 ಕೀರ್ತನೆಗಳು 73:18–19ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ.
- Psalm 55:23 ಕೀರ್ತನೆಗಳು 55:23ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- Matthew 5:5 ಮತ್ತಾಯನು 5:5ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.
- 2 Peter 2:4–9 2 ಪೇತ್ರನು 2:4–9ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು. ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು; ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು. ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು. ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು. ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.