Psalms · chapter 50 · verse 5
Psalm 50:5 in Kannada
ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿದ ನನ್ನ ಪರಿಶುದ್ಧರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.
Yajnyadinda nanna sangada odambadike maadida nanna parishuddharannu nanna balige ottugoodisiri.
Psalm 50:5 in English
- King James Version (KJV)
- Gather my saints together unto me; those that have made a covenant with me by sacrifice.
- World English Bible (WEB)
- “Gather my saints together to me, those who have made a covenant with me by sacrifice.”
- American Standard Version (ASV)
- Gather my saints together unto me, Those that have made a covenant with me by sacrifice.
- Bible in Basic English (BBE)
- Let my saints come together to me; those who have made an agreement with me by offerings.
- Darby Translation (DBY)
- Gather unto me my godly ones, those that have made a covenant with me by sacrifice!
- Webster's Bible (WBS)
- Gather my saints together to me; those that have made a covenant with me by sacrifice.
- Young's Literal Translation (YLT)
- Gather ye to Me My saints, Making covenant with Me over a sacrifice.
Read in context
- 3ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
- 4ತನ್ನ ಜನರಿಗೆ ನ್ಯಾಯ ತೀರಿಸುವದಕ್ಕೆ ಮೇಲಿನಿಂದ ಆಕಾಶಗಳನ್ನೂ ಭೂಮಿ ಯನ್ನೂ ಕರೆಯುತ್ತಾನೆ.
- 5ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿದ ನನ್ನ ಪರಿಶುದ್ಧರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.
- 6ಆಕಾಶಗಳು ಆತನ ನೀತಿ ಯನ್ನು ಪ್ರಕಟಿಸುತ್ತವೆ; ದೇವರು ತಾನೇ ನ್ಯಾಯಾಧಿ ಪತಿಯಾಗಿದ್ದಾನೆ. ಸೆಲಾ.
- 7ಓ ನನ್ನ ಜನರೇ, ಕೇಳಿರಿ, ನಾನು ನುಡಿಯುವೆನು; ಓ ಇಸ್ರಾಯೇಲೇ, ನಿನಗೆ ವಿರೋಧವಾಗಿ ನಾನು ಸಾಕ್ಷಿಕೊಡುವೆನು; ನಾನು ದೇವರು, ಹೌದು ನಿನ್ನ ದೇವರು ನಾನೇ.
Cross references
- Hebrews 13:20 ಇಬ್ರಿಯರಿಗೆ 13:20ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು
- Matthew 26:28 ಮತ್ತಾಯನು 26:28ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.
- Exodus 24:3–8 ವಿಮೋಚನಕಾಂಡ 24:3–8ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು. ಮೋಶೆಯು ಕರ್ತನ ಮಾತುಗಳನ್ನೆಲ್ಲಾ ಬರೆದು ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಯಜ್ಞವೇದಿಯನ್ನು ಕಟ್ಟಿಸಿ ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ಅನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು. ಅವನು ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಎತ್ತು ಗಳನ್ನೂ ಅರ್ಪಿಸುವದಕ್ಕಾಗಿ ಇಸ್ರಾಯೇಲ್ ಮಕ್ಕಳ ಯೌವನಸ್ಥರನ್ನು ಕಳುಹಿಸಿದನು. ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿ ದನು ಮತ್ತು ರಕ್ತದಲ್ಲಿ ಅರ್ಧವನ್ನು ಯಜ್ಞವೇದಿಯ ಮೇಲೆ ಚಿಮುಕಿಸಿದನು. ಇದಲ್ಲದೆ ಒಡಂಬಡಿಕೆಯ ಪ್ರುಸ್ತಕವನ್ನು ತೆಗೆದುಕೊಂಡು ಜನರ ಮುಂದೆ ಓದಿದನು. ಆಗ ಅವರು--ಕರ್ತನು ಹೇಳುವದನ್ನೆಲ್ಲಾ ನಾವು ಮಾಡಿ ವಿಧೇಯರಾಗುವೆವು ಅಂದರು. ತರು ವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ--ಇಗೋ, ಈ ಎಲ್ಲಾ ಮಾತುಗಳ ವಿಷಯದಲ್ಲಿ ಕರ್ತನು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತವು ಇದೇ ಅಂದನು.
- Hebrews 12:24 ಇಬ್ರಿಯರಿಗೆ 12:24ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
- Deuteronomy 33:2–3 ಧರ್ಮೋಪದೇಶಕಾಂಡ 33:2–3ಕರ್ತನು ಸೀನಾಯಿ ಬೆಟ್ಟದಿಂದ ಬಂದನು, ಸೇಯಾರಿನಿಂದ ಅವರಿಗೆ ಉದಯಿಸಿದನು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದನು, ಹತ್ತು ಸಾವಿರ ಪರಿಶುದ್ಧರ ಸಂಗಡ ಬಂದನು. ಆತನ ಬಲಪಾರ್ಶ್ವದಿಂದ ಅವರಿಗೆ ಬೆಂಕಿಯ ನ್ಯಾಯಪ್ರಮಾಣವು ಹೊರಟಿತು. ಹೌದು, ಆತನು ಜನಗಳನ್ನು ಪ್ರೀತಿಮಾಡಿದನು. ಆತನ ಪರಿಶುದ್ಧರೆಲ್ಲರು ನಿನ್ನ ಕೈಯಲ್ಲಿ ಇದ್ದಾರೆ. ಅವರು ನಿನ್ನ ಪಾದದ ಬಳಿಯಲ್ಲಿ ಕೂತುಕೊಂಡು ನಿನ್ನ ವಾಕ್ಯಗಳನ್ನು ಹೊಂದುತ್ತಾರೆ.
- Matthew 24:31 ಮತ್ತಾಯನು 24:31ತರುವಾಯ ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು; ಆಗ ಅವರು ಆತನಿಂದ ಆಯಲ್ಪಟ್ಟವರನ್ನು ನಾಲ್ಕು ದಿಕ್ಕುಗಳಿಂದ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.
- Hebrews 9:10–23 ಇಬ್ರಿಯರಿಗೆ 9:10–23ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು. ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ ಹೋತಗಳ ಮತ್ತು ಕರುಗಳ ರಕ್ತವನ್ನು ತೆಗೆದುಕೊಳ್ಳದೆ ತನ್ನ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿದನು. ಹೋತ ಹೋರಿಗಳ ರಕ್ತವೂ ಹೊಲೆಯಾದವರ ಮೇಲೆ ಚಿಮು ಕಿಸುವ ಕಡಸಿನ ಬೂದಿಯೂ ಶರೀರ ವನ್ನು ಶುಚಿಮಾಡಿ ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿ ಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ಬಿಡಿಸಿ ಜೀವವುಳ್ಳ ದೇವರನ್ನು ಸೇವಿಸುವಂತೆ ನಿಮ್ಮ ಮನ ಸ್ಸಾಕ್ಷಿಯನ್ನು ಶುದ್ಧೀಕರಿಸು ವದಲ್ಲವೇ. ಈ ಕಾರಣದಿಂದ ಮೊದಲನೇ ಒಡಂಬಡಿಕೆಯ ಅಧೀನದಲ್ಲಿದ್ದ ಅಕ್ರಮಗಳ ವಿಮೋಚನೆಗಾಗಿ ಕರೆಯಲ್ಪ ಟ್ಟವರು ನಿತ್ಯಬಾಧ್ಯತೆಯ ವಾಗ್ದಾನವನ್ನು ಹೊಂದು ವದಕ್ಕೆ ಮರಣದ ಮೂಲಕ ಆತನು ಹೊಸ ಒಡಂಬಡಿ ಕೆಗೆ ಮಧ್ಯಸ್ಥನಾಗಿದ್ದಾನೆ. ಮರಣಶಾಸನವು ಇರುವಲ್ಲಿ ಅದನ್ನು ಬರೆಯಿಸಿದವನ ಮರಣವಾಗುವದು ಅವಶ್ಯ. ಜನರ ಮರಣದ ನಂತರ ಮರಣ ಶಾಸನವು ನಡೆ ಯುವದೇ ಹೊರತು ಬರೆಯಿಸಿದವನು ಜೀವದಿಂದಿರು ವಾಗ ಎಂದಿಗೂ ಪರಿಣಾಮಕರವಾಗಿರುವದೇ ಇಲ್ಲ. ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯಾ ದರೂ ರಕ್ತವಿಲ್ಲದೆ ಪ್ರತಿಷ್ಠಿತವಾಗಲಿಲ್ಲ. ಮೋಶೆಯು ಪ್ರತಿಯೊಂದು ವಿಧಿಯನ್ನು ನ್ಯಾಯಪ್ರಮಾಣದ ಪ್ರಕಾರ ಜನರೆಲ್ಲರಿಗೆ ಹೇಳಿದ ಮೇಲೆ ನೀರು, ಕೆಂಪು ಉಣ್ಣೇ, ಹಿಸ್ಸೋಪು ಇವು ಗಳೊಂದಿಗೆ ಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಗ್ರಂಥದ ಮೇಲೆ ಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿ-- ಇದು ದೇವರು ನಿಮಗೋಸ್ಕರ ವಿಧಿಸಿದ ಒಡಂಬಡಿಕೆಯ ರಕ್ತವಾಗಿದೆ ಎಂದು ಹೇಳಿದನು. ಇದಲ್ಲದೆ ಗುಡಾರದ ಮೇಲೆಯೂ ಸೇವೆಗೆ ಬೇಕಾಗಿರುವ ಎಲ್ಲಾ ಉಪ ಕರಣಗಳ ಮೇಲೆಯೂ ರಕ್ತವನ್ನು ಪ್ರೋಕ್ಷಿಸಿದನು. ನ್ಯಾಯಪ್ರಮಾಣದಿಂದ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತ ಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ. ಪರಲೋಕದಲ್ಲಿರುವ ವಸ್ತುಗಳಿಗೆ ಮಾದರಿಯಾಗಿ ರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ ಪರಲೋಕದವುಗಳಿಗೆ ಇವುಗಳಿಗಿಂತ ಉತ್ತಮವಾದ ಯಜ್ಞಗಳು ಬೇಕು.
- Psalm 97:10 ಕೀರ್ತನೆಗಳು 97:10ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
- Psalm 30:4 ಕೀರ್ತನೆಗಳು 30:4ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
- 1 Thessalonians 3:13 1 ಥೆಸಲೊನೀಕದವರಿಗೆ 3:13ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ ನಿಮ್ಮ ಹೃದಯಗಳನ್ನು ದೃಢಪಡಿಸಿ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿ ಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ.
- Jude 1:14 ಯೂದನು 1:14ಇಂಥವರ ವಿಷಯದಲ್ಲಿಯೇ ಆದಾಮನಿಂದ ಏಳನೆಯವನಾದ ಹನೋಕನು ಸಹ--ಇಗೋ, ಕರ್ತನು ತನ್ನ ಹತ್ತು ಸಾವಿರ ಪರಿಶುದ್ಧರನ್ನು ಕೂಡಿಕೊಂಡು
- Proverbs 2:8 ಜ್ಞಾನೋಕ್ತಿಗಳು 2:8ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ.