Psalms · chapter 42 · verse 4
Psalm 42:4 in Kannada
ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.
Ivugalannu jnyaapakamaadikondaaga nanna praanavu nannalli ksheenisuttade; samooha dondige naanu hogi utsaahadhvaniyindaloo stotradindaloo parishuddha dinavannu aacharisuva samoohada sangada devara aalayakke avarom dige naanu hodenallaa.
Psalm 42:4 in English
- King James Version (KJV)
- When I remember these [things], I pour out my soul in me: for I had gone with the multitude, I went with them to the house of God, with the voice of joy and praise, with a multitude that kept holyday.
- World English Bible (WEB)
- These things I remember, and pour out my soul within me, how I used to go with the crowd, and led them to God’s house, with the voice of joy and praise, a multitude keeping a holy day.
- American Standard Version (ASV)
- These things I remember, and pour out my soul within me, How I went with the throng, and led them to the house of God, With the voice of joy and praise, a multitude keeping holyday.
- Bible in Basic English (BBE)
- Let my soul be overflowing with grief when these things come back to my mind, how I went in company to the house of God, with the voice of joy and praise, with the song of those who were keeping the feast.
- Darby Translation (DBY)
- These things I remember and have poured out my soul within me: how I passed along with the multitude, how I went on with them to the house of God, with the voice of joy and praise, a festive multitude.
- Webster's Bible (WBS)
- When I remember these [things] , I pour out my soul in me: for I had gone with the multitude, I went with them to the house of God, with the voice of joy and praise, with a multitude that kept holy-day.
- Young's Literal Translation (YLT)
- These I remember, and pour out my soul in me, For I pass over into the booth, I go softly with them unto the house of God, With the voice of singing and confession, The multitude keeping feast!
Read in context
- 2ದೇವರಿ ಗೋಸ್ಕರ ಹೌದು, ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ; ಯಾವಾಗ ಬಂದು ದೇವರ ಮುಂದೆ ಕಾಣಿಸಿಕೊಳ್ಳಲಿ?
- 3ನಿನ್ನ ದೇವರು ಎಲ್ಲಿ ಎಂದು ಅವರು ದಿನವೆಲ್ಲಾ ನನಗೆ ಹೇಳುವ ದರಿಂದ ನನ್ನ ಕಣ್ಣೀರು ನನಗೆ ಹಗಲಿರುಳು ಆಹಾರ ವಾಗಿದೆ.
- 4ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.
- 5ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.
- 6ಓ ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗು ತ್ತದೆ; ಆದದರಿಂದ ಯೊರ್ದನ್ ಸೀಮೆಯಿಂದಲೂ ಹೆರ್ಮೋನ್ಯರಿಂದಲೂ ಮಿಸಾರ್ ಸಣ್ಣ ಬೆಟ್ಟದಿಂದಲೂ ನಿನ್ನನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
Cross references
- Isaiah 30:29 ಯೆಶಾಯ 30:29ಪರಿಶುದ್ಧ ಹಬ್ಬವನ್ನು ಆಚರಿಸುವ ರಾತ್ರಿಯಲ್ಲಿ ಹೇಗೋ ಹಾಗೆ ನಿಮಗೆ ಹಾಡುವಿರಿ; ಕರ್ತನ ಪರ್ವತಕ್ಕೆ ಇಸ್ರಾಯೇಲಿನ ಬಂಡೆಯ ಬಳಿಗೆ ಬರುವದಕ್ಕೆ ಕೊಳಲಿನ ಸಂಗಡ ಹೋಗುವ ಪ್ರಕಾರ ಹೃದಯದ ಸಂತೋಷವಿರುವದು.
- Psalm 122:1 ಕೀರ್ತನೆಗಳು 122:1ಕರ್ತನ ಆಲಯಕ್ಕೆ ಹೋಗೋಣ ಎಂದು ಅವರು ನನಗೆ ಹೇಳಿದಾಗ ನನಗೆ ಸಂತೋಷವಾಯಿತು.
- Psalm 62:8 ಕೀರ್ತನೆಗಳು 62:8ಎಲ್ಲಾ ಕಾಲದಲ್ಲಿ ಆತನಲ್ಲಿ ಭರವಸ ವಿಡಿರಿ, ಜನರೇ; ನಿಮ್ಮ ಹೃದಯವನ್ನು ಆತನ ಮುಂದೆ ಹೊಯ್ಯಿರಿ; ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- 1 Samuel 1:15–16 1 ಸಮುವೇಲನು 1:15–16ಅದಕ್ಕೆ ಹನ್ನಳು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆನನ್ನ ಒಡೆಯನೇ, ಹಾಗಲ್ಲ, ನಾನು ದುಃಖದ ಆತ್ಮವುಳ್ಳ ಸ್ತ್ರೀಯಾಗಿದ್ದೇನೆ; ನಾನು ದ್ರಾಕ್ಷಾರಸವನ್ನಾದರೂ ಮದ್ಯ ಪಾನವನ್ನಾದರೂ ಕುಡಿದವಳಲ್ಲ. ನಾನು ಕರ್ತನ ಮುಂದೆ ನನ್ನ ಮನೋವೇದನೆಯನ್ನೆಲ್ಲಾ ಹೊಯಿದು ಬಿಟ್ಟೆನು. ನಿನ್ನ ದಾಸಿಯನ್ನು ಬೆಲಿಯಾಳನ ಮಗಳೆಂದು ನೆನಸಬೇಡ; ಯಾಕಂದರೆ ನನ್ನ ಹೆಚ್ಚಾದ ಚಿಂತೆಯಿಂದಲೂ ದುಃಖದಿಂದಲೂ ಈ ವರೆಗೂ ಮಾತನಾಡಿಕೊಳ್ಳುತ್ತಾ ಇದ್ದೆನು ಅಂದಳು.
- Psalm 55:14 ಕೀರ್ತನೆಗಳು 55:14ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು.
- Nahum 1:15 ನಹೂಮ 1:15ಇಗೋ, ಬೆಟ್ಟಗಳ ಮೇಲೆ ಶುಭಸಮಾಚಾರವನ್ನು ತಂದು ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, ನಿನ್ನ ಪ್ರಮಾಣ ಗಳನ್ನು ಸಲ್ಲಿಸು; ಯಾಕಂದರೆ ಇನ್ನು ಮೇಲೆ ದುಷ್ಟನು ನಿನ್ನನ್ನು ಹಾದುಹೋಗನು; ಅವನು ಸಂಪೂರ್ಣವಾಗಿ ಕಡಿದು ಬಿಡಲ್ಪಟ್ಟಿದ್ದಾನೆ.
- Job 29:2–31 ಯೋಬನು 29:2–31ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು. ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು. ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು. ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು. ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು. ಪಟ್ಟಣವನ್ನು ಹಾದು ಬಾಗಲಿಗೆ ಹೊರಟುಹೋಗಿ ನನ್ನ ಪೀಠವನ್ನು ಬೀದಿಯಲ್ಲಿ ಸಿದ್ಧಪಡಿಸುತ್ತಾ ಇದ್ದೆನು. ಯುವಕರು ನನ್ನನ್ನು ನೋಡಿ ಅಡಗಿಕೊಳ್ಳುತ್ತಿದ್ದರು; ವೃದ್ಧರು ಎದ್ದು ನಿಲ್ಲುತ್ತಿದ್ದರು. ಪ್ರಧಾನರು ನುಡಿಗಳನ್ನು ಬಿಗಿಹಿಡಿದು ತಮ್ಮ ಬಾಯಿಯ ಮೇಲೆ ಕೈ ಇಟ್ಟು ಕೊಂಡರು. ಘನವುಳ್ಳವರು ಮೌನವಾದರು; ಅವರ ನಾಲಿಗೆ ಅವರ ಅಂಗಳಕ್ಕೆ ಅಂಟಿತು. ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು; ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು. ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು. ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು. ನನ್ನ ಬೇರು ನೀರಿನ ಬಳಿಯಲ್ಲಿ ಹಬ್ಬಿತ್ತು--ನನ್ನ ಕೊಂಬೆಯ ಮೇಲೆ ಮಂಜು ಉಳುಕೊಳ್ಳುತ್ತಾ ಇತ್ತು. ನನ್ನ ಘನವು ನನ್ನಲ್ಲಿ ಹೊಸದಾಗಿತ್ತು; ನನ್ನ ಬಿಲ್ಲು ನನ್ನ ಕೈಯಲ್ಲಿ ಹೊಸದಾಗಿತ್ತು. ನನಗೆ ಕಿವಿಗೊಟ್ಟು ಎದುರುನೋಡಿ, ನನ್ನ ಆಲೋಚನೆಗೆ ಮೌನವಾಗಿ ದ್ದರು. ನನ್ನ ಮಾತಿನ ಮೇಲೆ ಅವರು ಬೇರೆ ಮಾತ ನಾಡಲಿಲ್ಲ; ನನ್ನ ನುಡಿ ಅವರ ಮೇಲೆ ಸುರಿಯಿತು. ಮಳೆಯಂತೆ ನನ್ನನ್ನು ಎದುರು ನೋಡುತ್ತಿದ್ದರು; ಹಿಂಗಾರು ಮಳೆಗೆ ಎಂಬಂತೆ ಬಾಯಿ ತೆಗೆದರು. ನಂಬಿಕೆ ಇಲ್ಲದವರ ಕಡೆಗೆ ನಗೆ ತೋರಿಸಿದೆನು; ನನ್ನ ಮುಖದ ಕಳೆಯನ್ನು ಅವರು ಕುಂದಿಸಲಿಲ್ಲ.ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು. ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು.
- Psalm 100:4 ಕೀರ್ತನೆಗಳು 100:4ಕೃತಜ್ಞತೆಯಿಂದ ಆತನ ಬಾಗಿಲುಗಳಿಗೂ ಸ್ತೋತ್ರದಿಂದ ಆತನ ಅಂಗಳಗಳಿಗೂ ಬನ್ನಿರಿ; ಆತನನ್ನು ಕೊಂಡಾಡಿರಿ, ಆತನ ಹೆಸರನ್ನು ಸ್ತುತಿಸಿರಿ.ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.
- Ruth 1:21 ರೂತಳು 1:21ನಾನು ಸಮೃದ್ಧಿ ಯಾಗಿ ಹೊರಟು ಹೋದೆನು; ಕರ್ತನು ನನ್ನನ್ನು ಏನೂ ಇಲ್ಲದೆ ತಿರಿಗಿ ಮನೆಗೆ ಬರಮಾಡಿದ್ದಾನೆ. ಕರ್ತನು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಆದದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವದೇನು ಅಂದಳು.ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶ ದಿಂದ ತಿರಿಗಿ ಬಂದಳು. ಇದಲ್ಲದೆ ಅವರು ಜವೆ ಗೋಧಿಯ ಸುಗ್ಗಿಯ ಕಾಲ ಪ್ರಾರಂಭಿಸಿದಾಗ ಬೇತ್ಲೆಹೇಮಿಗೆ ಬಂದರು.
- Lamentations 2:19 ಪ್ರಲಾಪಗಳು 2:19ಎದ್ದೇಳು, ರಾತ್ರಿಯಲ್ಲಿ ಕೂಗು; ನಿನ್ನ ಹೃದಯವನ್ನು ಕರ್ತನ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ (ನೀರಿನಂತೆ) ಹೊಯ್ಯಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಯಾಕಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ.
- Psalm 81:1–3 ಕೀರ್ತನೆಗಳು 81:1–3ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿಗೈಯಿರಿ. ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ. ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.
- 1 Chronicles 16:1–43 1 ಪೂರ್ವಕಾಲವೃತ್ತಾಂತ 16:1–43ಅವರು ದೇವರ ಮಂಜೂಷವನ್ನು ತಂದು ದಾವೀದನು ಅದಕ್ಕೋಸ್ಕರ ಹಾಕಿದ ಡೇರೆಯ ಮಧ್ಯದಲ್ಲಿ ಇರಿಸಿದ ತರುವಾಯ ಅವರು ದೇವರ ಮುಂದೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು. ದಾವೀದನು ದಹನ ಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಅವನು ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಇಸ್ರಾಯೇಲಿನಲ್ಲಿರುವ ಸ್ತ್ರೀ ಪುರುಷರಾದ ಸಮಸ್ತರಿಗೂ ಒಬ್ಬೊಬ್ಬರಿಗೆ ಒಂದೊಂದು ರೊಟ್ಟಿಯನ್ನೂ ಒಂದು ತುಂಡು ಮಾಂಸವನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಕೊಟ್ಟನು. ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು. ಅವರು ಯಾರಂದರೆ, ಮುಖ್ಯಸ್ಥನಾದ ಆಸಾಫನೂ ಅವನ ತರುವಾಯ ಜೆಕರ್ಯನೂ ಯೆಗೀಯೇಲನೂ ಶೆವಿಾರಾಮೋತನೂ ಯೆಹೀಯೇಲನೂ ಮತ್ತಿತ್ಯನೂ ಎಲೀಯಾಬನೂ ಬೆನಾಯನೂ ಒಬೇದೆದೋಮನೂ ಯೇಗಿಯೇಲನೂ. ಇವರು ವೀಣೆಗಳನ್ನೂ ಕಿನ್ನರಿ ಗಳನ್ನೂ ಬಾರಿಸುತ್ತಿದ್ದರು; ಆದರೆ ಆಸಾಫನು ತಾಳ ಗಳನ್ನು ಬಾರಿಸುತ್ತಿದ್ದನು. ಇದಲ್ಲದೆ ಯಾಜಕರಾದ ಬೆನಾಯನೂ ಯೆಹಜೀಯೇಲನೂ ದೇವರ ಒಡಂಬ ಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು. ಆಗ ಅದೇ ದಿವಸದಲ್ಲಿ ಕರ್ತನನ್ನು ಕೊಂಡಾಡುವದಕ್ಕೆ ದಾವೀದನು ಮೊದಲು ಆಸಾಫನಿಗೂ ಅವನ ಸಹೋದರರಿಗೂ ಈ ಸಂಗೀತವನ್ನು ಕೊಟ್ಟನು;-- ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ. ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ. ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ. ಕರ್ತನನ್ನು ಹುಡುಕುವವರ ಹೃದ ಯವು ಸಂತೋಷಿಸಲಿ. ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ. ಆತನು ಮಾಡಿದ ಅದ್ಭುತ ಗಳನ್ನೂ ಮಹತ್ಕಾರ್ಯಗಳನ್ನು ಆತನ ನ್ಯಾಯನಿರ್ಣ ಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. ಆತನ ಸೇವ ಕನಾದ ಇಸ್ರಾಯೇಲಿನ ಸಂತಾನವೇ, ಆತನು ಆದು ಕೊಂಡ ಯಾಕೋಬನ ಮಕ್ಕಳೇ, ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ. ಆತನ ಒಡಂಬಡಿಕೆ ಯನ್ನು ಸಾವಿರ ತಲಾಂತರಗಳಿಗೆ ಆತನು ಆಜ್ಞಾಪಿ ಸಿದ ಮಾತನ್ನು ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸಾಕನಿಗೆ ಇಟ್ಟ ಆಣೆಯನ್ನು ಇದನ್ನು ನಿತ್ಯವೂ ಜ್ಞಾಪಕಮಾಡಿಕೊಳ್ಳಿರಿ. ಅದನ್ನು ಯಾಕೋಬನಿಗೆ ನೇಮಕವಾಗಿಯೂ ಇಸ್ರಾಯೇಲಿಗೆ ನಿತ್ಯ ಒಡಂಬಡಿಕೆಯಾಗಿಯೂ ಸ್ಥಾಪಿಸಿ ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು. ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ. ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಮತ್ತೊಂದಕ್ಕೂ ಹೋಗುತ್ತಿದ್ದರು. ಆತನು ಯಾರಿಂದಲೂ ಅವರಿಗೆ ಅನ್ಯಾಯ ಮಾಡ ಗೊಡಿಸಲಿಲ್ಲ; ಹೌದು, ಅವರಿಗೋಸ್ಕರ ಅರಸುಗಳನ್ನು ಗದರಿಸಿದನು. ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ; ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ. ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ. ಜನಾಂಗಗಳಲ್ಲಿ ಆತನ ಘನವನ್ನೂ ಎಲ್ಲಾ ಜನಗಳಲ್ಲಿ ಆತನ ಅದ್ಭುತಗಳನ್ನೂ ಪ್ರಕಟಿಸಿರಿ. ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ; ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು. ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ. ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ, ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ. ಸಮಸ್ತ ಭೂಮಿಯೇ, ಆತನ ಮುಂದೆ ನಡುಗು. ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆಕಾಶ ಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಕರ್ತನು ಆಳುತ್ತಾನೆಂದು ಜನಾಂಗಗಳಲ್ಲಿ ಹೇಳಲಿ. ಸಮುದ್ರವೂ ಅದರ ಪರಿಪೂರ್ಣತ್ವವೂ ಘೋಷಿಸಲಿ; ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹ ಪಡಲಿ. ಆಗ ಕರ್ತನ ಮುಂದೆಯೇ ಅಡವಿಯ ಮರಗಳೆಲ್ಲಾ ಉತ್ಸಾಹ ಧ್ವನಿಮಾಡಲಿ; ಆತನು ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ. ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು;ಆತನ ಕೃಪೆಯು ಯುಗಯುಗಕ್ಕೂ ಅವೆ. ನಮ್ಮ ರಕ್ಷಣೆಯ ದೇವರೇ, ನಾವು ನಿನ್ನ ಪರಿಶುದ್ಧ ಹೆಸ ರನ್ನು ಕೊಂಡಾಡಿ ನಿನ್ನ ಸ್ತೋತ್ರದಲ್ಲಿ ಹೆಚ್ಚಳ ಪಡುವ ಹಾಗೆ ನಮ್ಮನ್ನು ರಕ್ಷಿಸು; ಜನಾಂಗಗಳೊಳಗಿಂದ ನಮ್ಮನ್ನು ತೆಗೆದು ಕೂಡಿಸು. ಇಸ್ರಾಯೇಲಿನ ಕರ್ತ ನಾದ ದೇವರು ಯುಗಯುಗಾಂತರಗಳಲ್ಲಿ ಸ್ತುತಿ ಸಲ್ಪಡಲಿ ಎಂದು ಹೇಳಿರಿ. ಸಮಸ್ತ ಜನರು ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ದಾವೀದನು ಬಿಟ್ಟವರು ಯಾರಂದರೆ--ಪ್ರತಿ ದಿವಸದ ಕಾರ್ಯದ ಪ್ರಕಾರ ಯಾವಾಗಲೂ ಮಂಜೂಷದ ಮುಂದೆ ಸೇವೆಮಾಡಲು ಆಸಾಫನನ್ನೂ ಅವನ ಸಹೋ ದರರನ್ನೂ; ಒಬೇದೆದೋಮನನ್ನೂ ಅವನ ಸಹೋ ದರರಾದ ಅರವತ್ತೆಂಟು ಮಂದಿಯನ್ನೂ; ದ್ವಾರಪಾಲಕ ರಾದ ಯೆದುತೂನನ ಮಗನಾದ ಒಬೇದೆದೋಮ ನನ್ನೂ ಹೋಸನನ್ನೂ. ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ ಗಿಬ್ಯೋನಿನಲ್ಲಿರುವ ಉನ್ನತದಲ್ಲಿ ಕರ್ತನ ಗುಡಾರದ ಮುಂದೆ ಸೇವಿಸುವದಕ್ಕೆ ಯಾಜಕನಾದ ಚಾದೋಕನೂ ಯಾಜಕರಾದ ಅವನ ಸಹೋದರರೂ ಅವರ ಸಂಗಡ ಆತನ ಕೃಪೆ ಯುಗಯುಗಕ್ಕಿರುವ ಕಾರಣ ಕರ್ತನನ್ನು ಕೊಂಡಾಡುವದಕ್ಕೆ ಹೇಮಾನನೂ ಯೆದುತೂನನೂ ಹೆಸರಿನಿಂದ ಲೆಕ್ಕಿಸಲ್ಪಟ್ಟು ಆಯಲ್ಪಟ್ಟ ಮಿಕ್ಕಾದವರೂ. ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
Original words (Hebrew)
- remember · H2142זָכַר zâkar
- out · H8210שָׁפַךְ shâphak
- soul · H5315נֶפֶשׁ nephesh
- gone · H5674עָבַר ʻâbar
- multitude · H5519סָךְ çâk
- went · H1718דָּדָה dâdâh
- house · H1004בַּיִת bayith
- God · H430אֱלֹהִים ʼĕlôhîym
- voice · H6963קוֹל qôwl
- joy · H7440רִנָּה rinnâh
- praise · H8426תּוֹדָה tôwdâh
- multitude · H1995הָמוֹן hâmôwn
- holyday · H2287חָגַג châgag