Psalms · chapter 147 · verse 8
Psalm 147:8 in Kannada
ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
Aatanu aakaashavannu modagalinda muchchuttaane; bhoomige male yannu siddhamaaduttaane, bettagalalli hullannu belesuttaane.
Psalm 147:8 in English
- King James Version (KJV)
- Who covereth the heaven with clouds, who prepareth rain for the earth, who maketh grass to grow upon the mountains.
- World English Bible (WEB)
- who covers the sky with clouds, who prepares rain for the earth, who makes grass grow on the mountains.
- American Standard Version (ASV)
- Who covereth the heavens with clouds, Who prepareth rain for the earth, Who maketh grass to grow upon the mountains.
- Bible in Basic English (BBE)
- By his hand the heaven is covered with clouds and rain is stored up for the earth; he makes the grass tall on the mountains.
- Darby Translation (DBY)
- Who covereth the heavens with clouds, who prepareth rain for the earth, who maketh grass to grow upon the mountains;
- Webster's Bible (WBS)
- Who covereth the heaven with clouds, who prepareth rain for the earth, who maketh grass to grow upon the mountains.
- Young's Literal Translation (YLT)
- Who is covering the heavens with clouds, Who is preparing for the earth rain, Who is causing grass to spring up [on] mountains,
Read in context
- 6ಕರ್ತನು ಸಾತ್ವಿಕರನ್ನು ಎತ್ತುತ್ತಾನೆ. ದುಷ್ಟರನ್ನು ನೆಲಕ್ಕೆ ಹಾಕುತ್ತಾನೆ.
- 7ಕರ್ತನಿಗೆ ಸ್ತೋತ್ರದಿಂದ ಹಾಡಿರಿ; ನಮ್ಮ ದೇವ ರನ್ನು ಕಿನ್ನರಿಯಿಂದ ಕೀರ್ತಿಸಿರಿ.
- 8ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.
- 9ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.
- 10ಆತನು ಕುದು ರೆಯ ಶಕ್ತಿಯಲ್ಲಿ ಸಂತೋಷಿಸುವದಿಲ್ಲ; ಮನುಷ್ಯನ ತೊಡೆಯಬಲವನ್ನು ಮೆಚ್ಚುವದಿಲ್ಲ.
Cross references
- Job 5:10 ಯೋಬನು 5:10ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ;
- Psalm 65:9–13 ಕೀರ್ತನೆಗಳು 65:9–13ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ. ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ. ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ. ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ. ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.
- Matthew 5:45 ಮತ್ತಾಯನು 5:45ಇದರಿಂದ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾ ಗುವಿರಿ; ಯಾಕಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.
- Genesis 9:14 ಆದಿಕಾಂಡ 9:14ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು.
- Job 26:8–9 ಯೋಬನು 26:8–9ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು; ಸಿಂಹಾ ಸನದ ಮುಖವನ್ನು ಹಿಂದೆಗೆಯುತ್ತಾನೆ; ಅದರ ಮೇಲೆ ತನ್ನ ಮೇಘವನ್ನು ವಿಸ್ತರಿಸುತ್ತಾನೆ.
- Acts 14:17 ಅಪೊಸ್ತಲರ ಕೃತ್ಯಗಳು 14:17ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು.
- Psalm 104:13–14 ಕೀರ್ತನೆಗಳು 104:13–14ಬೆಟ್ಟಗಳಿಗೆ ತನ್ನ ಉಪ್ಪರಿಗೆ ಗಳೊಳಗಿಂದ ನೀರು ಹಾಕುತ್ತಾನೆ; ತನ್ನ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ. ಆತನು ಪಶುಗಳಿಗೋಸ್ಕರ ಹುಲ್ಲನ್ನೂ ಮನುಷ್ಯನ ಸೇವೆ ಗೋಸ್ಕರ ಪಲ್ಯಗಳನ್ನೂ ಮೊಳಿಸುತ್ತಾನೆ; ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾನೆ.
- Job 38:24–27 ಯೋಬನು 38:24–27ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು.
- Job 36:27–33 ಯೋಬನು 36:27–33ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ. ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ. ಮೋಡದ ವಿಸ್ತೀರ್ಣತೆಯನ್ನೂ ಆತನ ಗುಡಾರದ ಶಬ್ಧವನ್ನೂ ತಿಳುಕೊಳ್ಳುವವನಾರು? ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ. ಅವುಗಳಿಂದ ಜನಗಳಿಗೆ ಆತನು ನ್ಯಾಯ ತೀರಿಸುತ್ತಾನೆ; ಸಮೃದ್ಧಿಯಾಗಿ ಆತನು ಆಹಾರ ಕೊಡುತ್ತಾನೆ. ಮೇಘಗಳಿಂದ ಬೆಳಕನ್ನು ಮುಚ್ಚು ತ್ತಾನೆ;ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ. ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ.
- Isaiah 5:6 ಯೆಶಾಯ 5:6ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
- Amos 5:7–8 ಆಮೋಸ 5:7–8ನ್ಯಾಯವನ್ನು ಮಾಚಿಪತ್ರೆಗೆ ತಿರಿಗಿಸುವವರೇ, ನೀತಿಯನ್ನು ಭೂಮಿಯಲ್ಲಿ ಬಿಡುವವರೇ, ಏಳು ನಕ್ಷತ್ರಗಳನ್ನೂ ಮೃಗಶಿರವನ್ನೂ ಉಂಟು ಮಾಡಿ ಮರಣದ ನೆರಳನ್ನು ಉದಯಕ್ಕೆ ಬದಲಿಸಿ, ಹಗಲನ್ನು ರಾತ್ರಿಯಾಗುವ ಹಾಗೆ ಕತ್ತಲು ಮಾಡಿ ಸಮುದ್ರದ ನೀರನ್ನು ಬರಮಾಡಿ ಅವುಗಳನ್ನು ಭೂಮಿಯ ಮೇಲೆ ಸುರಿಸುವ ಕರ್ತನೆಂಬ ಹೆಸರುಳ್ಳಾತನನ್ನೇ ಹುಡು ಕಿರಿ.
- James 5:17–18 ಯಾಕೋಬನು 5:17–18ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ. ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು.