Psalms · chapter 17 · verse 7
Psalm 17:7 in Kannada
ನಿನ್ನಲ್ಲಿ ಭರವಸವಿಟ್ಟವರ ವಿರೋಧವಾಗಿ ಏಳುವ ದರಿಂದ ನೀನು ನಿನ್ನ ಬಲಗೈಯಿಂದ ರಕ್ಷಿಸುವಾತನೇ, ಆಶ್ಚರ್ಯವಾದ ನಿನ್ನ ಪ್ರೀತಿ ಕರುಣೆಯನ್ನು ತೋರಿಸು.
Ninnalli bharavasavittavara virodhavaagi eluva darinda neenu ninna balagaiyinda rakshisuvaatane, aashcharyavaada ninna preeti karuneyannu torisu.
Psalm 17:7 in English
- King James Version (KJV)
- Shew thy marvellous lovingkindness, O thou that savest by thy right hand them which put their trust [in thee] from those that rise up [against them].
- World English Bible (WEB)
- Show your marvelous loving kindness, you who save those who take refuge by your right hand from their enemies.
- American Standard Version (ASV)
- Show thy marvellous lovingkindness, O thou that savest by thy right hand them that take refuge [in thee] From those that rise up [against them].
- Bible in Basic English (BBE)
- Make clear the wonder of your mercy, O saviour of those who put their faith in your right hand, from those who come out against them.
- Darby Translation (DBY)
- Shew wondrously thy loving-kindnesses, O thou that savest by thy right hand them that trust [in thee] from those that rise up [against them].
- Webster's Bible (WBS)
- Show thy wonderful loving-kindness, O thou that savest by thy right hand them who put their trust [in thee] from those that rise up [against them] .
- Young's Literal Translation (YLT)
- Separate wonderfully Thy kindness, O Saviour of the confiding, By Thy right hand, from withstanders.
Read in context
- 5ನನ್ನ ಹೆಜ್ಜೆಗಳು ಜಾರದ ಹಾಗೆ ನನ್ನ ನಡೆಗಳನ್ನು ನಿನ್ನ ದಾರಿಯಲ್ಲಿ ಸ್ಥಿರಪಡಿಸು.
- 6ಓ ದೇವರೇ, ನನಗೆ ಉತ್ತರ ಕೊಡುವದರಿಂದ ನಾನು ನಿನ್ನನ್ನು ಬೇಡಿಕೊಂಡಿದ್ದೇನೆ; ಯಾಕಂದರೆ ನಿನ್ನ ಕಿವಿಯನ್ನು ನನ್ನ ಕಡೆ ಆಲಿಸಿ ನನ್ನ ಮಾತನ್ನು ಕೇಳು.
- 7ನಿನ್ನಲ್ಲಿ ಭರವಸವಿಟ್ಟವರ ವಿರೋಧವಾಗಿ ಏಳುವ ದರಿಂದ ನೀನು ನಿನ್ನ ಬಲಗೈಯಿಂದ ರಕ್ಷಿಸುವಾತನೇ, ಆಶ್ಚರ್ಯವಾದ ನಿನ್ನ ಪ್ರೀತಿ ಕರುಣೆಯನ್ನು ತೋರಿಸು.
- 8ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.
- 9ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು, ನನ್ನನ್ನು ಬಾಧಿ ಸುವ ದುಷ್ಟರಿಗೂ ನನ್ನನ್ನು ಸುತ್ತಿಕೊಳ್ಳುವ ಪ್ರಾಣ ಶತ್ರುಗಳಿಗೂ ಸಿಕ್ಕದಂತೆ ತಪ್ಪಿಸುವಿ.
Cross references
- Psalm 60:5 ಕೀರ್ತನೆಗಳು 60:5ನಿನ್ನ ಪ್ರಿಯರು ಬಿಡುಗಡೆ ಯಾಗುವಂತೆ ನನ್ನ ಪ್ರಾರ್ಥನೆಯನ್ನು ಕೇಳಿ ನಿನ್ನ ಬಲಗೈಯಿಂದ ರಕ್ಷಿಸು.
- Psalm 20:6 ಕೀರ್ತನೆಗಳು 20:6ಕರ್ತನು ತನ್ನ ಅಭಿಷಕ್ತನನ್ನು ರಕ್ಷಿಸುತ್ತಾ ನೆಂದೂ ತನ್ನ ಪರಿಶುದ್ಧ ಪರಲೋಕದೊಳಗಿಂದ ತನ್ನ ಬಲಗೈಯ ರಕ್ಷಣಕರವಾದ ಪರಾಕ್ರಮದಿಂದ ಅವನಿಗೆ ಉತ್ತರ ಕೊಡುವನೆಂದೂ ಈಗ ನಾನು ಬಲ್ಲೆನು.
