Psalms · chapter 137 · verse 8
Psalm 137:8 in Kannada
ಹಾಳಾಗಲಿಕ್ಕಿರುವ ಬಾಬೆಲಿನ ಮಗಳೇ, ನೀನು ನಮಗೆ ಮಾಡಿದ ಕಾರ್ಯಕ್ಕೆ ಪ್ರತೀಕಾರ ವನ್ನು ನಿನಗೆ ಸಲ್ಲಿಸುವವನು ಧನ್ಯನು.ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
Haalaagalikkiruva baabelina magale, neenu namage maadida kaaryakke prateekaara vannu ninage sallisuvavanu dhanyanu.ninna chikka koosugalannu hididu bandegala mele appalisi biduvavanu dhanyanu.
Psalm 137:8 in English
- King James Version (KJV)
- O daughter of Babylon, who art to be destroyed; happy [shall he be], that rewardeth thee as thou hast served us.
- World English Bible (WEB)
- Daughter of Babylon, doomed to destruction, he will be happy who repays you, as you have done to us.
- American Standard Version (ASV)
- O daughter of Babylon, that art to be destroyed, Happy shall he be, that rewardeth thee As thou hast served us.
- Bible in Basic English (BBE)
- O daughter of Babylon, whose fate is destruction; happy is the man who does to you what you have done to us.
- Darby Translation (DBY)
- Daughter of Babylon, who art to be laid waste, happy he that rendereth unto thee that which thou hast meted out to us.
- Webster's Bible (WBS)
- O daughter of Babylon, who art to be destroyed; happy [shall he be] , that rewardeth thee as thou hast served us.
- Young's Literal Translation (YLT)
- O daughter of Babylon, O destroyed one, O the happiness of him who repayeth to thee thy deed, That thou hast done to us.
Read in context
- 6ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದೆ ಯೆರೂಸ ಲೇಮನ್ನು ನನ್ನ ಮುಖ್ಯ ಸಂತೋಷಕ್ಕಿಂತ ಅದನ್ನು ಹೆಚ್ಚಿಸದಿದ್ದರೆ ನನ್ನ ನಾಲಿಗೆಯು ನನ್ನ ಅಂಗಳಕ್ಕೆ ಹತ್ತಲಿ.
- 7ಹಾಳುಮಾಡಿರಿ, ಅದರ ಅಸ್ತಿವಾರದ ವರೆಗೆ ಹಾಳು ಮಾಡಿರಿ ಎಂದು ಹೇಳಿದ ಎದೋಮಿನ ಮಕ್ಕಳನ್ನು ಯೆರೂಸಲೇಮಿನ ದಿವಸದಲ್ಲಿ ಕರ್ತನೇ, ಜ್ಞಾಪಕ ಮಾಡಿಕೋ.
- 8ಹಾಳಾಗಲಿಕ್ಕಿರುವ ಬಾಬೆಲಿನ ಮಗಳೇ, ನೀನು ನಮಗೆ ಮಾಡಿದ ಕಾರ್ಯಕ್ಕೆ ಪ್ರತೀಕಾರ ವನ್ನು ನಿನಗೆ ಸಲ್ಲಿಸುವವನು ಧನ್ಯನು.ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
- 9ನಿನ್ನ ಚಿಕ್ಕ ಕೂಸುಗಳನ್ನು ಹಿಡಿದು ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
Cross references
- Revelation 18:6 ಪ್ರಕಟನೆ 18:6ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.
- Isaiah 14:4–24 ಯೆಶಾಯ 14:4–24ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ. ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು. ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ. ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ. ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ. ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು. ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ; ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು. ಜನಾಂಗಗಳ ಅರಸುಗಳೆಲ್ಲಾ ಅವರೆಲ್ಲರೂ ವೈಭವ ದಿಂದ ತಮ್ಮತಮ್ಮ ಮನೆಗಳಲ್ಲಿ ಮಲಗುತ್ತಾರೆ. ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ. ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ. ಅವರು ಏಳದೆ ಇಲ್ಲವೆ ದೇಶವನ್ನು ವಶ ಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ ಅವರ ತಂದೆಗಳ ಅಪರಾಧದ ನಿಮಿತ್ತ ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ. ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಅದನ್ನು ಸಹ ಮುಳ್ಳುಹಂದಿಗೆ ಬಾಧ್ಯ ವಾಗಿಯೂ ನೀರಿನ ಕುಣಿಗಳಾಗಿಯೂ ಮಾಡಿ ನಾಶ ವೆಂಬ ಕಸಬರಿಕೆಯಿಂದ ಗುಡಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು.
