Psalms · chapter 27 · verse 14
Psalm 27:14 in Kannada
ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Kartanigaagi kaadiru, dhairyavaagiru; aatanu ninna hrudayavannu bala padisuvanu. Kartanigaagi kaadiru endu naanu heluvenu.
Psalm 27:14 in English
- King James Version (KJV)
- Wait on the LORD: be of good courage, and he shall strengthen thine heart: wait, I say, on the LORD.
- World English Bible (WEB)
- Wait for the LORD. Be strong, and let your heart take courage. Yes, wait for the LORD.
- American Standard Version (ASV)
- Wait for Jehovah: Be strong, and let thy heart take courage; Yea, wait thou for Jehovah.
- Bible in Basic English (BBE)
- Let your hope be in the Lord: take heart and be strong; yes, let your hope be in the Lord.
- Darby Translation (DBY)
- Wait for Jehovah; be strong and let thy heart take courage: yea, wait for Jehovah.
- Webster's Bible (WBS)
- Wait on the LORD: be of good courage, and he will strengthen thy heart: wait, I say, on the LORD.
- Young's Literal Translation (YLT)
- Look unto Jehovah — be strong, And He doth strengthen thy heart, Yea, look unto Jehovah!
Read in context
- 12ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
- 13ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
- 14ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Cross references
- Isaiah 40:31 ಯೆಶಾಯ 40:31ಆದರೆ ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಅವರು ಹದ್ದುಗ ಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಓಡಿ ದಣಿಯರು, ನಡೆದು ಬಳಲರು.
- Psalm 31:24 ಕೀರ್ತನೆಗಳು 31:24ಕರ್ತನಲ್ಲಿ ನಿರೀಕ್ಷಿ ಸುವವರೆಲ್ಲರೇ, ಧೈರ್ಯವಾಗಿರ್ರಿ; ಆತನು ನಿಮ್ಮ ಹೃದಯವನ್ನು ದೃಢಪಡಿಸುವನು.
- Isaiah 30:18 ಯೆಶಾಯ 30:18ಹೀಗಿರಲು ಕರ್ತನು ನಿಮಗೆ ಕೃಪೆಯನ್ನು ತೋರಿಸ ಬೇಕೆಂದು ಕಾದಿರುವನು. ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು. ಕರ್ತನು ನ್ಯಾಯಾಧಿಪತಿಯಾದ ದೇವರಾಗಿದ್ದಾನೆ. ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.
- Psalm 130:5 ಕೀರ್ತನೆಗಳು 130:5ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.
- Psalm 37:34 ಕೀರ್ತನೆಗಳು 37:34ಕರ್ತನನ್ನು ನಿರೀಕ್ಷಿಸು, ಆತನ ಮಾರ್ಗವನ್ನು ಕೈಕೊಳ್ಳು; ಆಗ ಭೂಮಿಯನ್ನು ಸ್ವಾಧೀ ನಮಾಡಿಕೊಳ್ಳುವ ಹಾಗೆ ನಿನ್ನನ್ನು ಆತನು ಎತ್ತು ವನು; ದುಷ್ಟರು ಕಡಿದುಹಾಕಲ್ಪಟ್ಟಾಗ ನೀನು ಅದನ್ನು ನೋಡುವಿ.
- Philippians 4:13 ಫಿಲಿಪ್ಪಿಯವರಿಗೆ 4:13ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
- Habakkuk 2:3 ಹಬಕ್ಕೂಕ 2:3ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.
- Ephesians 6:10 ಎಫೆಸದವರಿಗೆ 6:10ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
- 2 Corinthians 12:9–10 2 ಕೊರಿಂಥದವರಿಗೆ 12:9–10ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
- Psalm 62:5 ಕೀರ್ತನೆಗಳು 62:5ನನ್ನ ಪ್ರಾಣವೇ, ದೇವರಿಗಾಗಿ ಮಾತ್ರ ಕಾದಿರು; ನನ್ನ ನಿರೀಕ್ಷೆಯು ಆತನಿಂದಲೇ.
- Lamentations 3:26 ಪ್ರಲಾಪಗಳು 3:26ಮನುಷ್ಯನು ನಿರೀಕ್ಷೆಯಿಂದ ಮೌನವಾಗಿ ಕರ್ತನ ರಕ್ಷಣೆಗಾಗಿ ಕಾಯು ವದು ಒಳ್ಳೆಯದು.
- Psalm 138:3 ಕೀರ್ತನೆಗಳು 138:3ನಾನು ಕೂಗಿಕೊಂಡ ದಿವಸದಲ್ಲಿ ನೀನು ನನಗೆ ಉತ್ತರ ಕೊಟ್ಟೆ; ನನ್ನ ಪ್ರಾಣವನ್ನು ಬಲಪಡಿಸಿದ್ದೀ; ನನ್ನ ಪ್ರಾಣಕ್ಕೆ ಬಲವನ್ನು ಕೊಟ್ಟು ನನ್ನನ್ನು ಬಲಪಡಿಸಿದ್ದೀ.