Psalms · chapter 18 · verse 7
Psalm 18:7 in Kannada
ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು;
Aaga aatanu kopagondiddanu. Bhoomiyu kadali kampisitu; parvatagala astivaaragalu saha nadugi kadalidavu;
Psalm 18:7 in English
- King James Version (KJV)
- Then the earth shook and trembled; the foundations also of the hills moved and were shaken, because he was wroth.
- World English Bible (WEB)
- Then the earth shook and trembled. The foundations also of the mountains quaked and were shaken, because he was angry.
- American Standard Version (ASV)
- Then the earth shook and trembled; The foundations also of the mountains quaked And were shaken, because he was wroth.
- Bible in Basic English (BBE)
- Then trouble and shock came on the earth; and the bases of the mountains were moved and shaking, because he was angry.
- Darby Translation (DBY)
- Then the earth shook and quaked, and the foundations of the mountains trembled and shook, because he was wroth.
- Webster's Bible (WBS)
- Then the earth shook and trembled; the foundations also of the hills moved and were shaken, because he was wroth.
- Young's Literal Translation (YLT)
- And shake and tremble doth the earth, And foundations of hills are troubled, And they shake — because He hath wrath.
Read in context
- 5ಪಾತಾಳದ ದುಃಖಗಳು ನನ್ನನ್ನು ಸುತ್ತಿಕೊಂಡವು; ಮರಣದ ನೇಣುಗಳು ನನ್ನನ್ನು ಸುತ್ತಿದವು.
- 6ನನ್ನ ಇಕ್ಕಟ್ಟಿನಲ್ಲಿ ಕರ್ತನನ್ನು ಬೇಡಿದೆನು; ನನ್ನ ದೇವರಿಗೆ ಮೊರೆಯಿಟ್ಟೆನು; ಆತನು ತನ್ನ ಮಂದಿರದೊಳಗಿಂದ ನನ್ನ ಸ್ವರವನ್ನು ಕೇಳಿದನು; ನನ್ನ ಮೊರೆಯು ಆತನ ಸನ್ನಿಧಿಗೂ ಆತನ ಕಿವಿಗಳಲ್ಲಿಯೂ ಮುಟ್ಟಿತು.
- 7ಆಗ ಆತನು ಕೋಪಗೊಂಡಿದ್ದನು. ಭೂಮಿಯು ಕದಲಿ ಕಂಪಿಸಿತು; ಪರ್ವತಗಳ ಅಸ್ತಿವಾರಗಳು ಸಹ ನಡುಗಿ ಕದಲಿದವು;
- 8ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು.
- 9ಆತನು ಆಕಾಶ ಗಳನ್ನು ಬೊಗ್ಗಿಸಿ ಇಳಿದನು; ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು.
Cross references
- Acts 4:31 ಅಪೊಸ್ತಲರ ಕೃತ್ಯಗಳು 4:31ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.
- Psalm 68:7–8 ಕೀರ್ತನೆಗಳು 68:7–8ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ. ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.
- Ezekiel 38:19–20 ಯೆಹೆಜ್ಕೇಲನು 38:19–20ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನ ಇಸ್ರಾಯೇಲ್ ದೇಶದಲ್ಲಿ ಮಹಾಕಂಪನ ಉಂಟಾಗು ವದು; ಆಗ ಸಮುದ್ರದ ವಿಾನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವವು; ಪರ್ವತಗಳು ಕೆಡವಲ್ಪಡುವವು, ಇಳಿ ಜಾರುಗಳು ಬೀಳುವವು, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವವು.
- Acts 16:25–26 ಅಪೊಸ್ತಲರ ಕೃತ್ಯಗಳು 16:25–26ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡಿದವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು. ಸೆರೆಯಲ್ಲಿದ್ದವರು ಅವುಗಳನ್ನು ಕೇಳುತ್ತಿದ್ದರು. ಆಗ ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿ ವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.
- Jeremiah 4:24 ಯೆರೆಮೀಯ 4:24ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು.
- Deuteronomy 32:22 ಧರ್ಮೋಪದೇಶಕಾಂಡ 32:22ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು.
- Judges 5:4 ನ್ಯಾಯಸ್ಥಾಪಕರು 5:4ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
- 1 Corinthians 13:2 1 ಕೊರಿಂಥದವರಿಗೆ 13:2ನನಗೆ ಪ್ರವಾದನ ವರವಿದ್ದರೂ ಎಲ್ಲಾ ರಹಸ್ಯಗಳನ್ನು ಮತ್ತು ಸಕಲ ಜ್ಞಾನವನ್ನು ತಿಳಿದುಕೊಂಡವನಾಗಿದ್ದರೂ ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿ ದ್ದೇನೆ.
- Matthew 28:2 ಮತ್ತಾಯನು 28:2ಮತ್ತು ಇಗೋ, ಅಲ್ಲಿ ಮಹಾಭೂಕಂಪ ಉಂಟಾಯಿತು; ಯಾಕಂದರೆ ಕರ್ತನ ದೂತನು ಪರಲೋಕದಿಂದ ಇಳಿದು ಬಂದು ಬಾಗಲಿನಿಂದ ಕಲ್ಲನ್ನು ಉರುಳಿಸಿ ಅದರ ಮೇಲೆ ಕೂತುಕೊಂಡನು.
- Psalm 114:4–7 ಕೀರ್ತನೆಗಳು 114:4–7ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು. ಸಮುದ್ರವೇ, ನಿನಗೆ ಏನಾಯಿತು? ಯಾಕೆ ಓಡಿ ಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ? ಬೆಟ್ಟಗಳೇ, ಟಗರುಗಳ ಹಾಗೆಯೂ ಚಿಕ್ಕ ಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವದು ಯಾಕೆ? ಬಂಡೆಯನ್ನು ನೀರಿನ ಕೆರೆಗೂ ಬೆಣಚು ಕಲ್ಲನ್ನು ನೀರಿನ ಬುಗ್ಗೆಗೂ ಮಾರ್ಪಡಿಸುವಕರ್ತನ ಸನ್ನಿಧಿ ಯಲ್ಲಿಯೂ ಯಾಕೋಬನ ದೇವರ ಮುಂದೆಯೂ ಭೂಮಿಯೇ, ನಡುಗು.
- Habakkuk 3:6 ಹಬಕ್ಕೂಕ 3:6ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ.
- Zechariah 14:4 ಜೆಕರ್ಯ 14:4ಆ ದಿನದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವ ದಿಕ್ಕಿನಲ್ಲಿರುವ ಎಣ್ಣೇ ಮರದ ಗುಡ್ಡದ ಮೇಲೆ ನಿಲ್ಲುವವು; ಎಣ್ಣೇ ಮರದ ಗುಡ್ಡವು ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವದು; ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದು ಕೊಳ್ಳುವದು.