Psalms · chapter 40 · verse 16
Psalm 40:16 in Kannada
ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
Ninnannu hudukuvavarellaru ninnalli aanandapattu santoshisali; ninna rakshaneyannu preetimaaduva varu--kartanu mahimepadali endu yaavaa galoo helali.aadare naanu deenanoo bada vanoo aagiddene; aadaroo kartanu nanagoskara yochisuttaane; nanna sahaayavoo nannannu tappisuvaa tanoo neene; o nanna devare, tada maadabeda.
Psalm 40:16 in English
- King James Version (KJV)
- Let all those that seek thee rejoice and be glad in thee: let such as love thy salvation say continually, The LORD be magnified.
- World English Bible (WEB)
- Let all those who seek you rejoice and be glad in you. Let such as love your salvation say continually, “Let the LORD be exalted!”
- American Standard Version (ASV)
- Let all those that seek thee rejoice and be glad in thee: Let such as love thy salvation say continually, Jehovah be magnified.
- Bible in Basic English (BBE)
- Let all those who are looking for you be glad and have joy in you; let the lovers of your salvation ever say, May the Lord be great.
- Darby Translation (DBY)
- Let all those that seek thee be glad and rejoice in thee; let such as love thy salvation say continually, Jehovah be magnified!
- Webster's Bible (WBS)
- Let all those that seek thee rejoice and be glad in thee: let such as love thy salvation say continually, The LORD be magnified.
- Young's Literal Translation (YLT)
- All seeking Thee rejoice and are glad in Thee, Those loving Thy salvation say continually, 'Jehovah is magnified.'
Read in context
- 14ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.
- 15ಆಹಾ, ಆಹಾ ಎಂದು ನನಗೆ ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ಹಾಳಾಗಲಿ;
- 16ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡುವ ವರು--ಕರ್ತನು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
- 17ಆದರೆ ನಾನು ದೀನನೂ ಬಡ ವನೂ ಆಗಿದ್ದೇನೆ; ಆದರೂ ಕರ್ತನು ನನಗೋಸ್ಕರ ಯೋಚಿಸುತ್ತಾನೆ; ನನ್ನ ಸಹಾಯವೂ ನನ್ನನ್ನು ತಪ್ಪಿಸುವಾ ತನೂ ನೀನೇ; ಓ ನನ್ನ ದೇವರೇ, ತಡ ಮಾಡಬೇಡ.
Cross references
- Psalm 35:27 ಕೀರ್ತನೆಗಳು 35:27ನನ್ನ ನೀತಿಯಲ್ಲಿ ಸಂತೋಷ ಪಡುವವರು ಉತ್ಸಾಹಧ್ವನಿಮಾಡಿ ಆನಂದಪಡಲಿ; ಹೌದು, ತನ್ನ ಸೇವಕನ ಅಭಿವೃದ್ಧಿಯಲ್ಲಿ ಸಂತೋ ಷಪಡುವ ಕರ್ತನು ಮಹಿಮೆಹೊಂದಲಿ ಎಂದು ಅವರು ಯಾವಾಗಲೂ ಹೇಳಲಿ.ಆಗ ನನ್ನ ನಾಲಿ ಗೆಯು ನಿನ್ನ ನೀತಿಯನ್ನೂ ಸ್ತೋತ್ರವನ್ನೂ ದಿನವೆಲ್ಲಾ ಉಚ್ಚರಿಸುವದು.
- Psalm 68:3 ಕೀರ್ತನೆಗಳು 68:3ಆದರೆ ನೀತಿವಂತರು ಸಂತೋಷಿಸಲಿ; ದೇವರ ಮುಂದೆ ಉತ್ಸಾಹಪಡಲಿ; ಹೌದು, ಅವರು ಅತಿಸಂತೋಷದಿಂದ ಹರ್ಷಿಸುವವರಾಗಲಿ.
- Acts 19:17 ಅಪೊಸ್ತಲರ ಕೃತ್ಯಗಳು 19:17ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು. ಕರ್ತನಾದ ಯೇಸು ವಿನ ಹೆಸರು ಘನಹೊಂದಿತು.
- Psalm 119:123 ಕೀರ್ತನೆಗಳು 119:123ನನ್ನ ಕಣ್ಣುಗಳು ನಿನ್ನ ರಕ್ಷಣೆಗೋಸ್ಕರವೂ ನಿನ್ನ ನೀತಿಯ ನುಡಿಗೋಸ್ಕರವೂ ನೆರವೇರುವದನ್ನು ನಿರೀಕ್ಷಿಸುತ್ತಾ ಮೊಬ್ಬಾಗುವವು.
- Isaiah 65:13–14 ಯೆಶಾಯ 65:13–14ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ; ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.
- Psalm 105:3 ಕೀರ್ತನೆಗಳು 105:3ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
- Luke 1:46–47 ಲೂಕನು 1:46–47ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ; ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ;
- Psalm 22:26 ಕೀರ್ತನೆಗಳು 22:26ದೀನರು ಉಂಡು ತೃಪ್ತಿಯಾಗುವರು; ಕರ್ತನನ್ನು ಹುಡುಕುವವರು ಆತನನ್ನು ಸ್ತುತಿಸುವರು; ನಿಮ್ಮ ಹೃದಯವು ಎಂದೆಂದಿಗೂ ಬದುಕುವದು.
- Philippians 3:7–9 ಫಿಲಿಪ್ಪಿಯವರಿಗೆ 3:7–9ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ. ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
- Matthew 13:45–46 ಮತ್ತಾಯನು 13:45–46ಪರಲೋಕರಾಜ್ಯವು ಒಳ್ಳೇ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು.
- Psalm 119:166–167 ಕೀರ್ತನೆಗಳು 119:166–167ಕರ್ತನೇ, ನಿನ್ನ ರಕ್ಷಣೆಗೆ ಕಾದುಕೊಂಡಿದ್ದೇನೆ; ನಿನ್ನ ಆಜ್ಞೆಗಳನ್ನು ನಡಿಸಿದ್ದೇನೆ. ನನ್ನ ಪ್ರಾಣವು ನಿನ್ನ ಸಾಕ್ಷಿಗಳನ್ನು ಕೈಕೊಂಡಿದೆ; ನಾನು ಅವುಗಳನ್ನು ಬಹಳವಾಗಿ ಪ್ರೀತಿಮಾಡುತ್ತೇನೆ;
- Psalm 119:111 ಕೀರ್ತನೆಗಳು 119:111ನಿನ್ನ ಸಾಕ್ಷಿಗಳನ್ನು ನಿತ್ಯಸ್ವಾಸ್ತ್ಯವಾಗಿ ತೆಗೆದುಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಆನಂದವಾಗಿವೆ.