Psalms · chapter 36 · verse 3
Psalm 36:3 in Kannada
ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.
Avana baayiya maatugalu akramavoo mosavoo aagive; buddhi yinda nadeyuvadannoo olledu maaduvadannoo bittiddaane.
Psalm 36:3 in English
- King James Version (KJV)
- The words of his mouth [are] iniquity and deceit: he hath left off to be wise, [and] to do good.
- World English Bible (WEB)
- The words of his mouth are iniquity and deceit. He has ceased to be wise and to do good.
- American Standard Version (ASV)
- The words of his mouth are iniquity and deceit: He hath ceased to be wise [and] to do good.
- Bible in Basic English (BBE)
- In the words of his mouth are evil and deceit; he has given up being wise and doing good.
- Darby Translation (DBY)
- The words of his mouth are wickedness and deceit: he hath left off to be wise, to do good.
- Webster's Bible (WBS)
- The words of his mouth [are] iniquity and deceit: he hath ceased to be wise, [and] to do good.
- Young's Literal Translation (YLT)
- The words of his mouth [are] iniquity and deceit, He ceased to act prudently — to do good.
Read in context
- 1ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವದರಿಂದ ಅವನ ಕಣ್ಣೆದು ರಿಗೆ ದೇವರ ಭಯವೇ ಇಲ್ಲ.
- 2ಹಗೆಗೆ ತಕ್ಕ ತನ್ನ ಅಕ್ರಮವನ್ನು ಕಂಡುಕೊಳ್ಳುವವರೆಗೆ ಅವನು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾನೆ.
- 3ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.
- 4ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
- 5ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.
Cross references
- Psalm 55:21 ಕೀರ್ತನೆಗಳು 55:21ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.
- Jeremiah 4:22 ಯೆರೆಮೀಯ 4:22ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
- Matthew 22:15–18 ಮತ್ತಾಯನು 22:15–18ಆಗ ಫರಿಸಾಯರು ಹೊರಟುಹೋಗಿ ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು. ಮತ್ತು ತಮ್ಮ ಶಿಷ್ಯರನ್ನು ಹೆರೋದಿಯರೊಂದಿಗೆ ಆತನ ಬಳಿಗೆ ಕಳುಹಿಸಿ--ಬೋಧಕನೇ, ನೀನು ಸತ್ಯವಂತನು ಮತ್ತು ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುವಾತನು; ಇದಲ್ಲದೆ ನೀನು ಯಾರನ್ನೂ ಲಕ್ಷ್ಯಮಾಡುವಾತನಲ್ಲ; ಯಾಕಂದರೆ ನೀನು ಮುಖದಾಕ್ಷಿಣ್ಯ ಮಾಡುವದಿಲ್ಲ ಎಂದು ಆದದರಿಂದ-- ಕೈಸರನಿಗೆ ಕಪ್ಪವನ್ನು ಕೊಡುವದು ನ್ಯಾಯವೋ ನ್ಯಾಯವಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. ಯೇಸು ಅವರ ಕೆಟ್ಟತನವನ್ನು ತಿಳಿದು ಕೊಂಡವನಾಗಿ--ಕಪಟಿಗಳೇ, ನೀವು ನನ್ನನ್ನು ಯಾಕೆ ಶೋಧಿಸುತ್ತೀರಿ?
- Psalm 10:7 ಕೀರ್ತನೆಗಳು 10:7ಅವನ ಬಾಯಿ ಶಾಪದಿಂದಲೂ ಮೋಸದಿಂದಲೂ ವಂಚನೆಯಿಂದಲೂ ತುಂಬಿದೆ; ಅವನ ನಾಲಿಗೆಯ ಕೆಳಗೆ ಕೇಡೂ ವ್ಯರ್ಥತೆಯೂ ಇವೆ.
- 1 John 2:19 1 ಯೋಹಾನನು 2:19ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು.
- 1 Samuel 19:6–7 1 ಸಮುವೇಲನು 19:6–7ಆಗ ಸೌಲನು ಯೋನಾತಾನನ ಮಾತನ್ನು ಕೇಳಿ--ಕರ್ತನಾಣೆ ಅವನುಕೊಲೆಯಾಗುವದಿಲ್ಲ ಅಂದನು. ಆಗ ಯೋನಾತಾ ನನು ದಾವೀದನನ್ನು ಕರೆದು ಆ ಮಾತುಗಳನ್ನೆಲ್ಲಾ ಅವನಿಗೆ ತಿಳಿಸಿ ದಾವೀದನನ್ನು ಸೌಲನ ಬಳಿಗೆ ಕರ ತಂದನು; ಅವನು ಮುಂಚಿನ ಹಾಗೆಯೇ ಅವನ ಬಳಿಯಲ್ಲಿ ಇದ್ದನು.
- Psalm 5:9 ಕೀರ್ತನೆಗಳು 5:9ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ.
- 1 Samuel 13:13–14 1 ಸಮುವೇಲನು 13:13–14ಸಮು ವೇಲನು ಸೌಲನಿಗೆ--ನೀನು ಬುದ್ಧಿಹೀನವಾದ ಕೆಲಸ ಮಾಡಿದ್ದೀ; ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕರ್ತನು ಇಸ್ರಾಯೇಲ್ಯರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವದಕ್ಕೆ ಇದ್ದನು. ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಕರ್ತನು ನಿನಗೆ ಆಜ್ಞಾಪಿಸಿ ದ್ದನ್ನು ನೀನು ಕೈಕೊಳ್ಳದೆ ಹೋದದರಿಂದ ಆತನು ತನ್ನ ಹೃದಯಕ್ಕೆ ಅನುಸರಣೆಯಾದ ಒಬ್ಬ ಮನುಷ್ಯ ನನ್ನು ಹುಡುಕಿ ಅವನನ್ನು ತನ್ನ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾನೆ ಅಂದನು.
- Zephaniah 1:6 ಚೆಫನ್ಯ 1:6ಕರ್ತನ ಕಡೆಯಿಂದ ಹಿಂತಿ ರುಗಿದವರನ್ನೂ ಕರ್ತನನ್ನು ಹುಡುಕದೆಯೂ ವಿಚಾರಿಸ ದೆಯೂ ಇರುವವರನ್ನೂ ಕಡಿದುಬಿಡುವೆನು.
- Psalm 58:3 ಕೀರ್ತನೆಗಳು 58:3ದುಷ್ಟರು ಗರ್ಭದಿಂದಲೇ ದೂರವಾಗುತ್ತಾರೆ; ಹುಟ್ಟಿದಾಗಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.
- 1 Samuel 26:21 1 ಸಮುವೇಲನು 26:21ಆಗ ಸೌಲನುನಾನು ಪಾಪಮಾಡಿದೆನು; ನನ್ನ ಮಗನಾದ ದಾವೀ ದನೇ, ತಿರಿಗಿ ಬಾ; ಯಾಕಂದರೆ ನನ್ನ ಜೀವವು ಈ ಹೊತ್ತು ನಿನ್ನ ದೃಷ್ಟಿಗೆ ಅಮೂಲ್ಯವಾಗಿದ್ದರಿಂದ ನಾನು ಇನ್ನು ಮೇಲೆ ನಿನಗೆ ಕೇಡುಮಾಡೆನು; ಇಗೋ, ನಾನು ಹುಚ್ಚು ಕೆಲಸಮಾಡಿದ್ದೇನೆ. ಮಹಾ ಹೆಚ್ಚಾದ ತಪ್ಪು ಮಾಡಿದೆನು ಅಂದನು.
- 1 Samuel 15:26 1 ಸಮುವೇಲನು 15:26ಆದಕ್ಕೆ ಸಮುವೇಲನು ಸೌಲನಿಗೆ--ನಾನು ನಿನ್ನ ಸಂಗಡ ಹಿಂತಿರುಗಿ ಬರುವದಿಲ್ಲ; ಯಾಕಂದರೆ ನೀನು ಕರ್ತನ ವಾಕ್ಯವನ್ನು ತಿರಸ್ಕಾರಮಾಡಿದಿ; ಕರ್ತನು ನಿನ್ನನ್ನು ಇಸ್ರಾಯೇಲ್ಯರ ಮೇಲೆ ಅರಸನಾಗಿರದ ಹಾಗೆ ತಿರ ಸ್ಕಾರ ಮಾಡಿಬಿಟ್ಟನು.