- Jeremiah 25:12–14 ಯೆರೆಮೀಯ 25:12–14ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು. ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು. ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ.
- Isaiah 47:1–15 ಯೆಶಾಯ 47:1–15ಬಾಬೆಲಿನ ಕುಮಾರ್ತೆಯಾದ ಓ ಕನ್ಯಾ ಸ್ತ್ರೀಯೇ, ಕೆಳಕ್ಕೆ ಇಳಿದು ಬಂದು ದೂಳಿ ನಲ್ಲಿ ಕುಳಿತುಕೋ, ಓ ಕಸ್ದೀಯರ ಕುಮಾರಿಯೇ ಸಿಂಹಾಸನರಹಿತಳಾಗಿ ನೆಲದ ಮೇಲೆ ಕುಳಿತುಕೋ. ಯಾಕಂದರೆ ಇನ್ನು ಮೇಲೆ ನೀನು ಕೋಮಲೆ ಮತ್ತು ನಾಜೂಕಾದವಳು ಎಂದು ಕರೆಯಲ್ಪಡುವದಿಲ್ಲ. ಬೀಸುವ ಕಲ್ಲನ್ನು ಹಿಡಿದು ಹಿಟ್ಟನ್ನು ಬೀಸು, ಮುಸುಕನ್ನು ತೆಗೆದುಹಾಕಿ ನಿನ್ನ ಕಾಲನ್ನು ಬರಿದುಮಾಡಿ, ತೊಡೆಯನ್ನು ಮುಚ್ಚದೆ ನದಿಗಳನ್ನು ಹಾದುಹೋಗು. ನಿನ್ನ ಬೆತ್ತಲೆತನವು ಮುಚ್ಚಲ್ಪಡದೇ ಇದ್ದದರಿಂದ ನೀನು ನಾಚಿಕೆಗೆ ಈಡಾಗುವಿ, ನಾನು ನಿನ್ನನ್ನು ಮನುಷ್ಯನಂತೆ ಸಂದಿಸದೆ ನಿನಗೆ ಮುಯ್ಯಿ ತೀರಿಸುವೆನು. ನಮ್ಮ ವಿಮೋಚಕನಿಗಾದರೋ, ಸೈನ್ಯಗಳ ಕರ್ತನು ಎಂಬದೇ ಆತನ ಹೆಸರು, ಆತನೇ ಇಸ್ರಾಯೇಲಿನ ಪರಿಶುದ್ಧನು. ಓ ಕಸ್ದೀಯರ ಕುಮಾರಿಯೇ, ಮೌನ ವಾಗಿ ಕುಳಿತುಕೋ, ಕತ್ತಲೊಳಗೆ ಹೋಗು; ಯಾಕಂ ದರೆ ಇನ್ನು ಮೇಲೆ ನೀನು ರಾಜ್ಯಗಳ ರಾಣಿ ಎಂದು ಕರೆಯಲ್ಪಡುವದಿಲ್ಲ. ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ. ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ. ನಾನೇ ಇರುವವಳು ನನ್ನ ಹೊರತು ಇನ್ನು ಯಾರೂ ಇಲ್ಲ. ನಾನು ವಿಧವೆಯಾಗಿ ಕೂತುಕೊಳ್ಳು ವದಿಲ್ಲ; ಪುತ್ರಶೋಕವನ್ನು ಅನುಭವಿಸುವದಿಲ್ಲ ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿ ಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು. ಒಂದೇ ದಿನದೊಳಗೆ ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವಾ ಸ್ಥಿತಿಯು ಇವೆರಡೂ ನಿನಗೆ ಬರುವವು; ನಿನ್ನ ಮಂತ್ರಗಳು ಬಹಳವಾಗಿರುವದ ರಿಂದಲೂ ನಿನ್ನ ಮಾಟಗಳು ಹೆಚ್ಚಾಗಿರುವದರಿಂದಲೂ ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವವು. ನೀನು ನಿನ್ನ ಕೆಟ್ಟತನದಲ್ಲಿ ನಂಬಿಕೆಯಿಟ್ಟು ನನ್ನನ್ನು ಯಾರೂ ನೋಡುವದಿಲ್ಲವೆಂದು ಹೇಳಿದಿ. ನಿನ್ನ ಜ್ಞಾನವು, ನಿನ್ನ ತಿಳುವಳಿಕೆಯು ನಿನ್ನನ್ನು ದಾರಿತಪ್ಪಿಸಿದ್ದ ರಿಂದ ನಿನ್ನ ಹೃದಯದಲ್ಲಿ--ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ ಎಂದು ಅಂದು ಕೊಂಡಿ. ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು. ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು. ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ. ಇಗೋ, ಅವರೆಲ್ಲಾ ಕೂಳೆ ಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡು ವದು, ಜ್ವಾಲೆಯ ಶಕ್ತಿಯಿಂದ ತಮ್ಮನ್ನು ರಕ್ಷಿಸಿಕೊಳ್ಳ ಲಾರರು; ಇಲ್ಲವೆ ಕಾಯಿಸಿಕೊಳ್ಳುವದಕ್ಕೆ ಕೆಂಡವಿರು ವದಿಲ್ಲ, ಹತ್ತಿರ ಕೂತುಕೊಳ್ಳಲು ಬೆಂಕಿ ಇಲ್ಲ.ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು. ನೀನು ಪ್ರಯಾಸ ಪಟ್ಟವುಗಳೆಲ್ಲಾ ನಿನಗೆ ಹೀಗಾಗುವವು; ನಿನ್ನ ಯೌವನ ಪ್ರಾಯದಿಂದ ನಿನ್ನ ವರ್ತಕರು ಚದುರಿ ತಮ್ಮ ತಮ್ಮ ಪ್ರಾಂತ್ಯಕ್ಕೆ ಹೋಗಿ ಬಿಡುವರು; ನಿನ್ನನ್ನು ರಕ್ಷಿಸಲು ಒಬ್ಬನೂ ಇರನು.
- Revelation 14:8–11 ಪ್ರಕಟನೆ 14:8–11ಅವನ ಹಿಂದೆ ಇನ್ನೊಬ್ಬ ದೂತನು ಬಂದು--ಬಾಬೆಲೆಂಬ ಆ ಮಹಾನಗರಿಯು ಬಿದ್ದಳು, ಬಿದ್ದಳು; ಯಾಕಂದರೆ ಅವಳು ತನ್ನ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಸಕಲ ಜನಾಂಗಗಳು ಕುಡಿಯುವಂತೆ ಮಾಡಿದಳು ಎಂದು ಹೇಳಿದನು. ತರುವಾಯ ಮೂರನೆಯ ದೂತನು ಅವರನ್ನು ಹಿಂಬಾಲಿಸಿ--ಯಾರಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ತನ್ನ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿ ಕೊಂಡರೆ ಅಂಥವನು ದೇವರ ಕೋಪವೆಂಬ ಪಾತ್ರೆ ಯಲ್ಲಿ ಏನೂ ಬೆರಸದೆ ಹಾಕಿದ ಆತನ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೂತರ ಮುಂದೆಯೂ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದ ಮತ್ತು ಗಂಧಕದಿಂದ ಯಾತನೆಪಡು ವನು. ಅವರ ಯಾತನೆಯ ಹೊಗೆಯು ಯುಗ ಯುಗಾಂತರಗಳಲ್ಲಿ ಏರುತ್ತಿರುವದು. ಆ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡುವವರೂ ಅದರ ಹೆಸರಿನ ಗುರುತನ್ನು ಹಾಕಿಸಿಕೊಂಡಿರುವವರೂ ಹಗಲಿ ರುಳು ವಿಶ್ರಾಂತಿಯಿಲ್ಲದೆ ಇರುವರು ಎಂದು ಮಹಾ ಶಬ್ದದಿಂದ ಹೇಳಿದನು.
- Isaiah 21:1 ಯೆಶಾಯ 21:1ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ.
