Skip to content
ThuthiThuthiThuthi
Psalms · chapter 22 of 150 · 31 verses

Psalm 22 in Kannada

ಕೀರ್ತನೆಗಳು 22

  1. ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ.

    To the chief Musician upon Aijeleth Shahar, A Psalm of David. My God, my God, why hast thou forsaken me? [why art thou so] far from helping me, [and from] the words of my roaring?

  2. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ.

    O my God, I cry in the daytime, but thou hearest not; and in the night season, and am not silent.

  3. ಆದರೆ ನೀನು ಪರಿಶುದ್ಧನಾಗಿದ್ದೀ; ನೀನು ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸ ಮಾಡುವಾ ತನು.

    But thou [art] holy, [O thou] that inhabitest the praises of Israel.

  4. ನಿನ್ನಲ್ಲಿ ನಮ್ಮ ಪಿತೃಗಳು ಭರವಸವಿಟ್ಟರು; ಅವರು ಭರವಸವಿಟ್ಟದ್ದರಿಂದ ನೀನು ಅವರನ್ನು ತಪ್ಪಿ ಸಿದಿ.

    Our fathers trusted in thee: they trusted, and thou didst deliver them.

  5. ನಿನಗೆ ಅವರು ಮೊರೆ ಇಟ್ಟದ್ದರಿಂದ ತಪ್ಪಿಸ ಲ್ಪಟ್ಟರು; ನಿನ್ನಲ್ಲಿ ಭರವಸವಿಟ್ಟದ್ದರಿಂದ ಅವರು ನಾಚಿಕೆ ಪಡಲಿಲ್ಲ.

    They cried unto thee, and were delivered: they trusted in thee, and were not confounded.

  6. ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.

    But I [am] a worm, and no man; a reproach of men, and despised of the people.

  7. ನನ್ನನ್ನು ನೋಡುವವರೆಲ್ಲರು ನನ್ನನ್ನು ಗೇಲಿ ಮಾಡಿ ನಗುವರು, ಅವರು ತುಟಿ ಅಗಲಮಾಡಿ ತಲೆ ಆಡಿಸುತ್ತಾ--

    All they that see me laugh me to scorn: they shoot out the lip, they shake the head, [saying],

  8. ಆತನು ಕರ್ತನ ಮೇಲೆ ಭರವಸ ವಿಟ್ಟಿದ್ದಾನಲ್ಲಾ; ಆತನು ಅವನನ್ನು ತಪ್ಪಿಸಿ ಅವನನ್ನು ಬಿಡಿಸಲಿ; ಆತನು ಅವನಲ್ಲಿ ಸಂತೋಷಪಡುತ್ತಾ ನಲ್ಲಾ ಅನ್ನುತ್ತಾರೆ.

    He trusted on the LORD [that] he would deliver him: let him deliver him, seeing he delighted in him.

  9. ಆದರೆ ನೀನು ಗರ್ಭದಿಂದ ನನ್ನನ್ನು ತೆಗೆದಿ; ನನ್ನ ತಾಯಿಯ ಎದೆಯಲ್ಲಿದ್ದಾಗ ನಾನು ನಿರೀಕ್ಷಿಸುವಂತೆ ಮಾಡಿದಿ.

    But thou [art] he that took me out of the womb: thou didst make me hope [when I was] upon my mother’s breasts.

  10. ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ನನ್ನ ತಾಯಿಯ ಹೊಟ್ಟೆಯಿಂದ ನನ್ನನ್ನು ಬರಮಾಡಿದ ನನ್ನ ದೇವರು ನೀನೇ ಆಗಿದ್ದೀ.

    I was cast upon thee from the womb: thou [art] my God from my mother’s belly.

  11. ನನ್ನಿಂದ ದೂರವಾಗಿರಬೇಡ; ಇಕ್ಕಟ್ಟು ಸವಿಾಪ ವಾಗಿದೆ; ನನಗೆ ಸಹಾಯಕನು ಯಾರೂ ಇಲ್ಲ.

    Be not far from me; for trouble [is] near; for [there is] none to help.

  12. ಬಹಳ ಹೋರಿಗಳು ನನ್ನನ್ನು ಸುತ್ತಿಕೊಂಡಿವೆ; ಬಾಷಾನಿನ ಬಲವಾದ ಹೋರಿಗಳು ನನ್ನನ್ನು ಮುತ್ತಿ ಕೊಂಡಿವೆ.

    Many bulls have compassed me: strong [bulls] of Bashan have beset me round.

  13. ಹರಿದು ಬಿಡುವಂಥ ಗರ್ಜಿಸುವ ಸಿಂಹದ ಹಾಗೆ ನನ್ನ ಮೇಲೆ ತಮ್ಮ ಬಾಯಿ ತೆರೆದಿ ದ್ದಾರೆ.

    They gaped upon me [with] their mouths, [as] a ravening and a roaring lion.

  14. ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.

    I am poured out like water, and all my bones are out of joint: my heart is like wax; it is melted in the midst of my bowels.

  15. ನನ್ನ ಶಕ್ತಿ ಬೋಕಿಯ ಹಾಗೆ ಒಣಗಿ ಹೋಗಿದೆ; ನನ್ನ ನಾಲಿಗೆ ಅಂಗಳಕ್ಕೆ ಹತ್ತುತ್ತದೆ; ಮರಣದ ಧೂಳಿಗೆ ನನ್ನನ್ನು ಬರಮಾಡಿದಿ.

    My strength is dried up like a potsherd; and my tongue cleaveth to my jaws; and thou hast brought me into the dust of death.

  16. ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.

    For dogs have compassed me: the assembly of the wicked have inclosed me: they pierced my hands and my feet.

  17. ನನ್ನ ಎಲು ಬುಗಳನ್ನೆಲ್ಲಾ ಎಣಿಸುತ್ತೇನೆ; ಅವರು ನನ್ನನ್ನು ದೃಷ್ಟಿಸಿ ನೋಡುತ್ತಾರೆ.

    I may tell all my bones: they look [and] stare upon me.

  18. ನನ್ನ ವಸ್ತ್ರಗಳನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ನನ್ನ ಅಂಗಿಗೋಸ್ಕರ ಚೀಟು ಹಾಕುತ್ತಾರೆ.

    They part my garments among them, and cast lots upon my vesture.

  19. ಆದರೆ ಓ ಕರ್ತನೇ, ನೀನು ನನ್ನಿಂದ ದೂರವಾಗಿರಬೇಡ; ಓ ನನ್ನ ಬಲವೇ, ನನ್ನ ಸಹಾಯಕ್ಕೆ ತ್ವರೆಪಡು.

    But be not thou far from me, O LORD: O my strength, haste thee to help me.

  20. ನನ್ನ ಪ್ರಾಣವನ್ನು ಕತ್ತಿಯಿಂದಲೂ ನನಗೆ ಪ್ರಿಯವಾದದ್ದನ್ನು ನಾಯಿಯ ಬಲದಿಂದಲೂ ಬಿಡಿಸು.

    Deliver my soul from the sword; my darling from the power of the dog.

  21. ನನ್ನನ್ನು ಸಿಂಹದ ಬಾಯಿಂದ ರಕ್ಷಿಸು; ನನ್ನನ್ನು ಕಾಡುಕೋಣಗಳ ಕೊಂಬುಗಳಿಂದ ತಪ್ಪಿಸಿ ಉತ್ತರ ಕೊಟ್ಟೆಯಲ್ಲಾ.

    Save me from the lion’s mouth: for thou hast heard me from the horns of the unicorns.

  22. ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.

    I will declare thy name unto my brethren: in the midst of the congregation will I praise thee.

  23. ಕರ್ತನಿಗೆ ಭಯಪಡುವವರೇ, ಆತನನ್ನು ಸ್ತುತಿಸಿರಿ; ಯಾಕೋಬಿನ ಎಲ್ಲಾ ಸಂತಾನದವರೇ, ಆತನನ್ನು ಘನಪಡಿಸಿರಿ; ಇಸ್ರಾಯೇಲಿನ ಎಲ್ಲಾ ಸಂತಾನದವರೇ, ಆತನಿಗೆ ಭಯಪಡಿರಿ.

    Ye that fear the LORD, praise him; all ye the seed of Jacob, glorify him; and fear him, all ye the seed of Israel.

  24. ಸಂಕಟ ಪಡುವವನ ಸಂಕಟ ವನ್ನು ಆತನು ತಿರಸ್ಕರಿಸಲಿಲ್ಲ, ಅಸಹ್ಯಿಸಲಿಲ್ಲ; ತನ್ನ ಮುಖವನ್ನು ಅವನಿಂದ ಮರೆಮಾಡಲಿಲ್ಲ; ಆದರೆ ಅವನು ಮೊರೆಯಿಡಲು ಆತನು ಕೇಳಿದನು.

    For he hath not despised nor abhorred the affliction of the afflicted; neither hath he hid his face from him; but when he cried unto him, he heard.

  25. ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು.

    My praise [shall be] of thee in the great congregation: I will pay my vows before them that fear him.

  26. ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು.

    The meek shall eat and be satisfied: they shall praise the LORD that seek him: your heart shall live for ever.

  27. ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.

    All the ends of the world shall remember and turn unto the LORD: and all the kindreds of the nations shall worship before thee.

  28. ರಾಜ್ಯವು ಕರ್ತನದೇ; ಜನಾಂಗಗಳಲ್ಲಿ ಆಳುವಾತನು ಆತನೇ.

    For the kingdom [is] the LORD’s: and he [is] the governor among the nations.

  29. ಭೂಮಿಯ ಪುಷ್ಟರೆಲ್ಲರೂ ಉಂಡು ಆರಾಧಿಸುವರು; ತಮ್ಮ ಪ್ರಾಣವನ್ನು ಬದುಕಿಸಲಾರದೆ ಧೂಳಿನಲ್ಲಿ ಇಳಿಯುವವರೆಲ್ಲರೂ ಆತನ ಮುಂದೆ ಅಡ್ಡಬೀಳುವರು.

    All [they that be] fat upon earth shall eat and worship: all they that go down to the dust shall bow before him: and none can keep alive his own soul.

  30. ಒಂದು ಸಂತಾನವು ಆತನನ್ನು ಸೇವಿಸುವದು. ಅದು ಕರ್ತನ ಸಂತತಿ ಎಂದು ಎಣಿಸ ಲ್ಪಡುವದು.ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.

    A seed shall serve him; it shall be accounted to the Lord for a generation.

  31. ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.

    They shall come, and shall declare his righteousness unto a people that shall be born, that he hath done [this].

All chapters of Psalms · Kannada Bible · Psalm 22 in Tamil

Kannada Bible: Kannada Old Version, public domain.

King James Version: public domain.