- Psalm 31:21 ಕೀರ್ತನೆಗಳು 31:21ಆತನು ಭದ್ರವಾದ ಪಟ್ಟಣದಲ್ಲಿ ತನ್ನ ಆಶ್ಚ ರ್ಯವಾದ ಕರುಣೆ ನನಗೆ ತೋರಿಸಿದ್ದಾನೆ ಕರ್ತ ನಿಗೆ ಸ್ತೋತ್ರ.
- Psalm 5:11–12 ಕೀರ್ತನೆಗಳು 5:11–12ಆದರೆ ನಿನ್ನಲ್ಲಿ ಭರವಸವಿಟ್ಟವರೆಲ್ಲರು ಸಂತೋಷಿ ಸಲಿ, ನೀನು ಅವರನ್ನು ಕಾಯುವದರಿಂದ ಯುಗ ಯುಗಕ್ಕೂ ಹರ್ಷಿಸಲಿ; ನಿನ್ನ ನಾಮವನ್ನು ಪ್ರೀತಿ ಮಾಡುವವರು ನಿನ್ನಲ್ಲಿ ಉತ್ಸಾಹಪಡಲಿ.ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ. ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳುತ್ತೀ.
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Psalm 44:3 ಕೀರ್ತನೆಗಳು 44:3ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
- Exodus 15:6 ವಿಮೋಚನಕಾಂಡ 15:6ಓ ಕರ್ತನೇ, ನಿನ್ನ ಬಲಗೈ ಶಕ್ತಿಯಲ್ಲಿ ಮಹಿಮೆಯುಳ್ಳ ದ್ದಾಗಿದೆ. ಓ ಕರ್ತನೇ, ನಿನ್ನ ಬಲಗೈ ಶತ್ರುವನ್ನು ಜಜ್ಜಿ ಪುಡಿಮಾಡಿತು.
- 2 Chronicles 16:9 2 ಪೂರ್ವಕಾಲವೃತ್ತಾಂತ 16:9ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು.
- Psalm 10:12–16 ಕೀರ್ತನೆಗಳು 10:12–16ಓ ಕರ್ತನೇ, ಏಳು; ಓ ದೇವ ರೇ, ನಿನ್ನ ಕೈ ಎತ್ತು, ದೀನರನ್ನು ಮರೆತು ಬಿಡಬೇಡ. ದುಷ್ಟನು ದೇವರನ್ನು ಅಲಕ್ಷ್ಯಮಾಡುವದು ಯಾಕೆ? --ನೀನು ಅದನ್ನು ವಿಚಾರಿಸುವದಿಲ್ಲವೆಂದು ಅವನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ನೀನು ಅದನ್ನು ನೋಡಿದ್ದೀ; ನಿನ್ನ ಕೈಯಿಂದ ಪ್ರತಿಫಲಕೊಡು ವದಕ್ಕೆ ಅವನ ಕುಯುಕ್ತಿಯನ್ನೂ ಹಗೆತನವನ್ನೂ ದೃಷ್ಟಿ ಸುತ್ತೀ. ಗತಿಯಿಲ್ಲದವನು ನಿನಗೆ ತನ್ನನ್ನು ಒಪ್ಪಿಸುತ್ತಾನೆ; ದಿಕ್ಕಿಲ್ಲದವನಿಗೆ ಸಹಾಯಕನು ನೀನೇ. ದುಷ್ಟನ ಮತ್ತು ಕೆಡುಕನ ತೋಳನ್ನು ಮುರಿ; ಅದು ಸಿಕ್ಕದೆ ಹೋಗುವ ವರೆಗೂ ಅವನ ದುಷ್ಟತ್ವ ವನ್ನು ನೀನು ಹುಡುಕು. ಕರ್ತನು ಯುಗ ಯುಗಾಂತರಗಳಿಗೂ ಅರಸನಾಗಿದ್ದಾನೆ; ಅನ್ಯಜನಾಂಗಗಳು ಆತನ ದೇಶದೊ ಳಗಿಂದ ನಾಶವಾದರು.
- 2 Kings 19:34 2 ಅರಸುಗಳು 19:34ನನ್ನ ನಿಮಿತ್ತವೂ ನನ್ನ ಸೇವಕನಾದ ದಾವೀದನ ನಿಮಿತ್ತವೂ ನಾನು ಈ ಪಟ್ಟಣವನ್ನು ಕಾಪಾಡಿ ಅದನ್ನು ರಕ್ಷಿಸುವೆನು ಎಂಬದೇ.
- 1 Samuel 17:45–57 1 ಸಮುವೇಲನು 17:45–57ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು. ಆ ಪಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸವಿಾಪಿಸಿ ಬರುವಾಗ ದಾವೀದನು ತ್ವರೆಯಾಗಿ ಆ ಸೈನ್ಯಕ್ಕೆ ಫಿಲಿಷ್ಟಿಯನಿಗೆದುರಿಗೆ ಓಡಿಹೋಗಿ ತನ್ನ ಕೈಯನ್ನು ಚೀಲದಲ್ಲಿ ಹಾಕಿ ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿ ಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು. ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನ ಮೇಲೆ ಬಲಗೊಂಡು ಫಿಲಿಷ್ಟಿಯನನ್ನು ಹೊಡೆದು ಅವನನ್ನು ಕೊಂದುಹಾಕಿದನು. ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು. ಇಸ್ರಾಯೇಲ್ ಮನುಷ್ಯರೂ ಯೆಹೂದದ ಮನು ಷ್ಯರೂ ಎದ್ದು ಆರ್ಭಟಿಸಿ ತಗ್ಗಿನ ಮೇರೆಯ ವರೆಗೂ ಎಕ್ರೋನಿನ ಬಾಗಲುಗಳ ವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದರೆ ಕೊಲ್ಲಲ್ಪಟ್ಟ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ವರೆಗೂ ಎಕ್ರೋನಿನ ವರೆಗೂ ಬಿದ್ದಿದ್ದರು. ಇಸ್ರಾಯೇಲ್ ಮಕ್ಕಳು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರಿಗಿ ಬಂದು ಅವರ ಡೇರೆಗಳನ್ನು ಸೂರೆಮಾಡಿದರು. ದಾವೀ ದನು ಫಿಲಿಷ್ಟಿಯನ ತಲೆಯನ್ನು ತಕ್ಕೊಂಡು ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು. ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟ ದ್ದನ್ನು ಸೌಲನು ನೋಡಿದಾಗ ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ--ಅಬ್ನೇರನೇ, ಈ ಯುವಕನು ಯಾರ ಮಗನು ಅಂದನು. ಅದಕ್ಕೆ ಅಬ್ನೇರನು--ಅರಸನೇ, ನಿನ್ನ ಜೀವದಾಣೆ ನಾನರಿಯೆ ಅಂದನು. ಅದಕ್ಕೆ ಅರಸನು ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು ಅಂದನು. ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ತೆಗೆದುಕೊಂಡು ತಿರಿಗಿ ಬರುವಾಗ ಅಬ್ನೇರನು ಅವನನ್ನು ಕರೆದು ಸೌಲನ ಮುಂದೆ ನಿಲ್ಲಿಸಿದನು.ಆಗ ಸೌಲನು--ಯೌವನ ಸ್ತನೇ, ನೀನು ಯಾರ ಮಗನು ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು--ನಾನು ನಿನ್ನ ಸೇವಕ ನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು ಅಂದನು.
- Romans 5:20–21 ರೋಮಾಪುರದವರಿಗೆ 5:20–21ಹೇಗಾದರೂ ಅಪರಾಧವು ಹೆಚ್ಚಾಗಿ ಕಂಡುಬರುವ ಹಾಗೆ ನ್ಯಾಯಪ್ರಮಾಣವು ಪ್ರವೇಶಿಸಿತು; ಆದರೆ ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು.ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು. ಹೀಗೆ ಪಾಪವು ಮರಣವನ್ನುಂಟು ಮಾಡುವದಕ್ಕಾಗಿ ಪ್ರಭುತ್ವವನ್ನು ನಡಿಸಿದ ಹಾಗೆಯೇ ಕೃಪೆಯು ನೀತಿಯ ಮೂಲಕ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಾದ ನಿತ್ಯಜೀವ ವನ್ನುಂಟು ಮಾಡುವದಕ್ಕೆ ಪ್ರಭುತ್ವ ನಡಿಸುವದು.