Psalms · chapter 44 · verse 3
Psalm 44:3 in Kannada
ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
Avaru tamma kattiyinda deshavannu svaadheenapadisikollalilla; avara tolu avarannu rakshisalilla; aadare ninna balagaiyoo toloo ninna mukhada prakaashavoo ivugale avarannu rakshisidavu; ninna olume avarigittallaa.
Psalm 44:3 in English
- King James Version (KJV)
- For they got not the land in possession by their own sword, neither did their own arm save them: but thy right hand, and thine arm, and the light of thy countenance, because thou hadst a favour unto them.
- World English Bible (WEB)
- For they didn’t get the land in possession by their own sword, neither did their own arm save them; but your right hand, your arm, and the light of your face, because you were favorable to them.
- American Standard Version (ASV)
- For they gat not the land in possession by their own sword, Neither did their own arm save them; But thy right hand, and thine arm, and the light of thy countenance, Because thou wast favorable unto them.
- Bible in Basic English (BBE)
- For they did not make the land theirs by their swords, and it was not their arms which kept them safe; but your right hand, and your arm, and the light of your face, because you had pleasure in them.
- Darby Translation (DBY)
- For not by their own sword did they take possession of the land, neither did their own arm save them; but thy right hand, and thine arm, and the light of thy countenance, because thou hadst delight in them.
- Webster's Bible (WBS)
- For they obtained not the land in possession by their own sword, neither did their own arm save them: but thy right hand, and thy arm, and the light of thy countenance, because thou hadst a favor to them.
- Young's Literal Translation (YLT)
- For, not by their sword Possessed they the land, And their arm gave not salvation to them, But Thy right hand, and Thine arm, And the light of Thy countenance, Because Thou hadst accepted them.
Read in context
- 1ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
- 2ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
- 3ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
- 4ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.
- 5ನಿನ್ನಿಂದ ನಮ್ಮ ವೈರಿಗಳನ್ನು ದೊಬ್ಬುವೆವು; ನಿನ್ನ ಹೆಸರಿನಲ್ಲಿ ನಮ್ಮ ಎದುರಾಳಿಗಳನ್ನು ತುಳಿಯುವೆವು.
Cross references
- Deuteronomy 7:7–8 ಧರ್ಮೋಪದೇಶಕಾಂಡ 7:7–8ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- Deuteronomy 8:17–18 ಧರ್ಮೋಪದೇಶಕಾಂಡ 8:17–18ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ. ನಿನ್ನ ದೇವ ರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳಬೇಕು; ಈ ಹೊತ್ತು ಇರುವಂತೆ ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ತನ್ನ ಒಡಂಬಡಿಕೆಯನ್ನು ಸ್ಥಾಪಿಸುವ ಹಾಗೆ ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿನಗೆ ಕೊಡುವಾತನು ಆತನೇ.
- Joshua 24:12 ಯೆಹೋಶುವ 24:12ಇದಲ್ಲದೆ ನಾನು ನಿಮ್ಮ ಮುಂದೆ ಕಡಜದ ಹುಳಗಳನ್ನು ಕಳು ಹಿಸಿದೆನು. ಅವು ಅವರನ್ನೂ ಅಮೋರಿಯರ ಇಬ್ಬರು ಅರಸುಗಳನ್ನೂ ಓಡಿಸಿಬಿಟ್ಟವು; ನಿಮ್ಮ ಕತ್ತಿ, ಬಿಲ್ಲುಗ ಳಿಂದಲ್ಲ.
- Zechariah 4:6 ಜೆಕರ್ಯ 4:6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 2 Corinthians 4:7 2 ಕೊರಿಂಥದವರಿಗೆ 4:7ಬಲಾಧಿಕ್ಯವು ನಮ್ಮದಲ್ಲ, ಅದು ದೇವರದಾಗಿ ರುವ ಹಾಗೆ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.
- Exodus 15:16 ವಿಮೋಚನಕಾಂಡ 15:16ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.
- Psalm 77:15 ಕೀರ್ತನೆಗಳು 77:15ಯಾಕೋಬನ ಮತ್ತು ಯೋಸೇಫನ ಮಕ್ಕಳಾದ ನಿನ್ನ ಜನರನ್ನು ತೋಳಿನಿಂದ ವಿಮೋಚನೆ ಮಾಡಿದ್ದೀ ಸೆಲಾ.
- Psalm 20:6 ಕೀರ್ತನೆಗಳು 20:6ಕರ್ತನು ತನ್ನ ಅಭಿಷಕ್ತನನ್ನು ರಕ್ಷಿಸುತ್ತಾ ನೆಂದೂ ತನ್ನ ಪರಿಶುದ್ಧ ಪರಲೋಕದೊಳಗಿಂದ ತನ್ನ ಬಲಗೈಯ ರಕ್ಷಣಕರವಾದ ಪರಾಕ್ರಮದಿಂದ ಅವನಿಗೆ ಉತ್ತರ ಕೊಡುವನೆಂದೂ ಈಗ ನಾನು ಬಲ್ಲೆನು.
- Deuteronomy 4:37–38 ಧರ್ಮೋಪದೇಶಕಾಂಡ 4:37–38ಆತನು ನಿನ್ನ ಪಿತೃಗಳನ್ನು ಪ್ರೀತಿಮಾಡಿದ್ದರಿಂದ ಅವರ ತರುವಾಯ ಅವರ ಸಂತತಿಯನ್ನು ಆದು ಕೊಂಡು ನಿನ್ನನ್ನು ತನ್ನ ದೃಷ್ಟಿಯಲ್ಲಿ ತನ್ನ ಮಹಾ ಬಲ ದೊಂದಿಗೆ ಐಗುಪ್ತದೊಳಗಿಂದ ಹೊರಗೆ ಬರಮಾಡಿ ದನು. ನಿನಗಿಂತ ದೊಡ್ಡದಾದ ನಿನಗಿಂತ ಬಲಿಷ್ಠ ವಾದ ಜನಾಂಗಗಳನ್ನು ನಿನ್ನ ಮುಂದೆ ಓಡಿಸಿ ನಿನ್ನನ್ನು ಒಳಗೆ ಬರಮಾಡಿ ಈ ದಿನ ಇರುವಂತೆ ನಿನಗೆ ಅವರ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟನು.
- Psalm 42:5 ಕೀರ್ತನೆಗಳು 42:5ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.
- Deuteronomy 10:15 ಧರ್ಮೋಪದೇಶಕಾಂಡ 10:15ಆದರೂ ನಿನ್ನ ಪಿತೃಗಳ ಮೇಲೆ ಕರ್ತನು ತಾನೇ ಮನಸ್ಸಿಟ್ಟು ಅವರನ್ನು ಪ್ರೀತಿಮಾಡಿ ಅವರ ಸಂತಾನವಾಗಿರುವ ನಿಮ್ಮನ್ನು ಈಹೊತ್ತು ಇರುವ ಪ್ರಕಾರ ಎಲ್ಲಾ ಜನಗಳೊಳಗಿಂದ ಆದುಕೊಂಡನು.
- Psalm 42:11 ಕೀರ್ತನೆಗಳು 42:11ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.