Psalms · chapter 36 · verse 11
Psalm 36:11 in Kannada
ಗರ್ವದ ಪಾದ ನನಗೆ ವಿರೋಧ ವಾಗಿ ಬಾರದೆ ಇರಲಿ; ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.ಅಲ್ಲಿ ಅಕ್ರಮ ಮಾಡುವವರು ಬಿದ್ದಿದ್ದಾರೆ; ಅವರು ಕೆಳಗೆ ಹಾಕಲ್ಪಟ್ಟು ಏಳಲಾರದೆ ಇದ್ದಾರೆ.
Garvada paada nanage virodha vaagi baarade irali; dushtara kai nannannu tegedu haakadirali.alli akrama maaduvavaru biddiddaare; avaru kelage haakalpattu elalaarade iddaare.
Psalm 36:11 in English
- King James Version (KJV)
- Let not the foot of pride come against me, and let not the hand of the wicked remove me.
- World English Bible (WEB)
- Don’t let the foot of pride come against me. Don’t let the hand of the wicked drive me away.
- American Standard Version (ASV)
- Let not the foot of pride come against me, And let not the hand of the wicked drive me away.
- Bible in Basic English (BBE)
- Let not the foot of pride come against me, or the hand of the evil-doers put me out of my place.
- Darby Translation (DBY)
- Let not the foot of pride come against me, and let not the hand of the wicked drive me away.
- Webster's Bible (WBS)
- Let not the foot of pride come against me, and let not the hand of the wicked remove me.
- Young's Literal Translation (YLT)
- Let not a foot of pride meet me, And a hand of the wicked let not move me.
Read in context
- 9ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟು. ನಿನ್ನ ತೇಜಸ್ಸಿನ ಬೆಳಕನ್ನು ನೋಡುವೆವು.
- 10ನಿನ್ನನ್ನು ತಿಳಿದವರಿಗೆ ನಿನ್ನ ಕೃಪೆಯನ್ನೂ ಯಥಾರ್ಥ ಹೃದಯದವರಿಗೆ ನಿನ್ನ ನೀತಿಯನ್ನೂ ನೆಲೆಯಾಗಿರಿಸು.
- 11ಗರ್ವದ ಪಾದ ನನಗೆ ವಿರೋಧ ವಾಗಿ ಬಾರದೆ ಇರಲಿ; ದುಷ್ಟರ ಕೈ ನನ್ನನ್ನು ತೆಗೆದು ಹಾಕದಿರಲಿ.ಅಲ್ಲಿ ಅಕ್ರಮ ಮಾಡುವವರು ಬಿದ್ದಿದ್ದಾರೆ; ಅವರು ಕೆಳಗೆ ಹಾಕಲ್ಪಟ್ಟು ಏಳಲಾರದೆ ಇದ್ದಾರೆ.
- 12ಅಲ್ಲಿ ಅಕ್ರಮ ಮಾಡುವವರು ಬಿದ್ದಿದ್ದಾರೆ; ಅವರು ಕೆಳಗೆ ಹಾಕಲ್ಪಟ್ಟು ಏಳಲಾರದೆ ಇದ್ದಾರೆ.
Cross references
- Psalm 16:8 ಕೀರ್ತನೆಗಳು 16:8ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.
- Isaiah 51:23 ಯೆಶಾಯ 51:23ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.
- Psalm 123:3–4 ಕೀರ್ತನೆಗಳು 123:3–4ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು. ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು.
- Psalm 12:3–5 ಕೀರ್ತನೆಗಳು 12:3–5ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು. ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ. ಬಡವರ ವ್ಯಥೆಗೋಸ್ಕರವೂ ಗತಿಯಿಲ್ಲದವರ ನರ ಳುವಿಕೆಗೋಸ್ಕರವೂ ಈಗ ನಾನು ಏಳುವೆನು ಎಂದು ಕರ್ತನು ಹೇಳುತ್ತಾನೆ; ಉಬ್ಬಿಕೊಂಡವನಿಂದ ನಾನು ಬಡವನನ್ನು ಕಾಪಾಡುವೆನು.
- Job 40:11–12 ಯೋಬನು 40:11–12ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.
- Psalm 17:8–14 ಕೀರ್ತನೆಗಳು 17:8–14ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು. ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು, ನನ್ನನ್ನು ಬಾಧಿ ಸುವ ದುಷ್ಟರಿಗೂ ನನ್ನನ್ನು ಸುತ್ತಿಕೊಳ್ಳುವ ಪ್ರಾಣ ಶತ್ರುಗಳಿಗೂ ಸಿಕ್ಕದಂತೆ ತಪ್ಪಿಸುವಿ. ಅವರು ತಮ್ಮ ಕೊಬ್ಬಿನಿಂದ ಸೊಕ್ಕೇರಿದ್ದಾರೆ; ತಮ್ಮ ಗರ್ವದ ಬಾಯಿ ಯಿಂದ ಮಾತನಾಡುತ್ತಾರೆ. ನಮ್ಮ ಹೆಜ್ಜೆಗಳಲ್ಲಿ ಈಗ ನಮ್ಮನ್ನು ಸುತ್ತಿಕೊಂಡಿದ್ದಾರೆ; ತಮ್ಮ ದೃಷ್ಟಿಯನ್ನು ಭೂಮಿಯ ಮೇಲೆ ಇಡುತ್ತಾರೆ. ಅವನು ತನ್ನ ಬೇಟೆಯ ದುರಾಶೆಯಿಂದಿರುವ ಸಿಂಹದ ಹಾಗೆಯೂ ಗುಪ್ತವಾದ ಸ್ಥಳಗಳಲ್ಲಿ ಹೊಂಚು ಹಾಕಿರುವ ಸಿಂಹದ ಮರಿಯ ಹಾಗೆಯೂ ಇದ್ದಾನೆ. ಓ ಕರ್ತನೇ, ಎದ್ದು ಅವನನ್ನು ನಿರಾಶೆಗೊಳಿಸಿ ಕೆಡವಿಬಿಡು. ದುಷ್ಟರ ಕೈಯೊಳಗಿಂದ ನಿನ್ನ ಕತ್ತಿಯ ಮೂಲಕ ನನ್ನನ್ನು ರಕ್ಷಿಸು. ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- Psalm 119:85 ಕೀರ್ತನೆಗಳು 119:85ನಿನ್ನ ನ್ಯಾಯ ಪ್ರಮಾಣದ ಪ್ರಕಾರವಾಗಿರದ ಅಹಂಕಾರಿಗಳು ನನಗೆ ಕುಣಿಗಳನ್ನು ಅಗೆದಿದ್ದಾರೆ.
- Romans 8:35–39 ರೋಮಾಪುರದವರಿಗೆ 8:35–39ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ. ಹೇಗಂದರೆ ಮರಣವಾಗಲಿ ಜೀವವಾಗಲಿ ದೂತರಾಗಲಿ ರಾಜತ್ವಗಳಾಗಲಿ ಅಧಿಕಾರಗಳಾಗಲಿ ಈಗಿನವುಗಳಾ ಗಲಿ ಮುಂಬರುವವುಗಳಾಗಲಿಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು. ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.
- Psalm 10:2 ಕೀರ್ತನೆಗಳು 10:2ದುಷ್ಟರು ಗರ್ವ ದಿಂದ ದೀನನನ್ನು ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಯುಕ್ತಿಗಳಲ್ಲಿ ತಾವೇ ಹಿಡಿಯಲ್ಪಡಲಿ.
- Psalm 119:51 ಕೀರ್ತನೆಗಳು 119:51ಅಹಂಕಾರಿಗಳು ಬಹಳವಾಗಿ ನನ್ನನ್ನು ಹಾಸ್ಯ ಮಾಡಿ ದರೂ ನಿನ್ನ ನ್ಯಾಯಪ್ರಮಾಣದಿಂದ ನಾನು ತೊಲ ಗಲಿಲ್ಲ.
- Psalm 119:69 ಕೀರ್ತನೆಗಳು 119:69ಅಹಂಕಾರಿ ಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು; ನಾನು ಪೂರ್ಣಹೃದಯದಿಂದ ನಿನ್ನ ಕಟ್ಟಳೆಗಳನ್ನು ಕೈಕೊಳ್ಳುವೆನು.
- Psalm 119:122 ಕೀರ್ತನೆಗಳು 119:122ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.