Psalms · chapter 149 · verse 7
Psalm 149:7 in Kannada
ಜನಾಂಗಗಳಲ್ಲಿ ಮುಯ್ಯಿಗೆಮುಯ್ಯನ್ನೂ ಪ್ರಜೆ ಗಳಲ್ಲಿ ಶಿಕ್ಷೆಗಳನ್ನೂ ಮಾಡಲಿ.
Janaangagalalli muyyigemuyyannoo praje galalli shikshegalannoo maadali.
Psalm 149:7 in English
- King James Version (KJV)
- To execute vengeance upon the heathen, [and] punishments upon the people;
- World English Bible (WEB)
- to execute vengeance on the nations, and punishments on the peoples;
- American Standard Version (ASV)
- To execute vengeance upon the nations, And punishments upon the peoples;
- Bible in Basic English (BBE)
- To give the nations the reward of their sins, and the peoples their punishment;
- Darby Translation (DBY)
- To execute vengeance against the nations, [and] punishment among the peoples;
- Webster's Bible (WBS)
- To execute vengeance upon the heathen, [and] punishments upon the people;
- Young's Literal Translation (YLT)
- To do vengeance among nations, Punishments among the peoples.
Read in context
- 5ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ.
- 6ಉನ್ನತ ದೇವರ ಸ್ತೋತ್ರಗಳು ಅವರ ಬಾಯಿಯ ಲ್ಲಿಯೂ ಇಬ್ಬಾಯಿ ಕತ್ತಿಯು ಅವರ ಕೈಯಲ್ಲಿಯೂ ಇರಲಿ.
- 7ಜನಾಂಗಗಳಲ್ಲಿ ಮುಯ್ಯಿಗೆಮುಯ್ಯನ್ನೂ ಪ್ರಜೆ ಗಳಲ್ಲಿ ಶಿಕ್ಷೆಗಳನ್ನೂ ಮಾಡಲಿ.
- 8ಅವರ ಅರಸುಗಳನ್ನು ಸಂಕೋಲೆಗಳಿಂದಲೂ ಅವರ ಘನವುಳ್ಳವರನ್ನು ಕಬ್ಬಿ ಣದ ಬೇಡಿಗಳಿಂದಲೂ ಬಂಧಿಸಲಿ;ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.
- 9ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.
Cross references
- Zechariah 14:17–19 ಜೆಕರ್ಯ 14:17–19ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
- Revelation 19:11–21 ಪ್ರಕಟನೆ 19:11–21ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ; ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು; ಆತನ ತಲೆಯ ಮೇಲೆ ಅನೇಕ ಕಿರೀಟಗಳು ಇದ್ದವು. ಬರೆಯಲ್ಪಟ್ಟ ಹೆಸರು ಆತನಿಗೆ ಇತ್ತು. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿದಿರಲಿಲ್ಲ. ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ. ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ. ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ. ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು. ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- 1 Samuel 15:2–3 1 ಸಮುವೇಲನು 15:2–3ಸೈನ್ಯ ಗಳ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲ್ಯರು ಐಗುಪ್ತದಿಂದ ಬರುವಾಗ ಅಮಾಲೇಕ್ಯರು ಅವರ ಮಾರ್ಗಕ್ಕೆ ಅಡ್ಡಗಟ್ಟಿದ್ದು ನಾನು ನೆನಸಿಕೊಂಡಿ ದ್ದೇನೆ. ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.
- 1 Samuel 15:18–23 1 ಸಮುವೇಲನು 15:18–23ಪಾಪಿಷ್ಠರಾದ ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿ ಅವರು ತೀರಿಹೋಗುವ ವರೆಗೂ ಅವರ ಸಂಗಡ ಯುದ್ಧಮಾಡಬೇಕೆಂದು ಕರ್ತನು ನಿನ್ನನ್ನು ಕಳುಹಿಸಿದನು. ಹೀಗಿರುವಾಗ ನೀನು ಯಾಕೆ ಕರ್ತನ ಮಾತಿಗೆ ವಿಧೇಯನಾಗದೆ ಕೊಳ್ಳೆಯ ಮೇಲೆ ಬಿದ್ದು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದಿ ಅಂದನು. ಆಗ ಸೌಲನು ಸಮುವೇಲನಿಗೆ--ಹೌದು, ನಾನು ಕರ್ತನ ಮಾತಿಗೆ ವಿಧೇಯನಾಗಿ, ಕರ್ತನು ನನ್ನನ್ನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರ ಅರಸನಾದ ಅಗಾಗನನ್ನು ಹಿಡಿದುಕೊಂಡು ಬಂದು ಅಮಾಲೇಕ್ಯರನ್ನು ಸಂಪೂರ್ಣ ನಾಶಮಾಡಿದೆನು. ಆದರೆ ಜನರು ನಿನ್ನ ದೇವರಾದ ಕರ್ತನಿಗೆ ಗಿಲ್ಗಾಲಿ ನಲ್ಲಿ ಬಲಿ ಕೊಡುವದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣ ವಾಗಿ ನಾಶಮಾಡಬೇಕೆಂದಿರುವ ಕುರಿ ಪಶುಗಳಲ್ಲಿ ಮೇಲ್ತರವಾದವುಗಳನ್ನು ಹಿಡುಕೊಂಡು ಬಂದರು ಅಂದನು. ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು. ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
- Numbers 31:2–3 ಅರಣ್ಯಕಾಂಡ 31:2–3ನೀನು ಮಿದ್ಯಾನ್ಯರ ಕಡೆಯಿಂದ ಇಸ್ರಾಯೇಲ್ ಮಕ್ಕಳ ಮುಯ್ಯನ್ನು ತೀರಿಸು, ತರು ವಾಯ ನಿನ್ನ ಜನರ ಸಂಗಡ ನೀನು ಕೂಡಿಸಲ್ಪಡುವಿ ಅಂದನು. ಆಗ ಮೋಶೆಯು ಜನರ ಸಂಗಡ ಮಾತ ನಾಡಿ--ನಿಮ್ಮೊಳಗಿಂದ ಮನುಷ್ಯರು ಯುದ್ಧಕ್ಕೆ ಸಿದ್ಧ ಮಾಡಿಕೊಳ್ಳಲಿ; ಅವರು ಮಿದ್ಯಾನ್ಯರಿಗೆ ವಿರೋಧವಾಗಿ ಹೋಗಿ ಕರ್ತನ ಮುಯ್ಯನ್ನು ಅವರಿಗೆ ತೀರಿಸ ಬೇಕು.
- Judges 5:23 ನ್ಯಾಯಸ್ಥಾಪಕರು 5:23ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
- Psalm 137:8–9 ಕೀರ್ತನೆಗಳು 137:8–9ಹಾಳಾಗಲಿಕ್ಕಿರುವ ಬಾಬೆಲಿನ ಮಗಳೇ, ನೀನು ನಮಗೆ ಮಾಡಿದ ಕಾರ್ಯಕ್ಕೆ ಪ್ರತೀಕಾರ ವನ್ನು ನಿನಗೆ ಸಲ್ಲಿಸುವವನು ಧನ್ಯನು.ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು. ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
- Zechariah 9:13–16 ಜೆಕರ್ಯ 9:13–16ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ. ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು. ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು. ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು.ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.