Psalms · chapter 2 · verse 5
Psalm 2:5 in Kannada
ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು.
Aaga aatanu tanna kopadinda avara sangada maatanaaduvanu; tanna kopaaveshadinda ava rannu kalavalapadisuvanu.
Psalm 2:5 in English
- King James Version (KJV)
- Then shall he speak unto them in his wrath, and vex them in his sore displeasure.
- World English Bible (WEB)
- Then he will speak to them in his anger, and terrify them in his wrath:
- American Standard Version (ASV)
- Then will he speak unto them in his wrath, And vex them in his sore displeasure:
- Bible in Basic English (BBE)
- Then will his angry words come to their ears, and by his wrath they will be troubled:
- Darby Translation (DBY)
- Then will he speak to them in his anger, and in his fierce displeasure will he terrify them:
- Webster's Bible (WBS)
- Then shall he speak to them in his wrath, and trouble them in his sore displeasure.
- Young's Literal Translation (YLT)
- Then doth He speak unto them in His anger, And in His wrath He doth trouble them:
Read in context
- 3ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ.
- 4ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು! ಕರ್ತನು ಅವರನ್ನು ಪರಿಹಾಸ್ಯ ಮಾಡುವನು.
- 5ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು.
- 6ಆದಾಗ್ಯೂ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.
- 7ಕಟ್ಟಳೆಯನ್ನು ಸಾರುತ್ತೇನೆ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
Cross references
- Isaiah 11:4 ಯೆಶಾಯ 11:4ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
- Revelation 19:15 ಪ್ರಕಟನೆ 19:15ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ.
- Psalm 21:9 ಕೀರ್ತನೆಗಳು 21:9ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
- Psalm 110:5–6 ಕೀರ್ತನೆಗಳು 110:5–6ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು. ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.
- Psalm 78:49–50 ಕೀರ್ತನೆಗಳು 78:49–50ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು. ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ
- Luke 19:27 ಲೂಕನು 19:27ಆದರೆ ತಮ್ಮ ಮೇಲೆ ನಾನು ಆಡಳಿತ ಮಾಡುವದಕ್ಕೆ ಮನಸ್ಸಿಲ್ಲದ ಆ ನನ್ನ ವಿರೋಧಿಗಳನ್ನು ಇಲ್ಲಿಗೆ ತಂದು ನನ್ನ ಮುಂದೆ ಸಂಹಾರ ಮಾಡಿರಿ ಅಂದನು.
- Isaiah 66:6 ಯೆಶಾಯ 66:6ಪಟ್ಟಣ ದೊಳಗಿನ ಗದ್ದಲದ ಶಬ್ದವೂ ದೇವಾಲಯದೊಳಗಿಂದ ಸ್ವರವೂ ತನ್ನ ಶತ್ರುಗಳಿಗೆ ಮುಯ್ಯಿಗೆಮುಯ್ಯಿ ತೀರಿ ಸುವ ಕರ್ತನ ಸ್ವರವಾಗಿದೆ.
- Zechariah 1:15 ಜೆಕರ್ಯ 1:15ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು.
- Revelation 1:16 ಪ್ರಕಟನೆ 1:16ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು.
- Matthew 23:33–36 ಮತ್ತಾಯನು 23:33–36ಹಾವು ಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆ ಯಿಂದ ಹೇಗೆ ತಪ್ಪಿಸಿಕೊಂಡೀರಿ? ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು. ನಿಮಗೆ ನಿಜವಾಗಿ ಹೇಳು ತ್ತೇನೆ--ಇವೆಲ್ಲವುಗಳು ಈ ಸಂತತಿಯವರ ಮೇಲೆ ಬರುವವು.
- Luke 19:43–44 ಲೂಕನು 19:43–44ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು. ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
- Psalm 50:16–22 ಕೀರ್ತನೆಗಳು 50:16–22ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ? ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ. ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ. ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ. ನೀನು ಕೂತು ಕೊಂಡು ನಿನ್ನ ಸಹೋದರನಿಗೆ ವಿರೋಧವಾಗಿ ನುಡಿ ಯುತ್ತೀ; ನಿನ್ನ ಸ್ವಂತ ಒಡಹುಟ್ಟಿದವನ ಮೇಲೆ ಚಾಡಿ ಹೇಳುತ್ತೀ. ಇವುಗಳನ್ನು ನೀನು ಮಾಡಿದಾಗ್ಯೂ ನಾನು ಮೌನವಾಗಿದ್ದೆನು; ಆದದರಿಂದ ನಾನೂ ಸಹ ನಿನ್ನ ಹಾಗೆ ಒಬ್ಬನೆಂದು ನೀನು ನೆನಸಿದಿ; ಆದರೆ ನಾನು ನಿನ್ನನ್ನು ಗದರಿಸಿ ನಿನ್ನ ಕಣ್ಣುಗಳ ಮುಂದೆ ಈ ಕೃತ್ಯಗಳನ್ನು ಕ್ರಮವಾಗಿಡುವೆನು. ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.