Psalms · chapter 27 · verse 13
Psalm 27:13 in Kannada
ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Jeevitara deshadalli kartana olletana vannu noduvenendu naanu nambade hogiddare moorchhe hoguttiddenu.kartanigaagi kaadiru, dhairyavaagiru; aatanu ninna hrudayavannu bala padisuvanu. Kartanigaagi kaadiru endu naanu heluvenu.
Psalm 27:13 in English
- King James Version (KJV)
- [I had fainted], unless I had believed to see the goodness of the LORD in the land of the living.
- World English Bible (WEB)
- I am still confident of this: I will see the goodness of the LORD in the land of the living.
- American Standard Version (ASV)
- [I had fainted], unless I had believed to see the goodness of Jehovah In the land of the living.
- Bible in Basic English (BBE)
- I had almost given up my hope of seeing the blessing of the Lord in the land of the living.
- Darby Translation (DBY)
- Unless I had believed to see the goodness of Jehovah in the land of the living...!
- Webster's Bible (WBS)
- [I had fainted] , unless I had believed to see the goodness of the LORD in the land of the living.
- Young's Literal Translation (YLT)
- I had not believed to look on the goodness of Jehovah In the land of the living!
Read in context
- 11ಓ ಕರ್ತನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನನ್ನ ವಿರೋಧಿಗಳ ನಿಮಿತ್ತ ಸಮವಾದ ಹಾದಿಯಲ್ಲಿ ನನ್ನನ್ನು ನಡಿಸು.
- 12ನನ್ನ ವೈರಿಗಳ ಇಷ್ಟಕ್ಕೆ ನನ್ನನ್ನು ಕೊಟ್ಟುಬಿಡಬೇಡ; ಸುಳ್ಳು ಸಾಕ್ಷಿಗಳೂ ಕ್ರೂರತ್ವದ ಶ್ವಾಸಬಿಡುವವರೂ ನನಗೆ ವಿರೋಧವಾಗಿ ಎದ್ದಿದ್ದಾರೆ.
- 13ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
- 14ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
Cross references
- 2 Corinthians 4:16 2 ಕೊರಿಂಥದವರಿಗೆ 4:16ಈ ಕಾರಣದಿಂದ ನಾವು ಧೈರ್ಯಗೆಡುವದಿಲ್ಲ; ಆದರೆ ನಮ್ಮ ಹೊರಮನುಷ್ಯನು ನಾಶವಾಗುತಾ ಇದ್ದರೂ ನಮ್ಮ ಒಳಮನುಷ್ಯನು ದಿನೇದಿನೇ ಹೊಸಬ ನಾಗುತ್ತಾ ಇರುವನು.
- Psalm 142:5 ಕೀರ್ತನೆಗಳು 142:5ಓ ಕರ್ತನೇ, ನಿನಗೆ ಮೊರೆಯಿಡುತ್ತೇನೆ, ನಾನು ಹೇಳುವದೇನಂದರೆ -- ನೀನು ನನ್ನ ಆಶ್ರಯವೂ ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀ ಎಂಬದೇ.
- 2 Corinthians 4:8–14 2 ಕೊರಿಂಥದವರಿಗೆ 4:8–14ಎಲ್ಲಾ ಕಡೆಗಳಲ್ಲಿ ನಮಗೆ ಕಳವಳ ವಿದ್ದರೂ ನಾವು ಸಂಕಟಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ. ಹಿಂಸೆ ಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟ ವರಾಗಿದ್ದರೂ ನಾಶವಾದವರಲ್ಲ. ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ತೋರಿ ಬರುವದಕ್ಕಾಗಿ ಕರ್ತನಾದ ಯೇಸುವಿನ ಮರಣವನ್ನು ನಾವು ಯಾವಾಗಲೂ ದೇಹದಲ್ಲಿ ಹೊರುತ್ತಾ ಇದ್ದೇವೆ. ಯಾಕಂದರೆ ಯೇಸುವಿನ ಜೀವವು ಸಹ ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿ ಬರುವದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ. ಹೀಗೆ ನಮ್ಮಲ್ಲಿ ಮರಣವೂ ನಿಮ್ಮಲ್ಲಿ ಜೀವವೂ ಪ್ರವರ್ತಿಸುತ್ತದೆ. ಹೀಗಿದ್ದರೂ--ನಾನು ನಂಬಿದೆನು, ಆದದರಿಂದ ಮಾತನಾಡಿದೆನು ಎಂದು ಬರೆಯಲ್ಪಟ್ಟಿರುವ ಪ್ರಕಾರ ನಂಬಿಕೆಯ ಆತ್ಮವನ್ನೇ ಹೊಂದಿ ನಾವು ಸಹ ನಂಬುತ್ತೇವೆ; ಆದದರಿಂದ ಮಾತನಾಡುತ್ತೇವೆ. ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನ ಮುಖಾಂತರ ಎಬ್ಬಿಸಿ ನಿಮ್ಮ ಜೊತೆಯಲ್ಲಿ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.
- Psalm 56:3 ಕೀರ್ತನೆಗಳು 56:3ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.
- Psalm 56:13 ಕೀರ್ತನೆಗಳು 56:13ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
- Psalm 31:19 ಕೀರ್ತನೆಗಳು 31:19ನಿನಗೆ ಭಯಪಡುವವರಿಗೋಸ್ಕರ ಮನುಷ್ಯ ಪುತ್ರರ ಮುಂದೆ ನಿನ್ನಲ್ಲಿ ಭರವಸೆ ಇಟ್ಟವರಿಗೋಸ್ಕರ ನೀನು ಇಟ್ಟಿರುವ ಒಳ್ಳೇತನವು ಎಷ್ಟೋ ದೊಡ್ಡದು.
- Psalm 42:5 ಕೀರ್ತನೆಗಳು 42:5ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.
- Psalm 116:9–11 ಕೀರ್ತನೆಗಳು 116:9–11ಜೀವಿತರ ದೇಶದಲ್ಲಿ ಕರ್ತನ ಮುಂದೆ ನಡೆದುಕೊಳ್ಳುವೆನು. ನಾನು ನಂಬಿದೆನು; ಆದದರಿಂದ ಮಾತಾಡಿದೆನು; ನಾನು ಬಹಳವಾಗಿ ಕುಗ್ಗಿಹೋದೆನು. ಮನುಷ್ಯ ರೆಲ್ಲರು ಸುಳ್ಳುಗಾರರೆಂದು ನಾನು ಆತುರತೆಯಿಂದ ಹೇಳಿದೆನು.
- Ephesians 2:8 ಎಫೆಸದವರಿಗೆ 2:8ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
- Job 28:13 ಯೋಬನು 28:13ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.
- 2 Corinthians 4:1 2 ಕೊರಿಂಥದವರಿಗೆ 4:1ಆದದರಿಂದ ನಾವು ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಡುವದಿಲ್ಲ.
- Jeremiah 11:19 ಯೆರೆಮೀಯ 11:19ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.