Psalms · chapter 81 · verse 1
Psalm 81:1 in Kannada
ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿಗೈಯಿರಿ.
Namma balavaagiruva devarige gattiyaada dhvaniyinda haadiri; yaakobana devarige jayadhvanigaiyiri.
Psalm 81:1 in English
- King James Version (KJV)
- To the chief Musician upon Gittith, [A Psalm] of Asaph. Sing aloud unto God our strength: make a joyful noise unto the God of Jacob.
- World English Bible (WEB)
- For the Chief Musician. On an instrument of Gath. By Asaph. Sing aloud to God, our strength! Make a joyful shout to the God of Jacob!
- American Standard Version (ASV)
- For the Chief Musician; set to the Gittith. [A Psalm] of Asaph. Sing aloud unto God our strength: Make a joyful noise unto the God of Jacob.
- Bible in Basic English (BBE)
- To the chief music-maker; put to the Gittith. Of Asaph. Make a song to God our strength: make a glad cry to the God of Jacob.
- Darby Translation (DBY)
- To the chief Musician. Upon the Gittith. [A Psalm] of Asaph. Sing ye joyously unto God our strength, shout aloud unto the God of Jacob;
- Webster's Bible (WBS)
- To the chief Musician upon Gittith, [A Psalm] of Asaph. Sing aloud to God our strength: make a joyful noise to the God of Jacob.
- Young's Literal Translation (YLT)
- To the Overseer. — 'On the Gittith.' By Asaph. Cry aloud to God our strength, Shout to the God of Jacob.
Read in context
- 1ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿಗೈಯಿರಿ.
- 2ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ.
- 3ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ.
Cross references
- Jeremiah 31:7 ಯೆರೆಮೀಯ 31:7ಕರ್ತನು ಹೀಗೆ ಹೇಳುತ್ತಾನೆ --ಯಾಕೋಬನ ವಿಷಯ ಸಂತೋಷದಿಂದ ಹಾಡಿ ಮುಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ, ಸಾರಿರಿ, ಸ್ತುತಿಸಿರಿ; ಕರ್ತನೇ, ನಿನ್ನ ಜನರನ್ನೂ ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು ಎಂದು ಹೇಳಿರಿ.
- Psalm 66:1 ಕೀರ್ತನೆಗಳು 66:1ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;
- Psalm 100:1–2 ಕೀರ್ತನೆಗಳು 100:1–2ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ, ಸಂತೋಷ ದಿಂದ ಕರ್ತನನ್ನು ಸೇವಿಸಿರಿ; ಹಾಡುತ್ತಾ ಆತನ ಮುಂದೆ ಬನ್ನಿರಿ.
- Psalm 8:1 ಕೀರ್ತನೆಗಳು 8:1ನಮ್ಮ ದೇವರಾದ ಓ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ.
- Philippians 4:13 ಫಿಲಿಪ್ಪಿಯವರಿಗೆ 4:13ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
- Psalm 46:11 ಕೀರ್ತನೆಗಳು 46:11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Psalm 28:7 ಕೀರ್ತನೆಗಳು 28:7ಕರ್ತನು ನನ್ನ ಬಲವೂ ಗುರಾಣಿಯೂ ಆಗಿದ್ದಾನೆ; ನನ್ನ ಹೃದಯವು ಆತನಲ್ಲಿ ಭರವಸವಿಟ್ಟದ್ದರಿಂದ ಸಹಾಯ ಹೊಂದಿದೆನು; ಆದದರಿಂದ ನನ್ನ ಹೃದಯವು ಬಹಳವಾಗಿ ಉತ್ಸಾಹ ಪಡುವದು; ನನ್ನ ಹಾಡಿನಿಂದ ಆತನನ್ನು ಕೊಂಡಾ ಡುವೆನು.
- Psalm 67:4 ಕೀರ್ತನೆಗಳು 67:4ಜನಾಂಗಗಳು ಸಂತೋಷಪಟ್ಟು ಉತ್ಸಾಹಕ್ಕಾಗಿ ಹಾಡಲಿ; ನೀನು ಜನರನ್ನು ನೀತಿಯಿಂದ ನ್ಯಾಯತೀರಿಸಿ ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀ. ಸೆಲಾ.
- Psalm 33:1–3 ಕೀರ್ತನೆಗಳು 33:1–3ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ. ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ. ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ.
- Psalm 52:7 ಕೀರ್ತನೆಗಳು 52:7ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
- Psalm 46:1–7 ಕೀರ್ತನೆಗಳು 46:1–7ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯ ಲ್ಪಟ್ಟರೂ ಅದರ ನೀರುಗಳು ಘೋಷಿಸಿ ಕದಲಿದರೂ ಅದರ ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು. ಸೆಲಾ. ಒಂದು ನದಿ ಅದೆ; ಅದರ ಕಾಲುವೆಗಳು ದೇವರ ಪಟ್ಟಣವನ್ನೂ ಮಹೋನ್ನತನ ಗುಡಾರಗಳ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ. ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು. ಅನ್ಯ ಜನಾಂಗವು ಘೋಷಿಸಿತು, ರಾಜ್ಯಗಳು ಕದಲಿದವು; ಆತನು ತನ್ನ ಧ್ವನಿಯನ್ನೆತ್ತಿ ಕೂಗಿದಾಗ ಭೂಮಿಯು ಕರಗಿತು. ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Matthew 22:32 ಮತ್ತಾಯನು 22:32ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.