2 Chronicles · chapter 6 · verse 40
2 Chronicles 6:40 in Kannada
ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿನ್ನ ಕಣ್ಣುಗಳು ತೆರೆದಿರಲಿ, ನಿನ್ನ ಕಿವಿಗಳು ಆಲೈಸುತ್ತಾ ಇರಲಿ.
Eega nanna devare, ee sthaladalli maadida praarthanege ninna kannugalu teredirali, ninna kivigalu aalaisuttaa irali.
2 Chronicles 6:40 in English
- King James Version (KJV)
- Now, my God, let, I beseech thee, thine eyes be open, and [let] thine ears [be] attent unto the prayer [that is made] in this place.
- World English Bible (WEB)
- “Now, my God, let, I beg you, your eyes be open, and let your ears be attentive to the prayer that is made in this place.
- American Standard Version (ASV)
- Now, O my God, let, I beseech thee, thine eyes be open, and let thine ears be attent, unto the prayer that is made in this place.
- Bible in Basic English (BBE)
- Now, O my God, may your eyes be open and your ears awake to the prayers made in this place.
- Darby Translation (DBY)
- Now, my God, I beseech thee, let thine eyes be open and let thine ears be attentive unto the prayer [that is made] in this place.
- Webster's Bible (WBS)
- Now, my God, let, I beseech thee, thy eyes be open, and [let] thy ears [be] attentive to the prayer [that is made] in this place.
- Young's Literal Translation (YLT)
- 'Now, my God, let, I beseech Thee, Thine eyes be open, and Thine ears attentive, to the prayer of this place:
Read in context
- 38ಅವರನ್ನು ಸೆರೆಯಾಗಿ ಒಯ್ದದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ ತಮ್ಮ ಪೂರ್ಣಪ್ರಾಣ ದಿಂದಲೂ ನಿನ್ನ ಕಡೆಗೆ ತಿರುಗಿಕೊಂಡು ನೀನು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಮಾರ್ಗವಾಗಿಯೂ ನೀನು ಆದುಕೊಂಡ ಪಟ್ಟಣದ ಮಾರ್ಗವಾಗಿಯೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿದ ಈ ಆಲಯದ ಮಾರ್ಗವಾಗಿಯೂ ಅವರು ಪ್ರಾರ್ಥನೆ ಮಾಡಿದರೆ
- 39ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿ ನಿನ್ನ ಜನರು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಮನ್ನಿಸು.
- 40ಈಗ ನನ್ನ ದೇವರೇ, ಈ ಸ್ಥಳದಲ್ಲಿ ಮಾಡಿದ ಪ್ರಾರ್ಥನೆಗೆ ನಿನ್ನ ಕಣ್ಣುಗಳು ತೆರೆದಿರಲಿ, ನಿನ್ನ ಕಿವಿಗಳು ಆಲೈಸುತ್ತಾ ಇರಲಿ.
- 41ಈಗ ಓ ದೇವರಾದ ಕರ್ತನೇ, ನೀನು ನಿನ್ನ ಬಲದ ಮಂಜೂಷದ ಸಂಗಡ ನಿನ್ನ ವಿಶ್ರಾಂತಿಗೆ ಏರು; ಓ ದೇವರಾದ ಕರ್ತನೇ, ನಿನ್ನ ಯಾಜಕರು ರಕ್ಷಣೆಯನ್ನು ಧರಿಸಿಕೊಳ್ಳಲಿ; ನಿನ್ನ ಪರಿ ಶುದ್ಧರು ಒಳ್ಳೇದರಲ್ಲಿ ಸಂತೋಷಪಡಲಿ.ಓ ದೇವರಾದ ಕರ್ತನೇ, ನಿನ್ನ ಅಭಿಷಿಕ್ತನಿಗೆ ನಿನ್ನ ಮುಖ ವನ್ನು ತಿರುಗಿಸಬೇಡ; ನಿನ್ನ ಸೇವಕನಾದ ದಾವೀದ ನಿಗೆ ಅನುಗ್ರಹಿಸಿದ ಕೃಪೆಗಳನ್ನು ಜ್ಞಾಪಕಮಾಡು ಎಂದು ಬೇಡಿಕೊಂಡನು.
- 42ಓ ದೇವರಾದ ಕರ್ತನೇ, ನಿನ್ನ ಅಭಿಷಿಕ್ತನಿಗೆ ನಿನ್ನ ಮುಖ ವನ್ನು ತಿರುಗಿಸಬೇಡ; ನಿನ್ನ ಸೇವಕನಾದ ದಾವೀದ ನಿಗೆ ಅನುಗ್ರಹಿಸಿದ ಕೃಪೆಗಳನ್ನು ಜ್ಞಾಪಕಮಾಡು ಎಂದು ಬೇಡಿಕೊಂಡನು.
Cross references
- Psalm 116:2 ಕೀರ್ತನೆಗಳು 116:2ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು.
- 2 Chronicles 7:15 2 ಪೂರ್ವಕಾಲವೃತ್ತಾಂತ 7:15ಈಗ ಈ ಸ್ಥಳದ ಪ್ರಾರ್ಥನೆಗೆ ನನ್ನ ಕಣ್ಣುಗಳು ತೆರೆದಿರುವವು, ನನ್ನ ಕಿವಿಗಳು ಆಲೈಸುತ್ತಿರುವವು.
- Psalm 17:1 ಕೀರ್ತನೆಗಳು 17:1ಓ ಕರ್ತನೇ, ನ್ಯಾಯವನ್ನು ಕೇಳು; ನನ್ನ ಮೊರೆಯನ್ನು ಆಲೈಸು; ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಮೋಸದ ತುಟಿಗಳಿಂದ ಬಂದ ದ್ದಲ್ಲ.
- Nehemiah 1:6 ನೆಹೆಮೀಯ 1:6ನಿನ್ನ ಸೇವಕರಾದ ಇಸ್ರಾಯೇಲ್ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ.
- Nehemiah 1:11 ನೆಹೆಮೀಯ 1:11ಓ ಕರ್ತನೇ, ನಿನ್ನ ನಾಮಕ್ಕೆ ಭಯಪಡಲು ಇಚ್ಛಿಸುವ ನಿನ್ನ ಸೇವಕನ ಪ್ರಾರ್ಥನೆಯನ್ನೂ ಸೇವಕರ ಪ್ರಾರ್ಥನೆಯನ್ನೂ ನಿನ್ನ ಕಿವಿ ಆಲೈಸುತ್ತಾ ಇರಲಿ; ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಟ್ಟು ಈ ಮನುಷ್ಯನ ದೃಷ್ಟಿಯಲ್ಲಿ ಅವನಿಗೆ ಕರುಣೆ ದೊರಕುವ ಹಾಗೆ ಮಾಡು. ಯಾಕಂದರೆ ನಾನು ಅರಸನಿಗೆ ಪಾನ ಕೊಡುವವನಾಗಿದ್ದೆನು.
- Daniel 9:16–19 ದಾನಿಯೇಲನು 9:16–19ಓ ಕರ್ತನೇ, ನಿನ್ನ ಎಲ್ಲಾ ನೀತಿಗಳ ಪ್ರಕಾರ ನಾನು ನಿನ್ನನ್ನು ಬೇಡುತ್ತೇನೆ. ನಿನ್ನ ಕೋಪವು ನಿನ್ನ ಉಗ್ರತೆಯೂ ನಿನ್ನ ಪಟ್ಟಣವಾದ ಯೆರೂಸಲೇಮಿನಿಂದಲೂ ನಿನ್ನ ಪರಿಶುದ್ಧ ಪರ್ವತ ದಿಂದಲೂ ತಿರುಗಿಸಲ್ಪಡಲಿ. ಯಾಕಂದರೆ ನಮ್ಮ ಪಾಪ ಗಳ ನಿಮಿತ್ತದಿಂದಲೂ ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮೂ ಮತ್ತು ನಿನ್ನ ಜನರೂ ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿರು ವೆವಲ್ಲಾ. ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು. ಓ ನನ್ನ ದೇವರೇ, ನೀನು ಕಿವಿಗೊಟ್ಟು ಕೇಳು; ಇಗೋ, ನಿನ್ನ ಕಣ್ಣುಗಳನ್ನು ತೆರೆದು ನಾವು ಹಾಳಾದ ದ್ದನ್ನೂ ನಿನ್ನ ಹೆಸರಿನಿಂದ ಕರೆಯಲ್ಪಡುವ ಪಟ್ಟಣವನ್ನೂ ನೋಡು ಯಾಕಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿನ್ನ ಮಹಾ ಕೃಪೆಗೋಸ್ಕರವೇ ನಮ್ಮ ವಿಜ್ಞಾಪನೆಗಳನ್ನು ನಿನ್ನ ಮುಂದೆ ಅರ್ಪಿಸುತ್ತೇವೆ. ಓ ದೇವರೇ, ನಿನ್ನ ಪಟ್ಟಣವೂ ನಿನ್ನ ಜನರೂ ನಿನ್ನ ಹೆಸರಿನಿಂದ ಕರೆಯಲ್ಪಟ್ಟ ಕಾರಣ ಓ ಕರ್ತನೇ, ತಡಮಾಡದೆ ಕಿವಿಗೊಡು, ಓ ಕರ್ತನೇ, ಕ್ಷಮಿಸು; ಓ ಕರ್ತನೇ ಲಾಲಿಸು.
- Psalm 31:2 ಕೀರ್ತನೆಗಳು 31:2ನಿನ್ನ ಕಿವಿಯನ್ನು ನನ್ನ ಕಡೆಗೆ ತಿರುಗಿಸು; ಬೇಗ ನನ್ನನ್ನು ರಕ್ಷಿಸು. ನನ್ನನ್ನು ರಕ್ಷಿಸುವದಕ್ಕೆ ನನಗೆ ಬಲವಾದ ಬಂಡೆಯೂ ರಕ್ಷಣಾ ಮನೆಯೂ ಆಗಿರು.
- Isaiah 37:17 ಯೆಶಾಯ 37:17ಓ ಕರ್ತನೇ, ಕಿವಿಗೊಟ್ಟು ಕೇಳು; ಓ ಕರ್ತನೇ, ನಿನ್ನ ಕಣ್ಣುಗಳನ್ನು ತೆರೆದು ನೋಡು; ಸನ್ಹೇರೀಬನು ಜೀವವುಳ್ಳ ದೇವರನ್ನು ದೂಷಿಸಿ ಕಳುಹಿಸಿದ ಮಾತುಗಳನ್ನೆಲ್ಲಾ ಕೇಳು.
- Psalm 22:1–2 ಕೀರ್ತನೆಗಳು 22:1–2ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ.
- Psalm 7:3 ಕೀರ್ತನೆಗಳು 7:3ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ,
- 2 Chronicles 16:9 2 ಪೂರ್ವಕಾಲವೃತ್ತಾಂತ 16:9ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು.
- Psalm 34:15 ಕೀರ್ತನೆಗಳು 34:15ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.