Psalms · chapter 18 · verse 9
Psalm 18:9 in Kannada
ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
Aatanu aakaasha galannu boggisi ilidanu; aatana paadagala kelage kaargattalu ittu.
Psalm 18:9 in English
- King James Version (KJV)
- He bowed the heavens also, and came down: and darkness [was] under his feet.
- World English Bible (WEB)
- He bowed the heavens also, and came down. Thick darkness was under his feet.
- American Standard Version (ASV)
- He bowed the heavens also, and came down; And thick darkness was under his feet.
- Bible in Basic English (BBE)
- The heavens were bent, so that he might come down; and it was dark under his feet.
- Darby Translation (DBY)
- And he bowed the heavens, and came down; and darkness was under his feet.
- Webster's Bible (WBS)
- He bowed the heavens also, and came down: and darkness [was] under his feet.
- Young's Literal Translation (YLT)
- And He inclineth the heavens, and cometh down, And thick darkness [is] under His feet.
Read in context
- 7ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು;
- 8ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು.
- 9ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
- 10ಆತನು ಕೆರೂಬಿನ ಮೇಲೆ ಕೂತು ಹಾರಿದನು; ಹೌದು, ಗಾಳಿಯ ರೆಕ್ಕೆಗಳ ಮೇಲೆ ಹಾರಿದನು.
- 11ಕತ್ತಲನ್ನು ತನಗೆ ಮರೆಯ ಸ್ಥಳವಾಗಿ ಯೂ ಕತ್ತಲಿನ ನೀರುಗಳನ್ನು ಆಕಾಶದ ಮಂದವಾದ ಮೋಡಗಳನ್ನು ತನ್ನ ಸುತ್ತಲು ಡೇರೆಯಾಗಿಯೂ ಮಾಡಿ ದನು.
Cross references
- Psalm 144:5–15 ಕೀರ್ತನೆಗಳು 144:5–15ಓ ಕರ್ತನೇ, ನಿನ್ನ ಆಕಾಶಗಳನ್ನು ತಗ್ಗಿಸಿ ಇಳಿದು ಬಾ; ಬೆಟ್ಟಗಳನ್ನು ಮುಟ್ಟು; ಆಗ ಅವು ಹೊಗೆ ಹಾಯುವವು. ಮಿಂಚನ್ನು ಮಿಂಚಿಸಿ ಅವರನ್ನು ಚದರಿಸು; ನಿನ್ನ ಬಾಣಗಳನ್ನು ಎಸೆದು ಅವರನ್ನು ನಾಶಮಾಡು. ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು. ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು, ಅವರ ಬಲಗೈ ಮೋಸದ ಬಲಗೈ ಆಗಿದೆ. ಓ ದೇವರೇ, ನಾನು ಹೊಸ ಹಾಡನ್ನು ನಿನಗೆ ಹಾಡುವೆನು; ಹತ್ತು ತಂತಿಗಳ ವೀಣೆಯಿಂದ ನಿನ್ನನ್ನು ಕೀರ್ತಿಸುವೆನು. ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ, ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ. ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ ತಮ್ಮ ಯೌವನದಲ್ಲಿ ಬೆಳೆದವರಾಗಿರಲಿ; ನಮ್ಮ ಹೆಣ್ಣು ಮಕ್ಕಳು ಅರಮನೆಯ ಕಟ್ಟುವಿಕೆಯ ಪ್ರಕಾರ ಕೆತ್ತಲ್ಪಟ್ಟ ಮೂಲೆಯ ಕಲ್ಲುಗಳ ಹಾಗಿರಲಿ. ನಮ್ಮ ಉಗ್ರಾಣಗಳು ತುಂಬಿ ನಾನಾ ವಿಧವಾದ ಪದಾರ್ಥಗಳನ್ನು ಹಂಚಲಿ; ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ ನಮ್ಮ ಬೀದಿಗಳಲ್ಲಿ ಹೆಚ್ಟಲಿ. ನಮ್ಮ ಎತ್ತುಗಳು ಪ್ರಯಾಸಪಡುವದಕ್ಕೆ ಬಲವುಳ್ಳ ವುಗಳಾಗಲಿ; ಒಳಗೆ ನುಗ್ಗುವದಾಗಲಿ ಹೊರಗೆ ಹೋಗು ವದಾಗಲಿ ಆಗದಿರಲಿ; ನಮ್ಮ ಬೀದಿಗಳಲ್ಲಿ ದೂರು ವದು ಇಲ್ಲದಿರಲಿ.ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು. ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
- 2 Samuel 22:10 2 ಸಮುವೇಲನು 22:10ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು;
- 2 Peter 3:10 2 ಪೇತ್ರನು 3:10ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು.
- Deuteronomy 33:26 ಧರ್ಮೋಪದೇಶಕಾಂಡ 33:26ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ಆತನು ನಿನ್ನ ಸಹಾಯಕ್ಕೆ ಪರಲೋಕದಲ್ಲಿಯೂ ತನ್ನ ಘನತೆಯಲ್ಲಿಯೂ ಆಕಾಶದ ಮೇಲೆಯೂ ಬರುತ್ತಾನೆ.
- Hebrews 12:26 ಇಬ್ರಿಯರಿಗೆ 12:26ಆತನ ಧ್ವನಿಯು ಆಗ ಭೂಮಿಯನ್ನು ಕದಲಿಸಿತು; ಈಗಲಾದರೋ ಆತನು--ಇನ್ನೊಂದೇ ಸಾರಿ ನಾನು ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ಕದಲಿಸುತ್ತೇನೆಂದು ವಾಗ್ದಾನ ಮಾಡಿ ಹೇಳಿದ್ದಾನೆ.
- Deuteronomy 5:22–23 ಧರ್ಮೋಪದೇಶಕಾಂಡ 5:22–23ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು. (ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ ನೀವು ಕತ್ತಲೆಯಿಂದ ಆ ಶಬ್ದವನ್ನು ಕೇಳಿ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ)
- Matthew 24:29 ಮತ್ತಾಯನು 24:29ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಬೀಳುವವು ಆಕಾಶದ ಶಕ್ತಿಗಳು ಕದಲಿಸಲ್ಪಡುವವು.
- Joel 3:16 ಯೋವೇಲ 3:16ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು.
- Revelation 20:11 ಪ್ರಕಟನೆ 20:11ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು.
- John 13:7 ಯೋಹಾನನು 13:7ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಮಾಡುವದು ಏನೆಂದು ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಅಂದನು.
- Mark 15:33 ಮಾರ್ಕನು 15:33ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.
- Psalm 68:4 ಕೀರ್ತನೆಗಳು 68:4ದೇವರಿಗೆ ಹಾಡಿರಿ; ಆತನ ನಾಮಕ್ಕೆ ಸ್ತುತಿಗಳನ್ನು ಹಾಡಿರಿ; ಆಕಾಶಗಳ ಮೇಲೆ ಯಾಹು ಎಂಬ ತನ್ನ ಹೆಸರಿನ ಮೇಲೆ ಸವಾರಿಮಾಡುವಾತನನ್ನು ಕೊಂಡಾಡಿ ಆತನ ಮುಂದೆ ಉತ್ಸಾಹಪಡಿರಿ.