Psalms · chapter 34 · verse 15
Psalm 34:15 in Kannada
ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.
Kartana kannugalu neetivantara meleyoo aatana kivigalu avara moreya kadegoo ave.
Psalm 34:15 in English
- King James Version (KJV)
- The eyes of the LORD [are] upon the righteous, and his ears [are open] unto their cry.
- World English Bible (WEB)
- The LORD’s eyes are toward the righteous. His ears listen to their cry.
- American Standard Version (ASV)
- The eyes of Jehovah are toward the righteous, And his ears are [open] unto their cry.
- Bible in Basic English (BBE)
- The eyes of the Lord are on the upright, and his ears are open to their cry.
- Darby Translation (DBY)
- The eyes of Jehovah are upon the righteous, and his ears are toward their cry;
- Webster's Bible (WBS)
- The eyes of the LORD [are] upon the righteous, and his ears [are open] to their cry.
- Young's Literal Translation (YLT)
- The eyes of Jehovah [are] unto the righteous, And His ears unto their cry.
Read in context
- 13ಕೇಡಿನಿಂದ ನಿನ್ನ ನಾಲಿಗೆಯನ್ನೂ ಮೋಸವನ್ನು ನುಡಿಯದ ಹಾಗೆ ನಿನ್ನ ತುಟಿಗಳನ್ನೂ ಕಾಯಿ.
- 14ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾ ಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು.
- 15ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.
- 16ಕೇಡನ್ನು ಮಾಡುವವರ ಜ್ಞಾಪಕವನ್ನು ಭೂಮಿ ಯೊಳಗಿಂದ ಕಡಿದುಹಾಕುವದಕ್ಕೆ ಕರ್ತನ ಮುಖವು ಅವರಿಗೆ ವಿರೋಧವಾಗಿದೆ.
- 17ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.
Cross references
- 1 Peter 3:12 1 ಪೇತ್ರನು 3:12ಕರ್ತನ ದೃಷ್ಟಿ ನೀತಿವಂತರ ಮೇಲಿದೆ. ಆತನು ಅವರ ಪ್ರಾರ್ಥನೆಗಳಿಗೆ ಕಿವಿ ಗೊಡುತ್ತಾನೆ; ಕೆಟ್ಟದ್ದನ್ನು ಮಾಡುವವರಿಗೆ ಕರ್ತನ ಮುಖವು ವಿರೋಧವಾಗಿದೆ.
- Psalm 34:17 ಕೀರ್ತನೆಗಳು 34:17ನೀತಿವಂತರು ಕೂಗು ತ್ತಾರೆ; ಆಗ ಕರ್ತನು ಕೇಳಿ ಅವರ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವರನ್ನು ಬಿಡಿಸುತ್ತಾನೆ.
- Psalm 33:18 ಕೀರ್ತನೆಗಳು 33:18ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ.
- Job 36:7 ಯೋಬನು 36:7ನೀತಿವಂತರಿಂದ ತನ್ನ ಕಣ್ಣುಗಳನ್ನು ತೊಲಗಿಸುವದಿಲ್ಲ. ಅವರು ಅರಸುಗಳ ಸಂಗಡ ಸಿಂಹಾಸನದಲ್ಲಿ ಇದ್ದಾರೆ. ಹೌದು, ಆತನು ಅವರನ್ನು, ಎಂದೆಂದಿಗೂ ಸ್ಥಿರಪಡಿಸುತ್ತಾನೆ. ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ.
- Psalm 130:2 ಕೀರ್ತನೆಗಳು 130:2ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.
- Psalm 34:6 ಕೀರ್ತನೆಗಳು 34:6ಈ ಬಡವನು ಮೊರೆ ಯಿಡಲು; ಕರ್ತನು ಅದನ್ನು ಕೇಳಿ ಅವನ ಎಲ್ಲಾ ಇಕ್ಕಟ್ಟುಗಳೊಳಗಿಂದ ಅವನನ್ನು ರಕ್ಷಿಸಿದನು.
- 2 Chronicles 6:40 2 ಪೂರ್ವಕಾಲವೃತ್ತಾಂತ 6:40ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿನ್ನ ಕಣ್ಣುಗಳು ತೆರೆದಿರಲಿ, ನಿನ್ನ ಕಿವಿಗಳು ಆಲೈಸುತ್ತಾ ಇರಲಿ.
- Daniel 9:17–23 ದಾನಿಯೇಲನು 9:17–23ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು. ಓ ನನ್ನ ದೇವರೇ, ನೀನು ಕಿವಿಗೊಟ್ಟು ಕೇಳು; ಇಗೋ, ನಿನ್ನ ಕಣ್ಣುಗಳನ್ನು ತೆರೆದು ನಾವು ಹಾಳಾದ ದ್ದನ್ನೂ ನಿನ್ನ ಹೆಸರಿನಿಂದ ಕರೆಯಲ್ಪಡುವ ಪಟ್ಟಣವನ್ನೂ ನೋಡು ಯಾಕಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿನ್ನ ಮಹಾ ಕೃಪೆಗೋಸ್ಕರವೇ ನಮ್ಮ ವಿಜ್ಞಾಪನೆಗಳನ್ನು ನಿನ್ನ ಮುಂದೆ ಅರ್ಪಿಸುತ್ತೇವೆ. ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು. ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು. ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು. ಅವನು ನನಗೆ ತಿಳಿಸಿ ನನ್ನೊಡನೆ ಮಾತಾಡಿ ಹೇಳಿದ್ದೇನಂದರೆ--ಓ ದಾನಿಯೇಲನೇ, ನಿನಗೆ ವಿವೇಕವನ್ನೂ ಬುದ್ಧಿಯನ್ನೂ ಕೊಡುವದಕ್ಕೆ ಈಗ ನಾನು ಬಂದಿದ್ದೇನೆ. ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ಆಜ್ಞೆಯು ಬಂದಿತು. ಅದನ್ನು ನಿನಗೆ ತಿಳಿಸುವದಕ್ಕೆ ನಾನು ಬಂದಿದ್ದೇನೆ; ನೀನು ಅತಿಪ್ರಿಯನಾಗಿರುವಿ. ಆದದರಿಂದ ವಿಷಯ ವನ್ನು ಗ್ರಹಿಸಿಕೊಂಡು ದರ್ಶನವನ್ನು ಆಲೋಚಿಸು.
- Isaiah 37:14–21 ಯೆಶಾಯ 37:14–21ಹಿಜ್ಕೀಯನು ಆ ಸೇವಕರ ಕೈಯಿಂದ ಪತ್ರವನ್ನು ತೆಗೆದುಕೊಂಡು ಅದನ್ನು ಓದಿದನು; ಹಿಜ್ಕೀಯನು ಕರ್ತನ ಆಲಯಕ್ಕೆ ಹೋಗಿ ಅದನ್ನು ಕರ್ತನ ಮುಂದೆ ತೆರೆದಿಟ್ಟು, ಸೈನ್ಯಗಳ ಕರ್ತನೇ, ಕೆರೂಬಿಗಳ ಮಧ್ಯದಲ್ಲಿ ವಾಸವಾಗಿರುವ ಇಸ್ರಾ ಯೇಲ್ ದೇವರೇ, ನೀನೇ, ನೀನೊಬ್ಬನೇ, ಎಲ್ಲಾ ಭೂರಾಜ್ಯಗಳ ದೇವರು. ನೀನೇ ಭೂಮ್ಯಾಕಾಶಗಳನ್ನು ಉಂಟು ಮಾಡಿದವನು. ಓ ಕರ್ತನೇ, ಕಿವಿಗೊಟ್ಟು ಕೇಳು; ಓ ಕರ್ತನೇ, ನಿನ್ನ ಕಣ್ಣುಗಳನ್ನು ತೆರೆದು ನೋಡು; ಸನ್ಹೇರೀಬನು ಜೀವವುಳ್ಳ ದೇವರನ್ನು ದೂಷಿಸಿ ಕಳುಹಿಸಿದ ಮಾತುಗಳನ್ನೆಲ್ಲಾ ಕೇಳು. ಕರ್ತನೇ, ಅಶ್ಶೂರದ ಅರಸರು ಸಕಲ ಜನಾಂಗ ಗಳನ್ನೂ ದೇಶಗಳನ್ನೂ ಹಾಳುಮಾಡಿ, ಅವರ ದೇವತೆ ಗಳನ್ನು ಸಹ ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವರುಗಳಲ್ಲ, ಮರ, ಕಲ್ಲು, ಮನುಷ್ಯರ ಕೈ ಕೆಲಸ ಗಳೇ ಆದದರಿಂದಲೇ ಅವರು ಅವುಗಳನ್ನು ಹಾಳು ಮಾಡಿದರು. ಹೀಗಿರುವದರಿಂದ ಓ ಕರ್ತನಾದ ನಮ್ಮ ದೇವರೇ, ನೀನೇ, ನೀನೊಬ್ಬನೇ ಕರ್ತನೆಂದು ಭೂಮಿಯ ಎಲ್ಲಾ ರಾಜ್ಯಗಳು ತಿಳಿದುಕೊಳ್ಳುವಂತೆ ಅವನ ಕೈಯಿಂದ ನಮ್ಮನ್ನು ರಕ್ಷಿಸು ಎಂದು ಹಿಜ್ಕೀಯನು ಕರ್ತನಿಗೆ ಪ್ರಾರ್ಥಿಸಿದನು. ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿ ಕಳುಹಿಸಿದ್ದೇನಂದರೆ--ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹವನ್ನು ಕೇಳಿ ಅವನನ್ನು ಕುರಿತು