Psalms · chapter 55 · verse 15
Psalm 55:15 in Kannada
ಮರಣವು ಅವರನ್ನು ಹಿಡಿ ಯಲಿ; ತ್ವರಿತವಾಗಿ ನರಕಕ್ಕೆ ಅವರು ಇಳಿದುಹೋಗಲಿ; ಅವರ ವಾಸಸ್ಥಳದಲ್ಲಿಯೂ ಮಧ್ಯದಲ್ಲಿಯೂ ದುಷ್ಟತನ ಇದೆ.
Maranavu avarannu hidi yali; tvaritavaagi narakakke avaru iliduhogali; avara vaasasthaladalliyoo madhyadalliyoo dushtatana ide.
Psalm 55:15 in English
- King James Version (KJV)
- Let death seize upon them, [and] let them go down quick into hell: for wickedness [is] in their dwellings, [and] among them.
- World English Bible (WEB)
- Let death come suddenly on them. Let them go down alive into Sheol. For wickedness is among them, in their dwelling.
- American Standard Version (ASV)
- Let death come suddenly upon them, Let them go down alive into Sheol; For wickedness is in their dwelling, in the midst of them.
- Bible in Basic English (BBE)
- Let the hand of death come on them suddenly, and let them go down living into the underworld; because evil is in their houses and in their hearts.
- Darby Translation (DBY)
- Let death seize upon them, let them go down alive into Sheol. For wickedness is in their dwellings, in their midst.
- Webster's Bible (WBS)
- Let death seize upon them, [and] let them go down quick into hell: for wickedness [is] in their dwellings, [and] among them.
- Young's Literal Translation (YLT)
- Desolations [are] upon them, They go down [to] Sheol — alive, For wickedness [is] in their dwelling, in their midst.
Read in context
- 13ಆದರೆ ನೀನು ನನ್ನ ಜೊತಗಾರನೂ ನಡಿಸುವವನೂ ನನ್ನ ಪರಿಚಿತನೂ ಆಗಿದ್ದೀ.
- 14ನಾವು ಒಟ್ಟಾಗಿ ಇಂಪಾದ ಸಂಭಾಷಣೆ ಮಾಡಿದೆವು; ದೇವರ ಆಲಯಕ್ಕೆ ಗುಂಪಿನೊಂದಿಗೆ ನಡೆದುಹೋದೆವು.
- 15ಮರಣವು ಅವರನ್ನು ಹಿಡಿ ಯಲಿ; ತ್ವರಿತವಾಗಿ ನರಕಕ್ಕೆ ಅವರು ಇಳಿದುಹೋಗಲಿ; ಅವರ ವಾಸಸ್ಥಳದಲ್ಲಿಯೂ ಮಧ್ಯದಲ್ಲಿಯೂ ದುಷ್ಟತನ ಇದೆ.
- 16ನಾನಾದರೋ ದೇವರನ್ನು ಕರೆಯುವೆನು; ಕರ್ತ ನು ನನ್ನನ್ನು ರಕ್ಷಿಸುವನು.
- 17ಸಂಜೆಯಲ್ಲಿ ಮುಂಜಾನೆ ಯಲ್ಲಿ ಮಧ್ಯಾಹ್ನದಲ್ಲಿ ಪ್ರಾರ್ಥಿಸಿ ಕೂಗುವೆನು;ಆತನು ನನ್ನ ಸ್ವರವನ್ನು ಕೇಳುವನು.
Cross references
- Psalm 59:13 ಕೀರ್ತನೆಗಳು 59:13ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
- Psalm 9:17 ಕೀರ್ತನೆಗಳು 9:17ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.
- Acts 1:18–20 ಅಪೊಸ್ತಲರ ಕೃತ್ಯಗಳು 1:18–20ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು. ಇದು ಯೆರೂಸಲೇಮ್ ನಿವಾಸಿಗಳೆಲ್ಲರಿಗೆ ತಿಳಿದು ಬಂದದ್ದರಿಂದ ಅವರ ಭಾಷೆಯಲ್ಲಿ ಆ ಹೊಲವು--ಅಕೆಲ್ದಮಾ ಎಂದು ಕರೆಯಲ್ಪ ಟ್ಟಿದೆ, ಅಂದರೆ ರಕ್ತದ ಹೊಲ ಎಂಬದು. ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.
