Psalms · chapter 34 · verse 3
Psalm 34:3 in Kannada
ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.
Nanna sangada karta nannu ghanapadisiri. Naavu ottaagi aatana hesa rannu ghanapadisona.
Psalm 34:3 in English
- King James Version (KJV)
- O magnify the LORD with me, and let us exalt his name together.
- World English Bible (WEB)
- Oh magnify the LORD with me. Let’s exalt his name together.
- American Standard Version (ASV)
- Oh magnify Jehovah with me, And let us exalt his name together.
- Bible in Basic English (BBE)
- O give praise to the Lord with me; let us be witnesses together of his great name.
- Darby Translation (DBY)
- Magnify Jehovah with me, and let us exalt his name together.
- Webster's Bible (WBS)
- O magnify the LORD with me, and let us exalt his name together.
- Young's Literal Translation (YLT)
- Ascribe ye greatness to Jehovah with me, And we exalt His name together.
Read in context
- 1ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು.
- 2ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.
- 3ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.
- 4ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
- 5ಅವರು ಆತನನ್ನು ದೃಷ್ಟಿಸಿ ಪ್ರಕಾಶ ಹೊಂದಿದರು. ಅವರ ಮುಖಗಳು ನಾಚಿಕೆಪಡಲಿಲ್ಲ.
Cross references
- Psalm 69:30 ಕೀರ್ತನೆಗಳು 69:30ದೇವರ ಹೆಸರನ್ನು ಹಾಡುತ್ತಾ ಸ್ತುತಿಸುವೆನು; ಸ್ತೋತ್ರದಿಂದ ಆತನನ್ನು ಘನಪಡಿ ಸುವೆನು.
- Luke 1:46 ಲೂಕನು 1:46ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ;
- Psalm 148:1–14 ಕೀರ್ತನೆಗಳು 148:1–14ಕರ್ತನನ್ನು ನೀವು ಸ್ತುತಿಸಿರಿ, ಕರ್ತನನ್ನು ಆಕಾಶದಿಂದ ನೀವು ಸ್ತುತಿಸಿರಿ; ಉನ್ನತವಾದವುಗಳಲ್ಲಿ ಆತನನ್ನು ಸ್ತುತಿಸಿರಿ. ಆತನ ದೂತರೆಲ್ಲರೇ, ಆತನನ್ನು, ಸ್ತುತಿಸಿರಿ; ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ; ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ. ಆಕಾಶಗಳ ಆಕಾಶಗಳೇ, ಆಕಾಶಗಳ ಮೇಲೆ ಇರುವ ನೀರುಗಳೇ, ಆತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಅವು ಸ್ತುತಿಸಲಿ; ಆತನು ಆಜ್ಞಾ ಪಿಸಲು ಅವು ನಿರ್ಮಿಸಲ್ಪಟ್ಟವು. ಆತನು ಅವುಗಳನ್ನು ಯುಗಯುಗಗಳಿಗೂ ಸ್ಥಾಪಿಸಿದ್ದಾನೆ; ಆಜ್ಞೆಯನ್ನು ಕೊಟ್ಟಿ ದ್ದಾನೆ, ಅದು ವಿಾರಿ ಹೋಗುವದಿಲ್ಲ. ಭೂಮಿಯಿಂದ ಕರ್ತನನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ, ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ, ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ, ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ, ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ, ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ಮುದುಕರೇ, ಕರ್ತನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳ ಮೇಲೆ ಅದೆ.ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ. ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
- Revelation 19:5–6 ಪ್ರಕಟನೆ 19:5–6ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Psalm 40:16 ಕೀರ್ತನೆಗಳು 40:16ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
- Psalm 66:8 ಕೀರ್ತನೆಗಳು 66:8ಓ ಜನರೇ, ನೀವು ದೇವರನ್ನು ಸ್ತುತಿಸಿರಿ; ಆತನ ಸ್ತೊತ್ರದ ಸ್ವರವು ಕೇಳಲ್ಪಡುವಂತೆ ಮಾಡಿರಿ.
- Psalm 35:27 ಕೀರ್ತನೆಗಳು 35:27ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
- Psalm 103:20–22 ಕೀರ್ತನೆಗಳು 103:20–22ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ, ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ.ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು.
- Revelation 14:7 ಪ್ರಕಟನೆ 14:7ಅವನು--ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.
- Psalm 33:1–2 ಕೀರ್ತನೆಗಳು 33:1–2ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ. ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ.
- 2 Chronicles 29:30 2 ಪೂರ್ವಕಾಲವೃತ್ತಾಂತ 29:30ಇದಲ್ಲದೆ ಅರಸನಾದ ಹಿಜ್ಕೀಯನೂ ಪ್ರಧಾ ನರೂ ದಾವೀದನ ಮತ್ತು ಪ್ರವಾದಿಯಾದ ಆಸಾಫನ ಮಾತುಗಳಿಂದ ಕರ್ತನನ್ನು ಸ್ತುತಿಸಬೇಕೆಂದು ಲೇವಿ ಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಬೊಗ್ಗಿಕೊಂಡು ಆರಾಧಿಸಿದರು.
- 1 Chronicles 29:20 1 ಪೂರ್ವಕಾಲವೃತ್ತಾಂತ 29:20ದಾವೀದನು ಸಮಸ್ತ ಸಭೆಗೆ--ಈಗ ನಿಮ್ಮ ದೇವರಾದ ಕರ್ತನನ್ನು ಸ್ತುತಿಸಿರಿ ಅಂದನು. ಆಗ ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಕರ್ತ ನನ್ನು ಸ್ತುತಿಸುತ್ತಾ ತಮ್ಮ ತಲೆಗಳನ್ನು ಬಾಗಿಸಿ ಕರ್ತನನ್ನೂ ಅರಸನನ್ನೂ ಆರಾಧಿಸಿದರು.