Psalms · chapter 19 · verse 1
Psalm 19:1 in Kannada
ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.
Aakaashagalu devara mahimeyannu saaruttave; antarikshavu aatana kai kelasa vannu torisuttade.
Psalm 19:1 in English
- King James Version (KJV)
- To the chief Musician, A Psalm of David. The heavens declare the glory of God; and the firmament sheweth his handywork.
- World English Bible (WEB)
- For the Chief Musician. A Psalm by David. The heavens declare the glory of God. The expanse shows his handiwork.
- American Standard Version (ASV)
- For the Chief Musician. A Psalm of David. The heavens declare the glory of God; And the firmament showeth his handiwork.
- Bible in Basic English (BBE)
- To the chief music-maker. A Psalm. Of David. The heavens are sounding the glory of God; the arch of the sky makes clear the work of his hands.
- Darby Translation (DBY)
- To the chief Musician. A Psalm of David. The heavens declare the glory of God; and the expanse sheweth the work of his hands.
- Webster's Bible (WBS)
- To the chief Musician, A Psalm of David. The heavens declare the glory of God; and the firmament showeth the work of his hands.
- Young's Literal Translation (YLT)
- To the Overseer. — A Psalm of David. The heavens [are] recounting the honour of God, And the work of His hands The expanse [is] declaring.
Read in context
- 1ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.
- 2ದಿನವು ದಿನಕ್ಕೆ ಮಾತನ್ನು ಉಚ್ಚರಿಸುತ್ತದೆ; ರಾತ್ರಿಯು ರಾತ್ರಿಗೆ ತಿಳುವಳಿಕೆಯನ್ನು ಅರುಹುತ್ತದೆ.
- 3ಮಾತಿಲ್ಲ, ಭಾಷೆಯೂ ಇಲ್ಲ; ಅವುಗಳ ಶಬ್ದವು ಕೇಳುವದಿಲ್ಲ.
Cross references
- Psalm 8:3 ಕೀರ್ತನೆಗಳು 8:3ನಿನ್ನ ಕೈಕೆಲಸವಾದ ಆಕಾಶಗಳನ್ನೂ ನೀನು ಸಿದ್ಧ ಮಾಡಿದ ಚಂದ್ರ ನಕ್ಷತ್ರಗಳನ್ನೂ ನಾನು ಆಲೋ ಚಿಸುವಾಗ
- Romans 1:19–20 ರೋಮಾಪುರದವರಿಗೆ 1:19–20ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ. ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ.
- Psalm 50:6 ಕೀರ್ತನೆಗಳು 50:6ಆಕಾಶಗಳು ಆತನ ನೀತಿ ಯನ್ನು ಪ್ರಕಟಿಸುತ್ತವೆ; ದೇವರು ತಾನೇ ನ್ಯಾಯಾಧಿ ಪತಿಯಾಗಿದ್ದಾನೆ. ಸೆಲಾ.
- Psalm 148:3–4 ಕೀರ್ತನೆಗಳು 148:3–4ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ. ಆಕಾಶಗಳ ಆಕಾಶಗಳೇ, ಆಕಾಶಗಳ ಮೇಲೆ ಇರುವ ನೀರುಗಳೇ, ಆತನನ್ನು ಸ್ತುತಿಸಿರಿ.
- Psalm 33:6 ಕೀರ್ತನೆಗಳು 33:6ಕರ್ತನ ವಾಕ್ಯ ದಿಂದ ಆಕಾಶವೂ ಆತನ ಬಾಯಿಯ ಉಸುರಿನಿಂದ ಅದರ ಸೈನ್ಯವೆಲ್ಲವೂ ಉಂಟಾದವು.
- Genesis 1:14–15 ಆದಿಕಾಂಡ 1:14–15ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ; ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು. ಅದು ಹಾಗೆಯೇ ಆಯಿತು.
- Psalm 150:1–2 ಕೀರ್ತನೆಗಳು 150:1–2ನೀವು ಕರ್ತನನ್ನು ಸ್ತುತಿಸಿರಿ. ದೇವರನ್ನು ಆತನ ಪರಿಶುದ್ಧ ಆಲಯದಲ್ಲಿ ಸ್ತುತಿಸಿರಿ; ಆತನ ಬಲದ ಆಂತರಿಕ್ಷದಲ್ಲಿ ಆತನನ್ನು ಸ್ತುತಿಸಿರಿ. ಆತನ ಪರಾಕ್ರಮಗಳಿಗೋಸ್ಕರ ಆತನನ್ನು ಸ್ತುತಿಸಿರಿ; ಆತನ ಮಹಾ ಪ್ರಭಾವದ ಪ್ರಕಾರ ಆತನನ್ನು ಸ್ತುತಿಸಿರಿ.
- Jeremiah 10:11–12 ಯೆರೆಮೀಯ 10:11–12ನೀವು ಅವರಿಗೆ ಹೀಗೆ ಹೇಳಬೇಕು--ಆಕಾಶ ಗಳನ್ನೂ ಭೂಮಿಯನ್ನೂ ಸೃಷ್ಟಿಸದ ದೇವರುಗಳು ಭೂಮಿಯ ಮೇಲಿನಿಂದಲೂ ಈ ಆಕಾಶಗಳ ಕೆಳಗಿ ನಿಂದಲೂ ನಾಶವಾಗುವವು. ಆತನು ಭೂಮಿಯನ್ನು ತನ್ನ ಶಕ್ತಿಯಿಂದ ಉಂಟು ಮಾಡಿದನು, ಭೂಲೋಕವನ್ನು ತನ್ನ ಜ್ಞಾನದಿಂದ ಸ್ಥಾಪಿಸಿದನು, ಆಕಾಶಗಳನ್ನು ತನ್ನ ವಿವೇಕದಿಂದ ಹಾಸಿ ದನು;
- Daniel 12:3 ದಾನಿಯೇಲನು 12:3ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು;
- Psalm 115:16 ಕೀರ್ತನೆಗಳು 115:16ಆಕಾಶಗಳು ಕರ್ತನವುಗಳೇ. ಆತನು ಭೂಮಿ ಯನ್ನು ನರಪುತ್ರರಿಗೆ ಕೊಟ್ಟಿದ್ದಾನೆ.
- Isaiah 40:22–26 ಯೆಶಾಯ 40:22–26ಆಕಾಶ ಮಂಡಲವನ್ನು ತೆರೆಯಂತೆ ವಿಸ್ತರಿಸಿ ಅದರೊಳಗೆ ವಾಸಮಾಡುವ ಗುಡಾರದಂತೆ ಹರಡಿ ಭೂನಿವಾಸಿಗಳು ಮಿಡತೆಯಂತೆ ಕಾಣಿಸುವಷ್ಟು ಭೂವೃತ್ತದ ಮೇಲೆ ಕೂತಿರುವಾತನು ಆತನೇ. ಅದು ಪ್ರಭುಗಳನ್ನು ನಿರ್ನಾಮ ಮಾಡುತ್ತದೆ ಭೂಮಿಯ ನ್ಯಾಯಾಧಿಪತಿಗಳನ್ನು ಶೂನ್ಯವಾಗುವಂತೆ ಮಾಡು ತ್ತದೆ. 2 ಹೌದು, ಅವರು ನೆಡಲ್ಪಡುವದಿಲ್ಲ ಬಿತ್ತ ಲ್ಪಡುವದಿಲ್ಲ. ಹೌದು ಅವರ ಬುಡವು ಭೂಮಿ ಯಲ್ಲಿ ಬೇರೂರುವದಿಲ್ಲ. ಆತನು ಶ್ವಾಸವನ್ನು ಅವರ ಮೇಲೆ ಊದಲು ಒಣಗಿಹೋಗುವರು. ಬಿರು ಗಾಳಿಯು ಅವರನ್ನು ಹೊಟ್ಟಿನಂತೆ ಬಡಿದುಕೊಂಡು ಹೋಗುವದು. ಹೀಗಿರಲು ನನ್ನನ್ನು ಯಾರಿಗೆ ಹೋಲಿಸಿ ಸರಿ ಸಮಾನ ಮಾಡುತ್ತೀರಿ ಎಂದು ಪರಿಶುದ್ಧನಾದವನು ಹೇಳುತ್ತಾನೆ. ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ; ಇಗೋ, ಇವುಗಳನ್ನು ಸೃಷ್ಟಿಸಿದಾತನು ಯಾರು? ಆತನೇ ತನ್ನ ಮಹಾಶಕ್ತಿಯಿಂದಲೂ ಅವುಗಳ ಸೈನ್ಯವನ್ನೆಲ್ಲಾ ಲೆಕ್ಕಮಾಡಿ ಹೊರಗೆ ತರು ವನು. ಆತನು ಅತಿ ಬಲಾಢ್ಯನಾಗಿರುವದರಿಂದ ಅವುಗಳೊಳಗೆ ಒಂದೂ ತಪ್ಪದು.
- Genesis 1:6–8 ಆದಿಕಾಂಡ 1:6–8ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು. ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು. ಅದು ಹಾಗೆಯೇ ಆಯಿತು. ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು. ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು.