Psalms · chapter 50 · verse 15
Psalm 50:15 in Kannada
ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
Ikkattina divasadalli nannannu kare; naanu ninnannu tappisibiduvenu; aaga nannannu ghanapadisuvi.
Psalm 50:15 in English
- King James Version (KJV)
- And call upon me in the day of trouble: I will deliver thee, and thou shalt glorify me.
- World English Bible (WEB)
- Call on me in the day of trouble. I will deliver you, and you will honor me.”
- American Standard Version (ASV)
- And call upon me in the day of trouble: I will deliver thee, and thou shalt glorify me.
- Bible in Basic English (BBE)
- Let your voice come up to me in the day of trouble; I will be your saviour, so that you may give glory to me.
- Darby Translation (DBY)
- And call upon me in the day of trouble; I will deliver thee, and thou shalt glorify me.
- Webster's Bible (WBS)
- And call upon me in the day of trouble: I will deliver thee, and thou shalt glorify me.
- Young's Literal Translation (YLT)
- And call Me in a day of adversity, I deliver thee, and thou honourest Me.
Read in context
- 13ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
- 14ದೇವರಿಗೆ ಸ್ತೋತ್ರವನ್ನು (ಬಲಿ ಯಾಗಿ) ಅರ್ಪಿಸು; ಮಹೋನ್ನತನಿಗೆ ನಿನ್ನ ಪ್ರಮಾಣ ಗಳನ್ನು ಸಲ್ಲಿಸು.
- 15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- 16ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?
- 17ನೀನು ಶಿಕ್ಷಣವನ್ನು ಹಗೆಮಾಡಿ ನನ್ನ ವಾಕ್ಯಗಳನ್ನು ನಿನ್ನ ಹಿಂದೆ ಹಾಕುತ್ತೀಯಲ್ಲಾ.
Cross references
- Psalm 107:28 ಕೀರ್ತನೆಗಳು 107:28ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ
- Psalm 91:15 ಕೀರ್ತನೆಗಳು 91:15ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
- Psalm 34:3–4 ಕೀರ್ತನೆಗಳು 34:3–4ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ. ನಾನು ಕರ್ತನನ್ನು ಹುಡು ಕಿದೆನು; ಆಗ ಆತನು ನನಗೆ ಉತ್ತರಕೊಟ್ಟು ನನ್ನ ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದನು.
- Zechariah 13:9 ಜೆಕರ್ಯ 13:9ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Psalm 107:19 ಕೀರ್ತನೆಗಳು 107:19ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ.
- James 5:13 ಯಾಕೋಬನು 5:13ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದಾನೋ? ಅವನು ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನಿದ್ದಾನೋ? ಅವನು ಕೀರ್ತನೆಗಳನ್ನು ಹಾಡಲಿ.
- Psalm 81:7 ಕೀರ್ತನೆಗಳು 81:7ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ.
- Psalm 107:6–13 ಕೀರ್ತನೆಗಳು 107:6–13ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಬಿಡಿಸಿ, ವಾಸಿಸುವ ಪಟ್ಟಣಕ್ಕೆ ಹೋಗುವ ಹಾಗೆ ಅವರನ್ನು ಸರಿಯಾದ ಹಾದಿಯಲ್ಲಿ ನಡಿಸಿದನು. ಅವರು ಕರ್ತನನ್ನು ಆತನ ಒಳ್ಳೇತನಕ್ಕೋಸ್ಕರವೂ ಮನುಷ್ಯನ ಮಕ್ಕಳಿಗೆ ಆತನು ಮಾಡುವ ಅದ್ಭುತ ಗಳಿಗೋಸ್ಕರವೂ ಕೊಂಡಾಡಲಿ. ದಾಹಪಟ್ಟ ಪ್ರಾಣ ವನ್ನು ತೃಪ್ತಿಪಡಿಸಿ ಹಸಿದ ಪ್ರಾಣವನ್ನು ಒಳ್ಳೇದರಿಂದ ತುಂಬಿಸಿದ್ದಾನೆ. ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು ದೇವರ ಮಾತುಗಳನ್ನು ಎದುರಿಸಿ, ಮಹೋನ್ನತನ ಆಲೋಚನೆಯನ್ನು ಅಸಹ್ಯಿಸಿದ್ದರಿಂದ ಆತನು ಅವರ ಹೃದಯವನ್ನು ಕಷ್ಟದಿಂದ ತಗ್ಗಿಸಿದಾಗ ಸಹಾಯಕ ನಿಲ್ಲದೆ ಕೆಳಗೆ ಬಿದ್ದರು. ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳ ಗಿಂದ ಅವರನ್ನು ರಕ್ಷಿಸಿ
- Job 22:27 ಯೋಬನು 22:27ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.
- Luke 22:44 ಲೂಕನು 22:44ಆತನು ವೇದನೆಯಲ್ಲಿದ್ದು ಬಹಳ ಆಸಕ್ತಿ ಯಿಂದ ಪ್ರಾರ್ಥಿಸಿದನು. ಆತನ ಬೆವರು ನೆಲಕ್ಕೆ ಬೀಳುತ್ತಿರುವ ದೊಡ್ಡ ರಕ್ತದ ಹನಿಗಳೋಪಾದಿಯಲ್ಲಿತ್ತು.
- 2 Chronicles 33:12–13 2 ಪೂರ್ವಕಾಲವೃತ್ತಾಂತ 33:12–13ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು. ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
- Matthew 5:16 ಮತ್ತಾಯನು 5:16ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.