Psalms · chapter 12 · verse 2
Psalm 12:2 in Kannada
ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
Obbobbanu tanna nereyavana sangada vyarthavaada maatannu aaduttaane; mukhastutiya tutiyindaloo vanchaneya hrudayadindaloo avaru maatanaaduttaare.
Psalm 12:2 in English
- King James Version (KJV)
- They speak vanity every one with his neighbour: [with] flattering lips [and] with a double heart do they speak.
- World English Bible (WEB)
- Everyone lies to his neighbor. They speak with flattering lips, and with a double heart.
- American Standard Version (ASV)
- They speak falsehood every one with his neighbor: With flattering lip, and with a double heart, do they speak.
- Bible in Basic English (BBE)
- Everyone says false words to his neighbour: their tongues are smooth in their talk, and their hearts are full of deceit.
- Darby Translation (DBY)
- They speak falsehood every one with his neighbour: [with] flattering lip, with a double heart, do they speak.
- Webster's Bible (WBS)
- They speak vanity every one with his neighbor: [with] flattering lips [and] with a double heart do they speak.
- Young's Literal Translation (YLT)
- Vanity they speak each with his neighbour, Lip of flattery! With heart and heart they speak.
Read in context
- 1ಕರ್ತನೇ, ಸಹಾಯಮಾಡು; ಯಾಕಂದರೆ ಭಕ್ತನು ಮುಗಿದು ಹೋಗುತ್ತಾನೆ; ನಂಬಿಗಸ್ತರು ಮನುಷ್ಯನ ಮಕ್ಕಳೊಳಗಿಂದ ಇಲ್ಲದೆ ಹೋಗುತ್ತಾರೆ.
- 2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- 3ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು.
- 4ಅವರು--ನಮ್ಮ ನಾಲಿಗೆಯಿಂದ ನಾವು ಬಲಗೊಳ್ಳುವೆವು; ನಮ್ಮ ತುಟಿಗಳು ನಮ್ಮವೇ; ನಮಗೆ ಪ್ರಭುವು ಯಾರು ಅನ್ನುತ್ತಾರೆ.
Cross references
- Romans 16:18 ರೋಮಾಪುರದವರಿಗೆ 16:18ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- Jeremiah 9:8 ಯೆರೆಮೀಯ 9:8ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.
- Psalm 41:6 ಕೀರ್ತನೆಗಳು 41:6ನನ್ನನ್ನು ನೋಡುವದಕ್ಕೆ ಅವನು ಬಂದರೆ ವ್ಯರ್ಥ ಮಾತು ಆಡುತ್ತಾನೆ; ಅವನ ಹೃದಯವು ಅವನಿಗೆ ಅಕ್ರಮವನ್ನು ಕೂಡಿಸುತ್ತದೆ; ಅವನು ಹೊರಗೆ ಹೋದಾಗ ಅದನ್ನು ಹೇಳುತ್ತಾನೆ.
- Psalm 10:7 ಕೀರ್ತನೆಗಳು 10:7ಅವನ ಬಾಯಿ ಶಾಪದಿಂದಲೂ ಮೋಸದಿಂದಲೂ ವಂಚನೆಯಿಂದಲೂ ತುಂಬಿದೆ; ಅವನ ನಾಲಿಗೆಯ ಕೆಳಗೆ ಕೇಡೂ ವ್ಯರ್ಥತೆಯೂ ಇವೆ.
- Psalm 144:8 ಕೀರ್ತನೆಗಳು 144:8ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು, ಅವರ ಬಲಗೈ ಮೋಸದ ಬಲಗೈ ಆಗಿದೆ.
- Psalm 5:9 ಕೀರ್ತನೆಗಳು 5:9ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ.
- James 1:8 ಯಾಕೋಬನು 1:8ಎರಡು ಮನಸ್ಸುಳ್ಳವನು ತನ್ನ ಮಾರ್ಗಗಳ ಲ್ಲೆಲ್ಲಾ ಚಂಚಲನಾಗಿದ್ದಾನೆ.
- Psalm 28:3 ಕೀರ್ತನೆಗಳು 28:3ದುಷ್ಟರ ಸಂಗಡಲೂ ಅಪರಾಧಮಾಡುವವರ ಸಂಗಡಲೂ ನನ್ನನ್ನು ಎಳೆಯಬೇಡ; ತಮ್ಮ ನೆರೆಯವರಿಗೆ ಅವರು ಸಮಾಧಾನವಾಗಿ ಮಾತನಾಡುತ್ತಾರೆ; ಕೇಡು ಅವರ ಹೃದಯದಲ್ಲಿ ಅದೆ.
- 1 Thessalonians 2:5 1 ಥೆಸಲೊನೀಕದವರಿಗೆ 2:5ನಿಮಗೆ ತಿಳಿದಿ ರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಯನ್ನು ಮಾಡುವವರಾಗಿ ಕಾಣಬಂದಿಲ್ಲ. ದ್ರವ್ಯಾಶೆಯನ್ನು ಮರೆಮಾಡುವದಕ್ಕಾಗಿ ವೇಷವನ್ನು ಹಾಕಿಕೊಂಡವ ರಾಗಿಲ್ಲ; ಇದಕ್ಕೆ ದೇವರೇ ಸಾಕ್ಷಿ.
- Psalm 52:1–4 ಕೀರ್ತನೆಗಳು 52:1–4ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು. ಮೋಸ ಮಾಡುವ ಹದವಾದ ಕತ್ತಿಯ ಹಾಗೆ ನಿನ್ನ ನಾಲಿಗೆಯು ಕೇಡುಗಳನ್ನು ಕಲ್ಪಿಸುತ್ತದೆ. ಒಳ್ಳೇದಕ್ಕಿಂತ ಕೆಟ್ಟದ್ದನ್ನೂ ನೀತಿಯನ್ನು ಮಾತನಾಡುವದಕ್ಕಿಂತ ಸುಳ್ಳನ್ನೂ ಪ್ರೀತಿ ಮಾಡುತ್ತೀ ಸೆಲಾ. ಓ ಮೋಸದ ನಾಲಿಗೆಯೇ, ನೀನು ನುಂಗಿಬಿಡುವ ಮಾತುಗಳನ್ನೆಲ್ಲಾ ಪ್ರೀತಿ ಮಾಡುತ್ತೀ.
- Ezekiel 12:24 ಯೆಹೆಜ್ಕೇಲನು 12:24ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ವ್ಯರ್ಥ ದರ್ಶನವೂ ಮೋಸದ ಶಕುನವೂ ಇರುವದಿಲ್ಲ.
- Jeremiah 9:2–6 ಯೆರೆಮೀಯ 9:2–6ಹಾ, ಅರಣ್ಯದಲ್ಲಿ ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೇದು, ಆಗ ನನ್ನ ಜನರನ್ನು ಬಿಟ್ಟು ಹೊರಟು ಹೋಗುತ್ತಿದ್ದೆನು; ಅವರೆಲ್ಲರೂ ವ್ಯಭಿಚಾರಿಗಳೇ, ವಂಚಕರ ಕೂಟವೇ. ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ.