Psalms · chapter 22 · verse 17
Psalm 22:17 in Kannada
ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ.
Nanna elu bugalannellaa enisuttene; avaru nannannu drushtisi noduttaare.
Psalm 22:17 in English
- King James Version (KJV)
- I may tell all my bones: they look [and] stare upon me.
- World English Bible (WEB)
- I can count all of my bones. They look and stare at me.
- American Standard Version (ASV)
- I may count all my bones. They look and stare upon me;
- Bible in Basic English (BBE)
- I am able to see all my bones; their looks are fixed on me:
- Darby Translation (DBY)
- I may count all my bones. They look, they stare upon me;
- Webster's Bible (WBS)
- I may number all my bones: they look [and] stare upon me.
- Young's Literal Translation (YLT)
- I count all my bones — they look expectingly, They look upon me,
Read in context
- 15ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.
- 16ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
- 17ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ.
- 18ನನ್ನ ವಸ್ತ್ರಗಳನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.
- 19ಆದರೆ ಓ ಕರ್ತನೇ, ನೀನು ನನ್ನಿಂದ ದೂರವಾಗಿರಬೇಡ; ಓ ನನ್ನ ಬಲವೇ, ನನ್ನ ಸಹಾಯಕ್ಕೆ ತ್ವರೆಪಡು.
Cross references
- Luke 23:35 ಲೂಕನು 23:35ಜನರು ನೋಡುತ್ತಾ ನಿಂತುಕೊಂಡಿ ದ್ದರು. ಆಗ ಅವರೊಂದಿಗೆ ಅಧಿಕಾರಿಗಳು ಸಹ ಆತ ನಿಗೆ ಅಪಹಾಸ್ಯ ಮಾಡಿ--ಈತನು ಬೇರೆಯವರನ್ನು ರಕ್ಷಿಸಿದನು; ಇವನು ದೇವರು ಆರಿಸಿಕೊಂಡ ಕ್ರಿಸ್ತನಾಗಿ ದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಅಂದರು.
- Job 33:21 ಯೋಬನು 33:21ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ.
- Matthew 27:39–41 ಮತ್ತಾಯನು 27:39–41ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ-- ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು. ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ--
- Luke 23:27 ಲೂಕನು 23:27ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು.
- Isaiah 52:14 ಯೆಶಾಯ 52:14ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Mark 15:29–32 ಮಾರ್ಕನು 15:29–32ಇದ ಲ್ಲದೆ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಅಲ್ಲಾಡಿಸಿ-ಹಾ! ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದುಬಾ ಎಂದು ಹೇಳಿ ಆತನನು ದೂಷಿಸಿದರು. ಅದೇ ಪ್ರಕಾರ ಪ್ರಧಾನ ಯಾಜಕರು ಸಹ ಶಾಸ್ತ್ರಿಗಳೊಂದಿಗೆ ಆತನನ್ನು ಹಾಸ್ಯಮಾಡಿ--ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. ಇಸ್ರಾಯೇ ಲ್ಯರ ಅರಸನಾದ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ನೋಡಿ ನಂಬುವೆವು ಎಂದು ತಮ್ಮಲ್ಲಿ ಅಂದುಕೊಂಡರು; ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರೂ ಆತನನ್ನು ದೂಷಿಸಿದರು.
- Psalm 102:3–5 ಕೀರ್ತನೆಗಳು 102:3–5ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ. ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ. ನನ್ನ ಮೂಲುಗುವಿಕೆಯ ಸ್ವರದಿಂದ ಎಲುಬುಗಳು ನನ್ನ ಮಾಂಸಕ್ಕೆ ಅಂಟುತ್ತವೆ.
- Matthew 27:36 ಮತ್ತಾಯನು 27:36ಮತ್ತು ಅವರು ಕೆಳಗೆ ಕೂತುಕೊಂಡು ಆತನನ್ನು ಕಾಯುತ್ತಿದ್ದರು.