- Psalm 109:6–20 ಕೀರ್ತನೆಗಳು 109:6–20ದುಷ್ಟನನ್ನು ಅವನ ಮೇಲೆ ನೇಮಿಸು; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ. ಅವನು ನ್ಯಾಯ ತೀರಿಸಲ್ಪಡುವಾಗ ದುಷ್ಟನೆಂದು ತೀರ್ಪು ಹೊಂದಲಿ. ಅವನ ಪ್ರಾರ್ಥನೆಯು ಪಾಪವಾಗಲಿ. ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಉದ್ಯೋ ಗವನ್ನು ಬೇರೊಬ್ಬನು ತಕ್ಕೊಳ್ಳಲಿ. ಅವನ ಮಕ್ಕಳು ದಿಕ್ಕಿಲ್ಲದವರೂ ಹೆಂಡತಿ ವಿಧವೆಯೂ ಆಗಲಿ. ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಿ ತಮ್ಮ ಹಾಳು ಸ್ಥಳಗಳೊಳಗಿಂದ ರೊಟ್ಟಿಯನ್ನು ಹುಡುಕಲಿ. ಸಾಲಗಾರನು ಅವನಿಗೆ ಇರುವದನ್ನೆಲ್ಲಾ ದೋಚಿ ಕೊಳ್ಳಲಿ; ಅನ್ಯರು ಅವನ ಕಷ್ಟಾರ್ಜಿತವನ್ನು ಸುಲು ಕೊಳ್ಳಲಿ. ಅವನಿಗೆ ಕರುಣೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ಇಲ್ಲವೆ ದಿಕ್ಕಿಲ್ಲದ ಅವನ ಮಕ್ಕಳನ್ನು ಕರುಣಿಸುವವನು ಯಾವನೂ ಇಲ್ಲದೆ ಇರಲಿ. ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ. ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ. ಅವು ಯಾವಾಗಲೂ ಕರ್ತನ ಮುಂದೆ ಇರಲಿ; ಆತನು ಅವನ ಜ್ಞಾಪಕವನ್ನು ಭೂಮಿಯೊಳಗಿಂದ ಕಡಿದುಬಿಡಲಿ. ಅವನು ಕರುಣೆ ತೋರಿಸುವದನ್ನು ಮರೆತು ಹೃದಯದಲ್ಲಿ ನೊಂದವ ರನ್ನು ಕೊಲ್ಲುವದಕ್ಕೂ ಬಡವನನ್ನೂ ಕೊರತೆಯುಳ್ಳ ವವನ್ನೂ ಹಿಂಸಿಸಿದನು. ಅವನು ಶಾಪವನ್ನು ಪ್ರೀತಿ ಮಾಡಿದನು; ಅದು ಅವನಿಗೆ ಬರಲಿ. ಆಶೀರ್ವಾದಕ್ಕೆ ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ. ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಲಿ. ಅದು ಅವ ನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ ಯಾವಾ ಗಲೂ ನಡುವಿಗೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ. ಇದು ನನ್ನ ಪ್ರಾಣಕ್ಕೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಕರ್ತನಿಂದ ಪ್ರತಿಫಲವಾಗಿರಲಿ.
- Psalm 64:7 ಕೀರ್ತನೆಗಳು 64:7ದೇವರು ಅವರ ಕಡೆಗೆ ಬಾಣವನ್ನು ಎಸೆಯು ವಾಗ ಫಕ್ಕನೆ ಅವರಿಗೆ ಗಾಯಗಳಾಗುವವು.
- Numbers 16:30–34 ಅರಣ್ಯಕಾಂಡ 16:30–34ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು. ಇದಾದ ಮೇಲೆ ಅವನು ಹೇಳಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು. ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು.
- Matthew 26:24 ಮತ್ತಾಯನು 26:24ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಅಂದನು.
- Acts 1:25 ಅಪೊಸ್ತಲರ ಕೃತ್ಯಗಳು 1:25ಯೂದನು ತನ್ನ ಸ್ವಸ್ಥಳಕ್ಕೆ ಹೋಗುವ ದಕ್ಕಾಗಿ ಅಪರಾಧದ ನಿಮಿತ್ತ ಈ ಸೇವೆಯಿಂದಲೂ ಅಪೊಸ್ತಲತನದಿಂದಲೂ ಬಿದ್ದು ಹೋದನು. ಈಗ ಈ ಸೇವೆಯಲ್ಲಿಯೂ ಅಪೊಸ್ತಲತನದಿಂದಲೂ ಒಬ್ಬನು ಪಾಲುಹೊಂದುವಂತೆ ಈ ಇಬ್ಬರಲ್ಲಿ ಯಾರನ್ನು ನೀನು ಆರಿಸಿಕೊಳ್ಳುತ್ತೀಯೋ ತೋರಿಸು ಎಂದು ಹೇಳಿದರು.ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು.
- 2 Samuel 18:14 2 ಸಮುವೇಲನು 18:14ಆಗ ಯೋವಾಬನು--ನಾನು ಹೀಗೆ ನಿನ್ನ ಮುಂದೆ ಆಲಸ್ಯಮಾಡೆನು ಎಂದು ಹೇಳಿ ಮೂರು ಈಟಿಗಳನ್ನು ತನ್ನ ಕೈಯಲ್ಲಿ ತಕ್ಕೊಂಡು ಅಬ್ಷಾಲೋಮನು ಇನ್ನೂ ಏಲಾಮರದ ಮಧ್ಯದಲ್ಲಿ ಜೀವದಿಂದಿರುವಾಗ ಅವು ಗಳನ್ನು ಅವನ ಎದೆಗೆ ತಿವಿದನು.
- Matthew 27:5 ಮತ್ತಾಯನು 27:5ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.
- 2 Samuel 18:9 2 ಸಮುವೇಲನು 18:9ಆಗ ಅಬ್ಷಾಲೋಮನು ದಾವೀದನ ಸೇವಕರಿಗೆ ಎದುರಾಗಿ ಬಂದನು. ಆದರೆ ಅಬ್ಷಾಲೋಮನು ಹೇಸರ ಕತ್ತೆಯ ಮೇಲೆ ಏರಿದ್ದನು. ಆ ಹೇಸರ ಕತ್ತೆಯು ಒಂದು ದೊಡ್ಡ ಏಲಾ ಮರದ ಬಲವಾದ ಕೊಂಬೆಗಳ ಕೆಳಗೆ ಬಂದಾಗ ಅವನ ತಲೆಯು ಆ ಮರದ ಕೊಂಬೆ ಯಲ್ಲಿ ಸಿಕ್ಕಿಕೊಂಡಿತು. ಆದದರಿಂದ ಅವನು ಹತ್ತಿದ್ದ ಹೇಸರ ಕತ್ತೆಯು ಹೊರಟು ಹೋಯಿತು.
- Psalm 69:22–28 ಕೀರ್ತನೆಗಳು 69:22–28ಅವರ ಮೇಜು ಅವರ ಮುಂದೆ ಉರುಲಾ ಗಲಿ, ಸುಖವಾಗಿರುವವರಿಗೆ ಅದು ನೇಣೂ ಆಗಲಿ. ಅವರ ಕಣ್ಣಗಳು ಕಾಣದ ಹಾಗೆ ಕತ್ತಲಾಗಲಿ; ಅವರ ಸೊಂಟಗಳನ್ನು ಯಾವಾಗಲೂ ಕದಲಿಸು. ಅವರ ಮೇಲೆ ನಿನ್ನ ರೋಷವನ್ನು ಹೊಯ್ಯಿ; ನಿನ್ನ ಕೋಪದ ಉರಿಯು ಅವರನ್ನು ಹಿಡಿಯಲಿ. ಅವರ ವಾಸಸ್ಥಳವು ನಾಶವಾಗಲಿ; ಅವರ ಗುಡಾರಗಳಲ್ಲಿ ನಿವಾಸಿಯು ಇಲ್ಲದೆ ಹೋಗಲಿ. ನೀನು ಹೊಡೆದ ವನನ್ನು ಅವರು ಹಿಂಸಿಸುತ್ತಾರೆ, ನೀನು ಗಾಯಮಾಡಿ ದವರ ವ್ಯಸನವನ್ನು ಮಾತನಾಡಿಕೊಳ್ಳುತ್ತಾರೆ. ಅವರ ಅಕ್ರಮಕ್ಕೆ ಅಕ್ರಮವನ್ನು ಸೇರಿಸು; ಅವರು ನಿನ್ನ ನೀತಿಯಲ್ಲಿ ಸೇರದೆ ಇರಲಿ. ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ.