Psalms · chapter 41 · verse 6
Psalm 41:6 in Kannada
ನನ್ನನ್ನು ನೋಡುವದಕ್ಕೆ ಅವನು ಬಂದರೆ ವ್ಯರ್ಥ ಮಾತು ಆಡುತ್ತಾನೆ; ಅವನ ಹೃದಯವು ಅವನಿಗೆ ಅಕ್ರಮವನ್ನು ಕೂಡಿಸುತ್ತದೆ; ಅವನು ಹೊರಗೆ ಹೋದಾಗ ಅದನ್ನು ಹೇಳುತ್ತಾನೆ.
Nannannu noduvadakke avanu bandare vyartha maatu aaduttaane; avana hrudayavu avanige akramavannu koodisuttade; avanu horage hodaaga adannu heluttaane.
Psalm 41:6 in English
- King James Version (KJV)
- And if he come to see [me], he speaketh vanity: his heart gathereth iniquity to itself; [when] he goeth abroad, he telleth [it].
- World English Bible (WEB)
- If he comes to see me, he speaks falsehood. His heart gathers iniquity to itself. When he goes abroad, he tells it.
- American Standard Version (ASV)
- And if he come to see [me], he speaketh falsehood; His heart gathereth iniquity to itself: When he goeth abroad, he telleth it.
- Bible in Basic English (BBE)
- If one comes to see me, deceit is in his heart; he keeps a store of evil, which he makes public in every place.
- Darby Translation (DBY)
- And if one come to see [me], he speaketh falsehood; his heart gathereth wickedness to itself: he goeth abroad, he telleth [it].
- Webster's Bible (WBS)
- And if he cometh to see [me] , he speaketh vanity: his heart gathereth iniquity to itself; [when] he goeth abroad, he telleth [it] .
- Young's Literal Translation (YLT)
- And if he came to see — vanity he speaketh, His heart gathereth iniquity to itself, He goeth out — at the street he speaketh.
Read in context
- 4ಕರ್ತನೇ, ನನಗೆ ಕರುಣೆ ತೋರಿಸಿ ನನ್ನ ಪ್ರಾಣವನ್ನು ಸ್ವಸ್ಥಮಾಡು; ನಿನಗೆ ವಿರೋಧವಾಗಿ ಪಾಪಮಾಡಿದೆ ನೆಂದು ನಾನು ಹೇಳಿದೆನು.
- 5ಅವನು ಸತ್ತು ಅವನ ಹೆಸರು ನಾಶವಾಗುವದು ಯಾವಾಗ ಎಂದು ನನ್ನ ಶತ್ರುಗಳು ನನ್ನನ್ನು ಕುರಿತು ಕೇಡನ್ನು ಮಾತನಾಡುತ್ತಾರೆ.
- 6ನನ್ನನ್ನು ನೋಡುವದಕ್ಕೆ ಅವನು ಬಂದರೆ ವ್ಯರ್ಥ ಮಾತು ಆಡುತ್ತಾನೆ; ಅವನ ಹೃದಯವು ಅವನಿಗೆ ಅಕ್ರಮವನ್ನು ಕೂಡಿಸುತ್ತದೆ; ಅವನು ಹೊರಗೆ ಹೋದಾಗ ಅದನ್ನು ಹೇಳುತ್ತಾನೆ.
- 7ನನ್ನನ್ನು ಹಗೆ ಮಾಡುವವರೆಲ್ಲರು ಕೂಡಿ ನನ್ನ ಮೇಲೆ ಪಿಸುಗುಟ್ಟು ತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ;
- 8ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.
Cross references
- Psalm 12:2 ಕೀರ್ತನೆಗಳು 12:2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- Luke 11:53–54 ಲೂಕನು 11:53–54ಆತನು ಅವರಿಗೆ ಈ ವಿಷಯಗಳನ್ನು ಹೇಳು ತ್ತಿದ್ದಾಗ ಶಾಸ್ತ್ರಿಗಳು ಮತ್ತು ಫರಿಸಾಯರು ಕೋಪಾವೇಶ ವುಳ್ಳವರಾಗಿ ಆತನು ಇನ್ನೂ ಅನೇಕವಾದವುಗಳ ವಿಷಯವಾಗಿ ಮಾತನಾಡುವಂತೆ ಆತನನ್ನು ಉದ್ರೇಕ ಗೊಳಿಸಲಾರಂಭಿಸಿದರು.ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು. ಯಾಕಂದರೆ ಆತನ ಮಾತಿನಲ್ಲಿ ಏನಾದರೂ ಕಂಡು ಹಿಡಿದು ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡು ತ್ತಿದ್ದರು.
- Proverbs 26:24–26 ಜ್ಞಾನೋಕ್ತಿಗಳು 26:24–26ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Luke 20:20–23 ಲೂಕನು 20:20–23ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು. ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು. ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು. ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
- Nehemiah 6:1–14 ನೆಹೆಮೀಯ 6:1–14ನಾನು ಕದಗಳನ್ನು ಬಾಗಲುದ್ವಾರಗಳಲ್ಲಿ ನಿಲ್ಲಿಸುವದಕ್ಕಿಂತ ಮುಂಚೆ ಗೋಡೆಯನ್ನು ಕಟ್ಟಿಸಿದೆನೆಂದೂ ಅದರಲ್ಲಿ ಒಂದು ಸಂದೂ ಬಿಡಲ್ಪಡ ಲಿಲ್ಲವೆಂದೂ ಸನ್ಬಲ್ಲಟನೂ ಟೋಬೀಯನೂ ಅರಬ್ಯ ನಾದ ಗೆಷೆಮನೂ ಮಿಕ್ಕಾದ ನಮ್ಮ ಶತ್ರುಗಳೂ ಕೇಳಿದಾಗ ಸನ್ಬಲ್ಲಟನೂ ಗೆಷೆಮನೂ ನನಗೆ--ಓನೋನು ಎಂಬ ಬೈಲಿನಲ್ಲಿರುವ ಗ್ರಾಮಗಳಲ್ಲಿ ಸಂಧಿಸಿಕೊಳ್ಳೋಣ ಬಾ ಅಂದರು. ಆದರೆ ಅವರು ನನಗೆ ಕೇಡುಮಾಡಲು ನೆನಸಿಕೊಂಡಿದ್ದರು. ಆದ ಕಾರಣ ನಾನು ಅವರ ಬಳಿಗೆ ಸೇವಕರನ್ನೂ ಕಳು ಹಿಸಿ--ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ; ಬರಲಾರೆನು; ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬರುವಲ್ಲಿ ಆ ಕೆಲಸ ಯಾಕೆ ನಿಂತು ಹೋಗ ಬೇಕು ಎಂದು ಹೇಳಿದೆನು. ಅವರು ಈ ಪ್ರಕಾರ ನಾಲ್ಕು ಸಾರಿ ನನ್ನ ಬಳಿಗೆ ಕಳುಹಿಸಿದರು. ನಾನು ಅದೇ ಪ್ರಕಾರ ಅವರಿಗೆ ಪ್ರತ್ಯುತ್ತರ ಕಳುಹಿಸಿದೆನು. ಐದನೇ ಸಾರಿ ಸನ್ಬಲ್ಲಟನು ತನ್ನ ಸೇವಕನ ಕೈ ಯಲ್ಲಿ ತೆರೆದಿರುವ ಪತ್ರವನ್ನು ಕಳುಹಿಸಿದನು. ಅದ ರಲ್ಲಿ--ನೀನೂ ಯೆಹೂದ್ಯರೂ ತಿರಿಗಿ ಬೀಳಲು ಯೋಚಿಸುತ್ತೀರಿ. ಆದಕಾರಣ ಈ ಮಾತುಗಳ ಪ್ರಕಾರ ನೀನು ಅವರಿಗೆ ಅರಸನಾಗಿರುವ ಹಾಗೆ ಗೋಡೆಯನ್ನು ಕಟ್ಟಿಸುತ್ತಿದ್ದೀ. ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದು ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದಿ ಎಂಬದಾಗಿ ಜನಾಂಗಗಳಲ್ಲಿ ಸುದ್ದಿ ಉಂಟು; ಗೆಷೆಮನು ಹಾಗೆಯೇ ಹೇಳುತ್ತಾನೆ. ಈಗ ಈ ವರ್ತಮಾನ ಅರಸನಿಗೆ ತಿಳಿಸಲ್ಪಡುವದು. ಆದಕಾರಣ ನಾವು ಕೂಡಿ ಕೊಂಡು ಯೋಚನೆ ಮಾಡಿಕೊಳ್ಳುವ ಹಾಗೆ ಬಾ ಎಂದು ಬರೆದಿತ್ತು. ಆಗ ನಾನು--ನೀನು ಹೇಳಿದ ಕಾರ್ಯಗಳಲ್ಲಿ ಯಾವದೂ ಮಾಡಿದ್ದಿಲ್ಲ. ನೀನು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸುತ್ತಾ ಇದ್ದೀ ಎಂದು ಹೇಳಿಕಳುಹಿಸಿದೆನು. ಯಾಕಂದರೆ--ಅದು ಆಗದ ಹಾಗೆ ಆ ಕೆಲಸ ಬಿಟ್ಟುಬಿಟ್ಟು ಅವರ ಕೈಗಳು ಬಲಹೀನವಾಗುವವು ಅಂದುಕೊಂಡು ಅವರೆಲ್ಲರೂ ನಮ್ಮನ್ನು ಭಯಪಡಿಸಿದರು. ಆದದರಿಂದ ಈಗ ಓ ದೇವರೇ, ನನ್ನ ಕೈಗಳನ್ನು ಬಲಪಡಿಸು ಅಂದೆನು. ತರುವಾಯ ನಾನು ಅಡಗಿ ಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನುನಿನ್ನನ್ನು ಕೊಂದುಹಾಕಲು ಬರುತ್ತಾರೆ. ಹೌದು, ರಾತ್ರಿಯಲ್ಲಿ ನಿನ್ನನ್ನು ಕೊಂದು ಹಾಕಲು ಬರುತ್ತಾರೆ ಆದದರಿಂದ ನಾವಿಬ್ಬರೂ ದೇವರ ಆಲಯದಲ್ಲಿ ಪ್ರವೇಶಿಸಿ ಮಂದಿರದ ಬಾಗಲುಗಳನ್ನು ಮುಚ್ಚೊಣ ಬಾ ಅಂದನು. ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು. ಆಗ ಇಗೋ, ದೇವರು ಅವನನ್ನು ಕಳುಹಿಸಲಿಲ್ಲ; ಅವನೇ ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿದನೆಂದು ನಾನು ಗ್ರಹಿಸಿಕೊಂಡೆನು. ಟೋಬೀಯನೂ ಸನ್ಬಲ್ಲ ಟನೂ ಅವನಿಗೆ ಕೂಲಿ ಕೊಟ್ಟರು. ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವ ಹಾಗೆಯೂ ಅವರು ನನ್ನನ್ನು ನಿಂದಿಸುವದಕ್ಕೆ ಅಪಕೀರ್ತಿಯಾದ ಕಾರಣವು ಅವರಿಗೆ ಉಂಟಾಗುವ ಹಾಗೆಯೂ ಅವನಿಗೆ ಕೂಲಿ ಕೊಡಲ್ಪಟ್ಟಿತು. ನನ್ನ ದೇವರೇ, ನೀನು ಅವರ ಈ ಕಾರ್ಯಗಳ ಪ್ರಕಾರ ಟೋಬೀಯನನ್ನೂ ಸನ್ಬಲ್ಲಟ ನನ್ನೂ ನನ್ನನ್ನು ಭಯಪಡಿಸುವವರಾಗಿದ್ದ ಪ್ರವಾದಿನಿ ಯಾದ ನೋವದ್ಯಳನ್ನೂ ಮಿಕ್ಕಾದ ಪ್ರವಾದಿಗಳನ್ನೂ ಜ್ಞಾಪಕಮಾಡಿಕೋ.
- 2 Corinthians 11:26 2 ಕೊರಿಂಥದವರಿಗೆ 11:26ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Daniel 11:27 ದಾನಿಯೇಲನು 11:27ಈ ಇಬ್ಬರು ಅರಸರ ಹೃದಯ ಗಳನ್ನು ಕೇಡನ್ನು ಮಾಡುವಂತವುಗಳಾಗಿರುವವು; ಒಂದೇ ಮೇಜಿನಲ್ಲಿ ಕುಳಿತು ಸುಳ್ಳು ಹೇಳುವರು; ಆದರೆ ಅದು ಅನುಕೂಲವಾಗದು; ಅದು ಹೇಗಾದರೂ ನಿಯಮಿಸಲ್ಪಟ್ಟ ಕಾಲದಲ್ಲಿ ಅಂತ್ಯವಾಗುವದು.
- Micah 7:5–7 ಮೀಕ 7:5–7ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ. ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ; ಮಗಳು ತನ್ನ ತಾಯಿಗೂ ಸೊಸೆಯು ತನ್ನ ಅತ್ತೆಗೂ ವಿರೋಧವಾಗಿ ಏಳುತ್ತಾರೆ; ಒಬ್ಬ ಮನುಷ್ಯನಿಗೆ ಸ್ವಂತ ಮನೆಯವರೇ ಶತ್ರುಗಳು. ಆದರೆ ನಾನು ಕರ್ತನನ್ನು ಎದುರು ನೋಡುವೆನು; ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು; ನನ್ನ ದೇವರು ನನ್ನನ್ನು ಕೇಳುವನು.