- Isaiah 13:1–22 ಯೆಶಾಯ 13:1–22ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ. ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ. ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ. ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ. ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ. ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು. ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು. ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು. ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು. ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ. ಅವರ ಕೆಟ್ಟವುಗಳಿಗೋಸ್ಕರವೂ ದುಷ್ಟರ ಅಪ ರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸು ವೆನು; ಗರ್ವಿಷ್ಟರ ಅಹಂಕಾರವನ್ನು ನಿಲ್ಲಿಸಿಬಿಡುವೆನು, ಭಯಂಕರವಾದ ಹೆಮ್ಮೆಯನ್ನು ತಗ್ಗಿಸುವೆನು. ನಾನು ಮನುಷ್ಯನನ್ನು ಚೊಕ್ಕ ಬಂಗಾರಕ್ಕಿಂತಲೂ ಇಲ್ಲವೆ ಒಫೀರಿನ ಬಂಗಾರಕ್ಕಿಂತಲೂ ಅಮೂಲ್ಯನನ್ನಾಗಿ ಮಾಡುವೆನು. ಆದದರಿಂದ ಸೈನ್ಯಗಳ ಕರ್ತನ ಉಗ್ರದಲ್ಲಿಯೂ ಆತನ ಕೋಪೋದ್ರೇಕದ ದಿನ ದಲ್ಲಿಯೂ ನಾನು ಆಕಾಶಗಳನ್ನು ನಡುಗಿಸುವೆನು, ಭೂಮಿಯನ್ನು ಅದರ ಸ್ಥಳದಿಂದ ತೆಗೆದುಬಿಡುವೆನು. ಅದು ಅಟ್ಟಿದ ಜಿಂಕೆಯಂತೆಯೂ ಯಾರೂ ಕೂಡಿ ಸದ ಕುರಿಗಳಂತೆಯೂ ಇರುವದು. ಅವರಲ್ಲಿ ಪ್ರತಿಯೊ ಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು ಪ್ರತಿಯೊ ಬ್ಬನೂ ತನ್ನ ಸ್ವದೇಶಕ್ಕೆ ಓಡಿಹೋಗುವನು. ಸಿಕ್ಕಿದ ಪ್ರತಿಯೊಬ್ಬನೂ ಇರಿಯಲ್ಪಡುವನು; ಅವರೊಂದಿಗೆ ಸೇರಿಕೊಂಡ ಪ್ರತಿಯೊಬ್ಬನೂ ಕತ್ತಿಯಿಂದ ಬೀಳು ವನು. ಅವರ ಮಕ್ಕಳೂ ಅವರ ಕಣ್ಣೆದುರಿಗೆ ತುಂಡು ತುಂಡಾಗುವಂತೆ ಅಪ್ಪಳಿಸಲ್ಪಡುವರು; ಅವರ ಮನೆ ಗಳು ಸೂರೆಯಾಗುವವು; ಅವರ ಪತ್ನಿಯರು ಕೆಡಿ ಸಲ್ಪಡುವರು. ಇಗೋ, ಬೆಳ್ಳಿಯನ್ನು ಲಕ್ಷಿಸದೆ ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧ ವಾಗಿ ನಾನು ಎಬ್ಬಿಸುವೆನು. ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ. ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು. ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು. ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು. ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
- Isaiah 44:28 ಯೆಶಾಯ 44:28ಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
- Jeremiah 50:1–64 ಯೆರೆಮೀಯ 50:1–64ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು. ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ; ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳು ಮಾಡಿ ಬಿಡುವದು; ಅವಳಲ್ಲಿ ಯಾರೂ ವಾಸಿಸುವದಿಲ್ಲ; ಮನುಷ್ಯರೂ ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ. ಆ ದಿವಸಗಳಲ್ಲಿಯೂ ಕಾಲ ದಲ್ಲಿಯೂ ಇಸ್ರಾಯೇಲಿನ ಮಕ್ಕಳು ಬರುವರು; ಅವರೂ ಯೆಹೂದನ ಮಕ್ಕಳೂ ಒಟ್ಟಾಗಿ ಕೂಡಿ ಕೊಳ್ಳುವರೆಂದು ಕರ್ತನು ಅನ್ನುತ್ತಾನೆ. ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಕರ್ತನನ್ನು ಹುಡುಕುವರು. ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು. ನನ್ನ ಜನರು ಕಳೆದುಹೋದ ಕುರಿಗಳಾಗಿದ್ದರು; ಅವರ ಕುರುಬರು ಅವರನ್ನು ತಪ್ಪಿ ಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು. ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು. ಬಾಬೆಲಿನೊಳ ಗಿಂದ ಓಡಿಹೋಗಿರಿ; ಕಸ್ದೀಯರ ದೇಶದಿಂದ ಹೊರ ಡಿರಿ, ಮಂದೆಯ ಮುಂದೆ ಹೋತಗಳ ಹಾಗೆ ಇರ್ರಿ. ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ; ಬಾಬೆಲಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧ ವಾಗಿ ಯುದ್ಧವನ್ನು ಸಿದ್ಧಮಾಡುವರು; ಅಲ್ಲಿಂದ ಅದು ಹಿಡಿಯಲ್ಪಡುವದು; ಅವರ ಬಾಣಗಳು ಬಲಿಷ್ಠನಾದ ಪ್ರವೀಣಶಾಲಿಯ ಹಾಗಿರುವವು. ಯಾವದೂ ವ್ಯರ್ಥವಾಗಿ ತಿರುಗವು. ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ. ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು. ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು. ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ. ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಒಳಪಟ್ಟಿತು; ಅದರ ಅಸ್ತಿವಾರಗಳು ಬಿದ್ದು ಹೋದವು; ಅದರ ಗೋಡೆಗಳು ಕೆಡವಲ್ಪಟ್ಟವು; ಅದು ಕರ್ತನ ಪ್ರತಿದಂಡನೆಯೇ, ಅದರಿಂದ ಪ್ರತಿ ದಂಡನೆ ತಕ್ಕೊಳ್ಳಿರಿ. ಅದು ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು. ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ. ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರಿಗಿ ಬರಮಾಡುತ್ತೇನೆ; ಅವನು ಕರ್ಮೆಲಿ ನಲ್ಲಿಯೂ ಬಾಷಾನಿನ್ನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯಿಮ್ ಬೆಟ್ಟದಲ್ಲಿಯೂ ಗಿಲ್ಯಾದಿ ನಲ್ಲಿಯೂ ತೃಪ್ತಿಹೊಂದುವದು. ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ. ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿ ಗಳಿಗೂ ವಿರೋಧವಾಗಿ ಏರಿಹೋಗು; ಅವರನ್ನು ಹಿಂದಟ್ಟಿ ಕೆಡಿಸಿಬಿಟ್ಟು ಸಂಪೂರ್ಣ ನಾಶಮಾಡು, ನಾನು ನಿನಗೆ ಆಜ್ಞಾಪಿಸಿದ್ದೆಲಾದರ ಪ್ರಕಾರ ಮಾಡು ಎಂದು ಕರ್ತನು ಅನ್ನುತ್ತಾನೆ. ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು. ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು! ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ; ಕರ್ತನು ತನ್ನ ಆಯುಧ ಶಾಲೆಯನ್ನು ತೆರೆದು, ರೋಷದ ಆಯುಧಗಳನ್ನು ಹೊರಗೆ ತಂದಿದ್ದಾನೆ; ಕಸ್ದೀಯರ ದೇಶದಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ನಿರ್ವಹಿಸ ಬೇಕಾದ ಕಾರ್ಯವುಂಟು. ಕಟ್ಟಕಡೆಯ ಮೇರೆ ಯಿಂದ ಅದಕ್ಕೆ ವಿರೋಧವಾಗಿ ಬನ್ನಿ; ಅದರ ಕಣಜಗಳನ್ನು ತೆರೆಯಿರಿ; ಅದನ್ನು ದಿಬ್ಬಗಳಂತೆ ತುಳಿ ಯಿರಿ; ಸಂಪೂರ್ಣವಾಗಿ ನಾಶಮಾಡಿರಿ; ಅದಕ್ಕೆ ಒಂದೂ ಉಳಿಯದಿರಲಿ. ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು. ಅವರು ಚೀಯೋನಿನಲ್ಲಿ ನಮ್ಮ ದೇವರಾದ ಕರ್ತನ ಪ್ರತಿದಂಡನೆಯನ್ನೂ ಆತನ ಆಲಯದ ಪ್ರತಿ ದಂಡನೆ ಯನ್ನೂ ತಿಳಿಸುತ್ತಾ, ಬಾಬೆಲಿನ ದೇಶದಿಂದ ತಪ್ಪಿಸಿ ಕೊಂಡು ಓಡಿ ಹೋಗುವವರ ಸ್ವರವು! ಬಾಬೆಲಿಗೆ ವಿರೋಧವಾಗಿ ಬಿಲ್ಲಿನವರನ್ನು ಒಟ್ಟಾಗಿ ಕರೆಯಿರಿ; ಬಿಲ್ಲು ಬೊಗ್ಗಿಸುವವರೆಲ್ಲರೇ, ಅದಕ್ಕೆ ವಿರೋಧವಾಗಿ ಸುತ್ತಲು ದಂಡು ಕಟ್ಟಿರಿ; ಅದರಲ್ಲಿ ಯಾವದು ತಪ್ಪಿಸಿ ಕೊಳ್ಳಲಾರದೆ ಇರಲಿ. ಅದರ ಕೃತ್ಯಗಳ ಪ್ರಕಾರ ಅದಕ್ಕೆ ಪ್ರತಿಫಲ ಕೊಡಿರಿ; ಅದು ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿರಿ; ಕರ್ತನಿಗೆ ವಿರೋಧವಾಗಿಯೂ ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೂ ಅದು ಗರ್ವ ತೋರಿಸಿತು. ಆದದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಯುದ್ಧಸ್ಥರೆಲ್ಲರು ಆ ದಿವಸದಲ್ಲಿ ತೆಗೆದುಹಾಕಲ್ಪಡು ವರೆಂದು ಕರ್ತನು ಅನ್ನುತ್ತಾನೆ. ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ; ನಿನ್ನ ದಿವಸವೂ ನಿನ್ನ ವಿಚಾರಣೆಯ ಕಾಲವೂ ಬಂತು. ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು. ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ. ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು. ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು. ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು. ಅವರು ಬಿಲ್ಲನ್ನೂ ಭಲ್ಲೆಯನ್ನೂ ಹಿಡಿಯುವರು; ಅವರು ಕ್ರೂರರು; ಅಂತಃಕರುಣೆ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುವದು; ಬಾಬೆಲಿನ ಮಗಳೇ, ನಿನಗೆ ವಿರೋಧವಾಗಿ ಯುದ್ಧಕ್ಕೆ ಸಿದ್ಧವಾಗಿ ರುವ ಪುರುಷರ ಹಾಗೆ ಕುದುರೆಗಳನ್ನು ಹತ್ತಿಕೊಂಡು ಬರುವರು. ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು. ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು? ಆದದರಿಂದ ಕರ್ತನು ಬಾಬೆಲಿಗೆ ವಿರೋಧವಾಗಿ ಮಾಡಿದ ಆಲೋ ಚನೆಯನ್ನೂ ಆತನು ಕಸ್ದೀಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಚನೆಗಳನ್ನೂ ಕೇಳಿರಿ; ನಿಶ್ಚಯವಾಗಿ ಮಂದೆಯಲ್ಲಿ ಚಿಕ್ಕವುಗಳು ಅವರನ್ನು ಎಳೆಯುವವು; ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡುವನು.ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು. ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
- Psalm 149:6–9 ಕೀರ್ತನೆಗಳು 149:6–9ಉನ್ನತ ದೇವರ ಸ್ತೋತ್ರಗಳು ಅವರ ಬಾಯಿಯ ಲ್ಲಿಯೂ ಇಬ್ಬಾಯಿ ಕತ್ತಿಯು ಅವರ ಕೈಯಲ್ಲಿಯೂ ಇರಲಿ. ಜನಾಂಗಗಳಲ್ಲಿ ಮುಯ್ಯಿಗೆಮುಯ್ಯನ್ನೂ ಪ್ರಜೆ ಗಳಲ್ಲಿ ಶಿಕ್ಷೆಗಳನ್ನೂ ಮಾಡಲಿ. ಅವರ ಅರಸುಗಳನ್ನು ಸಂಕೋಲೆಗಳಿಂದಲೂ ಅವರ ಘನವುಳ್ಳವರನ್ನು ಕಬ್ಬಿ ಣದ ಬೇಡಿಗಳಿಂದಲೂ ಬಂಧಿಸಲಿ;ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ. ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.
- Revelation 18:20 ಪ್ರಕಟನೆ 18:20ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.
