Psalms · chapter 50 · verse 17
Psalm 50:17 in Kannada
ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ.
Neenu shikshanavannu hagemaadi nanna vaakyagalannu ninna hinde haakutteeyallaa.
Psalm 50:17 in English
- King James Version (KJV)
- Seeing thou hatest instruction, and castest my words behind thee.
- World English Bible (WEB)
- since you hate instruction, and throw my words behind you?
- American Standard Version (ASV)
- Seeing that thou hatest instruction, And castest my words behind thee?
- Bible in Basic English (BBE)
- Seeing that you have no desire for my teaching, turning your back on my words.
- Darby Translation (DBY)
- Seeing thou hast hated correction and hast cast my words behind thee?
- Webster's Bible (WBS)
- Seeing thou hatest instruction, and castest my words behind thee.
- Young's Literal Translation (YLT)
- Yea, thou hast hated instruction, And dost cast My words behind thee.
Read in context
- 15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- 16ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?
- 17ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ.
- 18ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ.
- 19ನೀನು ನಿನ್ನ ಬಾಯನ್ನು ಕೇಡಿಗೆ ಒಪ್ಪಿಸುತ್ತೀ; ನಿನ್ನ ನಾಲಿಗೆಯು ಮೋಸವನ್ನು ಜೋಡಿಸುತ್ತದೆ.
Cross references
- Nehemiah 9:26 ನೆಹೆಮೀಯ 9:26ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು.
- 2 Timothy 4:3–4 2 ತಿಮೊಥೆಯನಿಗೆ 4:3–4ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು.
- Proverbs 12:1 ಜ್ಞಾನೋಕ್ತಿಗಳು 12:1ಶಿಕ್ಷಣವನ್ನು ಪ್ರೀತಿಸುವವನು ತಿಳುವಳಿಕೆಯನ್ನು ಪ್ರೀತಿಸುವವನಾಗಿದ್ದಾನೆ; ಗದರಿಕೆ ಯನ್ನು ಹಗೆಮಾಡುವವನು ಪಶುಪ್ರಾಯನು.
- Proverbs 1:28–29 ಜ್ಞಾನೋಕ್ತಿಗಳು 1:28–29ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ
- 1 Kings 14:9 1 ಅರಸುಗಳು 14:9ನೀನು ಹೋಗಿ ನನಗೆ ಕೋಪ ವನ್ನೆಬ್ಬಿಸುವ ಅನ್ಯ ದೇವರುಗಳನ್ನೂ ಎರಕ ಹೊಯ್ಯ ಲ್ಪಟ್ಟ ವಿಗ್ರಹಗಳನ್ನೂ ನಿನಗೆ ಮಾಡಿಕೊಂಡು ನನ್ನನ್ನು ನಿನ್ನ ಬೆನ್ನಿನ ಹಿಂದಕ್ಕೆ ಹಾಕಿದಿ.
- 2 Thessalonians 2:10–12 2 ಥೆಸಲೊನೀಕದವರಿಗೆ 2:10–12ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- Romans 1:28 ರೋಮಾಪುರದವರಿಗೆ 1:28ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
- Proverbs 1:7 ಜ್ಞಾನೋಕ್ತಿಗಳು 1:7ಕರ್ತನ ಭಯವೇ ಜ್ಞಾನದ ಮೂಲ; ಮೂರ್ಖರು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾರೆ.
- Jeremiah 8:9 ಯೆರೆಮೀಯ 8:9ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ?
- Romans 2:21–23 ರೋಮಾಪುರದವರಿಗೆ 2:21–23ಆದದರಿಂದ ಬೇರೊಬ್ಬನಿಗೆ ಬೋಧಿಸುವ ನೀನು ನಿನಗೆ ನೀನೇ ಬೋಧಿಸಿಕೊಳ್ಳುವದಿಲ್ಲವೋ? ಕದಿಯ ಬೇಡವೆಂದು ಬೇರೊಬ್ಬನಿಗೆ ಸಾರುವ ನೀನು ಕದಿಯು ತ್ತೀಯೋ? ವ್ಯಭಿಚಾರ ಮಾಡಬಾರದೆಂದು ಹೇಳುವ ನೀನು ವ್ಯಭಿಚಾರ ಮಾಡುತ್ತೀಯೋ? ವಿಗ್ರಹಗಳನ್ನು ಅಸಹ್ಯಿಸುವ ನೀನು ಪವಿತ್ರಸ್ಥಳವನ್ನು ಹೊಲೆಮಾಡು ತ್ತೀಯೋ? ನ್ಯಾಯಪ್ರಮಾಣದಲ್ಲಿ ಹೆಚ್ಚಳಪಡುವ ನೀನು ನ್ಯಾಯಪ್ರಮಾಣವನ್ನು ವಿಾರುವದರಿಂದ ದೇವ ರನ್ನು ಅವಮಾನಪಡಿಸುತ್ತೀಯೋ?
- John 3:20 ಯೋಹಾನನು 3:20ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ.
- Jeremiah 18:12 ಯೆರೆಮೀಯ 18:12ಆದರೆ ಅವರು--ನಿರೀಕ್ಷೆಯಿಲ್ಲ; ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು; ನಮ್ಮ ನಮ್ಮ ಕೆಟ್ಟ ಹೃದಯಗಳ ಕಲ್ಪನೆಯ ಪ್ರಕಾರ ಮಾಡುವೆವು ಅಂದರು.