Psalms · chapter 31 · verse 1
Psalm 31:1 in Kannada
ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟು ಕೊಂಡಿದ್ದೇನೆ; ನಾನು ಎಂದಿಗೂ ಆಶಾ ಭಂಗಪಡದಂತೆ ಮಾಡು; ನಿನ್ನ ನೀತಿಯಲ್ಲಿ ನನ್ನನ್ನು ರಕ್ಷಿಸು.
O kartane, ninnalli bharavasavittu kondiddene; naanu endigoo aashaa bhangapadadante maadu; ninna neetiyalli nannannu rakshisu.
Psalm 31:1 in English
- King James Version (KJV)
- To the chief Musician, A Psalm of David. In thee, O LORD, do I put my trust; let me never be ashamed: deliver me in thy righteousness.
- World English Bible (WEB)
- For the Chief Musician. A Psalm by David. In you, LORD, I take refuge. Let me never be disappointed. Deliver me in your righteousness.
- American Standard Version (ASV)
- For the Chief Musician. A Psalm of David. In thee, O Jehovah, do I take refuge; Let me never be put to shame: Deliver me in thy righteousness.
- Bible in Basic English (BBE)
- To the chief music-maker. A Psalm. Of David. In you, O Lord, have I put my hope; let me never be shamed; keep me safe in your righteousness.
- Darby Translation (DBY)
- To the chief Musician. A Psalm of David. In thee, Jehovah, do I trust; let me never be ashamed: deliver me in thy righteousness.
- Webster's Bible (WBS)
- To the chief Musician, A Psalm of David. In thee, O LORD, do I put my trust; let me never be ashamed: deliver me in thy righteousness.
- Young's Literal Translation (YLT)
- To the Overseer. — A Psalm of David. In Thee, O Jehovah, I have trusted, Let me not be ashamed to the age, In Thy righteousness deliver me.
Read in context
- 1ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟು ಕೊಂಡಿದ್ದೇನೆ; ನಾನು ಎಂದಿಗೂ ಆಶಾ ಭಂಗಪಡದಂತೆ ಮಾಡು; ನಿನ್ನ ನೀತಿಯಲ್ಲಿ ನನ್ನನ್ನು ರಕ್ಷಿಸು.
- 2ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ಬೇಗ ನನ್ನನ್ನು ರಕ್ಷಿಸು. ನನ್ನನ್ನು ರಕ್ಷಿಸುವದಕ್ಕೆ ನನಗೆ ಬಲವಾದ ಬಂಡೆಯೂ ರಕ್ಷಣಾ ಮನೆಯೂ ಆಗಿರು.
- 3ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.
Cross references
- Romans 10:11 ರೋಮಾಪುರದವರಿಗೆ 10:11ಆತನ ಮೇಲೆ ನಂಬಿಕೆ ಇಡುವ ಯಾವನಾದರೂ ನಾಚಿಕೆಪಡುವದಿಲ್ಲ ಎಂದು ಬರಹವು ಹೇಳುತ್ತದೆ.
- Psalm 25:2 ಕೀರ್ತನೆಗಳು 25:2ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.
- Psalm 71:1–3 ಕೀರ್ತನೆಗಳು 71:1–3ಓ ಕರ್ತನೇ, ನಾನು ನಿನ್ನಲ್ಲಿ ಭರವಸವನ್ನಿಟ್ಟಿದ್ದೇನೆ; ನನಗೆ ಎಂದಿಗೂ ಆಶಾ ಭಂಗವಾಗದಿರಲಿ. ನಿನ್ನ ನೀತಿಯಲ್ಲಿ ನನ್ನನ್ನು ಬಿಡಿಸಿ ನನ್ನನ್ನು ತಪ್ಪಿಸು; ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸಿ ನನ್ನನ್ನು ರಕ್ಷಿಸು. ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.
- Psalm 22:4–5 ಕೀರ್ತನೆಗಳು 22:4–5ನಿನ್ನಲ್ಲಿ ನಮ್ಮ ಪಿತೃಗಳು ಭರವಸವಿಟ್ಟರು; ಅವರು ಭರವಸವಿಟ್ಟದ್ದರಿಂದ ನೀನು ಅವರನ್ನು ತಪ್ಪಿ ಸಿದಿ. ನಿನಗೆ ಅವರು ಮೊರೆ ಇಟ್ಟದ್ದರಿಂದ ತಪ್ಪಿಸ ಲ್ಪಟ್ಟರು; ನಿನ್ನಲ್ಲಿ ಭರವಸವಿಟ್ಟದ್ದರಿಂದ ಅವರು ನಾಚಿಕೆ ಪಡಲಿಲ್ಲ.
- Isaiah 49:23 ಯೆಶಾಯ 49:23ಅರಸುಗಳು ನಿನಗೆ ಸಾಕು ತಂದೆಗಳು, ಅವರ ರಾಣಿಯರು ನಿನಗೆ ದಾದಿಗಳಾ ಗುವರು; ಅವರು ಭೂಮಿಯ ಕಡೆಗೆ ತಮ್ಮ ಮುಖ ವನ್ನು ಬಾಗಿಸಿ, ಅಡ್ಡಬಿದ್ದು ನಿನ್ನ ಪಾದದ ಧೂಳನ್ನು ನೆಕ್ಕುವರು; ಆಗ ನಾನೇ ಕರ್ತನೆಂದು ನೀನು ತಿಳು ಕೊಳ್ಳುವಿ; ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿ ಕೆಗೆ ಈಡಾಗರು.
- Psalm 143:1 ಕೀರ್ತನೆಗಳು 143:1ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ವಿಜ್ಞಾಪನೆಗಳಿಗೆ ಕಿವಿ ಗೊಡು; ನಿನ್ನ ನಂಬಿಗಸ್ತಿಕೆಯಲ್ಲಿಯೂ ನೀತಿಯಲ್ಲಿಯೂ ನನಗೆ ಉತ್ತರಕೊಡು.
- Daniel 9:16 ದಾನಿಯೇಲನು 9:16ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ.
- Romans 5:5 ರೋಮಾಪುರದವರಿಗೆ 5:5ಈ ನಿರೀಕ್ಷೆಯು ನಾಚಿಕೆಪಡಿಸುವದಿಲ್ಲ; ನಮಗೆ ಕೊಡಲ್ಪಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆ.
- Psalm 7:8–9 ಕೀರ್ತನೆಗಳು 7:8–9ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು. ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ.
- Psalm 43:1 ಕೀರ್ತನೆಗಳು 43:1ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
- Psalm 143:11–12 ಕೀರ್ತನೆಗಳು 143:11–12ಓ ಕರ್ತನೇ, ನಿನ್ನ ಹೆಸ ರಿನ ನಿಮಿತ್ತ ನನ್ನನ್ನು ಬದುಕಿಸಿ ನಿನ್ನ ನೀತಿಗನುಸಾರ ವಾಗಿ ನನ್ನ ಪ್ರಾಣವನ್ನು ಇಕ್ಕಟ್ಟಿನೊಳಗಿಂದ ಹೊರಗೆ ಬರಮಾಡು.ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ. ನಿನ್ನ ಕರುಣೆಯಿಂದ ನನ್ನ ಶತ್ರು ಗಳನ್ನು ಸಂಹರಿಸಿ ನನ್ನ ಪ್ರಾಣವನ್ನು ಸಂಕಟ ಪಡಿಸುವವರನ್ನೆಲ್ಲಾ ನಾಶಮಾಡು; ನಾನು ನಿನ್ನ ಸೇವಕನಾಗಿದ್ದೇನೆ.