- Revelation 17:1–18 ಪ್ರಕಟನೆ 17:1–18ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡಿ--ಇಲ್ಲಿಗೆ ಬಾ, ಬಹಳ ನೀರುಗಳ ಮೇಲೆ ಕೂತಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಾನು ನಿನಗೆ ತೋರಿಸುತ್ತೇನೆ. ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು. ಆಗ ಅವನು ಆತ್ಮದಲ್ಲಿ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು; ಅಲ್ಲಿ ದೇವದೂಷಣೆಯ ಹೆಸರುಗಳಿಂದ ತುಂಬಿದ್ದು ಏಳು ತಲೆಗಳು ಹತ್ತು ಕೊಂಬುಗಳೂ ಇದ್ದ ಕೆಂಪುಬಣ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ನಾನು ಕಂಡೆನು. ಆ ಸ್ತ್ರೀಯು ಧೂಮ್ರ ಮತ್ತು ಕೆಂಪುವರ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮತ್ತು ಮುತ್ತುಗಳು ಇವುಗಳಿಂದ ಅಲಂಕರಿಸಿಕೊಂಡಿದ್ದಳು; ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು; ಅದು ಅವಳ ಜಾರತ್ವದ ಅಸಹ್ಯವಾದವುಗಳಿಂದಲೂ ಅಶುದ್ಧತ್ವದಿಂದಲೂ ತುಂಬಿತು ಇದಲ್ಲದೆ ಮರ್ಮ, ಮಹಾ ಬಾಬೆಲು, ಭೂಮಿಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ವುಗಳಿಗೂ ತಾಯಿ ಎಂಬ ಹೆಸರು ಅವಳ ಹಣೆಯ ಮೇಲೆ ಬರೆದಿತ್ತು. ಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕ ಆಗ ಆ ದೂತನು ನನಗೆ--ನೀನೇಕೆ ಆಶ್ಚರ್ಯಪಟ್ಟೆ? ಆ ಸ್ತ್ರೀಯ ವಿಷಯವಾಗಿಯೂ ಅವಳನ್ನು ಹೊತ್ತುಕೊಂಡಿದ್ದ ಏಳು ತಲೆಗಳು ಮತ್ತು ಹತ್ತು ಕೊಂಬುಗಳುಳ್ಳ ಮೃಗದ ವಿಷಯವಾಗಿಯೂ ಇರುವ ಮರ್ಮವನ್ನು ನಾನು ನಿನಗೆ ತಿಳಿಸುತ್ತೇನೆ. ನೀನು ಕಂಡ ಈ ಮೃಗವು ಮೊದಲು ಇತ್ತು. ಈಗ ಇಲ್ಲ, ಅದು ತಳವಿಲ್ಲದ ತಗ್ಗಿನಿಂದ ಏರಿ ಬಂದು ನಾಶನಕ್ಕೆ ಹೋಗುವದು. ಭೂಮಿಯಲ್ಲಿ ವಾಸಿಸುವವರೊಳಗೆ ಯಾರಾರ ಹೆಸರು ಗಳು ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಜೀವಗ್ರಂಥ ದಲ್ಲಿ ಬರೆದಿರುವದಿಲ್ಲವೋ ಅವರು ಮೊದಲು ಇದ್ದು ಈಗ ಇಲ್ಲದ ಇನ್ನು ಇದರಲ್ಲಿ ಜ್ಞಾನವುಳ್ಳ ಮನಸ್ಸು ಇರುತ್ತದೆ. ಆ ಏಳು ತಲೆಗಳು ಆ ಸ್ತ್ರೀ ಕೂತು ಕೊಂಡಿರುವ ಏಳು ಬೆಟ್ಟಗಳೇ. ಇದಲ್ಲದೆ ಅವು ಏಳು ಮಂದಿ ರಾಜರು; ಐದು ಮಂದಿ ಬಿದ್ದು ಹೋಗಿದ್ದಾರೆ. ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಲೇ ಬೇಕು. ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯವನು; ಅವನು ಆ ಏಳು ಮಂದಿಗೆ ಸೇರಿದವನಾಗಿದ್ದು ನಾಶನಕ್ಕೆ ಹೋಗುತ್ತಾನೆ. ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ. ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ. ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ. ಮೃಗದ ಮೇಲೆ ನೀನು ನೋಡಿದ ಹತ್ತು ಕೊಂಬು ಗಳು ಆ ಜಾರ ಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟ ವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವವು. ಯಾಕಂದರೆ ಅವರು ದೇವರ ಚಿತ್ತವನ್ನು ನೆರವೇರಿಸುವದಕ್ಕೆ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವಂತೆ ದೇವರು ತನ್ನ ವಾಕ್ಯಗಳು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರೇಪಿಸಿದನು.ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು. ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು.