Psalms · chapter 15 · verse 1
Psalm 15:1 in Kannada
ಕರ್ತನೇ, ನಿನ್ನ ಗುಡಾರದಲ್ಲಿ ತಂಗುವವನು ಯಾರು? ನಿನ್ನ ಪರಿಶುದ್ಧ ಪರ್ವತ ದಲ್ಲಿ ವಾಸಮಾಡುವವನು ಯಾರು?
Kartane, ninna gudaaradalli tanguvavanu yaaru? Ninna parishuddha parvata dalli vaasamaaduvavanu yaaru?
Psalm 15:1 in English
- King James Version (KJV)
- A Psalm of David. LORD, who shall abide in thy tabernacle? who shall dwell in thy holy hill?
- World English Bible (WEB)
- A Psalm by David. LORD, who shall dwell in your sanctuary? Who shall live on your holy hill?
- American Standard Version (ASV)
- A Psalm of David. Jehovah, who shall sojourn in thy tabernacle? Who shall dwell in thy holy hill?
- Bible in Basic English (BBE)
- A Psalm. Of David. Lord, who may have a resting-place in your tent, a living-place on your holy hill?
- Darby Translation (DBY)
- A Psalm of David. Jehovah, who shall sojourn in thy tent? who shall dwell in the hill of thy holiness?
- Webster's Bible (WBS)
- A Psalm of David. LORD, who shall abide in thy tabernacle? who shall dwell in thy holy hill?
- Young's Literal Translation (YLT)
- A Psalm of David. Jehovah, who doth sojourn in Thy tent? Who doth dwell in Thy holy hill?
Read in context
- 1ಕರ್ತನೇ, ನಿನ್ನ ಗುಡಾರದಲ್ಲಿ ತಂಗುವವನು ಯಾರು? ನಿನ್ನ ಪರಿಶುದ್ಧ ಪರ್ವತ ದಲ್ಲಿ ವಾಸಮಾಡುವವನು ಯಾರು?
- 2ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.
- 3ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;
Cross references
- Psalm 24:3–5 ಕೀರ್ತನೆಗಳು 24:3–5ಕರ್ತನ ಪರ್ವತವನ್ನು ಹತ್ತುವವನು ಯಾರು? ಇಲ್ಲವೆ ಆತನ ಪರಿಶುದ್ಧ ಸ್ಥಳದಲ್ಲಿ ನಿಲ್ಲುವವನು ಯಾರು? ಶುದ್ಧ ಹಸ್ತಗಳೂ ನಿರ್ಮಲವಾದ ಹೃದ ಯವೂ ಉಳ್ಳವನಾಗಿದ್ದು ತನ್ನ ಪ್ರಾಣವನ್ನು ವ್ಯರ್ಥ ತ್ವಕ್ಕೆ ಎತ್ತದೆಯೂ ಇಲ್ಲವೆ ಮೋಸದಿಂದ ಆಣೆ ಇಡ ದೆಯೂ ಇರುವವನೇ. ಅವನೇ ಕರ್ತನ ಕಡೆಯಿಂದ ಆಶೀರ್ವಾದವನ್ನೂ ತನ್ನ ರಕ್ಷಕನಾದ ದೇವರಿಂದ ನೀತಿ ಯನ್ನೂ ಹೊಂದುವನು.
- Psalm 84:4 ಕೀರ್ತನೆಗಳು 84:4ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ.
- Psalm 61:4 ಕೀರ್ತನೆಗಳು 61:4ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
- Psalm 92:13 ಕೀರ್ತನೆಗಳು 92:13ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು.
- Psalm 23:6 ಕೀರ್ತನೆಗಳು 23:6ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು; ನಾನು ಕರ್ತನ ಮನೆಯಲ್ಲಿ ಎಂದೆಂದಿಗೂ ವಾಸಮಾಡುವೆನು.
- Revelation 21:23–24 ಪ್ರಕಟನೆ 21:23–24ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ. ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು.
- Psalm 43:3–4 ಕೀರ್ತನೆಗಳು 43:3–4ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ. ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
- Revelation 21:3–4 ಪ್ರಕಟನೆ 21:3–4ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು.
- Hebrews 12:22 ಇಬ್ರಿಯರಿಗೆ 12:22ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ
- John 17:24 ಯೋಹಾನನು 17:24ತಂದೆ ಯೇ, ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನೀನು ನನಗೆ ಕೊಟ್ಟವರು ಸಹ ನೋಡುವ ಹಾಗೆಯೂ ನಾನಿರುವಲ್ಲಿ ಅವರು ನನ್ನೊಂದಿಗೆ ಇರುವಂತೆಯೂ ನಾನು ಇಚ್ಛೈಸುತ್ತೇನೆ. ಜಗದುತ್ಪತ್ತಿಗೆ ಮುಂಚೆ ನೀನು ನನ್ನನ್ನು ಪ್ರೀತಿಸಿದಿ.
- John 3:3–5 ಯೋಹಾನನು 3:3–5ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ತಿರಿಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ನೋಡಲಾರನು ಅಂದನು. ನಿಕೊದೇಮನು ಆತನಿಗೆ--ಒಬ್ಬನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವದಾದೀತೇ ಎಂದು ಕೇಳಿದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
- Psalm 27:4–6 ಕೀರ್ತನೆಗಳು 27:4–6ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ. ಕೇಡಿನ ಸಮಯದಲ್ಲಿ ಆತನು ತನ್ನ ಗುಡಾರದಲ್ಲಿ ನನ್ನನ್ನು ಬಚ್ಚಿಡುವನು. ತನ್ನ ಗುಪ್ತವಾದ ಡೇರೆಯಲ್ಲಿ ನನ್ನನ್ನು ಮರೆಮಾಡುವನು; ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವನು. ಈಗ ನನ್ನ ಸುತ್ತಲಿರುವ ಶತ್ರುಗಳ ಮೇಲೆ ನನ್ನ ತಲೆಯು ಎತ್ತಲ್ಪಟ್ಟಿರುವದು. ಆದದರಿಂದ ಆತನ ಗುಡಾರದಲ್ಲಿ ಉತ್ಸಾಹದ ಬಲಿಗಳನ್ನು ಅರ್ಪಿ ಸುವೆನು; ಹೌದು, ಕರ್ತನಿಗೆ ಹಾಡಿ ಕೀರ್ತಿಸುವೆನು.